Advertisement

Month: March 2024

ದೇವರಾಜ್‌ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ

“ಅಂಗಾಂಗಕ್ಕೆಲ್ಲ ವಿಭೂತಿ ಬಳಿದು
ಪೀಠಕ್ಕೆ ಸುತ್ತಲೂ ಭಸ್ಮ ಎಳೆದು
ತೊಟ್ಟಿಕ್ಕುವ ಎಣ್ಣೆ ಗಾಣಕೆ
ಜಗಕೆ ಮುಸುಕು ತೊಡಿಸಿಯಾದರೂ
ಪಂಜು ಹಿಡಿವ ಆಸೆಯಂತೆ…!!
ಕತ್ತಲೆಗಾಗಿ ಕಾಯುವ
ಕಾಯವನ್ನೇ ಪಡೆದವರಂತೆ….!!”- ದೇವರಾಜ್‌ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ

Read More

ವ್ಯಾಸರಾವ್‌ ನಿಂಜೂರ್‌ ಆತ್ಮಕಥನದ ಪುಟಗಳು

ಕೊಡವೂರಿನಲ್ಲಿ ಎಂಟನೆಯ ದರ್ಜೆ ತೇರ್ಗಡೆಯಾದ ಬಳಿಕ, ನನ್ನ ಅಣ್ಣ ರಾಮಚಂದ್ರ ಕಲಿಯುತ್ತಿದ್ದ ಮಲ್ಪೆಯ ಫಿಶರೀಸ್ ಹೈಸ್ಕೂಲಿಗೆ ಸೇರಿಕೊಳ್ಳುವುದು ಎಂದು ಮನೆಮಂದಿಯ ಲೆಕ್ಕಾಚಾರವಿತ್ತು. ಅಲ್ಲಿ ಫೀಸಿನಲ್ಲೂ ರಿಯಾಯಿತಿ ಪಡೆಯುವ ಸಂಭವವಿತ್ತು. ಆದರೆ ಅಪ್ಪಯ್ಯನ ತರ್ಕವೇ ಬೇರೆ. `ದೂರ ನಡೆದುಕೊಂಡು ಹೋದರೆ ವಿದ್ಯೆ ತಲೆಗೆ ಹತ್ತುತ್ತದೆ. ಆದ್ದರಿಂದ ಕಲ್ಯಾಣಪುರದ ಮಿಲಾಗ್ರಿಸ್ ಹೈಸ್ಕೂಲೇ ಸಮ’ ಎಂದುಬಿಟ್ಟರು. ಅವರ ಮಾತಿಗೆ ಅಪೀಲೇ ಇಲ್ಲ. ಬರಿಗಾಲಲ್ಲಿ ಕಲ್ಬಂಡೆ, ಅರ್ಕಾಳಬೆಟ್ಟು, ನೇಜಾರು ಮಾರ್ಗವಾಗಿ ಕಲ್ಯಾಣಪುರ ಮುಟ್ಟಲು ಕನಿಷ್ಠ ಒಂದು ಗಂಟೆಯಾದರೂ ಬೇಕು.
ವ್ಯಾಸರಾವ್‌ ನಿಂಜೂರ್‌ ಅವರ ಆತ್ಮಕಥನ “ಎಳೆದ ತೇರು” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ನವೀನ ಗಣಪತಿ ಬರೆದ ಈ ಭಾನುವಾರದ ಕತೆ

ಮಧ್ಯಾಹ್ನ ಒಂದು ಘಂಟೆಗೇ ತಾನು ಮನೆಯಲ್ಲಿ ಮಾಡಬಹುದಾದ ಎಲ್ಲ ಕೆಲಸಗಳೂ ಮುಗಿದು ಮತ್ತೆಲ್ಲ ಮನಸ್ಸಿಗೆ ಕಿರಿಕಿರಿಯಾಗ ಹತ್ತಿತ್ತು. ನಾಲ್ಕು ದಿನ ದಾವಣಗೆರೆಗೆ ಹೋಗಿ ಮಗಳೊಟ್ಟಿಗೆ ಇದ್ದು ಬರೋಣವೆನಿಸುತ್ತಿತ್ತು. ಆದರೆ ಶಂಭಣ್ಣನನ್ನು ಬಿಟ್ಟು ಎಲ್ಲಿಯೂ ಹೋಗುವಂತಿರಲಿಲ್ಲ. ಮಗಳೂ ವಾರ ವಾರ ಬರುವವಳಲ್ಲ. ಅವಳಿಗೆ ಭಾನುವಾರ ರಜಾದಿನಗಳು ಇದ್ದಾಗಲೇ ಜೋರು ವ್ಯಾಪಾರ. ಇನ್ನು ಆಚೀಚೆ ಎರಡು ಹೆಂಗಸರೊಟ್ಟಿಗೆ ಹರಟೆ – ಮಾತು – ಒಡನಾಟ ಮಾಡೋಣವೆಂದರೆ, ಒಬ್ಬರ ವ್ಯವಹಾರವಾದರೂ ಚೊಕ್ಕಟವಾಗಿದೆಯೇ?
ನವೀನ ಗಣಪತಿ ಬರೆದ ಈ ಭಾನುವಾರದ ಕತೆ “ಧನಲಕ್ಷ್ಮಿ”

Read More

ಸಾಟಿಯಿಲ್ಲದ ಸ್ಲೊವೇನಿಯಾ: ಪೋಸ್ಟೋಯ್ನಾ ಗುಹೆಗಳು

ಕಾರಿನಲ್ಲಿ ಸ್ಲೊವೇನಿಯಾದ ಯಾವುದೇ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಎರಡು ತಾಸಿನಲ್ಲಿ ಪ್ರಯಾಣಿಸಬಹುದು. ಅಷ್ಟು ಪುಟ್ಟ ದೇಶ. ಪುಟ್ಟ ರಾಷ್ಟ್ರವಾದರೂ ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳನ್ನೊಳಗೊಂಡಿದೆ. ಪ್ರವಾಸಿಗಳಿಗೆ ಹೇರಳ ಅವಕಾಶಗಳನ್ನು ತೆರೆದಿಟ್ಟಿರುವ ಸ್ಲೊವೇನಿಯಾ ಪ್ರಕೃತಿ ಪ್ರೇಮಿಗಳನ್ನು ಎಲ್ಲ ಋತುಗಳಲ್ಲೂ ಕೈಬೀಸಿ ಕರೆಯುತ್ತದೆ. ಸ್ಲೊವೇನಿಯಾದ ಶುಭ್ರ ಸ್ಪಟಿಕದಂತಹ ಸ್ವಚ್ಚ ನದಿಗಳು ನನ್ನ ಅಚ್ಚುಮೆಚ್ಚು. ಪ್ರಪಂಚದ ಅತ್ಯಂತ ಸುಂದರ ಸರೋವರಗಳಲ್ಲಿ ಒಂದಾದ “ಲೇಕ್ ಬ್ಲೆಡ್” ಕೂಡ ಸ್ಲೊವೇನಿಯಾದಲ್ಲಿದೆ. ನಾನು ಗಮನಿಸಿದಂತೆ ಕನ್ನಡದ ಹಲವಾರು ಚಲನಚಿತ್ರಗಳ ಹಾಡುಗಳು ಸ್ಲೊವೇನಿಯಾದಲ್ಲಿ ಚಿತ್ರೀಕರಣಗೊಂಡಿವೆ.
“ದೂರದ ಹಸಿರು” ಸರಣಿಯಲ್ಲಿ ಗುರುದತ್ ಅಮೃತಾಪುರ ಬರಹ

Read More

ಅಸಂಗತವಾಗಿ ಸಂಗಾತಿ ಆಗಿದ್ದೆ

ನಿಜ; ತಾತನನ್ನು ಹೊರಗೆ ಮಲಗಿಸಿದ್ದರು. ಬಸಿದು ಹೋಗಿದ್ದ. ಮಾತು ಸರಿಯಾಗಿ ಹೊರಡುತ್ತಿರಲಿಲ್ಲ. ಹೋದ ಕೂಡಲೆ ವ್ಯಗ್ರ ನಾಯಿಗಳಂತೆ ನನ್ನ ಮೇಲೆ ಆ ಬಂಧು ಬಳಗ ಬೊಗಳಿತು. ಕೇರು ಮಾಡಲಿಲ್ಲ. ಅವನು ದರಿದ್ರ ನನ್ನಪ್ಪ ಹೆಣದಂತೆ ಅರೆ ಬೆತ್ತಲೆಯಾಗಿ ಬೀದಿಯ ಲೈಟು ಕಂಬಕ್ಕೆ ಒರಗಿಕೊಂಡು ಅಮಲಾಗಿ ಯಾರ ಮೇಲೊ ಬೈಯ್ಯುತ್ತಿದ್ದ. ನನ್ನ ಕಂಡ ಕೂಡಲೇ… ‘ವರದಕ್ಷಿಣೆಯಾ ಯೆಸ್ಟು ತಕಂದಿದ್ದಾನಂತೆ ಕೇಳೀ… ಆ ದುಡ್ಡು ನನುಗೆ ಸೇರಬೇಕೂ’ ಎಂದು ಕುಯ್‌ಗರೆಯುತ್ತಿದ್ದ. ಇವನು ಇಂಗೇ ಭಿಕ್ಷೆ ಬೇಡಿಕೊಂಡೇ ಸಾಯುತ್ತಾನೆ ಎನಿಸಿತು.
ಮೊಗಳ್ಳಿ ಗಣೇಶ್‌ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆ ಸರಣಿಯ 35ನೇ ಕಂತು

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ