Advertisement

Month: April 2024

ಸಾಮಾನ್ಯ ಪ್ರಜೆಯ ಅರ್ಧಸತ್ಯಗಳು

ಯಾವುದೇ ಸರಕಾರ ಬರಲಿ ಅಥವಾ ಇರಲಿ, ಕೋವಿಡ್ ಮಾರಿ ಬರಲಿ ಹೋಗಲಿ, ಯುಕ್ರೇನಿನಲ್ಲಿ ಯುದ್ಧವಾಗುತ್ತಿರಲಿ ಬಿಡಲಿ, ದಿನನಿತ್ಯದ ಸಾಮಾನ್ಯಪ್ರಜೆಯ ಪರಿಸ್ಥಿತಿ ಯಥಾಪ್ರಕಾರ ಅಯೋಮಯವಾಗಿದೆ. ಆಸ್ಟ್ರೇಲಿಯವು ಪ್ರಪಂಚದ ಅತ್ಯಂತ ದುಬಾರಿ ದೇಶಗಳಲ್ಲಿ ಒಂದು. ಇಲ್ಲಿನ ದಿನನಿತ್ಯ ಜೀವನದ ಅಂದಾಜು ಖರ್ಚುವೆಚ್ಚವು ಸದಾ ದುಬಾರಿಯಾಗಿಯೇ ಇರುತ್ತದೆ. ಇದರೊಂದಿಗೆ ಇತ್ತೀಚಿನ ವರ್ಷಗಳಲ್ಲಿ ವಸತಿ ಸಮಸ್ಯೆ ವಿಪರೀತವಾಗಿದೆ.
ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಮೂಡಿದ್ದವು ತರಾವರಿ ತಾರೆಗಳು

ಆ ರಾತ್ರಿ ನಾವು ದಲಿತ ಹುಡುಗರು ಪ್ರತಿಭಟನೆಯ ಭಾಗವಾಗಿ ಅಡುಗೆ ಮನೆಗೆ ಬೀಗ ಹಾಕಿದ್ದೆವು. ಹಾಗೇಯೇ ಅಂಬೇಡ್ಕರ್‌ಗೆ ಆದ ಅಪಮಾನದಿಂದ ನೊಂದು ಉಪವಾಸ ಆಚರಿಸುತ್ತೇವೆ ಎಂದು ಸ್ವಯಂ ದಂಡಿಸಿಕೊಂಡಿದ್ದೆವು. ಇಡೀ ಹಾಸ್ಟೆಲ್ ಬಿಕೊ ಎನ್ನುತ್ತಿತ್ತು. ನಾಲ್ವಡಿ ಅವರ ಕಾಲದ ತಳದ ಹಳೆಯ ಬಿಲ್ಡಿಂಗಿನಲ್ಲಿ ನಮಗೆ ರೂಮುಗಳು ಪ್ರತ್ಯೇಕವಾಗಿದ್ದವು. ಹೊಸ ಕಟ್ಟಡದಲ್ಲಿ ಅವರಿಗೇ ಮೊದಲು ಆದ್ಯತೆ ಇದ್ದದ್ದು. ಮೊಗಳ್ಳಿ ಗಣೇಶ್ ಬರೆಯುವ ಸರಣಿ.

Read More

ಟ್ಯಾಗೋರರ ಮನೆಯಂಗಳದಲ್ಲಿ ಕಂಡ ಸತ್ಯಗಳು

ತಮ್ಮ 77ನೇ ಹುಟ್ಟುಹಬ್ಬದಂದು ಟ್ಯಾಗೋರರು ಇದೇ ಮನೆಯಿಂದ ’ಜನಮ್ ದಿನ್’ ಎನ್ನುವ ತಮ್ಮ ಕವಿತೆಯನ್ನು ಆಕಾಶವಾಣಿಯ ನೇರ ಪ್ರಸಾರದಲ್ಲಿ ಓದಿದ್ದರು. ದೇಶದ ಮೊಟ್ಟಮೊದಲ ನೇರ ಪ್ರಸಾರ ಆಕಾಶವಾಣಿಯಲ್ಲಿ ಅದಾಗಿತ್ತು. ಆದರೀಗ ಆ ಮನೆ ಇಳಿ ವೇಳೆಯ ಎಲ್ಲಾ ಅಪರ ಕೃತ್ಯಗಳಿಗೆ ಚಾವಡಿಯಾಗಿದೆಯೆಂದು ತಿಳಿಯಿತು. ಎಷ್ಟು ಆಸಕ್ತಿ ಉತ್ಸಾಹದಿಂದ ಅಲ್ಲಿಗೆ ಬಂದಿದ್ದೆನೋ ಅಷ್ಟೇ ಮನನೊಂದು ಅಲ್ಲಿ ನಿಂತಿದ್ದೆ. ಅಂಜಲಿ ರಾಮಣ್ಣ ಬರಹ 

Read More

ಚೈತ್ರಾ ಶಿವಯೋಗಿಮಠ ಬರೆದ ಈ ದಿನದ ಕವಿತೆ

“ಬೆಳಗು ನನ್ನ
ಕೊರಳ ಇಳಿಜಾರಿನ ಫಲಗಳನು
ಚುಂಬಿಸುವ ಮೊದಲೇ

ಅಸ್ಪಷ್ಟ
ನಾ ಕಂಡ ಅಷ್ಟೂ ಕನಸುಗಳು
ತೆರೆಗಳೆದ್ದ ಕೊಳದ ಬಿಂಬದಂತೆ
ಅನಾಯಾಸವಾಗಿ ಜಾರುವ ಬೆವರ ಜಲಪಾತ!”- ಚೈತ್ರಾ ಶಿವಯೋಗಿಮಠ ಬರೆದ ಈ ದಿನದ ಕವಿತೆ

Read More

ಕಪಾಟು ತುಂಬ ಪಾಠ ಪುಸ್ತಕಗಳೇ ಇದ್ದರೆ..

ಅವತ್ತು ಉಡುಗೊರೆಯಾಗಿ ಬಂದ ಪುಸ್ತಕಗಳನ್ನು ಬಿಡಿಸಿ ನೋಡಿದಾಗ ನಮಗೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ಬಂದ ಪುಸ್ತಕಗಳಲ್ಲಿ ಹೆಚ್ಚಿನವು ಶಾಲೆಯಲ್ಲಿ ಮುಂದಿನ ವರ್ಷದ ಪಾಠಪುಸ್ತಕಗಳು ಮತ್ತು ಬರೆಯಲು ಉಪಯೋಗವಾಗುವ ಖಾಲಿ ನೋಟ್‌ ಪುಸ್ತಕಗಳು. ಓದಲಿಕ್ಕೆ ಆಸಕ್ತಿ ಬರುವಂಥ ಕಥೆ ಪುಸ್ತಕಗಳು ಕೆಲವು ಮಾತ್ರ.
ಅರವಿಂದ ಕುಡ್ಲ ಬರೆಯುವ ‘ಗಣಿತ ಮೇಷ್ಟರ ಶಾಲಾ ಡೈರಿ’

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ