Advertisement

Month: April 2024

ಪಾ.ವೆಂ. ಆಚಾರ್ಯ ಬರೆದ ಕಾವ್ಯ ಕುಸುಮ: ನುಸಿಗೆ

“ನಿದ್ದೆವೆಣ್ಣಿನ ಕೈಯ ಬೀಣೆ! ನಿನ್ನಯ ದನಿಯ
ಮಾಧುರಿಗೆ ಮಾನವನು ಮೈಮರೆತು ಮನದಣಿಯು
ತಾಳೆವಿಕ್ಕುವ ಭರಕೆ, ಸೂಕ್ಷ್ಮ ಜೀವಿಯೆ, ನೀನು
ನಜ್ಜುಗುಜ್ಜಾಗುವುದು ಇಹುದು,- ಎಂತಹ ದುಗುಡ!”- ಕನ್ನಡ ಕಾವ್ಯ ಕುಸುಮ ಮಾಲೆಯಲ್ಲಿ ಪಾ.ವೆಂ. ಆಚಾರ್ಯ ಬರೆದ ಕವಿತೆ “ನುಸಿಗೆ”

Read More

ತನ್ನ ಪಾಡಿಗೆ ಬೆಳಗನ್ನು ಆನಂದಿಸುತ್ತಿದ್ದ ಕವಿಮನೆ

ಕವಿಶೈಲಕ್ಕೆ ಎಷ್ಟೊಂದು ಜನರು  ಪ್ರವಾಸಿಗರಾಗಿ ಬಂದಿದ್ದರು !  ಬಂದಷ್ಟು ಜನರಲ್ಲಿ ಕೇವಲ ಒಂದು ಪರ್ಸೆಂಟ್‌ ನಷ್ಟು ಮಾತ್ರದವರು ಕೆಲಕಾಲ ಸುಮ್ಮನೆ ಇದ್ದು ಹೋದರು. ಬಹುತೇಕರು ಎಲ್ಲಿ ನಿಂತುಕೊಂಡರೆ ಫೋಟೋ ಚೆನ್ನಾಗಿ ಬರಬಹುದು? ರೀಲ್ಸ್‌ಗೆ ಯಾವ ಜಾಗ ಸೂಕ್ತ? ಅನ್ನುವ ಯೋಚನೆಯಲ್ಲಿದ್ದವರೇ. ಸುತ್ತಲಿನ ಮೌನವನ್ನು ಸವಿಯುವುದಕ್ಕೆ ಮುಂಜಾನೆ  ಮಂಜಿನಲ್ಲಿ ಕುಪ್ಪಳಿಯ ಕವಿಮನೆ ಮತ್ತು ಕವಿಶೈಲಕ್ಕೆ ಭೇಟಿ ನೀಡಿದ ಒಂದು ಅನುಭವವನ್ನು ಪ್ರಸ್ತುತಪಡಿಸಿದ್ದಾರೆ ರೂಪಶ್ರೀ ಕಲ್ಲಿಗನೂರು.

Read More

`ಕ್ರಿಮಿನಲ್ ಟ್ರೈಬ್’ ಹಣೆಪಟ್ಟಿ ಅಳಿಸಿಕೊಳ್ಳುವ ಯತ್ನ

ಬುಡಕಟ್ಟುಗಳ ಅಧ್ಯಯನಗಳು ಕರ್ನಾಟಕದಲ್ಲಿ ವಿವಿಧ ಸ್ತರಗಳಲ್ಲಿ ನಡೆದಿವೆ. ಭಾರತ ಸರಕಾರ ಕರ್ನಾಟಕದಲ್ಲಿ ಗುರುತಿಸಿರುವ ಅರವತ್ಮೂರು ಬುಡಕಟ್ಟುಗಳಲ್ಲಿ ಕೆಲವನ್ನು ಪರಿಶಿಷ್ಟ ಜಾತಿಗೆ, ಕೆಲವನ್ನು ಪರಿಶಿಷ್ಟ ಪಂಗಡಕ್ಕೆ ಮತ್ತು ಉಳಿದವುಗಳನ್ನು ಅಲೆಮಾರಿ, ಅರೆ ಅಲೆಮಾರಿ ಬುಡಕಟ್ಟುಗಳೆಂದು ಪರಿಗಣಿಸಿ ಹಿಂದುಳಿದ ವರ್ಗಗಳಿಗೆ ಸೇರಿಸಿದ್ದಾರೆ.
ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಗಂಟಿಚೋರರ ಕಥನ ಸರಣಿಯಲ್ಲಿ ಹೊಸ ಬರಹ

Read More

ಸರಳ ಸತ್ಯಗಳ ಮರೆತು ಹಸಿರ ಹರಿಯುವ ನಾವು..

ಕಾಡನ್ನೇ ಆಶ್ರಯಿಸಿಕೊಂಡು ಬದುಕನ್ನು ಕಟ್ಟಿಕೊಂಡಿರುವ ಆದಿವಾಸಿ ಸಮುದಾಯಗಳು ಅರಣ್ಯ ಪರಿಸರದ ವಿಶಿಷ್ಟತೆಯನ್ನು ಕಾಪಿಟ್ಟುಕೊಳ್ಳುವಲ್ಲಿ ಮಹತ್ತರ ಪಾತ್ರವನ್ನು ಹೊಂದಿವೆ. ಔಪಚಾರಿಕ ಶಿಕ್ಷಣವನ್ನು ಪಡೆಯದೆಯೂ ಇಂತಹ ಸಮುದಾಯಗಳ ಜನರು ಹೊಂದಿರುವ ಜ್ಞಾನ ವಿಸ್ತಾರವಾದುದು. ಅವರಿಗೆ ದೊರೆತ  ತಿಳಿವಳಿಕೆಯು ಅರಣ್ಯಜನ್ಯವಾದುದು.  ಈ ಸಮುದಾಯಗಳ ಆಚರಣೆ- ನಂಬಿಕೆಗಳು ಅರಣ್ಯಕೇಂದ್ರಿತವಾಗಿವೆ ಮತ್ತು ಅರಣ್ಯಪರವಾಗಿವೆ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಪರಿಸರ ಕುರಿತ ಬರಹ

Read More

ಪಂ. ವೆಂಕಟೇಶ್‌ ಕುಮಾರ್‌ ಅವರಿಂದ ಪುರಂದರ ದಾಸರ “ನೀನ್ಯಾಕೋ ನಿನ್ನ ಹಂಗ್ಯಾಕೋ” ಪದ

ಪಂ. ವೆಂಕಟೇಶ್‌ ಕುಮಾರ್‌ ಅವರಿಂದ ಪುರಂದರ ದಾಸರ “ನೀನ್ಯಾಕೋ ನಿನ್ನ ಹಂಗ್ಯಾಕೋ” ಪದ

ಕೃಪೆ: ಜ್ಞಾನಗಮ್ಯ ಪ್ರಸಾರಣ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ