Advertisement

Month: April 2024

ಕಾಮಾಕ್ಯದಲ್ಲಿ ದೊರೆತ ಅನಿರೀಕ್ಷಿತ ಆಶೀರ್ವಾದ

ಪುರಾಣಗಳಲ್ಲಿ ಉಲ್ಲೇಖಗೊಂಡಿರುವ 51 ಶಕ್ತಿಪೀಠಗಳ ಪೈಕಿ ಕಾಮಾಕ್ಯ ದೇವಿಯ ಈ ದೇವಸ್ಥಾನವೂ ಒಂದು ಎಂದು ಹೇಳಲಾಗುತ್ತದೆ. ಭುವನೇಶ್ವರಿ, ಬಾಗಲಮುಖಿ, ಚಿನ್ನಮಸ್ತ, ತಾರಾ, ಕಾಳಿ, ಭೈರವಿ, ಧೂಮಮತಿ ಎನ್ನುವ ಹೆಸರುಗಳಲ್ಲಿ ಇಲ್ಲಿ ದೇವಿಯನ್ನು ಆರಾಧಿಸುತ್ತಾರೆ. ಮುಖ್ಯ ಗೋಪುರದಲ್ಲಿ ಅವಳನ್ನು ಮಾತಂಗಿ, ತ್ರಿಪುರ ಸುಂದರಿ ಮತ್ತು ಕಮಲ ಎನ್ನುವ ಹೆಸರುಗಳಲ್ಲಿ ವಿಗ್ರಹಗಳನ್ನು ಸ್ಥಾಪಿಸಿ ತಾಂತ್ರಿಕ ಶೈಲಿಯಲ್ಲಿ ಆರಾಧಿಸಲಾಗುತ್ತದೆ. ಎಲ್ಲಾ ದೇವಿಯರ ಗರ್ಭಗುಡಿಯಲ್ಲಿಯೂ ಹತ್ತು ಇಂಚು ಆಳದ ಯೋನಿಯಾಕಾರದ ಕಪ್ಪುಶಿಲೆಯೊಳಗಿನಿಂದ ಸದಾಕಾಲವೂ ನೀರಿನ ಬುಗ್ಗೆ ಉಕ್ಕುತ್ತಿರುತ್ತದೆ. ಕಂಡಷ್ಟೂ ಪ್ರಪಂಚ ಅಂಕಣದಲ್ಲಿ ಅಂಜಲಿ ರಾಮಣ್ಣ ಅವರ ಲೇಖನ

Read More

ದೇವರ ಅಸ್ತಿತ್ವವನ್ನು ಹುಡುಕಾಡುವ ಕಥನ

ಯುವ ತಲೆಮಾರು ವಿದೇಶಗಳಲ್ಲಿ ನೆಲೆಗೊಳ್ಳುವಾಗ ಮನೆದೇವರ ಗೊಡವೆಯು ಯಾರಿಗೂ ಬೇಡವಾಗಿದೆ. ಆಧುನಿಕ ಯುಗವು ಬದಲಾವಣೆಯನ್ನು ಹೊಂದುತ್ತಿರುವ ಸಂದರ್ಭದಲ್ಲಿ ದೇವರು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಾನೆಯೇ ಎಂಬ ಪ್ರಶ್ನೆಯನ್ನು ಎತ್ತಿಕೊಂಡು ಈ ಕಾದಂಬರಿಯನ್ನು ರಚಿಸಲಾಗಿದೆ.  ಲಿಂಗ ಮತ್ತು ಜಾತಿಯ ಆಧಾರದಲ್ಲಿ ಗಂಡಸರನ್ನು ಶೋಷಕರನ್ನಾಗಿಯೂ ಹೆಂಗಸರನ್ನು ಶೋಷಿತರನ್ನಾಗಿಯೂ, ಕಲ್ಪಿಸಿ ಅಭ್ಯಾಸವಾಗಿರುವ ಹೊತ್ತಿನಲ್ಲಿ ಲೇಖಕರು ವಸ್ತುಸ್ಥಿತಿಯ ಎರಡೂ ಮಗ್ಗುಲಿಗೆ ಕಣ್ಣುಹಾಯಿಸಿದಂತೆ ಗೋಚರಿಸುತ್ತದೆ.  ಡಾ. ನಾ. ಮೊಗಸಾಲೆಯವರ ‘ಇದ್ದೂ ಇಲ್ಲದ್ದುʼ ಕಾದಂಬರಿಯ ಕುರಿತು ಡಾ. ಸುಭಾಷ್ ಪಟ್ಟಾಜೆ ಬರೆದ ಬರಹ ಇಲ್ಲಿದೆ.

Read More

ಪುನೀತ್‌ ಕಬ್ಬುರ್ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ಪುನೀತ್ ಕಬ್ಬುರ್. ಮೂಲತಃ ಹಾವೇರಿ ಜಿಲ್ಲೆಯ ಹಾನಗಲ್‌ನವರು. ನೀನಾಸಂ ಪದವೀಧರರಾಗಿರುವ ಇವರು ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ರಂಗಭೂಮಿ ಮತ್ತು ಸಿನಿಮಾ ನಿರ್ದೇಶನ ವಿಭಾಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

`ಮಣಿಬಾಲೆʼ ಕೃತಿಯ ಒಂದೆರಡು ಪುಟಗಳು

ನಗನಗ್ತಾ ಉಣ್ಣುವ ಆಳುಮಕ್ಳ ಹುಮ್ಮಸ್ಸು, ಕುಶಾಲು ನೋಡಿದ್ದೆ ಅವರವ್ವಾರ ಜೊತೆಲಿದ್ದ ಮಣಿಬಾಲೆನೂ ಹುರುಪಾಗೋಯ್ತು. ಹೋಗಿ ಹೋಗಿ ಸಾರನೂ, ಮಜ್ಜಿಗೇನೂ ಅವರ ಅಗಲಿಗೆ ಬುಟ್ಕೊಡ್ತ ಇತ್ತು. ಈರುಳ್ಳಿ ಚೂರು ಹಾಕ್ದ ಮಜ್ಜಿಗೆ ಕುಡಿವಾಗ ಅದರ ರುಚಿಗೆ ಮನಸೋತು ಬಾಲೆ ಇನ್ನೊಂದು ಜೊನ್ನೆ ಬಿಡ್ಸಕಂಡು ಕುಡಿತು. ದೊಡ್ಡ ಕೆರೆಲಿ ಕುಯ್ಕಬಂದ ತಾವರೆ ಎಲೆಲಿ ಉಂಡು, ಅಲ್ಲೇ ಹಂಚಿಕಡ್ಡಿ ಹೊಂಚಿ ಆಳುಮಕ್ಳು ಕಟ್ಟಿದ್ದ ಮುತ್ತುಗದೆಲೆ ಜೊನ್ನಿಯ ತಿರುಗ್ಸಿ ಮುರುಗ್ಸಿ ಈಗ ಬಾಲೆ ನೋಡತಾ ಇದ್ರೆ… ಹರೇದುಡ್ಲ ಮಾತ್ಗೆ ಅವ್ರವ್ವಾರು ಬಿದ್ದೂಬಿದ್ದೂ ನಗತಿದ್ರು.
ಇತ್ತೀಚೆಗಷ್ಟೇ ಬಿಡುಗಡೆಯಾದ ಹೆಚ್.ಆರ್. ಸುಜಾತಾ ಅವರ ಕೃತಿ “ಮಣಿಬಾಲೆ” ಕೆಲವು ಪುಟಗಳು ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ