Advertisement

ಬೇಲೂರು ರಘುನಂದನ್

ಬೇಲೂರು ರಘುನಂದನ್

ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವಿ, ಎಂ.ಫಿಲ್ ಪದವಿಯನ್ನುಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದು ಪ್ರಸ್ತುತ ಅದೇ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ 8 ನಾಟಕ ಪುಸ್ತಕಗಳು ಪ್ರಕಟಗೊಂಡಿವೆ. 2017 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಗೆ ಸದಸ್ಯರಾಗಿ ಆಯ್ಕೆಗೊಂಡ ಬೇಲೂರು ಅವರಿಗೆ ಕುವೆಂಪು ಯುವಕವಿ ಪುರಸ್ಕಾರ, ಬೇಂದ್ರೆಗ್ರಂಥ ಬಹುಮಾನ, ಸಾಲು ಮರದತಿಮ್ಮಕ್ಕ ಹಸುರು ಪ್ರಶಸ್ತಿ, ಎಚ್.ಎಸ್.ವಿ. ಪುಟಾಣಿ ಸಾಹಿತ್ಯ ಪುರಸ್ಕಾರ, ತೇಜಸ್ವಿ ಕಟ್ಟೀಮನಿ ಯುವ ಪುರಸ್ಕಾರ, ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರೆತಿವೆ.

ಅಕ್ಷಯಾಂಬರ: ಬೇಲೂರು ರಘುನಂದನ್ ಬರೆದ ಕವಿತೆ

“ಸುಳ್ಳುಗಳನ್ನು ನೇಯದ
ಮಗ್ಗ ಸತ್ಯ ನುಡಿಯುತ್ತದೆ
ನೇಯುವಾಗ ನೂಲು ಬಿಟ್ಟರೆ ಬಟ್ಟೆ
ಅಂದ ಬಿಟ್ಟು ಬಂಧ ಶೂನ್ಯ
ನೇಕಾರ ಸತ್ಯವನೇ ನೇದ
ಉಟ್ಟವರು ತೊಟ್ಟವರು
ಮೆರೆದು ಮಿಂಚಿದವರು
ಸುಳ್ಳುಗಳನ್ನು ಹೇಳುತ್ತಲೇ ಇದ್ದಾರೆ”- ಅಕ್ಷಯಾಂಬರ: ಬೇಲೂರು ರಘುನಂದನ್ ಬರೆದ ಕವಿತೆ

Read More

ಡಾ.ಬೇಲೂರು ರಘುನಂದನ್ ಅನುವಾದಿಸಿದ ಸೌಮ್ಯ ರಾಜ್ ಬರೆದ ಇಂಗ್ಲಿಷ್‌ ಕವಿತೆ

“ಅರುಚಲೇ ಬಾರದು ಹಡೆದ ಮಕ್ಕಳೆದುರು
ಪ್ರಕಟಿಸಬಾರದು ಅಹಂ
ಲೋಕದೆದುರು ಎಂದಿಗೂ
ಸಭ್ಯವಾಗಿರಲೇಬೇಕು ಸಹುದ್ಯೋಗಿಗಳೊಂದಿಗೆ
ಮನೆಗೆ ಬರುವ ಅತಿಥಿಗಳಿಗೆ
ಬೇಡ ಎನ್ನುವಂತಿಲ್ಲ”- ಡಾ.ಬೇಲೂರು ರಘುನಂದನ್ ಅನುವಾದಿಸಿದ ಸೌಮ್ಯ ರಾಜ್ ಬರೆದ ಇಂಗ್ಲಿಷ್‌ ಕವಿತೆ

Read More

ಡಾ.ಬೇಲೂರು ರಘುನಂದನ್ ಬರೆದ ಈ ದಿನದ ಕವಿತೆ

“ಜೋಗುಳ ಮರೆತ ಕಿವಿಗಳಿಗೆ
ಪ್ರತೀ ಸದ್ದೂ ಪ್ರಣಯಗೀತೆ
ಚಪ್ಪರಿಸಿಕೊಂಡು ಕುಡಿದ ಎದೆಯಾಲು
ಮದಿರೆಯೆನ್ನುವನಿಗೆ
ಮಡಿಲೂ ಹರಡಿ ಹಾಸಿದ ಹಾಸಿಗೆ”- ಡಾ.ಬೇಲೂರು ರಘುನಂದನ್ ಬರೆದ ಈ ದಿನದ ಕವಿತೆ

Read More

ಅಮ್ಮ, ಪಮ್ಮಿ, ತಾತ, ಬೂಚಿಬೆಕ್ಕು: ಬೇಲೂರು ರಘುನಂದನ್ ಬರೆದ ಮಕ್ಕಳ ಕತೆ

“ತಾತನ ಮಾತುಗಳನ್ನು ಕೇಳಿದ ಪಮ್ಮಿ ‘ಹಾಗಾದರೆ ನೀನೂ ಕೂಡಾ ಅಮ್ಮನ ತರಹ ಯಾರಿಗೂ ಹೇಳದೆ ನೋವನ್ನು ತಡೆದುಕೊಳ್ಳುತ್ತೀಯಾ’ ಎಂದು ಕೇಳಿದಳು. ‘ಹೌದು ಪಮ್ಮಿ, ಒಂದೊಂದು ಸಲ ನೋವು ತಡ್ಕೋತೀನಿ ಇನ್ನೂ ಕೆಲವು ಸಲ ನೋವು ಮರೆಯೋಕೆ ಮನದುಂಬಿ ಹಾಡು ಹೇಳುತ್ತೀನಿ. ಹಾಡು ಕೇಳಿ ಕೆಲವರು ದುಡ್ಡು ಹಾಕುತ್ತಾರೆ.”

Read More

ಜನಮತ

ಸಿನಿಮಾ ಕವಿ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

8 hours ago
ಬೋರ್ಡಿಂಗ್ ನಲ್ಲಿ ಸರ್ವಧರ್ಮದ ಸೌಹಾರ್ದ ಗೀತ
ರಂಜಾನ್ ದರ್ಗಾ ಬರೆಯುವ 'ನೆನಪಾದಾಗಲೆಲ್ಲ' ಸರಣಿ
https://t.co/TAH02obMRH
8 hours ago
ಸುನೀಲ್‌ ಕುಮಾರ್‌ ಎಂ. ತೆಗೆದ ಈ ದಿನದ ಫೋಟೋ
https://t.co/DbQCcMAZpO
11 hours ago
ಸೂರ್ಯನ ಕೃಪೆ ಧರಿಸುವ ಕ್ಲಾರಾ

https://t.co/2MfY2kuwHR

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

‘ದೇವ್ರು’ ಪದ್ಮನಾಭ ಭಟ್‌ ಹೊಸ ಕಾದಂಬರಿಯ ಕೆಲವು ಪುಟಗಳು

ಸುಬ್ಬಿ ಈಗ ಇದ್ದಿದ್ದರೆ ಏನು ಹೇಳುತ್ತಿದ್ದಳು? ಈ ಪುಟ್ಟ ಲಲಿತೆಯನ್ನು ಆ ದೇವ್ರುವಿನ ಎದುರಿಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದರೆ ಏನನ್ನಬಹುದು? ಹುಟ್ಟಾ ನೋಡೇ ಇರದ ಮನುಷ್ಯನನ್ನು ಅಣ್ಣ...

Read More