Advertisement

Month: March 2024

ನೇಯ್ಗೆಯೆಂಬ ಸುದೀರ್ಘ ನಡಿಗೆ

ದಕ್ಷಿಣ ಕನ್ನಡ ಮತ್ತು ಉಡುಪಿ ಪ್ರದೇಶದ ನೇಕಾರರು ನೇಯುವ ಈ ಸೀರೆಯ ವಿನ್ಯಾಸ ಅಪರೂಪವಾದುದು. ತಿಳಿ ಬಣ್ಣದ ಮೈ ಮತ್ತು ಗಾಢ ಬಣ್ಣದ ಅಂಚುಸೆರಗಿನ ಸೀರೆಯು ಕರಾವಳಿಯ ಹವಾಮಾನಕ್ಕೆ ಕ್ಷೇಮಭಾವ ಕೊಡುವಂತಹುದು. ಪರಿಸರಕ್ಕೆ ಧಕ್ಕೆ ಮಾಡದ ಸಾವಯವ ಉಡುಪು ಮಮತಾ ರೈ ಅವರಿಗೆ ಇಷ್ಟವಾಗಿರುವುದು ಕೇವಲ ವಿನ್ಯಾಸದ ಕಾರಣದಿಂದಲ್ಲ.ಬದುಕು ಪರಿಸರಕ್ಕೆ ಹತ್ತಿರವಾಗಿರಬೇಕು ಎಂಬಅವರ ಆಶಯವೇ ಅವರ ಈ ಕಾಯಕಕ್ಕೆ ಪ್ರೇರಣೆ. ಸೀರೆಯ ಪಯಣವೊಂದರ ಕುರಿತು ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ

Read More

ಜೀವನ ರೂಪಿಸಿಕೊಳ್ಳುವ ನಿರೀಕ್ಷೆಯಲ್ಲಿ ಕೆಲವು ಮಾತುಗಳು

ಗಂಟಿಚೋರ ಸಮುದಾಯ ಬಹುಶಃ ಹೊಟ್ಟೆಪಾಡಿನ ಕೆಲಸವಾಗಿ ಈ ಭಾಗದಲ್ಲಿ ಸ್ಥಳೀಯವಾಗಿ ಬಾವಿ ತೋಡುವ ಕೆಲಸಕ್ಕೆ ಹೊಂದಿಕೊಂಡಿರಬಹುದು ಅನ್ನಿಸುತ್ತದೆ. ಹಾಗಾಗಿ ಪರ್ಯಾಯ ವೃತ್ತಿಗಳನ್ನು ಕೈಗೊಳ್ಳಲು ಸರಕಾರ ತನ್ನ ಯೋಜನೆಗಳಲ್ಲಿ ಸಹಾಯ ಮಾಡಿದರೆ, ಈ ಸಮುದಾಯ ಈ ಅಪಾಯಕಾರಿ ವೃತ್ತಿಯಿಂದ ಬಿಡುಗಡೆ ಪಡೆಯಲು ಸಾಧ್ಯವಿದೆ. ಅಂತೆಯೇ ಇದೇ ವೃತ್ತಿಯನ್ನು ಸುರಕ್ಷಿತವಾಗಿ ಮುಂದುವರೆಯಲು ಸರಕಾರ ಆಧುನಿಕ ತಾಂತ್ರಿಕ ಸೌಲಭ್ಯವನ್ನು ಪಡೆಯಲು ಸಹಕರಿಸಬಹುದಾಗಿದೆ.
ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಗಂಟಿಚೋರರ ಕಥನ ಸರಣಿಯ ಕೊನೆಯ ಕಂತು

Read More

ಗೀತಾ ಹೆಗಡೆ ಬರೆದ ಈ ದಿನದ ಕವಿತೆ

“ಅವನೆಂದ; ನಾನು ನಿನ್ನನ್ನು, ನೀನು ನನ್ನನ್ನು- ಅದೆಷ್ಟು
ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ!
ಆದರೆ, ಅವಳಿಗೆ ಗೊತ್ತು-
ಅವನಿಗೆ ಅವನ ಬಗೆಗೇ
ತಿಳಿದಿದ್ದಕ್ಕಿಂತ- ಹೆಚ್ಚು!”- ಗೀತಾ ಹೆಗಡೆ ಬರೆದ ಈ ದಿನದ ಕವಿತೆ

Read More

ಕೊಳ್ಳೆಗಾಲ್ ಮೆಮೋರಿಯಲ್

ಅಮೆರಿಕದ ಜನ ಈಗಲೂ ತಲೆ ತಗ್ಗಿಸಿ ಕತೆ ಹೇಳುವ ತಗ್ಗಿನ ಸ್ಮಾರಕ ‘ವಿಯೆಟ್ನಾಂ ಮೆಮೋರಿಯಲ್’. ವಿಯೆಟ್ನಾಂನಲ್ಲಿ 1955ರಿಂದ 75ರವರೆಗೆ ಸತತ ಇಪ್ಪತ್ತು ವರ್ಷಗಳ ಕಾಲ ಹೋರಾಟ ನಡೆಸಿ ಅಮೆರಿಕ ಕೊನೆಗೂ ಯಶ ಗಳಿಸಲಾಗದೇ ಸೋತು ಹಿಮ್ಮೆಟ್ಟಿದ್ದು ಈ ಮಹಾನ್ ದೇಶಕ್ಕೆ ಎಂದೂ ಮರೆಯಲಾಗದ ಮುಖಭಂಗ. ಆ ಯುದ್ಧದಲ್ಲಿ ಮಡಿದವರಿಗಾಗಿ ಅಮೆರಿಕದಲ್ಲಿ ನಿರ್ಮಿಸಿದ ಸ್ಮಾರಕಗಳಿಗೆ ಕೊಳ್ಳೇಗಾಲದ ‘ವೆರಿಸ್ಪೆಷಲ್’  ಕಲ್ಲುಚಪ್ಪಡಿಗಳನ್ನು ಅಂದರೆ ಗ್ರಾನೈಟನ್ನು ಬಳಸಲಾಗಿದೆ. ಈ ಕಲ್ಲುಚಪ್ಪಡಿಗಳನ್ನು ರೂಪಿಸಲು ಜೀವತೆತ್ತವರಿಗೆ ಸ್ಮಾರಕ ಬೇಡವೇ…
ನಾಗೇಶ್ ಹೆಗಡೆ ಅವರು ಬರೆದ ಗಗನ ಸಖಿಯರ ಸೆರಗ ಹಿಡಿದು ಕೃತಿಯ ಒಂದು ಅಧ್ಯಾಯ ಇಂದಿನ ಓದಿಗೆ. 

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ