Advertisement

Month: April 2024

ಯಾರು ಹಚ್ಚಿದರು ಈ ಹಣತೆಯ..

ಹೀಗೆ ಯೋಚಿಸುತ್ತಿರುವ ಒಂದು ದಿನ ಒಂದು ಘನಘೋರ ವಿದ್ವತ್ ಸಭೆಯಲ್ಲಿ ಮೂಕನಾಗಿ ಕೂತಿದ್ದೆ. ಆ ವಿದ್ವಾಂಸರ ವೈಖರಿಗೆ ಮೈಕೇ ಕಿತ್ತುಹೋಗುತಿತ್ತು. ಯಾವ ಯಕ್ಷಗಾನದ ರುದ್ರ ರಾಕ್ಷಸ ಪಾತ್ರವೂ ಅವರ ಮುಂದೆ ನಾಚುವಂತಿತ್ತು. ಪೋಸ್ಟ್ ಮ್ಯಾನ್  ಅಲ್ಲಿಗೇ ಬಂದು ಹುಡುಕಿ ಪತ್ರ ಕೊಟ್ಟು ಸಹಿ ಪಡೆದು ಹೋದ. ತೆರೆದು ನೋಡಿದೆ. ನಿಜವೇ ಎನಿಸಿತು. ಇದು ಏಪ್ರಿಲ್ ತಿಂಗಳಲ್ಲ… ನನ್ನನ್ನು ಮೂರ್ಖನನ್ನಾಗಿಸಲು ಸಾಧ್ಯವಿಲ್ಲ ಎಂದು ಮತ್ತೆ ಓದಿದೆ. ಈ ಪತ್ರ ನಿಜವೇ ಎಂದು ಆ ಪತ್ರದಲ್ಲೇ ಇದ್ದ ನಂಬರಿಗೆ ಫೋನಾಯಿಸಿದೆ. ಕರೆ ಸ್ವೀಕರಿಸಿದವರು ‌ʻಕಂಗ್ರಾಜುಲೇಷನ್ʼ ಎಂದರು. ಮೊಗ‍ಳ್ಳಿ ಗಣೇಶ್‌ ಆತ್ಮಕತೆ  ಸರಣಿ

Read More

ಅಂದುಕೊಳ್ಳದ ಪವಾಡ ಹೇಗೆ ಸಂಭವಿಸಿತು?

ಬೆಳಗ್ಗೆ ನಾಲ್ಕಕ್ಕೇ ಆಶ್ರಮಕ್ಕೆ ಹೋದರೆ ಬಾಬಾರ ದರ್ಶನವಾಗುತ್ತೆ ಅಂತ ಅಲ್ಲಿ ಯಾರೋ ಹೇಳಿದರು. ಸರಿರಾತ್ರಿಯವರೆಗೂ ಬೀದಿ ಸುತ್ತಿ ಮೀನಖಂಡ ಮುನಿಸಿಕೊಂಡರೂ ನಿದ್ದೆಯ ಸುಳಿವಿಲ್ಲ. ನಾಲ್ಕಕ್ಕೆ ಎದ್ದೆ ಆದರೆ ಬಿಳಿಬಣ್ಣದ ಬಟ್ಟೆ ನನ್ನ ಬಳಿ ಇರಲಿಲ್ಲ. ಅಲ್ಲಿ ಬಾಬಾ ಭಕ್ತರೆಲ್ಲಾ ಬೆಳ್ಳಂಬಿಳಿ ಬಿಟ್ಟರೆ ಕೇಸರಿ ಬಟ್ಟೆನೇ ತೊಡುವುದು. ನಾನು ಹೇಗೂ ಭಕ್ತೆ ಅಲ್ಲವಲ್ಲ, ಹಾಗಾಗಿ ಹಸಿರಾದರೂ ಏನಂತೆ ಎಂದುಕೊಂಡು ಇದ್ದ ಒಂದು ಹಸಿರು ಬಣ್ಣದ ಚೂಡಿದಾರ್ ಹಾಕಿಕೊಂಡು ಹೊರಟೆ. “ಕಂಡಷ್ಟೂ ಪ್ರಪಂಚ” ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ

Read More

ಬರಿ ಬಿಯರಿನ ಕತೆಯಲ್ಲ ಇದು…

ಬಹಳಷ್ಟು ಪಬ್‌ಗಳು ಹತ್ತು, ಹನ್ನೆರಡನೇ ಶತಮಾನದಲ್ಲಿ ಡಬ್ಲಿನ್ ಬೀದಿಗಳಲ್ಲಿ ತಲೆದೋರಿದವು. ಮುಂದೆ ಇವು ಸಮಾನ ಆಸಕ್ತರ ಕೇಂದ್ರಗಳಾಗಿ ಸಾಮಾಜಿಕ ಹರಟೆಕಟ್ಟೆಗಳಾಗಿ ಬೆಳೆದವು. ಕೆಲವು ಪಬ್‌ಗಳಲ್ಲಿ ಬರೀ ವ್ಯಾಪಾರಸ್ಥರು ಸೇರಿಕೊಂಡರೆ, ಮತ್ತೆ ಹಲವು ಸಂಗೀತಗಾರರ ಕೇಂದ್ರಗಳಾದವು. ಮತ್ತೆ ಹಲವು ಸಾಹಿತಿಗಳೂ ಕವಿಗಳೂ ಸೇರುವ ಸ್ಥಳಗಳಾದವು. ಮತ್ತೆ ಕೆಲವು ರಾಜಕೀಯದವರು, ಗಣ್ಯರು, ಶ್ರೀಮಂತರು ಸೇರುವ ಜಾಗಗಳು… ವೈಶಾಲಿ ಹೆಗಡೆ ಐರಿಷ್ ಬರಹ

Read More

ಕೈ ಹಿಡಿದು ಮುನ್ನಡೆಸುವ ಕತೆಗಳೆಂಬ ದೋಣಿಗಳು

ಸೂರ್ಯೋದಯದಲ್ಲೋ, ಸೂರ್ಯಾಸ್ತದಲ್ಲೋ ಆಗಸದಲ್ಲಿ ಚೆಲ್ಲಿ ಹೋದ ಬಣ್ಣಗಳು ಕ್ಷಣ ಕ್ಷಣಕ್ಕೂ ಬದಲಾಗುತ್ತಾ ಹೋದಂತೆ, ಗ್ರಹಿಕೆಗಳು ಒಬ್ಬರಿಂದ ಮತ್ತೊಬ್ಬರಿಗೆ ಬದಲಾಗುತ್ತಲೇ ಇರುತ್ತವೆ. ಒಬ್ಬನೇ ವ್ಯಕ್ತಿಯು ಒಂದೊಂದು ಕಾಲದಲ್ಲಿ ಬದುಕನ್ನು ಗ್ರಹಿಸುವ ರೀತಿಯೂ ಬದಲಾಗಿರುತ್ತದೆಯಲ್ಲವೇ. ಹಾಗೆಯೇ ಈ ಕತೆಗಳು ಕೂಡ ಎಂದೆನಿಸುತ್ತದೆ. ಹಾಗೆ ನೋಡಿದರೆ ಎಷ್ಟೊಂದು ಕಲಾತ್ಮಕವಾದ ಕತೆಗಳನ್ನು ಬರೆದರೂ ʻಕತೆಗಾರರುʼ ರೂಪುಗೊಳ್ಳುವುದು ಓದುಗರ ಮನಸ್ಸಿನಲ್ಲಿ ಅಲ್ಲವೇ.
ಕತೆಗಳ ಜಾಡು ಹಿಡಿದ ಬರಹವೊಂದನ್ನು ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ