Advertisement

Month: April 2024

ಡಾ. ನಿಂಗಪ್ಪ ಮುದೇನೂರು ಬರೆದ ಯುಗಾದಿ ಕವಿತೆ

“ದೇಹ ಮನಸ್ಸೆಲ್ಲಾ ಎಣ್ಣೆ ಹಿಂಗಿ
ಬಿಸಿಲು ಬೆವರು ಕೂಡಿ ನಲಿದ ಮೇಲೆ
ಅವ್ವ, ಬೇವಿನ ಎಲೆ ಬಿಸಿನೀರ ಸಾಂಗತ್ಯದಲಿ
ಸೋಪಿಲ್ಲದೆ ಸ್ನಾನಮಾಡಿಸಿ
ಹಳೆಯದೋ ಹೊಸದೋ ಬಟ್ಟೆತೊಡಿಸಿ
ಮಕ್ಕಳಿಗೆ ಹಬ್ಬವಾಗುತ್ತಿದ್ದಳು”- ಡಾ. ನಿಂಗಪ್ಪ ಮುದೇನೂರು ಬರೆದ ಯುಗಾದಿ ಕವಿತೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ದೀಪ್ತಿ ಭದ್ರಾವತಿ ಕತೆ

ಅರುಂಧತಿಗೆ ಎದೆಯೊಳಗೆ ಕೊಳ್ಳಿದೆವ್ವ ಓಡಾಡಿದಂತೆ ಭಾಸವಾಯಿತು. ನರ್ಸು ಹಲ್ಲು ಕಚ್ಚಿಕೊಂಡಳಾದರೂ, ಆಯಾ ಮಾತ್ರ ಅದನ್ನು ಸಮರ್ಥಿಸಿಕೊಳ್ಳುವವಳಂತೆ “ಅಯ್ಯಾ ಇರೋದನ್ನ ಏಳುದ್ನಪ್ಪ” ಇವ್ರು ರಾತ್ರಿ ಎಲ್ಲ ಸುಖ ಪಟ್ಕೊಂಡು ಈವಾಗ ನಮ್ ತವ ಕೂಗ್‍ಕೊಂಡ್ರೆ ಏನ್ ಬತ್ತದೆ” ಎಂದಳು. ಅರುಂಧತಿಗೆಒಮ್ಮೆ ಹಾವು ಮೆಟ್ಟಿದಂತಾಗಿ ಸುಮ್ಮನೆ ಅವಳನ್ನೇ ಒಮ್ಮೆ ನೋಡಿದಳು. ಬೋಳು ಹಣೆ, ಬರಿಗೈ, ನಿರ್ವಿಕಾರ ಭಾವ ಅವಳ ಕುರಿತಾಗಿ ಬೇರೆ ಏನನ್ನೋ ಧ್ವನಿಸಿತು. ದೀಪ್ತಿ ಭದ್ರಾವತಿ ಬರೆದ ಕತೆ ‘ಸ್ಫೋಟ’ ನಿಮ್ಮ ಈ ಭಾನುವಾರದ ಓದಿಗೆ

Read More

ಒಳ್ಳೆಯ ಮತ್ತು ಕೆಟ್ಟ ಸಮಾಚಾರಗಳ ಬೇವುಬೆಲ್ಲ

ಶುಭಕೃತ್ ಸಂವತ್ಸರವು ಅಡಿಯಿಟ್ಟಿದೆ. ಆದರೆ ಕಾಲವು ಅದೇ ಪ್ರಕಾರ ಒಳಿತುಕೆಡುಕುಗಳನ್ನು ಒಟ್ಟಿಗೆ ಕಟ್ಟಿಕೊಂಡು ಸಾಗುತ್ತಿದೆ.  ಪ್ರಕೃತಿ ವಿಕೋಪವೆಂಬ ಬೇವು, ಮಾನವೀಯತೆ ಎಂಬ  ಬೆಲ್ಲವನ್ನು  ಸಮಾನ ಮನಸ್ಸಿನಿಂದ ಸ್ವೀಕರಿಸಬೇಕಾಗಿದೆ. ಆಸ್ಟ್ರೇಲಿಯಾದಲ್ಲಿ  ಟೆನಿಸ್ ಪಟು ಆಶ್ ಬಾರ್ಟಿ ನಿವೃತ್ತಿಯ ಬೇಸರ. ಆದರೆ ಅವರ ಮುಂದಿನ ನಿರ್ಧಾರ ಖುಷಿ ಕೊಡುವುದು. ಪ್ರವಾಹವು ನೋವು ಕೊಡುವುದು. ಡಾ. ವಿನತೆ ಶರ್ಮ ಬರೆದ ಆಸ್ಟ್ರೇಲಿಯಾ ಪತ್ರದಲ್ಲಿ ಅಲ್ಲಿನ ಕ್ಷೇಮ ಸಮಾಚಾರಗಳನ್ನು ತಿಳಿಯೋಣ.

Read More

ಎಂದಿಗೂ ಸಲ್ಲುವ ಕನಸಿನ ನೆಲೆ-ಹಿನ್ನೆಲೆ

ಈ ಕಾದಂಬರಿಯಲ್ಲಿ ಯೋಧ, ರಾಜನೀತಿಜ್ಞ, ನಟ-ವಿಟ, ವಿಪ್ರ, ವರ್ತಕ, ಶ್ರಮಿಕ, ಶ್ರಮಣ, ಗೃಹಸ್ಥ-ಗೃಹಿಣಿ ಎಲ್ಲರಲ್ಲಿಯೂ ತಮ್ಮ-ತಮ್ಮ ನೆಲೆ, ನಿಲವು, ಬೆಳಸು-ಕನಸುಗಳೆಲ್ಲದಕ್ಕೆ ಹಿಮ್ಮೇಳವಾದ ಧರ್ಮ, ಸಂಸ್ಕೃತಿ, ಕಲೆಗಳನ್ನು ಒಂದು ಸೂರಿನಡಿ ಕಾಯ್ದಿಡುವ ರಾಷ್ಟ್ರಪ್ರಜ್ಞೆಯ ಪಸೆಯನ್ನು ಕಾಣುವ ಹಂಬಲವಿದೆ. ಹಾಗೆಂದು ಇದು ಸಮಾಜ-ರಾಜಕೀಯ-ಧರ್ಮಗಳ ಗಡಸು ಮುದ್ದೆಯಲ್ಲ; ಸಂಸ್ಕೃತಿಯ ಸಂವೇದನೆಯಲ್ಲಿ, ಸಾರ್ವತ್ರಿಕವಾದ ಜೀವನತತ್ತ್ವ-ಕಲಾತತ್ತ್ವಗಳ ನೆಲಗಟ್ಟು-ಸೂರುಗಳ ನಡುವೆ ಬೆಳೆದ ಕಾದಂಬರೀವಧುವಿನ ಯಾತ್ರೆ.
ಶತಾವಧಾನಿ ಡಾ. ಗಣೇಶ್‌ ಬರೆದ “ಮಣ್ಣಿನ ಕನಸು” ಕಾದಂಬರಿಯ ಕುರಿತು ನೀಲಕಂಠ ಕುಲಕರ್ಣಿ ಲೇಖನ

Read More

ನಾನು ಕೂಡ ಜಾಡಮಾಲಿಯಾಗಿದ್ದೆ

ಆ ಬಳೆಗಳ ಅಸಹಾಯಕತೆಗೂ ತಾಯ ಆಲಾಪಕ್ಕೂ ವ್ಯತ್ಯಾಸವೇ ಇರಲಿಲ್ಲ. ಅಪ್ಪನ ಜೊತೆ ಮೊದಲ ಬಾರಿಗೆ ಕೈ ಮಾಡಿದ್ದಳು. ಅವಳಿಗೆ ಗೊತಿತ್ತೇನೊ; ತಾನಿನ್ನು ಹೆಚ್ಚು ಕಾಲ ಉಳಿಯುವುದಿಲ್ಲವೆಂದು! ಅಬ್ಬರಿಸಿದಳು. ಬೀಸಿದ್ದ ಬೆತ್ತವ ತಟಕ್ಕನೆ ಹಿಡಿದಿದ್ದಳು. ಅಪ್ಪ ಉಷಾರಾದ. ದೊಣ್ಣೆಯ ಎರಡೂ ತುದಿಗಳ ಬಲವಾಗಿ ಹಿಡಿದುಕೊಂಡ, ತಾಯ ಅದರ ಮಧ‍್ಯ ಭಾಗವ ಹಿಡಿದು ಶಕ್ತಿ ಮೀರಿ ಅವನನ್ನು ಹಿಂದಕ್ಕೆ ನೂಕಿಕೊಂಡು ಹೋಗಿ ಗೋಡೆಗೆ ಒತ್ತರಿಸಿಕೊಂಡು ತನ್ನ ಕಾಲುಗಳ ಬಲವಾಗಿ ಹಿಂದಕ್ಕೆ ಊರಿ ಆ ಬೆತ್ತವನ್ನು ಅವನ ಗೋಣಿನತ್ತ ತಳ್ಳುತ್ತಿದ್ದಳು.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶʼ ಸರಣಿಯ ಹತ್ತನೆಯ ಕಂತು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ