Advertisement

Month: March 2024

ಕವಿಜೋಡಿಯ ದುರಂತಗೀತ

ಕವಿಜೋಡಿಯ ದುರಂತ ಅಂತ್ಯವೂ ಬಹಳ ಪರಿಣಾಮಕಾರಿಯಾಗಿ ನಿರೂಪಿತವಾಗಿದೆ. ಕಾವ್ಯದೇವಿಯೇ ಹೇಳಿ ಮಾಡಿಸಿದಂಥ ಜೋಡಿಯೊಂದು ಪರಸ್ಪರರ ವಿಶ್ವಾಸ ನಂಬಿಕೆಗಳನ್ನು ಉಳಿಸಿಕೊಳ್ಳಲಾಗುವುದಿಲ್ಲ. ತನ್ನ ಗಂಡ ಆಸಿಯಾ ಎಂಬುವವಳ ಜೊತೆ ಸಲಿಗೆಯಿಂದ ಇರುವುದನ್ನು ಸಹಿಸಲಾಗದೆ ತಮ್ಮಿಬ್ಬರ ಪ್ರೇಮದ ಕುರುಹಾಗಿದ್ದ ಕವಿಕುಟೀರದಿಂದ ಅವನ ಕವಿತೆ-ಟಿಪ್ಪಣಿಗಳ ಪುಸ್ತಕವನ್ನು ಸುಟ್ಟು ಟೆಡ್ ನನ್ನು ಹೊರಹಾಕುವುದು..
ಎಸ್. ಸಿರಾಜ್‌ ಅಹಮದ್‌ ಬರೆಯುವ ಅಂಕಣ

Read More

ದೈಹಿಕಾಕರ್ಷಣೆಯ ಭಾವ ಪದರಗಳತ್ತ ಚೆಲ್ಲಿದ ಬೆಳಕು

ವಯೋಮಾನವನ್ನು ಪರಿಗಣಿಸದೆ ಗಂಡು ಮತ್ತು ಧಾರ್ಮಿಕ ಮನೋನೆಲೆಯ ಹೆಣ್ಣಿನಲ್ಲಿ ಕಾಮಪ್ರಜ್ಞೆ ಜಾಗೃತಗೊಂಡ ನಂತರ ಅವು ಮುನ್ನಡೆಯುವ ಪರಿಯಲ್ಲಿ ಉಂಟಾಗುವ ಸೂಕ್ಷ್ಮತರ ಭಾವ ಪದರುಗಳನ್ನು ಪ್ರಸ್ತುತಪಡಿಸುವ ಪರಿಕಲ್ಪನೆಯನ್ನು ಚಿತ್ರೀಕರಿಸುವ ಪ್ರಯತ್ನ ಮಾಡಿದ್ದಾಳೆ ʻದ ಹೋಲಿ ಗರ್ಲ್ʼ ಚಿತ್ರದ ನಿರ್ದೇಶಕಿ  ಲುಕ್ರೇಷಿಯಾ ಮಾರ್ಟೆಲ್‌.
ಈ ಚಿತ್ರದ ಕುರಿತು ʻಲೋಕ ಸಿನಿಮಾ ಟಾಕೀಸ್ʼನಲ್ಲಿ ಎ.ಎನ್.ಪ್ರಸನ್ನ ಬರೆದಿದ್ದಾರೆ. 

Read More

ಶಶಿ ತರೀಕೆರೆ ಕವಿತೆ: ವೈಲ್ಡ್‌ ಅಂಡ್‌ ವಿಯರ್ಡ್

ತುಟಿ ಕಿತ್ತು ಬರುವಂತೆ
ನೀನು ನನಗೆ ಮುತ್ತು ಕೊಟ್ಟೆ
ನಾನು ಪ್ರತಿ ಸಂಜೆ
ಕಂಠಮಟ್ಟ ಕುಡಿದು ಮಲಗಿದೆ
ಹೇಳಬೇಕೆಂದರೆ ನಾವಿಬ್ಬರೂ
ಸ್ವಲ್ಪ ನಿದ್ದೆಯಲ್ಲಿಯೇ ಹೆಚ್ಚು ಉಸಿರಾಡಿದೆವು
ಒಂದೇ ಚಾದರದಲ್ಲಿ ಜ್ವರದ ಕಾವು
ಅನುಭವಿಸಿ ಗಳಗಳನೆ ಅತ್ತೆವು

Read More

ಒಳ್ಳೆಯತನವೇ ಆಸ್ತಿಯಾಗಿದ್ದ ಕಾಲವದು

ಜನರು ಸ್ವಾಭಿಮಾನಿಗಳಾಗಿದ್ದರೆ ಹೊರತು ದುರಭಿಮಾನಿಗಳಾಗಿದ್ದಿಲ್ಲ. ಬೇರೆಯವರ ಘನತೆಯನ್ನು ಹಣ, ಅಂತಸ್ತು ಮತ್ತು ಹುದ್ದೆಗಳಿಂದ ಅಳೆಯುತ್ತಿರಲಿಲ್ಲ. ಮಾನವರಿಗೆ ಒಳ್ಳೆಯತನವೇ ಆಸ್ತಿಯಾಗಿತ್ತು. ಈ ಆಸ್ತಿ ಕಳೆದುಕೊಂಡರೆ ಸತ್ತುಹೋದಂತೆಯೆ ಎಂಬ ಭಾವ ಅವರಿಗಿತ್ತು. ಎಲ್ಲ ಸಮಾಜದವರನ್ನು ಗೌರವಿಸುತ್ತ ಸಾಧ್ಯವಾದ ಕಡೆಗಳಲ್ಲೆಲ್ಲ ಅವರ ಆಚರಣೆಗಳಲ್ಲಿ ಭಾಗವಹಿಸುತ್ತ ಎಲ್ಲರೊಳಗೊಂದಾಗಿ ಬದುಕುತ್ತಿದ್ದರು. ರಂಜಾನ್ ದರ್ಗಾ ಬರೆಯುವ  ಆತ್ಮಕತೆ  ‘ನೆನಪಾದಾಗಲೆಲ್ಲ’ ಸರಣಿಯ 26ನೆಯ ಕಂತು 

Read More

ನಾನು ಮೆಚ್ಚಿದ ನನ್ನ ಕಥಾ ಸರಣಿ: ಸಂತೆಬೆನ್ನೂರು ಫೈಜ್ನಟ್ರಾಜ್ ಕತೆ

ಜಮೀಲಾಗೆ ಯಾಕೋ ಮಸೀದಿ ದಾರಿಯೇ ನೋಡುವಂತಾಗಿತ್ತು. ಮಗ ಮುನೀರ ರೋಜಾ ಬಿಡಲು ಮಸೀದಿಗೆ ಹೋಗಿದ್ದ. ಇಡೀ ದಿನ ಉಪವಾಸವಿದ್ದು ನಾಲ್ಕನೆಯ ತರಗತಿ ಓದ್ತಿದ್ದ ಮುನೀರನಿಗೆ ಅಪ್ಪ ಹಸೇನ್ ಎಂದರೆ ಪಂಚಪ್ರಾಣ. ಮದುವೆಯಾದ ವರುಷಕ್ಕೇ ಝಿಕ್ರಿಯಾಸಾಬ್ ತೋಟ ಬಿಟ್ಟು ಐಸ್ ಮಾರ್ತಾ ಹೊಸ ಜೀವನ ಶುರು ಮಾಡಿದ್ದ ಹಸೇನ್.
ಸಂತೆಬೆನ್ನೂರು ಫೈಜ್ನಟ್ರಾಜ್ ಬರೆದ ಕತೆ ‘ಅಲ್ಲಾ ದೇವರು, ಅನ್ನ ದೇವರು!’

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ