Advertisement

Month: April 2024

ನಂಬಿ ಬದುಕಿದವರ ಕಥೆ

ಝುಹೆಬಾನ್ ಎಂಬ ಮಧ್ಯವಯಸ್ಕನೊಬ್ಬರನ್ನು ಮಾತಿಗೆಳೆದಾಗ ಅವರು ದರ್ಗಾಹದ ಇತಿಹಾಸವನ್ನು ಬಿಚ್ಚಿಡುತ್ತಾ ಹೋದರು. ಸುಮಾರು ಎರಡುನೂರ ಎಪ್ಪತ್ತೈದು ವರ್ಷಗಳ ಹಿಂದೆ ಟಿಪ್ಪು ಮಸ್ತಾನ್, ಮಾಣಿಕ್ ಮಸ್ತಾನ್ ಮತ್ತು ತವಕ್ಕಲ್ ಮಸ್ತಾನ್ ಎಂಬ ಮೂವರು, ನವಾಬ್ ಹೈದರ್ ಆಲಿ ಕಟ್ಟಿಸುತ್ತಿದ್ದ ಕಲ್ಲಿನರಮನೆಯ ಕೆಲಸಕ್ಕೆಂದು ಬಂದರು. ಧರ್ಮನಿಷ್ಠರಿದ್ದ ಆ ಮೂವರೂ ಕೆಲಸವೇ ದೇವರೆಂದು ದುಡಿಯುತ್ತಿದ್ದರೂ ಪಗಾರದ ದಿನ ಮಾತ್ರ ಕಾಣೆಯಾಗಿಬಿಡುತ್ತಿದ್ದರಂತೆ!
ದಾದಾಪೀರ್‌ ಜೈಮನ್‌ ಬರೆಯುವ ‘ಜಂಕ್ಷನ್‌ ಪಾಯಿಂಟ್‌’ ಅಂಕಣ

Read More

ನೂತನ ದೋಶೆಟ್ಟಿ ಬರೆದ ಈ ದಿನದ ಕವಿತೆ

“ಅವಳ ಕರುಳಬಳ್ಳಿ ಹರಡಿದಲ್ಲೆಲ್ಲ
ರಕ್ತದೋಕುಳಿ
ಸೂರ್ಯ ಇನ್ನೂ ಉದಯಿಸಬೇಕಷ್ಟೇ
ಆಗಲೇ ಮಾರಣ ಹೋಮ
ಮಗನ ದಿಟ್ಟಿ ತೆಗೆಯುವುದ ಮರೆತುಬಿಟ್ಟೆ
ಗೋಳಾಡುತ್ತಾಳೆ ಅಮ್ಮ
ಕೈಯಲ್ಲಿ ಕೆಂಪು ನೀರ ಬಟ್ಟಲು
ಎಲೆಯ ಮಧ್ಯೆ ಅಡಿಕೆ
ಮದುವೆಯೂ, ಸಂಸಾರವೂ, ಮಕ್ಕಳೂ
ಸುಣ್ಣ ಕರಗಿ ನೀರಿಗೆ ಇನ್ನಷ್ಟು ರಂಗು
ಅವನೆಲ್ಲಿ ಈಗ?”- ನೂತನ ದೋಶೆಟ್ಟಿ ಬರೆದ ಈ ದಿನದ ಕವಿತೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಟಿ.ಎಸ್.‌ ಗೊರವರ ಬರೆದ ಕತೆ

ಪದ್ಮಾಳ ಅತ್ತೆ, ಮಾವನಿಗೂ ಚಿಂತೆ ಮನೆ ಮಾಡಿತು. ತಮ್ಮ ವಂಶ ಬೆಳೆಸುವ ಕುಡಿ ಪಡೆಯಲು ಅದೇನು ಮಾಡಬೇಕೋ ತಿಳಿಯದಾಯಿತು. ದೇವರಾಜನಿಗೆ ಮತ್ತೊಂದು ಮದುವೆ ಮಾಡಿದರೆ ಹ್ಯಾಗೆ ಎನ್ನುವ ಆಲೋಚನೆ ಅವರಲ್ಲಿ ಮೊಳೆಯಿತು. ಕೆಲ ಸಂಬಂಧಿಕರು ಮದುವೆ ಮಾಡುವುದೇ ಸರಿಯೆಂದು ಸಲಹೆ ನೀಡಿದರು. ಇದು ಪದ್ಮಾಳ ಕಿವಿ ತಲುಪಿ ವಿಚಿತ್ರ ಸಂಕಟದಲ್ಲಿ ಮುಳುಗಿದಳು. ದಿನಪೂರ್ತಿ ಮಾತಿಲ್ಲದೆ ಚಿಂತೆಯಲ್ಲೇ ಮುಳುಗಿದಳು. ಲೋಕದ ಪರಿವೆಯನ್ನೇ ಮರೆಯತೊಡಗಿದಳು. ಟಿ.ಎಸ್. ಗೊರವರ ಬರೆದ ಕತೆ “ಕತ್ತಲಿನಾಚೆ”

Read More

‘ಊಲುರು ಮಾತು’ ಎಂಬ ಹೊಸ ಭಾಷ್ಯ

ದೇಶೀಯ ಮಟ್ಟದಲ್ಲಿ ಆಡಳಿತ ನಡೆಸುವ ಪಾರ್ಲಿಮೆಂಟಿಗೆ ಅಬೊರಿಜಿನಲ್ ಜನರ ಸಮಿತಿಯನ್ನು ನೇಮಿಸಿ ಅವರ ದನಿಗೆ ಪುನಃಶ್ಚೇತನ ಕೊಡುವ ಭರವಸೆಯನ್ನು ಆಸ್ಟ್ರೇಲಿಯಾದ ಹೊಸ ಸರ್ಕಾರ ನೀಡಿದೆ.  ಅಷ್ಟೇ ಅಲ್ಲ, ದೇಶದ ಸಂವಿಧಾನದಲ್ಲಿ ಅವರ ದನಿಯನ್ನು ಸೇರ್ಪಡಿಸುವ ಮಾತನ್ನು ಕೊಟ್ಟಾಗಿದೆ. ಹೊಸ ಪ್ರಧಾನಮಂತ್ರಿಗಳ ಮಾತಿನಿಂದ ಅಬೊರಿಜಿನಲ್ ಜನಸಮುದಾಯಗಳ ನಾಯಕರಲ್ಲಿ, ಹಿರಿಯರಲ್ಲಿ ಸಂಚಲನೆ ಮೂಡಿದೆ. ಆಸ್ಟ್ರೇಲಿಯಾ ಪತ್ರದಲ್ಲಿ ಡಾ. ವಿನತೆ ಶರ್ಮಾ ಅವರು ಆಸ್ಟ್ರೇಲಿಯಾದ ವರ್ತಮಾನಗಳನ್ನು ಬರೆದಿದ್ದಾರೆ. 

Read More

ಬೆದೆಗೆ ಬಂದವಳ ಮೆದುವಾಗಿ ತಳ್ಳಿಬಿಟ್ಟಿದ್ದೆ

ಅವಳು ಬಿಗಿಯಾಗಿ ನನ್ನ ಕೈ ಹಿಡಿದೇ ಇದ್ದಳು. ವಿದಾಯದ ಗಳಿಗೆಯಲ್ಲಿ ಅಮರ ಪ್ರೇಮದ ಮೋಹವೇ…’ನಾಳೆ ಸಿಗುವೆ’ ಎಂದಿದ್ದೆ. ‘ನಿಜವಾಗ್ಲೂ… ನನ್ನ ತಲೆ ಮೇಲೆ ಕೈ ಇಟ್ಟು ಆಣೆ ಮಾಡಿ ಇನ್ನೊಂದ್ಸಲ ಹೇಳಿ’ ಎಂದು ಪ್ರತಿ ಉತ್ತರಕ್ಕೆ ಕಾದಳು. ಕೈ ಹಿಡಿದು ತಲೆ ಮೇಲೆ ಇಟ್ಟುಕೊಂಡಳು. ‘ನಾಳೆ ಅನ್ನೋದು ಕೂಡ ಒಂದು ಸುಳ್ಳು, ಅಂದಾಜು; ಕೇವಲ ನಿರೀಕ್ಷೆ…ಊಹೆ’ ಎಂದೆ.  ‘ಅಷ್ಟೆಲ್ಲ ಬೇಡ. ಸಿಕ್ತೀನಿ; ಸಿಗಲ್ಲಾ ಅನ್ನೊದ್ರಲ್ಲಿ ಯಾವ್ದಾದ್ರು ಒಂದನ್ನ ಹೇಳಿ ಏನೂ ಬೇಜಾರು ಮಾಡ್ಕೋದಿಲ್ಲ’ ಎಂದಳು. ನನ್ನ ಅನಂತ ಅಸ್ಪೃಶ್ಯ ಆಕಾಶ ಸರಣಿಯಲ್ಲಿ ಮೊಗಳ್ಳಿ ಗಣೇಶ್ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ