Advertisement

Month: April 2024

ಇರುವಿಕೆ ಮತ್ತು ಆಗುವಿಕೆ

ಸಾಹಿತ್ಯಲೋಕ ಸೃಷ್ಟಿಸುವ ಉತ್ಕೃಷ್ಟ ಕೃತಿಗಳಲ್ಲಿ ಬದುಕಿನ ಸಂಕಟ, ಪ್ರಕ್ಷುಬ್ದತೆಗಳ ಅನುಭವ ತೀವ್ರತೆಗಳಿಗೆ ಈಡಾದ ನಿಗೂಢ ಸತ್ಯದ ಶೋಧನೆಯ ಹುಡುಕಾಟದ ಚಿತ್ರಣವನ್ನು ಕಾಣಬಹುದು. ಪೊಳ್ಳು ಸತ್ಯವನ್ನು ನಿರಾಕರಿಸುವ ಆತ್ಮವಿಶ್ವಾಸ ಸಹಿಸುವ ಶಕ್ತಿ ಸಂಕಟವನ್ನು ಮೌನವಾಗಿ ಬೇಗುದಿಗಳ ಅನುಭವದ ನಿಗೂಢತೆಯ ಲೋಕದ ಅಂತರಂಗದೊಳಗೆ ಪ್ರವೇಶಿಸುವ ಮುಕ್ತತೆ, ಈ ಎಲ್ಲವೂ ಸತ್ಯವನ್ನು ಹುಡುಕುವ ದಾರಿಯ ಭಾಗಗಳೇ ಆಗಿವೆ. ಅಂತಿಮವಾಗಿ ಈ ನಿಜಗಳನ್ನು ಅನ್ವೇಷಕರು ಕಾಣದೆಯೇ ಇರಬಹುದು. ಅನೂಹ್ಯ, ನೋವು, ಮುಗಿಯದ ಸಂಘರ್ಷ, ತಾಕಲಾಟಗಳನ್ನು ಸಹಿಸಿಕೊಳ್ಳುವ ಸಾಮಥ್ರ್ಯವು ಈಗಾಗಲೇ ಅನನ್ಯ ಸತ್ಯದ ಅನ್ವೇಷಣೆಗೆ ಬಳಸುತ್ತಿರುವ ಸ್ವಾನುಕೂಲ ಸಿದ್ದಮಾದರಿಗಳನ್ನು ವರ್ಜಿಸುವಾಗ ಸೃಷ್ಟಿಯಾಗುವಂತಹದು.
ಕಲಾವಿದ ಡಾ. ಎಂ.ಎಸ್. ಮೂರ್ತಿಯವರ “ಬೌಲ್” ಕಾದಂಬರಿ‌ಗೆ – ಪ್ರೊ. ಎನ್. ಮನು ಚಕ್ರವರ್ತಿಬರೆದ ಮುನ್ನುಡಿ

Read More

ಸಮಾನತೆಯ ಆಶಯವನ್ನು ಒರೆಗೆ ಹಚ್ಚುವ ಕತೆ

ಸಿದ್ಧಾಂತಗಳು ಎಷ್ಟೇ ಉದಾತ್ತವಾಗಿದ್ದರೂ ಅದನ್ನು ಜಾರಿಗೊಳಿಸುವ ವಿಧಾನ ಸರಿಯಿಲ್ಲದಿದ್ದರೆ ಎಲ್ಲಾ ಅನರ್ಥವೇ ಆಗುತ್ತದೆ ಎಂಬುದು ಇದರ ಮುಖ್ಯ ಸಾರ. ಒಂದು ತೋಟದಲ್ಲಿರುವ ಪ್ರಾಣಿಗಳೆಲ್ಲಾ ದುಷ್ಟ ಒಡೆಯನ ವಿರುದ್ಧ ಬಂಡೆದ್ದು ತೋಟವನ್ನು ವಶಪಡಿಸಿಕೊಂಡು ಸಮಾನತೆಯ ಸಮಾಜ ಕಟ್ಟಲು ಹೊರಡುವ ಕತೆಯಿದು. ಆದರೆ ಕಾಲಕಳೆಯುತ್ತಾ ಹೋದಂತೆ ನಾಯಕನ ಆದರ್ಶಗಳೆಲ್ಲಾ ಮಣ್ಣುಪಾಲಾಗಿ ಅವನೂ ಒಬ್ಬ ಭ್ರಷ್ಟನೇ ಆಗುತ್ತಾನೆ. ಒಂದು ಕೆಟ್ಟ ಸಮಾಜದಲ್ಲಿನ ಎಲ್ಲಾ ಗುಣಗಳು ಅಲ್ಲೂ ಬರುತ್ತದೆ. ಪ್ರಬಲರಾದ ಹುದ್ದೆಯಲ್ಲಿರುವವರಿಂದ ದುರ್ಬಲರ ಶೋಷಣೆ ನಿರಂತರವಾಗಿ ನಡೆಯುತ್ತದೆ. ಗಿರಿಧರ್‌ ಗುಂಜಗೋಡು ಬರೆಯುವ “ಓದುವ ಸುಖ” ಅಂಕಣ

Read More

ʻದ ಡಿಪಾರ್ಟೆಡ್ʼ: ಕ್ರೈಮ್‌ ಕಥನದ ಅಂತರ್ಮುಖಿ ಪಯಣ

ಕಾಲಿನ್ ಸಲ್ಲಿವನ್ ಎಂಬ ಯುವ ಕ್ರಿಮಿನಲ್ ಪೊಲೀಸ್ ಇಲಾಖೆಯ ಒಳಗೆ ನುಸುಳಿಕೊಂಡು ಅಲ್ಲಿನ ಎಲ್ಲ ವಿದ್ಯಮಾನಗಳನ್ನು ಗ್ಯಾಂಗ್‌ ಲೀಡರ್‌ ಗೆ ರವಾನಿಸುವ ಕೆಲಸ ನಿರ್ವಹಿಸಬೇಕಾಗಿರುತ್ತದೆ. ಇದು ಕಥನದ ಪ್ರಾರಂಭಿಕ ಭಾಗವಾದರೆ ಚಿತ್ರ ಮುಂದುವರಿದಂತೆ ಅವರು ತಮ್ಮ ನಿಯೋಜಿತ ಕೆಲಸಗಳಲ್ಲಿ
ತೊಡಗುತ್ತಾರೆ. ಇದರಲ್ಲಿ ನಿರತರಾದಾಗ ಬಿಲ್ಲಿ ಕಾಸ್ಟಿಗನ್‌ ಮತ್ತು ಕಾಲಿನ್‌ ಸಲ್ಲಿವನ್‌ ಅಂತರಂಗದಲ್ಲಿ ಸಂಭವಿಸುವ ಸಂಘರ್ಷದ ಪದರುಗಳನ್ನು ಪ್ರಕಟಿಸುವುದೇ ನಿರ್ದೇಶಕನ ಉದ್ದೇಶ. ಇಂಥದನ್ನು ಪ್ರಕಟಿಸುವ ಏಕಾಂತ ಕ್ಷಣಗಳಲ್ಲಿ ಪಾತ್ರಗಳ ಅಭಿನಯ ಪರಿಣಾಮಕಾರಿ. ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಅಮೆರಿಕದ ʻದ ಡಿಪಾರ್ಟೆಡ್ʼ ಸಿನಿಮಾದ ವಿಶ್ಲೇಷಣೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ