Advertisement
ಸುಮಾವೀಣಾ

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ ಪ್ರಕಟಿತ ಕೃತಿಗಳು. ‘ಲೇಖ ಮಲ್ಲಿಕಾ’,’ವಿಚಾರ ಸಿಂಧು’  ಪುಸ್ತಕಗಳು ಅಚ್ಚಿನಲ್ಲಿವೆ.

ಹೌದು.. ಇಡೀ ಜಗತ್ತೇ ಸ್ಮಾರ್ಟಾಗ್ತಾ ಇದೆ!

ಸೂರ್ಯ ಕೆಂಪಗಾಗುತ್ತಿದ್ದ. ಹಿಂದಿನ ಸುಮಾರು ಎರಡೂವರೆಕೆರೆ ಜಾಗದಲ್ಲಿ ಸಪಾಟಾಗಿಸಿದ ಹುಲ್ಲು. ಋತುಮಾನಕ್ಕನುಗುಣವಾಗಿ ತನ್ನ ಬಣ್ಣವನ್ನು ಕಳೆದುಕೊಳ್ಳುತ್ತಿತ್ತು. ಅದರ ಹಿಂದೆ ನಿಂತ ನೂರೈವತ್ತು ಮೇಪಲ್ ಮರಗಳು. ಎಲ್ಲವೂ ಎಲೆಗಳನ್ನು ಕಳಕೊಳ್ಳುತ್ತಾ ಮುಂಬರುವ ಹಿಮವನ್ನು ಎದುರಿಸಲು ಬತ್ತಲಾಗುತ್ತಿದ್ದವು. ಕೆಳಗೆ ಬಿದ್ದ ಹಣ್ಣೆಲೆಗಳ ಮೇಲಿನ ಸಂಜೆಯ ತೇವ ವಾತಾವರಣಕ್ಕೆ ಕೊಟ್ಟಿದ್ದ ಒಂದು ಸಿಹಿಯಾದ, ಒಗರಾದ ವಾಸನೆ ಸನ್‌ರೂಮಿನ ಕಿಟಕಿಯ ಸೀಲುಗಳ ಮೂಲಕ ಮನೆಯೊಳಗೆ ಹಣಿಕಿಹಾಕಿತ್ತು.
ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್”

Read More

ಇಲ್ಲಿ ಎಲ್ಲವೂ ಸರಿ ಇದ್ಯಾ…?

ವಿನಯ ಅಲಿಶಾಳಿಗೆ ಪ್ರಪೋಸ್ ಮಾಡಿದ ಎಂಬ ಸುದ್ದಿ ಕೇಳಿದ ಮೂರು ದಿನಕ್ಕೇ ಅರವಿಂದನಿಗೆ ಲಘು ಹೃದಯಾಘಾತವಾಗಿತ್ತು. ಶಿಕಾಗೋದಿಂದ ಓಡಿಬಂದಿದ್ದರು, ವಿನಯ ಮತ್ತು ಅಲಿಶಾ ಇಬ್ಬರೂ. ಮನಸ್ಸಿನ ವ್ಯಾಪಾರವೇ ವಿಚಿತ್ರ. ವಿನಯ ಅಲಿಶಾಳನ್ನು ಮದುವೆ ಮಾಡಿಕೊಳ್ಳುವುದು ಗ್ಯಾರಂಟಿ ಎಂದು ಗೊತ್ತಿದ್ದರೂ ವಿನಯನ ಪ್ರಪೋಸಲ್ಲಿಗೂ, ಅರವಿಂದನ ಹಾರ್ಟ್ ಅಟ್ಯಾಕಿಗೂ ಕಾರ್ಯಕಾರಣ ಸಂಬಂಧ ಹುಡುಕಲು ವೈದ್ಯಕೀಯ ಪುರಾವೆಗಳ ಸಾಥ್ ಕೇಳಿದ್ದಳು, ಸುಕನ್ಯಾ.
ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್”ನ ಎರಡನೆಯ ಕಂತು ನಿಮ್ಮ ಓದಿಗಾಗಿ

Read More

ಗುರುಪ್ರಸಾದ್‌ ಕಾಗಿನೆಲೆ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್‌” ಇಂದಿನಿಂದ ಶುರು

‘ಥ್ಯಾಂಕ್ಸ್ ಗಿವಿಂಗ್’ ಈ ನೀಳ್ಗತೆಯನ್ನು ಬರೆದು ಸುಮಾರು ಎಂಟುವರ್ಷಗಳೇ ಆಗಿವೆ. ‘ಹಿಜಾಬ್’ ಕಾದಂಬರಿಯ ಬರವಣಿಗೆ ನನ್ನನ್ನು ಬಸವಳಿಸಿತ್ತು. ಕೆಲವೊಮ್ಮೆ ಏನೂ ಬರೆಯಲಾರೆ ಅನ್ನಿಸಿತ್ತು. ತಿಂಗಳುಗಟ್ಟಲೆ ಬರವಣಿಗೆಯನ್ನು ನಿಲ್ಲಿಸಿದ್ದೆ. ಅದನ್ನು ಮರು ಉದ್ದೀಪನಗೊಳಿಸಿಕೊಳ್ಳಲು ಅದಕ್ಕೆ ವಸ್ತು, ವಿಷಯ ಮತ್ತು ನಿರೂಪಣೆಯಲ್ಲಿ ಸಂಪೂರ್ಣ ಬೇರೆಯಾಗಿರುವುದನ್ನು ಬರೆಯಬೇಕೆನ್ನಿಸಿತು.
ಗುರುಪ್ರಸಾದ್‌ ಕಾಗಿನೆಲೆ ಬರೆದ ಹೊಚ್ಚಹೊಸ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್” ಕೆಂಡಸಂಪಿಗೆಯಲ್ಲಿ ಕೆಲವು ಕಂತುಗಳಲ್ಲಿ ಪ್ರತಿ ಶನಿವಾರ ಪ್ರಕಟವಾಗಲಿದೆ

Read More

ಕಾಗಿನೆಲೆ ಬರೆದ ಎಮರ್ಜೆನ್ಸಿ ರೂಮಿನ ಸಂಗತಿಗಳು

ರಚ್ಚೆಹಿಡಿದು ಅಳುವ ಮಗುವನ್ನು ಸಮಾಧಾನಮಾಡಲು ಆಗದೇ ಹದಿವಯಸ್ಸಿನ ತಾಯಿಯೊಬ್ಬಳು ತಾನೂ ಅಳಲು ಶುರುಮಾಡಿದ್ದಾಳೆ.

Read More

ಭಾನುವಾರದ ವಿಶೇಷ: ಕಾಗಿನೆಲೆ ಕತೆ ‘ವಿಲ್ಲಾ ವೈದ್ಯ

ಮೊದಲ ಮನೆ ‘ವಿಲ್ಲಾ ಪೀಡಿಯಾಟ್ರಿಕಾ’. ಮದುವೆಯಾದ ಹೊಸದರಲ್ಲಿ ನಮ್ಮ ತುರ್ತಿನ ಆಶಯದ ಪ್ರತೀಕವೋ ಎನ್ನುವಂತಿತ್ತು, ಹೆಸರು.  ಎರಡೇ ಅಂತಸ್ತಿನ, ಮೂರು ಬೆಡ್ ರೂಮಿನ ಒಂದು ಗರಾಜಿನ ಮನೆ. ಇಬ್ಬರೂ ರೆಸಿಡೆನ್ಸಿ ಮಾಡುತಿದ್ದೆವು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ