Advertisement

Month: March 2024

ಎಲ್ಲ ನಾಡುಗಳ ದುಡಿಮೆಗಾರರೂ ಒಂದಾಗಲಿ ಎಂದವನು

ಜೀವಂತಿಕೆಯಿಂದ ತುಂಬಿ ತುಳುಕುತ್ತಿದ್ದ ಸೊಹೊ ಪ್ರದೇಶ, ಅಪಾಯಕಾರಿ ಅನಾರೋಗ್ಯಕರ ಸ್ಥಳವೂ ಆಗಿತ್ತು. ಸರಾಸರಿ ಹದಿನಾಲ್ಕು ಜನರು ಒಂದೇ ಮನೆಯಲ್ಲಿ ವಾಸಿಸುವಂತಹ ಜನಸಂದಣಿ, ಬಡತನದ ಬೀಡಾಗಿತ್ತು. ಕಾಯಿಲೆಗಳ ಗೂಡಾಗಿತ್ತು. ೧೮೫೪ರಲ್ಲಿ ಈ ಪ್ರದೇಶ ಕಾಲರಾ ಬಾಧೆಯಿಂದ ಬಳಲಿತು. ಸರಿಯಾದ ಕೆಲಸವಿಲ್ಲದ, ಹಣದ ನಿರ್ವಣೆಯಲ್ಲಿ ಚತುರನಲ್ಲದ ಮಾರ್ಕ್ಸ್ ನಿರಂತರವಾಗಿ ಗೆಳೆಯರ ಕೊಡುಗೆಯಲ್ಲಿ ಜೀವನ ಸಾಗಿಸುತ್ತಿದ್ದ. ಆಪ್ತನಾದ ಎಂಗೆಲ್ಸ್, ಬೇಕರಿ, ಹಾಲು, ತರಕಾರಿ, ಚಹಾ ಅಂಗಡಿಯವರ ಬಳಿ ಮಾರ್ಕ್ಸ್ ಮಾಡಿದ ಸಾಲವನ್ನು ತೀರಿಸುತ್ತಿದ್ದ.
ಯೋಗೀಂದ್ರ ಮರವಂತೆ ಬರೆಯುವ ಸರಣಿ

Read More

ಮತ್ತೆಂದೂ ಅವಳು ಬರೆಯುವ ಸಾಹಸಕ್ಕೆ ಇಳಿಯಲಿಲ್ಲ

ನನ್ನ ಮದುವೆಯಾಗಿ ಕೆಲವು ವರ್ಷಗಳ ನಂತರ ದೊಡ್ಡ ಜಮೀನ್ದಾರನೊಂದಿಗೆ ಅವಳ ಮದುವೆಯಾಯ್ತು. ಅವಳ ಗಂಡನಿಗೆ ಅವಳು ಹೊರಗೆ ಹೋಗಿ ಹಾಡುವುದು ಇಷ್ಟವಿರಲಿಲ್ಲ. `ನೀನು ನಮ್ಮ ಮಕ್ಕಳಿಗೆ ಹಾಡು ಕಲಿಸಿದರೆ ಬೇಕಾದಷ್ಟಾಯಿತು. ಸಾರ್ವಜನಿಕ ಪ್ರದರ್ಶನ ಬೇಡ. ಹೊರಗೆ ಹೋದರೆ ತೋಟದ ಉಸ್ತುವಾರಿ, ಮನೆ ವಾರ್ತೆ ನೋಡಿಕೊಳ್ಳುವವರು ಯಾರು? ಊರ ಜನರಿಗೆ ಸಂಗೀತ ಹೇಳಲಿಕ್ಕೆ ಅಲ್ಲ ನಾನು ನಿನ್ನನ್ನು ಮದುವೆಯಾದದ್ದು’ ಎಂದಿದ್ದ. ಹಾಡುಹಕ್ಕಿಯ ರೆಕ್ಕೆ ಅಲ್ಲಿಗೆ ಮುರಿಯಿತು ಎಂದು ಬೇರೆ ಹೇಳಬೇಕಾಗಿಲ್ಲ ತಾನೆ?
ಸಹನಾ ಕಾಂತಬೈಲು ಅವರ ‘ಆನೆ ಸಾಕಲು ಹೊರಟವಳು’ ಪುಸ್ತಕದ ಇನ್ನೊಂದು ಪ್ರಬಂಧ ಇಲ್ಲಿದೆ.

Read More

ಶ್ರದ್ಧೆಯ ಮೂಲ ಎಲ್ಲಿದೆ?

ಆತ ಮೇಲೆ ಹೋಗಿ ಗಂಧದ ಕಡ್ಡಿ ಹಚ್ಚಿ ಅಷ್ಟೂ ದಿಕ್ಕಿಗೆ ಭಕ್ತಿಯಿಂದ ಪೂಜೆ ಮಾಡಿದ. ಆಮೇಲೆ ನಮಸ್ಕರಿಸಿದ. ಹೊರಡುವ ಮುಂಚೆ ಕೇಳಿದೆ. ಏನಿದು ಅಂತ. ಆತ “ಸುತ್ತ ದೇವರುಗಳಿದ್ದಾರೆ, ಪೂಜೆ ಮಾಡದಿದ್ದರೆ ಆಗುತ್ತಾ? ದಿನ ಬೆಳಿಗ್ಗೆ ಸಾಯಂಕಾಲ ನಾವು ಯಾರೇ ಶಿಫ್ಟ್‌ ನಲ್ಲಿರಲಿ ಪೂಜೆ ಮಾತ್ರ ತಪ್ಪಿಸಲ್ಲ” ಎಂದ. ಅವರು ಅದ್ಯಾವುದೂ ಮಾಡದಿದ್ದರೂ ನಡೆಯುತ್ತೆ. ಆರ್ಕಿಯಾಲಜಿಯವರ ಪ್ರಕಾರ ಅದೊಂದು ಸ್ಮಾರಕ. ಪೂಜೆಗೆ ದುಡ್ಡು ಕೊಡೋಲ್ಲ. ಅದು ನಿತ್ಯಪೂಜೆ ನಡೆಯುವ ದೇವಾಲಯವಲ್ಲ. ಆದರೆ ಇದು ಅಲ್ಲಿರುವ ಸೆಕ್ಯುರಿಟಿಗಳು ನಡೆಸಿಕೊಂಡು ಬಂದಿರುವ ಪರಿಪಾಠ.
ಗಿರಿಜಾ ರೈಕ್ವ ಬರೆಯುವ ಪ್ರವಾಸ ಅಂಕಣ

Read More

ಪೋಲಿಸ್ ಕಿ ಬೇಟಿ…

ನಾನು ಎಲ್ಲರ ಮುಖವನ್ನು ಒಂದೊಂದಾಗಿ ನೋಡುತ್ತ ಹೋದೆ. ಎಲ್ಲ ಹೆಂಗಸರೂ ಚೆನ್ನಾಗಿ ತಲೆ ಬಾಚಿ ಕೊಂಡಿದ್ದಾರೆ. ಮುಖಕ್ಕೆ ಪೌಡರು, ಕಣ್ಣಿಗೆ ಸುಖ ಕೊಡುವ ಸೀರೆಗಳು, ಒಂದಿಷ್ಟು ಅಮ್ಮಿ ಕಾಣುವಂಥ ಬ್ಲೌಜುಗಳು, ಕೈತುಂಬ ರಂಗುರಂಗಿನ ಬಳೆಗಳು, ಬಾಯಿತುಂಬ ಎಲೆ ಅಡಿಕೆ. ಜನ ‘ಗಳಸವರುʼ ಎಂದು ಕರೆಯುವುದು ಇವರಿಗೇನೆ ಇರಬಹುದು ಎಂಬ ಗುಮಾನಿ ಶುರುವಾಯಿತು. ಅದೇನೇ ಇದ್ದರೂ ಅವರು ಅಷ್ಟೊಂದು ಸುಖವಾಗಿ ಇದ್ದದ್ದು ನನಗೆ ಹೊಸ ಅನುಭವವನ್ನು ಕೊಡುತ್ತಲಿತ್ತು.
ಹಾಡುಗಳು ಶುರುವಾದವು.
ರಂಜಾನ್ ದರ್ಗಾ ಬರೆಯುವ “ನೆನಪಾದಾಗಲೆಲ್ಲ” ಸರಣಿ

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ

ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು…

Read More

ಬರಹ ಭಂಡಾರ