Advertisement

Month: August 2022

ಮಂಜಯ್ಯ ದೇವರಮನಿ ಬರೆದ ಈ ಭಾನುವಾರದ ಕತೆ

ಶಾರವ್ವನಿಗೆ ಶಿವರುದ್ರಯ್ಯನ ಇಂಥ ನಡವಳಿಕೆ ವಿಚಿತ್ರವೆನಿಸಿತು. ದೇವರ ಹೊಲ ತನ್ನ ಗಂಡನಿಗೆ ಕೊಡಿಸ್ತೀನಿ ಅಂತಾ ಪೂಜಾರಪ್ಪ ಹೇಳಿದ್ದು ತನಗೆ ಗೊತ್ತಿತ್ತು. ಸಿಗಬೇಕು ಎಂಬ ವಿಚಾರದಲ್ಲಿ ಒಂದು ಒಪ್ಪಂದವಾಗಿತ್ತು ಎನ್ನುವುದು ಪೂಜಾರಪ್ಪ ಮತ್ತು ತನಗೆ ಮಾತ್ರ ಗೊತ್ತಿದ್ದ ವಿಷಯವಾಗಿತ್ತು. ಆದರೆ ಶಿವರುದ್ರಯ್ಯ ಗುಡಿ ಪೂಜಾರಿ ಕ್ರಿಷ್ಣಪ್ಪನ ಮುಖಾಂತರ ಹೇಳಿಸಿ ತನ್ನ ಉದ್ದೇಶ ಸಾಧನೆಗೆ ಮುಂದಾಗಿದ್ದ. ಕ್ರಿಷ್ಣಪ್ಪ ಉದ್ದೇಶದ ಮೂಲವನ್ನು ಪೂರ್ತಿಯಾಗಿ ಹೇಳದೆ ಪರವಾಗಿ ಎನ್ನುವಂತೆ ಹೇಳಿ ಶಾರವ್ವನನ್ನು ಒಪ್ಪಿಸಿದ್ದ.
ಮಂಜಯ್ಯ ದೇವರಮನಿ, ಸಂಗಾಪುರ ಬರೆದ ಕತೆ

Read More

ಸಿಸಿಲಿಯ ಬೀಳ್ಕೊಡುಗೆ ಸಿಕ್ಕ ಅನಿರೀಕ್ಷಿತ ಉಡುಗೊರೆ!

ಇತಿಹಾಸದ ಅನರ್ಘ್ಯ ರತ್ನಗಳ ಸುತ್ತ ಅಲೆದಾಟ. ಆರ್ಕಿಮಿಡಿಸ್ ತವರೂರಿನಿಂದ ಹಿಡಿದು ದೇವಾಲಯಗಳ ಕಣಿವೆಯವರೆಗೆ ಇತಿಹಾಸದ ರಸದೌತಣ ಬೇಕೆಂದರೆ ಸಿಸಿಲಿಗೆ ಬರಬೇಕು. ಇತಿಹಾಸದ ಕಥೆಗಳಲ್ಲಿ ಕಳೆದುಹೋಗುವ ಹವ್ಯಾಸವಿರುವವರಿಗೆ ಸಿಸಿಲಿ ಲೆಕ್ಕವಿಲ್ಲದಷ್ಟು ಅವಕಾಶಗಳನ್ನು ತೆರೆದಿಡುತ್ತದೆ. ಕ್ರಿ.ಪೂ. ಆರನೇ ಶತಮಾನದ ದೇವಾಲಯಗಳ ಭೇಟಿ, ನನ್ನ ಈವರೆಗಿನ ಯೂರೋಪಿನ ಪ್ರವಾಸಗಳಲ್ಲೇ ಅನನ್ಯ! ಪ್ರಪಂಚದಾದ್ಯಂತ ಇರುವ ಗ್ರೀಕ್ ದೇವಾಲಯಗಳಲ್ಲಿ ಅತ್ಯಂತ ಸುಸ್ಥಿತಿಯಲ್ಲಿರುವ “Temple of Concordia”ದ ಆಕಾರ, ರಚನೆ – ನೋಡಿ ನಿಬ್ಬೆರಗಾಗಿಬಿಟ್ಟೆ.
“ದೂರದ ಹಸಿರು” ಸರಣಿಯಲ್ಲಿ ಗುರುದತ್ ಅಮೃತಾಪುರ ಬರಹ

Read More

ಹೆಣ್ಣನ್ನು ಮುಟ್ಟಿದ್ದೀವಾ…

ಇಂತಹ ಹತ್ತಾರು ನಿದರ್ಶನಗಳಿಂದ ಆಕೆಗೆ ಏನೂ ತಿಳಿಯುತ್ತಿರಲಿಲ್ಲ. ನಾನು ಬಿಡಿಸಿ ಹೇಳುವಂತಿರಲಿಲ್ಲ. ಬೆದರಿ ಹೋಗಿದ್ದಳು. ಇದನ್ನು ಹೇಗೆ ಇಂಗ್ಲೀಷಿನಲ್ಲಿ ಸರಳೀಕರಿಸಿ ತಿಳಿಸಬಹುದು ಎಂದು ಮನದಲ್ಲೆ ಯತ್ನಿಸಿ; ಥತ್; ಇಂತಾ ಅಲ್ಕಾ ಟ್ರಾನ್ಸ್‌ಲೇಶನ್‌ನಿಂದಾಗಿ ಆಕೆ ನನ್ನ ಬಗ್ಗೆ ಕೆಟ್ಟದಾಗಿ ಭಾವಿಸಿ; ಎಲ್ಲಿ ನನಗೆ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸುವಳೊ ಎಂದು ಆದಷ್ಟು ಅಂತರ ಕಾಯ್ದುಕೊಳ್ಳುತಿದ್ದೆ. ಆಕೆಯೊ ಲೈಬ್ರರಿಗೆ ಹುಡುಕಿ ಬಂದು ವಿವರಿಸು ಎಂದು ಒತ್ತಾಯಿಸುತ್ತಿದ್ದಳು.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ

Read More

ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ

“ಮೊಳೆವ ಬೀಜಕ್ಕೂ ಇದೆ
ಒಂದು ಬಿಕ್ಕಳಿಕೆ
ಚಿಗುರ ತುಳಿಸಿಕೊಂಡ ಎಳೆ
ಎಸಳಿಗೂ ಇದೆ ನೋವ
ಕದಲಿಕೆ
ಹಾದಿ ಬದಿಯಲಿ ಬಿದ್ದ ಈ ಶಬ್ದಗಳು
ಎಷ್ಟೊಂದು ಅನಾಥ..”- ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ

Read More

ಆಪರೇಷನ್ ವಿಜಯ್ ನ ಜೀವಂತ ನೆನಪುಗಳು

ಹಾಲ್ ಆಫ್ ಫೇಂನಲ್ಲಿ ಆಪರೇಷನ್ ವಿಜಯ್ ಹೆಸರಿನಲ್ಲೇ ಒಂದು ಗ್ಯಾಲೆರಿ ತೆರೆದಿದ್ದಾರೆ. ಅಲ್ಲಿ ಕಾರ್ಗಿಲ್ ಯುದ್ಧಕ್ಕೆ ಬಳಸಲಾದ ಗನ್ನುಗಳನ್ನು ಇಡಲಾಗಿದೆ. ಮಾರ್ಗದರ್ಶನ ಮಾಡುತ್ತಿದ್ದ ಆ ಯೋಧ “ಈ ಗನ್ನ್ ಅನ್ನು ಕೈಯಲ್ಲಿ ಹಿಡಿದು ಫೋಟೋ ತೆಗೆಸಿಕೊಳ್ಳಿ” ಎಂದ. ನನ್ನ ಆನಂದಕ್ಕೆ ಮಿತಿಯೇಯಿರಲಿಲ್ಲ. ನಿಜಕ್ಕೂ ನಾನು ಆ ಘಳಿಗೆಯಲ್ಲಿ ವೈರಿಪಡೆಯನ್ನು ಸೆದೆಬಡಿದು ಬಿಡುತ್ತೇನೆ ಎನ್ನುವ ಭಾವದಿಂದ ಗನ್ನೊಂದನ್ನು ಕೈಗೆತ್ತಿಕೊಳ್ಳಲು ಹೋದೆ. ಉಹುಂ, ಆಗಲೇ ಇಲ್ಲ! ಎಷ್ಟೊಂದು ಭಾರವಿತ್ತು. ನಗರ ಜೀವನ ಶೈಲಿಗೆ ಹೊಂದಿಕೊಂಡ ನನ್ನ ತಾಕತ್ತು ಸೈನಿಕನ ಉಂಗುಷ್ಠವನ್ನೂ ಹೋಲಲು ಸೋತಿತು. ಕೊನೆಗೆ ಅಲ್ಲಿದ್ದ ಆ ಯೋಧ, ಗನ್ ಎತ್ತಿ ನನ್ನ ಕೈಯಲ್ಲಿ ತೂರಿಸಿದ, ಫೋಟೊ ಸೆರೆಹಿಡಿದ. ‘ಕಂಡಷ್ಟೂ ಪ್ರಪಂಚ’ ಅಂಕಣದಲ್ಲಿ ಅಂಜಲಿ ರಾಮಣ್ಣ ಅವರ ಲೇಖನ ಇಲ್ಲಿದೆ.

Read More

ಜನಮತ

ನಾನು ಪೂಜೆ ಮಾಡುವುದು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

18 hours ago
https://t.co/GasKBAAM7e
ಮಹಾತ್ಮಾಗಾಂಧೀಜಿಯವರ ಆತ್ಮಕಥೆ ʼನನ್ನ ಸತ್ಯಾನ್ವೇಷಣೆʼ ಪುಸ್ತಕದ ಎರಡು ಅಧ್ಯಾಯಗಳು
21 hours ago
https://t.co/8l1wYVYDt6 ರಂಜಾನ್‌ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ 42ನೇ ಕಂತು

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇವಾನ್ ಬುನಿನ್: ಭೌತ ವಸ್ತುಗಳ ಭಾವಗೀತಕಾರ

ಬುನಿನ್ನನ ಗದ್ಯ ಅವನನ್ನು ಹತ್ತೊಂಭತ್ತನೇ ಶತಮಾನದ ರಷ್ಯನ್ ಸಾಹಿತಿಕ ಸಂಪ್ರದಾಯದ ಮುಖ್ಯವಾಹಿನಿಯಲ್ಲಿ ಸ್ಪಷ್ಟವಾಗಿ ಎದ್ದು ಕಾಣುವಂತೆ ಮಾಡಿದೆ. ಟಾಲ್‍ಸ್ಟಾಯ್, ಟರ್ಜೆನೇವ್, ಚೆಕಾಫ್ ಮತ್ತು ಗಂಚರೋಫ್ ನಿಸ್ಸಂದೇಹವಾಗಿ ಇವನ...

Read More