Advertisement

Month: March 2024

ಬಂಗಾಳಕೊಲ್ಲಿಯ ಮೂಗುತಿ ವಜ್ರ ಅಂಡಮಾನ್‌

ಸಮುದ್ರದೆದುರು ನಾವೆಲ್ಲರೂ ಗುಬ್ಬಚ್ಚಿಗಳಂತೆ ಹಾರಾಡೋ ಹಕ್ಕಿಗಳು, ಒಮ್ಮೆ ನೀಲಿ ಮತ್ತೊಮ್ಮೆ ಕೆಂಪಾದ ಆಕಾಶ, ಕನಸಿನಲೋಕಕ್ಕೆ ಜಾರುಬಂಡಿಯಾಗೋ ನುಣುಪು ಪಾಚಿ ಕಟ್ಟೆಗಳು, ಎಲ್ಲಿಯೂ ಕಾಣದ ಆದಿವಾಸಿಗಳು, ಹೂವು ಮುಡಿದು ಓಡಾಡೋ ತಮಿಳು-ಬೆಂಗಾಳಿ ಹೆಣ್ಮಕ್ಕಳು, ಎಂದಿನಂತೆ ಏನೇನೋ ಧಾವಂತಹೊತ್ತ ಚಡಪಡಿಸೋ ಗಂಡಸರು, ಬೆರಳುಗಳು ಬೆಸಗೊಂಡಂತೆ ಇಷ್ಟಿಷ್ಟೇ ದೂರದಲ್ಲಿ ಅಂಟಿಕೊಂಡಿರೋ ಚಿಕ್ಕ ಚಿಕ್ಕ ದ್ವೀಪಗಳು, ಭೂಮಿಯೊಂದಿಗಿನ ರೋಮ್ಯಾನ್ಸ್‌ಗಾಗಿಯೇ ಹುಟ್ಟೋ ಸೂರ್ಯ ಇದು ಅಂಡಮಾನ್!
ಅಂಡಮಾನ್‌ ಪ್ರವಾಸದ ಕುರಿತು ಬರೆದಿದ್ದಾರೆ ಅಂಜಲಿ ರಾಮಣ್ಣ

Read More

ಕತೆಗಳನ್ನು ಕೇಳುತ್ತ ಅರಳುವ ಅವರ ಕಂಗಳು

ಹಿಂದಿನ ದಿನ ಹೇಳಿದ ಕಥೆಯ ಸಣ್ಣ ಸಣ್ಣ ಸಂಗತಿಗಳನ್ನೂ ನೆನಪಿಟ್ಟುಕೊಂಡು ಒಬ್ಬರು ಇನ್ನೊಬ್ಬರಿಗೆ ಹೀಗೆ ಮಾಡು ಎಂದು ನಿರ್ದೇಶನ ಮಾಡುತ್ತಾ ಪಾತ್ರಗಳಾಗಿ ಅಭಿನಯಿಸುವ ಆಟ ಬಹಳ ಸೊಗಸಾಗಿ ನಡೆದಿತ್ತು. ಅವರಲ್ಲಿ ಮೂವರು ಐದು ವರ್ಷ ಆಸುಪಾಸಿನ ಮಕ್ಕಳು. ಅವರಿಗಿನ್ನೂ ಶಾಲೆಯಲ್ಲಿ ಕಲಿಸುವ ಅಕ್ಷರಾಭ್ಯಾಸವೇ ಆಗಿಲ್ಲ. ಆದರೂ ಕಥೆಯನ್ನು ಸೂಕ್ಷ್ಮವಾಗಿ ಕೇಳಿಸಿಕೊಳ್ಳುವ, ಮತ್ತೆ ಅಲ್ಲಿ ಸಂದರ್ಭಕ್ಕೆ ಬೇಕಾದ ಸಂಭಾಷಣೆಯನ್ನು ತಾವೇ ಸೃಷ್ಟಿಸಿಕೊಳ್ಳುವ ಕೌಶಲ ಅವರಿಗಿತ್ತು.
ಅರವಿಂದ ಕುಡ್ಲ ಇಂದಿನ ಬರಹ

Read More

‘ಅರೆಬೈಲು ಘಟ್ಟಗಳಲ್ಲಿʼ ಕವಿತೆ ಇಂದಿನ ಕಾವ್ಯ ಕುಸುಮ

“ಹಿಂಡುಗಟ್ಟಿ ಬಂದ ಮೋಡ
ಮುಂದೆ ಹೋಗಲಾರೆವೆಂದು
ಬಾನ ತೊಟ್ಟಿಲಲ್ಲಿ ತಾವೆ
ತೂಗಿಕೊಂಡವು.”- ಗಿರಡ್ಡಿ ಗೋವಿಂದರಾಜರು ಬರೆದ ಅರೆಬೈಲು ಘಟ್ಟಗಳಲ್ಲಿ ಕವಿತೆ ‘ಕಾವ್ಯ ಮಾಲೆಯ ಕಾಣದ ಕುಸುಮಗಳು’ ಸರಣಿಯಲ್ಲಿ ನಿಮ್ಮ ಓದಿಗಾಗಿ.

Read More

ತಪ್ಪು ಮಾಡುವುದಿಲ್ಲವೆಂದು ಎಷ್ಟೇ ನಿರ್ಣಯಿಸಿದರೂ…

ತಾಯಿಯ ಗರ್ಭದಲ್ಲಿರುವ ಭ್ರೂಣವೊಂದು ಹಿಂದಿನ ಜನ್ಮದಲ್ಲಿ ತಾನು ಮಾಡಿದ ತಪ್ಪುಗಳನ್ನೆಲ್ಲ ನೆನಪಿಸಿಕೊಳ್ಳುತ್ತದೆ. ಮುಂದಿನ ಜನ್ಮದಲ್ಲಿ ಅಂತಹ ತಪ್ಪುಗಳನ್ನು ಖಂಡಿತಾ ಮಾಡುವುದಿಲ್ಲವೆಂದು ನಿಕ್ಕಿ ಮಾಡಿಕೊಳ್ಳುತ್ತದೆ. ಯಾವುದು ಆ ತಪ್ಪುಗಳು ಎಂದು ಸಿಂಹಾವಲೋಕನ ಮಾಡಿದರೆ -ಅವುಗಳೇ ಜೀವನದ ಹತ್ತು ಅವಸ್ಥೆಗಳು. ಗುರುಗ್ರಂಥದಲ್ಲಿರುವ ‘ಗುರುಬನಿ’ಯೊಂದನ್ನುಆಯ್ದುಕೊಂಡು ಪ್ರಸಿದ್ಧ ಭರತನಾಟ್ಯ ಕಲಾವಿದೆ ರಮಾವೈದ್ಯನಾಥನ್ ಅವರು ಅದನ್ನು ರಸಿಕವರ್ಗಕ್ಕೆ ಉಣಬಡಿಸಿದ ನೃತ್ಯರೂಪಕವೇ ಜೀವದಶಾವಸ್ಥಾ. ಈ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಲೇಖನವೊಂದು ಇಂದಿನ ಓದಿಗಾಗಿ.

Read More

ಬಿಟ್ಟೇನೆಂದರೂ ಬಿಡದ ಹಣೆಪಟ್ಟಿಗಳ ಕಳಚುವುದು ಹೇಗೆ…

ಈ ಹೆಸರಿನಿಂದುಂಟಾಗುವ ಸಾಮಾಜಿಕ ಅಪಮಾನದಿಂದ ದೂರಾಗಲು ಈ ಸಮುದಾಯ ತನ್ನ ಹೆಸರನ್ನು ಹೊಸ ವೃತ್ತಿಗನುಗುಣವಾಗಿ ಗಿರಣಿ ವಡ್ಡರ್ ಮುಂತಾಗಿ ಕರೆದುಕೊಂಡಿದ್ದಾರೆ. ಹೀಗಾಗಿ ಡಿನೋಟಿಫೈಡ್ ಸಮುದಾಯ ಅಪರಾಧಿ ಬುಡಕಟ್ಟು ಎನ್ನುವ ಹಣೆಪಟ್ಟಿ ಕಳಚಿದರೂ ಅಪರಾಧದ ಸಂಕೇತವಾದ `ಗಂಟಿಚೋರ್ಸ್’ ಎನ್ನುವ ಹೆಸರಿನಿಂದಲೇ ಈ ಸಮುದಾಯದ ಜನರು ತಮ್ಮ ಇರವನ್ನು ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಡಾ. ಅರುಣ್ ಜೋಳದಕೂಡ್ಲಿಗಿ ಸರಣಿ

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ