Advertisement

Month: April 2024

ರಾಜಕೀಯ ಹಾದಿಯಲ್ಲಿ ಕಂಡ ಪ್ರಾಮಾಣಿಕ ನುಡಿಗಳು

ಬಿ.ಎ. ಮೊಹಿದೀನ್ ಅವರು ಜೀವನದಲ್ಲಿ ಇಟ್ಟುಕೊಂಡ ಮೌಲ್ಯಗಳು ಅನುಕರಣೀಯವಾದುದು. ತಾನು ಚುನಾವಣೆಗೆ ನಿಂತಾಗ ಮಸೀದಿ ದೇವಾಲಯ ಚರ್ಚುಗಳಿಗೆ ಮತಕೇಳಲು ಹೋಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಅದನ್ನು ಹಟಬಿಡದೇ ಪಾಲಿಸಿದವರು ಅವರು. ತಾವು ಹುಟ್ಟಿಬಂದ ಸಮುದಾಯದ ಏಳಿಗೆಗಾಗಿ ಮೊಹಿದೀನ್ ಅವರಿಗಿದ್ದ ಕಾಳಜಿ ಪ್ರಶ್ನಾತೀತವಾದುದು.
ಓದುವ ಸುಖ ಅಂಕಣದಲ್ಲಿ ಗಿರಿಧರ್ ಗುಂಜಗೋಡು ಬರಹ

Read More

ಪೂರಂ ಎಂಬ ಸಂಭ್ರಮವೂ ಆನೆಗಳ ಗಾಂಭೀರ್ಯವೂ

ನಾವು ಅಲ್ಲಿಗೆ ಹೋಗಿ ತಾಸು ಹೊತ್ತಿನ ಮೇಲೆ ಒಂದೊಂದೇ ಆನೆಗಳು ಮೆಲ್ಲಗೆ ತಮ್ಮ ಮೇಲೆ ನಿಂತಿದ್ದ ಎರಡು-ಮೂರು ಜನ ಹಾಗೂ ಮಾವುತರೊಟ್ಟಿಗೆ, ದೇವಸ್ಥಾನದ ಒಳಗೆ ಹೊರಡಲಾರಂಭಿಸಿದವು. ನಮಗೆ ಮೂರ್ನಾಲ್ಕು ಆನೆಗಳನ್ನು ಹತ್ತಿರದಿಂದಲೇ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿತು. ಇನ್ನೇನು ಆ ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬಂದಾಗ, ನಾವು ಮೆಲ್ಲನೆ ಅಲ್ಲಿಂದ ಹೊರಟು, ಕಾಂಪೌಂಡ್‌ನ ಇನ್ನೊಂದು ಬದಿಗೆ ಬಂದು, ಆನೆಗಳ ಸಾಲು ನಿಂತಿದ್ದಲ್ಲಿಗೆ ಹೋದಾಗ, ಅಲ್ಲಿ ಆಗಲೇ ಜನರ ಗುಂಪು ಮೆಲ್ಲನೆ ಕರಗಲಾರಂಭಿಸಿದ ಕಾರಣ, ಅಲ್ಲಿ ಇನ್ನೊಂದಷ್ಟು ಹತ್ತಿರದಿಂದ ಆನೆಗಳನ್ನು ಕಾಣಲು ಸಿಕ್ಕಿತು.
ಕೇರಳದ ತ್ರಿಶ್ಶೂರ್‌ ಪೂರ ಕುರಿತು ತಮ್ಮ ಅನುಭವಗಳನ್ನು ಬರೆದಿದ್ದಾರೆ ರೂಪಶ್ರೀ ಕಲ್ಲಿಗನೂರ್

Read More

ನಾನೂ ವಿದ್ಯುತ್ ತಯಾರಿಸಿದೆ!

ನನಗಿಂತ ದೊಡ್ಡದಾದ ರುಬ್ಬುವ ಕಲ್ಲಿನ ಮುಂದೆ ಕುಳಿತು ಬೆಳಗಿನ ಉಪಾಹಾರಕ್ಕೆ, ಮಧ್ಯಾಹ್ನದ ಭೋಜನಕ್ಕೆ ಮತ್ತೆ ರಾತ್ರಿಯ ಊಟಕ್ಕೆ ರುಬ್ಬುವ ಕೆಲಸ.  ಏಳು-ಎಂಟು ಕೂಲಿಯಾಳುಗಳು ದಿನಾ ಊಟಕ್ಕೆ. ಅಷ್ಟು ಮಾತ್ರವಲ್ಲ ನನ್ನ ತವರಿನ ಕಡೆಯಿಂದ ಬಂದ ಇಬ್ಬರು ಕೆಲಸಗಾರರು ಮನೆಯಲ್ಲೇ ಇರುತ್ತಿದ್ದರು. ಅವರಿಗೆ ರಾತ್ರಿಯೂ ಬೇಯಿಸಿ ಹಾಕುವ ಕೆಲಸ ನನ್ನದಾಗಿತ್ತು. ನೆಂಟರು ಬಂದರೆ ಕೇಳುವುದೇ ಬೇಡ. ಒಟ್ಟಿನಲ್ಲಿ ನನ್ನ ಬದುಕೇ ರುಬ್ಬುವುದರಲ್ಲಿ ಕಳೆದುಹೋಗುತ್ತಿತ್ತು. `ಇದರಿಂದ ನನಗೆ ಬಿಡುಗಡೆ ಯಾವಾಗ? ಎಂದು ಯೋಚಿಸುವಾಗ ವಿದ್ಯುತ್ ತಯಾರಿಸುವ ಯೋಚನೆ ಮನಸ್ಸಿಗೆ ಬಂತು. ಸಹನಾ ಕಾಂತಬೈಲು ಅವರ ‘ಆನೆ ಸಾಕಲು ಹೊರಟವಳು’ ಪುಸ್ತಕದ ಪ್ರಬಂಧ  ಇಲ್ಲಿದೆ. 

Read More

ಯುದ್ಧ ನಂತರದ‌ ಕತ್ತಲಲ್ಲಿ ಅರಿವಿನ ಬೆಳಕು

ಜೈನಾ ದುಬಾಯಿಂದ ಬೈರುತ್ ಗೆ ಬಂದು ಅಲ್ಲಿಂದ ಆಕ್ರಮಣಕ್ಕೆ ಒಳಗಾದ ಬಿಂಟ್ ಬಿಲ್‌ ಊರನ್ನು ತಲುಪಿರುತ್ತಾಳೆ. ಟೋನಿಯೊಂದಿಗೆ ಪ್ರಯಾಣ ಸಾಗುತ್ತಿದ್ದಂತೆ ಇಬ್ಬರಿಗೂ ತಮ್ಮಷ್ಟಕ್ಕೆ ಇರುವುದು ಅಸಹಜವೆನ್ನಿಸಿ, ನಿಧಾನವಾಗಿ ಕೇವಲ ವ್ಯಕ್ತಿಗಳಂತೆ ಇದ್ದವರು ಪರಸ್ಪರ ಅರಿತುಕೊಳ್ಳಲು ಪ್ರಾರಂಭಿಸುತ್ತಾರೆ. ಇದು ಅವರ ಭಾವಗಳಲ್ಲಿ, ಮುಖಚಹರೆಗಳಲ್ಲಿ ವ್ಯಕ್ತವಾಗುವುದನ್ನು ಸಮೀಪ ಚಿತ್ರಿಕೆಗಳಲ್ಲಿ ನಿರೂಪಿತಗೊಂಡಿವೆ. ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಲೆಬನಾನ್‌ನ ʻಅಂಡರ್‌ ದ ಬಾಂಬ್ಸ್ʼ ಸಿನಿಮಾದ ವಿಶ್ಲೇಷಣೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ