Advertisement
ಗುರುಪ್ರಸಾದ್‌ ಕುರ್ತಕೋಟಿ

ಗುರುಪ್ರಸಾದ್‌ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. "ಬೆಳೆಸಿರಿ" ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.  "ಕೇಶಕ್ಷಾಮ" (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.

ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆ

“ಪದ ಪದದ ಪಾದ ಹಿಡಿದು ಪ್ರೀತಿಯಿಂದ ತಡವಿ ತಬ್ಬಿ
ಕೈಯನಿಡಿದು
ದಾರಿ ತುಂಬಾ ಜತನ ಮಾಡಿ
ಎಡರು ತೊಡರುಗಳನೆಲ್ಲ ದಾಟಿ
ನಮ್ಮ ಮಾತಲ್ಲೆ ಭಾವಲೋಕ ಕಟ್ಟುವ ಮಾಂತ್ರಿಕನೆ”- ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆ

Read More

ಕಪ್ಪುಬಿಳುಪಿನ ಉತ್ತರ ಕೊಡಲಾಗದ ಪ್ರಶ್ನೆಗಳು

ಬಸ್ಸಿನ ಕಿಟಕಿ ಸರಿಸಿದೆ. ಮಳೆಯ ಬಿಡಿಬಿಡಿ ಹನಿ ಈ ಬಾರಿ ಅಷ್ಟು ಕಿರಿಕಿರಿಗೊಳಿಸಲಿಲ್ಲ. ಆದರೂ ಗಂಡನ ಗೆಳೆಯ ಮತ್ತು ಆ ಮಂಗಳಮುಖಿಯ ಬಗ್ಗೆ ಯಾವುದೋ ಅವ್ಯಕ್ತ ಭಯ ಆಳದಲ್ಲಿತ್ತು. ಗಂಡ ನೂತನನಿಗೆ ಬೇರೆ ಯಾವ ಆಯ್ಕೆಗಳೂ ಇರಲಿಲ್ಲವಾ? ನೂತನ್ ನನ್ನನ್ನು ನಿಜಕ್ಕೂ ಇಷ್ಟ ಪಡುತ್ತಿದ್ದಾನಾ? ಅಥವಾ ಕೇವಲ ತನ್ನ ಕರ್ತವ್ಯವನ್ನಷ್ಟೇ ನಿಭಾಯಿಸುತ್ತಿದ್ದಾನಾ? ಎಲ್ಲವೂ ಗೋಜಲು ಗೋಜಲಿಗೆ ಇಟ್ಟುಕೊಂಡಿತು. ನನ್ನ ಗಂಡ ಬೈಸೆಕ್ಷುಯಲ್ ಅನ್ನುವುದನ್ನು ಒಪ್ಪಿಕೊಳ್ಳುವುದಕ್ಕೆ ಯಾಕಿಷ್ಟು ಭಯಪಟ್ಟುಕೊಳ್ಳುತ್ತಿದ್ದೇನೆ? ಯಾವುದೇ ಭಿಡೆಯಿಲ್ಲದೆ ಮುಕ್ತವಾಗಿ ಪ್ರಶ್ನೆಗಳಿಗೆ ಉತ್ತರಿಸುವ ನಾನು ಇರುವುದನ್ನು ಇರುವ ಹಾಗೆ ಒಪ್ಪಿಕೊಳ್ಳಲು ಯಾಕಿಷ್ಟು ಭಯ ಪಟ್ಟುಕೊಳ್ಳುತ್ತಿದ್ದೇನೆ?
ದಾದಾಪೀರ್‌ ಜೈಮನ್‌ ಬರೆಯುವ “ಜಂಕ್ಷನ್‌ ಪಾಯಿಂಟ್” ಅಂಕಣದಲ್ಲಿ ಹೊಸ ಬರಹ

Read More

ಬ್ಯಾಗಡಿ ಕವರಲ್ಲಿ ಮಡಸಿಟ್ಟಿದ್ದ ಸೀರೆಗಳಂತ ಕನಸು

ಕಟ್ರಗುಳ್ಳಿ ಕಲ್ಲು ಎಂದು ಯಮುನಿಯ ಬಾಯಲ್ಲಿ ನಾಮಕರಣ ಮಾಡಿಸಿಕೊಂಡಿದ್ದ ಟಾರು ರೋಡಿನ ಒತ್ತುವ ಹರಳುಗಳನ್ನು ಬರಿಗಾಲಲ್ಲಿ ತುಳಿಯುತ್ತ ಅಜ್ಜಿ ಮೊಮ್ಮಗಳಿಬ್ಬರು ಬಟ್ಟೆಯಂಗಡಿಗೆ ಕಾಲಿಟ್ಟರು. ಕಸಬರಿಗೆಯಲ್ಲಿ ಕಸವಡೆದು ಬಯಲುಸೀಮೆಯ ಮಳೆಯ ಕಂತ್ರಾಟ ಗೊತ್ತಿದ್ದ ಅಂಗಡಿಯ ಹುಡುಗ ಯಾವುದಕ್ಕೂ ಇರಲಿ ಎಂದು ಅಂಗಡಿ ಮುಂದಿನ ಬಯಲಿಗೆ ನಾಲ್ಕು ಚೊಂಬು ನೀರುಗ್ಗುವ ಶಾಸ್ತ್ರ ಮಾಡುತ್ತಿದ್ದ. ಶೇಟಿ ಲಕ್ಷ್ಮಿ ಫೋಟೋಗೆ ಊದಿನಕಡ್ಡಿ ಬೆಳಗಿ ಕೈಮುಗಿಯುವ ತರಾತುರಿಯಲ್ಲಿದ್ದವನು ಇವರನ್ನು ನೋಡಿ ಐದು ಮಿನಟ್ ಕೂತ್ಗಳ್ರಿ ಎಂದು ತನ್ನ ಪೂಜಾ ಸಿದ್ಧತೆಯನ್ನು ಮುಂದುವರೆಸಿದ. ಇವರು ಬೇರೆ ಆಯ್ಕೆಯೇ ಇಲ್ಲದಂತೆ ಕಾಯುತ್ತ ನಿಂತರು.
ದಾದಾಪೀರ್‌ ಜೈಮನ್‌ ಬರೆಯುವ “ಜಂಕ್ಷನ್‌ ಪಾಯಿಂಟ್” ಅಂಕಣ

Read More

ತೇರು, ಅಲಾಯಿ ದೇವರು ಮತ್ತು ಚವಂಗಿ ಕಲ್ಲು

ರಂಜಾನ್ ಹಬ್ಬದ ದಿನ ಅಮ್ಮ ನನ್ನನ್ನು ಬೆಳಿಗ್ಗೆಯೇ ಎಬ್ಬಿಸಿ ಗುಡಿಸಲಿನ ನೆರಕೆಯ ಪುಟ್ಟ ಬಚ್ಚಲಲ್ಲಿ ಎಂಟಾಣೆ ಕ್ಲಿನಿಕ್ ಪ್ಲಸ್ ಶಾಂಪೂ ಎಂಬ ಲಕ್ಷುರಿ ಬೆರೆಸಿ ಸ್ನಾನ ಮಾಡಿಸಿ, ಸಕ್ಕರೆ ರೇಟು ಜಾಸ್ತಿ ಎಂದು ಬೆಲ್ಲ ಹಾಕಿದ ಶಾವಿಗೆ ಖೀರು ಮಾಡಿ ಒಂದು ಪುಟ್ಟ ಟಿಫನ್ ಕ್ಯಾರಿಯರಲ್ಲಿ ಇಡೀ ಓಣಿಗೆಲ್ಲಾ ತುಂಬಿಕೊಡುತ್ತಿದ್ದಳು. ಚಿಕನ್ ಕೊಳ್ಳಲು ದುಡ್ಡಿಲ್ಲದೆ ಇದ್ದರೂ ಆಲೂಗಡ್ಡೆ ಸಾರನ್ನೇ ಮಾಡಿ ಅದನ್ನೇ ಚಿಕನ್ ಎಂದು ಅಮ್ಮ ನೂರಿ ನಂಬಿಸಬಲ್ಲವಳಾಗಿದ್ದಳು. ನಮ್ಮ ಓಣಿಯ ಛಲವಾದಿಗಳಾಗಿದ್ದ ರೂಪ, ರೇಖಿ, ಪರುಸ, ಕೆಂಚತ್ತಿ, ಸುಶೀಲತ್ತಿ, ಹಾಲಪ್ಪ ಮಾಮ ಎಲ್ಲರೂ ಶಾವಿಗೆ ಖೀರಿಗಾಗಿ ಕಾಯುತ್ತಿದ್ದರು.
ದಾದಾಪೀರ್‌ ಜೈಮನ್‌ ಬರೆಯುವ ಜಂಕ್ಷನ್‌ ಪಾಯಿಂಟ್‌ ಅಂಕಣ

Read More

ಕಮಿಷನ್ ಕನಕನ ನಿಧಿ ಶೋಧದ ಕಥೆ

ಅಣೋ, ನನ್ ಪ್ರೀತಿಸ್ತಾ ಇರೋ ಹುಡುಗಿ ತೋರಿಸ್ತೀನಿ.’ ಎಂದು ಫೋನಿನಲ್ಲಿ ವಿ ಪ್ಯಾಟರ್ನ್ ಹಾಕಿ ಲಾಕ್ ತೆರೆದು ‘ಇವಳೇ ನೋಡಣೋ’ ಎಂದು ತೋರಿಸಿದ. ನಾನೆ ಪೂರ್ವಗ್ರಹದಿಂದ  ‘ನಿಜಕ್ಕೂ ಪ್ರೀತಿಸ್ತಾ ಇದ್ಯೇನೋ? ಅಥವಾ ಫ್ರೆಂಡ್ಸ್ ವಿಥ್ ಬೆನಿಫಿಟ್ಸ?’ ಅಂತ ಕೇಳಿದೆ. ಅದಕ್ಕವನು ತುಂಬಾ ಕ್ಲಾರಿಟಿಯಿಂದ ‘ನನಗೆ ಅವಳಿಷ್ಟ. ಅವಳಿಗೆ ನಾನಿಷ್ಟ. ಮದ್ವೆ ಯಾಕಗಬಾರದು?’ ಎಂದು ತುಂಬಾ ನಿಖರವಾಗಿ ಹೇಳಿದ. ನಾನು ನನ್ನ ಮನಸ್ಸಿನಲ್ಲಿ ‘ಎಲಾ ಚಾಲಾಕಿ!’ ಎಂದುಕೊಂಡೆ. ದಾದಾಪೀರ್‌ ಜೈಮನ್‌ ಬರೆಯುವ ಜಂಕ್ಷನ್‌ ಪಾಯಿಂಟ್‌ ಅಂಕಣ

Read More

ಜನಮತ

ನನ್ನ ಬಾಸು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

https://t.co/KhYKjrbL4n
ಗುರುಪ್ರಸಾದ ಕುರ್ತಕೋಟಿ ಬರೆಯುವ ‘ಗ್ರಾಮ ಡ್ರಾಮಾಯಣ’ ಅಂಕಣದಲ್ಲಿ ಹೊಸ ಬರಹ
https://t.co/9wPIgCUZfe
ವ್ಯಾಸರಾಯ ಬಲ್ಲಾಳರ ʻಅವಿವಾಹಿತೆʼ ಕತೆಯ ಕುರಿತು ಡಾ. ರಾಜಶೇಖರ ಜಮದಂಡಿ ಅವರು ಬರೆದ ವಿಮರ್ಶೆ ಇಲ್ಲಿದೆ

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಸೂಕ್ಷ್ಮ ಅಂಶಗಳ ನೇಯ್ಗೆಯಲ್ಲಿ ಸಂಕೀರ್ಣ ಭಾವಬಿಂಬ

ಸಮಾಜ ʻಕುರೂಪಿʼ ಗುರುತಿಸಿದ,  ಹೆಣ್ಣೊಬ್ಬಳ ಮಾನಸಿಕ ತುಮುಲದ ಕಥೆಯೇ ‘ಅವಿವಾಹಿತೆ’. ಬಹಿರಂಗದ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮುಖ್ಯವೆಂಬ ಭಾವನೆ ಪ್ರತಿಯೊಬ್ಬರಲ್ಲಿ ತುಂಬಿರುತ್ತದೆ. ಆದರೆ ಅಂತರಂಗದ ನಿಷ್ಕಲ್ಮಷ ಹಾಗೂ...

Read More

ಬರಹ ಭಂಡಾರ