Advertisement
ಎಸ್. ನಾಗಶ್ರೀ ಅಜಯ್

ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ಒಂಭತ್ತು ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು ಹಾಗೂ ನಿರೂಪಣೆ ಅವರ ಆಸಕ್ತಿಯ ಕ್ಷೇತ್ರಗಳು.

ನಾಡಿಗೆ ಬೆಳಕು ಬರುತ್ತದಂತೆ…!

‘ಈಗ ಈ ಊರು ಶರಾವತಿ ನದಿಯ ನಡುವೆ ಅಲ್ಲಲ್ಲಿ ಇರುವ ಗುಡ್ಡವೊಂದರ ಮೇಲೆ ನಿರುಮ್ಮಳವಾಗಿ ಕೂತ ಪುಟ್ಟದೊಂದು ದ್ವೀಪದಂತೆ ಕಾಣುತ್ತದೆ. ಈಗ ಅಂದರೆ ಲಿಂಗನಮಕ್ಕಿ ಡ್ಯಾಮ್ ಆಗಿ ಶರಾವತಿ ನದಿಗೆ ಅಣೆಕಟ್ಟು ಕಟ್ಟಿದ ಮೇಲೆ ಜಲದ ರಾಶಿಯೇ ಒಂದೆಡೆ ನಿಂತಂತೆ ಭಾಸವಾಗುತ್ತದೆ. ಆದರೆ ಆಗ ಹಾಗಿರಲಿಲ್ಲ. ಶರಾವತಿ ಇಲ್ಲಿ ಸ್ವಚ್ಛಂದವಾಗಿ ಹರಿಯುತ್ತಿದ್ದಳು. ಅದರ ಸುತ್ತ ಕಾಡು, ಎದುರಿಗೆ ತೋಟ, ಅಂತಹ ಒಂದು ಸುಂದರ ಪ್ರದೇಶವದು. ಎಲ್ಲಿಗೇ ಹೋಗುವುದಿದ್ದರೂ ಒಂದೆರಡು ಮೈಲು ದೂರ ನಡೆದೇ ಹೋಗಬೇಕು’ – ವಿದ್ಯುತ್ ಹುಟ್ಟುವ ಮುನ್ನ ಶರಾವತಿ ನದಿ ದಂಡೆ ಹೇಗಿತ್ತು ಎಂಬುದನ್ನು ‘ಹರಿವ ನದಿ’ ಆತ್ಮಕತೆ ನಿರೂಪಿಸುತ್ತದೆ. ಭಾರತಿ ಹೆಗಡೆ ನಿರೂಪಿಸಿದ ಮೀನಾಕ್ಷಿ ಭಟ್ಟರ ಈ ಆತ್ಮಕತೆ ನಾಳೆ ಸಿದ್ಧಾಪುರದಲ್ಲಿ ಬಿಡುಗಡೆಯಾಗಲಿದ್ದು, ಈ ನಾಡು ವಿದ್ಯುತ್ ಲೋಕಕ್ಕೆ ತೆರೆದುಕೊಂಡ ಪಲ್ಲಟಗಳ ವಿವರವಾದ ನಿರೂಪಣೆಯಿದೆ. ಪುಸ್ತಕದ ಮತ್ತೊಂದು ಅಧ್ಯಾಯ ಇಲ್ಲಿದೆ. 

Read More

ನದಿಯಂತೆ ಹರಿದವಳು: ಆತ್ಮಕತೆಯ ಒಂದೆರಡು ಪುಟಗಳು

ಶರಾವತಿ ನದಿಗೆ ಅಣೆಕಟ್ಟು ಕಟ್ಟುತ್ತಾರಂತೆ, ನಮ್ಮೂರು ಮುಳುಗುತ್ತದಂತೆ, ನಾಡಿಗೇ ಬೆಳಕು ದೊರೆಯಲಿದೆಯಂತೆ ಎಂಬೆಲ್ಲ ಸುದ್ದಿಗಳನ್ನು ಕೇಳುವಾಗ, ಮೀನಾಕ್ಷಿಯವರಿಗಿನ್ನೂ ಸಣ್ಣ ಹರೆಯ. ಈ ಎಲ್ಲ ಹೇಳಿಕೆಗಳ ನಡುವೆ ಒಂದಕ್ಕೊಂದು ಸಂಬಂಧವಿಲ್ಲ ಎಂದೆನಿಸುತ್ತಿತ್ತು.  ಆದರೆ ಹುಟ್ಟಿದೂರು ತೊರೆಯಲೇಬೇಕಾಯಿತು. ಮುಂದಕ್ಕೆ ಎಷ್ಟೊಂದು ಊರುಗಳಲ್ಲಿ, ಕಷ್ಟಗಳ ಮೆಟ್ಟಿಲೇರಿ ಬದುಕನ್ನು ಕಟ್ಟಿಕೊಳ್ಳಬೇಕಾಯಿತು ಎಂಬುದೇ ‘ಹರಿವ ನದಿ’ಯಲ್ಲಿರುವ ಜೀವನಗಾಥೆ. ಅಮ್ಮ ಮೀನಾಕ್ಷಿ ಭಟ್ಟರ ಜೀವನದಲ್ಲಿ ಎದುರಾದ ಸವಾಲುಗಳು ಮಗಳು ಭಾರತಿ ಹೆಗಡೆಗೆ ಇಂದಿಗೂ ಸ್ಫೂರ್ತಿ. ಲೇಖಕಿಯೂ ಆಗಿರುವ ಅವರು ಅಮ್ಮನ ದನಿಗೆ ಅಕ್ಷರ ರೂಪ ನೀಡಿದ್ದಾರೆ. ಈ ಆತ್ಮಕತೆಯ ಒಂದು  ಅಧ್ಯಾಯ ಕೆಂಡಸಂಪಿಗೆ ಓದುಗರಿಗಾಗಿ ಇಲ್ಲಿದೆ.

Read More

ಅಭಿನಯ ಶಾರದೆ ಜಯಂತಿಯ ಬದುಕಿನ ಪುಟಗಳು…

ಕಮಲಕುಮಾರಿಯಾಗಿದ್ದ ಅವರು  ಬಳ್ಳಾರಿ ಮೂಲದವರು. ಜಯಂತಿ ಎಂಬ ಹೆಸರಿನೊಂದಿಗೆ ಸಿನಿಮಾ ಲೋಕ ಪ್ರವೇಶಿಸಿದ ಬಳಿಕ, ಕನ್ನಡದ ಕ್ಲಾಸಿಕ್ಸ್ ಎಂದು ಗುರುತಿಸಿಕೊಳ್ಳುವ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿಯೂ ನಟಿಸುವ ಅವಕಾಶ ಅವರಿಗೆ ದೊರೆತಿತ್ತು. ಅವರ ಸುದೀರ್ಘವಾದ ಸಿನಿಮಾ ಪಯಣವನ್ನು ನೆನಪಿಸಿಕೊಂಡು ಭಾರತಿ ಹೆಗಡೆ ಬರೆದ ಲೇಖನ ಇಲ್ಲಿದೆ. 

Read More

ಸೀರೆ ಕದಿಯೋ ಶಾಮಣ್ಣ: ಭಾರತಿ ಹೆಗಡೆ ಕಥಾನಕ

“ಎಡಬಟ್ಟು ಎಡಬಟ್ಟು ಮಾತನಾಡುವ, ಸೀರೆ ಉಟ್ಟುಕೊಳ್ಳುವ, ಕಳ್ಳ ನಾಟಾ ಸಾಗಿಸುವ ಈ ಶಾಮಣ್ಣ ಮಹಾನ್ ಯಕ್ಷಗಾನ ಪ್ರೇಮಿ. ಯಕ್ಷಗಾನಕ್ಕೆಂದು ಆ ಊರಿಗೆ ಬಂದವರೆಲ್ಲ ಇವರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಇಂದಿರಾ ಆ ತೋಟದ ಮನೆಗೆ ಬರುವುದಕ್ಕಿಂತ ಮುಂಚೆ ಅದು ಕಳ್ಳಕಾಕರ ಬೀಡಾಗಿತ್ತು. ಯಕ್ಷಗಾನ ಮೇಳ ಬಂದಾಗ ಯಕ್ಷಗಾನದವರಿಗಾಗಿ ಬಿಟ್ಟುಕೊಡುತ್ತಿದ್ದ.”

Read More

ಅದೇ ಅಂಗಳ,ಅದೇ ಮೆಟ್ಟಿಲು,ಅಪ್ಪನನ್ನು ಮಲಗಿಸಿದ್ದ ಅದೇ ಆ ಕೋಣೆ

“ಅಪ್ಪ ಹೋಗಿ ಮೂವತ್ತಾರು ವರ್ಷಗಳ ನಂತರವೂ ಈಗಲೂ ಹರಳುಗಟ್ಟಿದ ಅವನ ನೆನಪುಗಳನ್ನು ಕಿತ್ತೊಗೆಯಲು ಸಾಧ್ಯವಾಗುತ್ತಿಲ್ಲ. ಏನಾದರೂ ಕೊಂಡರೆ ಮನೆಯವರಿಗೆಲ್ಲ ತೋರಿಸಿಯಾದಮೇಲೂ ನಾನು ತೋರಿಸುವುದು ಮತ್ತೂ ಯಾರೋ ಬಾಕಿ ಇದ್ದಾರೆ ಎನಿಸಿಬಿಡುತ್ತದೆ. . ಹೀಗೆಲ್ಲ ಈಗಲೂ ನಮ್ಮೊಳಗೆ ಜೀವಂತವಾಗಿಯೇ ಇದ್ದು ನಮ್ಮನ್ನು ಆಗಿನಿಂದ ಈಗಿನವರೆಗೂ..”

Read More

ಜನಮತ

ಅಗಲಿದ ಕೆ.ವಿ. ತಿರುಮಲೇಶರು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ಎಸ್. ನಾಗಶ್ರೀ ಅಜಯ್‌ ಬರೆಯುವ “ಲೋಕ ಏಕಾಂತ” ಅಂಕಣ

https://t.co/rpDaPzac8B
ಮಾಲತಿ ಶಶಿಧರ್ ಬರೆದ ಯುಗಾದಿ ಕವಿತೆ

https://t.co/n4GaK3gF0Q
ಪ್ರಕೃತಿ ಜೊತೆಗೆ ನಂಟಿರುವ ಯುಗಾದಿ ಹಬ್ಬ ಇಂದಿನ ದಿನಗಳಲ್ಲಿ ಹೇಗೆ ಆಚರಿಸಲ್ಪಡುತ್ತಿದೆ ಎನ್ನುವುದರ ಕುರಿತು ಬರೆದಿದ್ದಾರೆ ನಾಗರೇಖಾ ಗಾಂವಕರ

https://t.co/909ZgYhUEC

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಸಿಕಾಡ- ಕೀಟಲೋಕದ ಸಂಗೀತಸಾಮ್ರಾಟ

ಸಾಮಾನ್ಯವಾಗಿ ಹಾಡುವುದು ಗಂಡು ಸಿಕಾಡಗಳೇ; ಇವು ಹಲವಾರು ಹೆಣ್ಣು ಸಿಕಾಡಗಳ ಮಧ್ಯೆ ಒಂದು ಹೆಣ್ಣು ಸಿಕಾಡವನ್ನು ಆರಿಸಿ, ಅದಕ್ಕೆ ಸಂಗಾತಿಯಾಗೆಂದು ಆಹ್ವಾನವೀಯುವಾಗ ಹಾಡುವ ಹಾಡೇ ಬೇರೆ; ಆ...

Read More

ಬರಹ ಭಂಡಾರ