Advertisement

Month: April 2024

ಡಚ್ ಜನರ ಸೈಕಲ್ ಪ್ರೀತಿ!

ಗಿತೋರ್ನ್ ಪಟ್ಟಣದ ಐತಿಹಾಸಿಕ ಭಾಗಗಳಿಗೆ ರಸ್ತೆ ಮಾರ್ಗವಿಲ್ಲ. ದೋಣಿಯ ಸಹಾಯದಿಂದ ಮಾತ್ರ ತಲುಪಬಹುದು. ಇಲ್ಲಿನ ಬಹುತೇಕ ಮನೆಗಳು ಇಂದು “ಹೋಂ ಸ್ಟೇ” ಆಗಿ ಮಾರ್ಪಟ್ಟಿವೆ. ಪ್ರವಾಸಿಗರಿಗೆ ಇದೊಂದು ಅನನ್ಯ ಅನುಭವ. ನಮ್ಮಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಬಸ್ ವ್ಯವಸ್ಥೆ ಇದ್ದಂತೆ, ಇಲ್ಲಿ ಬೋಟಿನ ವ್ಯವಸ್ಥೆ ಇದೆ. ಕಾಲುವೆಗಳ ಪಕ್ಕದಲ್ಲಿ ನಡೆದು ಹೋಗಲು ಪಾದಚಾರಿ ಮಾರ್ಗವಿದೆ. ಅಲ್ಲಲ್ಲಿ ಪಾದಚಾರಿಗಳಿಗೆ ಸಣ್ಣ ಸೇತುವೆಗಳಿವೆ.
ಗುರುದತ್ ಅಮೃತಾಪುರ ಬರೆಯುವ “ದೂರದ ಹಸಿರು” ಸರಣಿ

Read More

ನನ್ನ ಉಂಡೆ ಪಂಚಮಿ ಕತೆ!

ಪಾಕ ಹದಕ್ಕೆ ಬಂದಂತೆನಿಸಿತು. ಅಷ್ಟೂ ಸಾಮಾಗ್ರಿ ಸುರುವಿ ಗೊಟ.. ಗೊಟ.. ಗೊಟಾಯಿಸಿ ಪರಾತಕ್ಕೆ ಸುರುವಿದೆ. ಈಗಲೆ ಕಟ್ಟುವದೋ.. ಆರಿದ ನಂತರವೋ..? ಮತ್ತೆ ಓವರ್ ಟು ಅವ್ವಾ.. ತಲೆ ಇದ್ದಲ್ಲಿಂದಲೆ ಓಡಿತು. ಆರಿದ ಮೇಲೆ ಉಂಡೆಯಾಗುವದಿಲ್ಲವೋ ಮಂಕೆ. ಉಂಡೆ ಬಂಡೆಯಾಗುತ್ತದೆ.. ಅವ್ವ ತಿಳಿ ಹೇಳಿದಂತಾಯಿತು. ಅಂಗೈಗೆ ಎಣ್ಣೆ ನೀರು ಸವರಿಕೊಂಡು ಸುಡು ಸುಡುವದನ್ನೆ ಎಳೆದುಕೊಂಡೆ. ಬರೆ ಕೊಟ್ಟಂತಾಯಿತು. ಹಾ.. ಎಂದಿತು ಜೀವ. ಅದು ನೋವೋ ಸುಖವೋ ಅಂತೂ ಉಂಡೆಗಳೆಂಬ ಗುಂಡುಗಳು ತಯಾರಾದವು.
ಲಿಂಗರಾಜ ಸೊಟ್ಟಪ್ಪನವರ್ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ದೈನಿಕತೆಯಲ್ಲೆ ದೈವಿಕತೆ..

ಕಾಯ್ಕಿಣಿಯವರ ಕಾವ್ಯಗಳಲ್ಲಿ ದಂತಗೋಪುರದ ವಾಸಿ, ವಿಲಾಸಿ, ಪ್ರವಾಸಿಗರು ಕಾಣಸಿಗಲಾರರು; ಏಕೆಂದರೆ, ನಮ್ಮ-ನಿಮ್ಮ ನಡುವೆ, ಆಚೆ-ಈಚೆ, ಕಣ್ಣಿಗೆ ಬಿದ್ದರೂ ಬೀಳದಂತಿರುವ, ಅಥವಾ ನಾವು ನೋಡಿದರೂ ನೋಡದಂತೆ ಮುಂದೆ ಸಾಗುವುದಕ್ಕೆ ಯಾವ ಆಕ್ಷೇಪಣೆಯನ್ನೂ ಮಾಡದ- ಕಷ್ಟವೋ-ಕಾರ‍್ಪಣ್ಯವೋ ಎಲ್ಲಕ್ಕೂ ಎದೆಗೊಡುತ್ತ ಕಾಲ್ಪನಿಕ ರೇಖೆಗಳನ್ನು ಧಿಕ್ಕರಿಸುತ್ತ, ಅಲ್ಲಗಳೆಯುತ್ತ, ತಮ್ಮದೇ ಜೀವನಚಿತ್ರವ ಮೂಡಿಸುವ ಜೀವಭಂಡಾರಿಗಳು- ಕಾಯ್ಕಿಣಿಯವರ ಕಾವ್ಯಪ್ರಪಂಚವನ್ನು ನಿರಾಯಾಸ, ನಿರಪೇಕ್ಷ್ಯವಾಗಿ ಧರಿಸುತ್ತಾರೆ; ಭರಿಸುತ್ತಾರೆ.
ಜಯಂತ ಕಾಯ್ಕಿಣಿಯವರ “ವಿಚಿತ್ರಸೇನನ ವೈಖರಿ” ಕವನ ಸಂಕಲನದ ಕುರಿತು ಗೀತಾ ಹೆಗಡೆ ಬರಹ

Read More

ಕೋಲಾರದಲ್ಲಿ ಕಂಡ ‘ಕಾಮರೂಪಿ

‘ಅಯ್ಯೋ ನನ್ನ ಇಂಟರ್ನೆಟ್ ಹಾಳಾಗಿ ಹೋಗಿದೆ. ನಿನ್ನಂತಹ ಖಳರೊಡನೆ ಸಂಪರ್ಕಿಸಲು ಇದ್ದ ಈ ಭೂಲೋಕದ ಇದೊಂದು ಕೊಂಡಿಯೂ ಹೊರಟು ಹೋಗಿದೆ’ ಎಂದು ಪರದಾಡುತ್ತಿರುವ ಮಗುವಿನಂತಹ ಹಿರಿಯ ಲೇಖಕ ಕಾಮರೂಪಿ. `ತಡೀರಿ ಸಾರ್ ನಾನೂ ಒಂದು ಕೈ ನೋಡಿಯೇ ಬಿಡುತ್ತೇನೆ’ ಎಂದು ಕಲಿತ ವಿದ್ಯೆಯನ್ನೆಲ್ಲ ಬಳಸಿ ಇಂಟರ್ನೆಟ್ ಸರಿ ಮಾಡಲು ನೋಡಿದೆ. ಆಗಲಿಲ್ಲ. ನೋಡಿದರೆ ಫೋನೇ ಸತ್ತು ಹೋಗಿತ್ತು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ