Advertisement

ಡಾ.ಎಲ್ .ಸಿ ಸುಮಿತ್ರಾ

ಡಾ.ಎಲ್ .ಸಿ ಸುಮಿತ್ರಾ

ಲೇಖಕಿ ಸುಮಿತ್ರ ಎಲ್.ಸಿ ತೀರ್ಥಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರದವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ತುಂಗಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ. ಬಕುಲದ ದಾರಿ (ಕಾವ್ಯ), ಪಿಂಜರ್(ಕಾದಂಬರಿ ಅನುವಾದ), ನಿರುಕ್ತ, ಕಾಡು ಕಡಲು, ವಿಭಾವ (ವಿಮರ್ಶೆ), ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ(ಕಥಾ ಸಂಕಲನ) ಹೂ ಹಸಿರಿನ ಮಾತು (ಪಶ್ಚಿಮ ಘಟ್ಟದ ಹೂ ಸಸ್ಯಗಳ ಕುರಿತು) ಇವು ಸುಮಿತ್ರ ಅವರ ಪ್ರಕಟಿತ ಕೃತಿಗಳು.

ಸಾತ್ವಿಕ ಆತ್ಮವಿಶ್ವಾಸದ ಪ್ರತೀಕ

ರಾಜೇಶ್ವರಿ ತೇಜಸ್ವಿ ಜೀವನೋತ್ಸಾಹದ, ಲವಲವಿಕೆಯ ಮಹಿಳೆ.  ಒಬ್ಬರೇ ಇದ್ದಾಗಲೂ ಅಡಿಗೆ ಮಾಡಲು ಅವರಿಗೆ ಎಂದಿನ ಉತ್ಸಾಹವೇ ಇರುತ್ತಿತ್ತು. ಸಾಮಾನ್ಯ ವಾಗಿ ಅವರ ಮೆನು ವಿನಲ್ಲಿ ಮೂರು ತರಕಾರಿ ಐಟಂಗಳು. ಪಲ್ಯ ಚಟ್ನಿ , ಸಾರು ಅಥವಾ ಸಾಂಬಾರು. ಕೆಸುವಿನ ಸೊಪ್ಪನ್ನು ಗಂಟು ಕಟ್ಟಿ ಮಾಡುವ ಸಾಂಬಾರು, ಹೀರೆ ಸಿಪ್ಪೆಯ ಚಟ್ನಿ, ಪತ್ರೊಡೆ, ಪಕೋಡಗಳು ಹೀಗೆ. ಮಲೆನಾಡಿನ ವಿಶೇಷಗಳು. ಎಂಬತ್ನಾಲ್ಕರ ಪ್ರಾಯದಲ್ಲಿ ಸದೃಢವಾದ ಹಲ್ಲುಗಳನ್ನು ಹೊಂದಿದ್ದ ಅವರು ಎಂದೂ ಯಾರ ಬಗ್ಗೆಯೂ ಕಟಕಿಯಾಡಿದ್ದಿಲ್ಲ. ತುಂಬು ಬದುಕನ್ನು ಸವಿದು ಅವರೀಗ ಹೊರಟು ಹೋಗಿದ್ದಾರೆ.

Read More

ಮರದ ನೆರಳಿನಲ್ಲಿ…

ಮನೆಯ ಎದುರಿಗೆ ರಸ್ತೆಯ ಪಕ್ಕದಲ್ಲಿ ಜೀರಕನ ಮರ ಹಣ್ಣು ಬಿಟ್ಟಾಗ ನಮಗೆ ಆ ಮರದ ಆಕರ್ಷಣೆ.. ಹೊಂಬಣ್ಣದ ಜೀರ್ಕ ಹಣ್ಣುಗಳನ್ನು ದೋಟಿಗೆ ಎಟುಕಿಸಿ ಉದುರಿಸಿ ಹಿರಿಯರ ಕಣ್ಣು ತಪ್ಪಿಸಿ ಅಡಿಕೆ ಚಪ್ಪರದ ಮೇಲೆ ತೆಗೆದುಕೊಂಡು ಹೋಗಿ ಇಟ್ಟು.. ಅಡಿಗೆ ಮನೆಯಿಂದ ಉಪ್ಪು ಬಾಳೆಲೆ, ಬೆಲ್ಲ ಇನ್ನೊಬ್ಬರು ತರುವುದು. ಜೀರಿಗೆ ಮೆಣಸು ಮತ್ತೊಬ್ಬರು.. ಹಣ್ಣಿನ ತೊಳೆ ಬಿಡಿಸಿ ಬಾಳೆ ಎಲೆ ಮೇಲೆ ಉಪ್ಪು, ಮೆಣಸು ಬೆಲ್ಲ ಹಾಕಿ ಕಲೆಸಿ ಮತ್ತೆ ಚಿಕ್ಕ ಬಾಳೆ ಎಲೆ ತುಂಡಿನ ಮೇಲೆ ಎಲ್ಲರಿಗೂ ಹಂಚಿ ಆ ಕಟುವಾದ ಹುಳಿ, ಸಿಹಿ, ಖಾರದ ರುಚಿಯನ್ನು ಚಪ್ಪರಿಸಿಕೊಂಡು ತಿನ್ನುತ್ತಿದ್ದೆವು..
ಡಾ. ಎಲ್.ಸಿ. ಸುಮಿತ್ರಾ ಬರೆದ ಪ್ರಬಂಧ

Read More

ಹೊತ್ತು ಮಾರುವವರು:ಒಂದು ಪ್ರಬಂಧ

ಅಜ್ಜಿ ಆಯ್ದ ಮಡಕೆಯನ್ನು ತಿರುಗಿಸಿ ಮುರುಗಿಸಿ ನೋಡಿ, ಬೆರಳಿನಿಂದ ಬಾರಿಸಿ, ಟಣ್ ಶಬ್ದ ಬರಿಸಿ ಪರೀಕ್ಷಿಸಿದರು. ರುಕ್ಕು ಕುಳ್ಳಗೆ ಅಗಲ ಬಾಯಿಯಿದ್ದ ಮಡಕೆಯೊಂದನ್ನು ತೋರಿಸಿ ಮೀನು ಬತ್ತಿಸಲು ಲಾಯ್ಕಿದೆ ತಗಣಿ ಅಂದಳು.

Read More

ಪರೀಕ್ಷೆ ಹಾಲ್ ನಿಂದ ಕಂಡ  ಮೂರು ಹಕ್ಕಿಗಳು… : ಎಲ್ಸಿ ಸುಮಿತ್ರಾ ಬರೆದ ದಿನದ ಕವಿತೆ

ಅಲ್ಲೆಲ್ಲೊ ಶಂಖಪುಷ್ಪದ ಪೊದೆಯಲ್ಲಿ ಚಿಲಿಮಿಲಿಸುವ ಹೂಹಕ್ಕಿ ಕಂಡೂ ಕಾಣದಂತಿದೆ, ಹುಡುಗರು ಹಾಲೊಳಗೆ ಪರೀಕ್ಷೆ ಬರೆಯುತ್ತಿದ್ದಾರೆ. ಇದು ಕಿಟಕಿಯಿಂದ ಕಾಣಿಸುವ ಕವಿತೆ ಇಂದಿನ ಕವಿತೆ.

Read More

ಗುರುಗಳ ದಿನ ನಾಯಕರ ನೆನಪು:ಸುಮಿತ್ರಾ ಬರಹ

ಮೊದಲನೇ ಸೆಮೆಸ್ಟರ್ ನಲ್ಲಿ ಜಿ.ಎಚ್. ನಾಯಕರು ಹರಿಶ್ಚಂದ್ರ ಕಾವ್ಯ ಪಾಠ ಮಾಡುವಾಗ ಆ ಕಾವ್ಯದ ಪ್ರತಿಯೊಂದು ಮಗ್ಗುಲನ್ನೂ ವಿಶ್ಲೇಷಿಸಿದ ರೀತಿ ದಶಕಗಳ ನಂತರವೂ ನೆನಪಿನಲ್ಲಿ ಉಳಿದಿದೆ. ಈಗ ನಾನು ಪಾಠ ಮಾಡುವಾಗಲೂ ಆ ವಿಚಾರಗಳ ನೆರಳು ಇರುತ್ತದೆ.

Read More

ಜನಮತ

ಕನ್ನಡ ವರ್ಣಮಾಲೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

17 hours ago
https://t.co/cLpGCZCOj0 ಇತ್ತೀಚೆಗೆ ನಮ್ಮನ್ನು ಅಗಲಿದ, ಕಥಕ್ ಕ್ಷೇತ್ರದ ಅಪ್ರತಿಮ ಸಾಧಕ ಬಿರ್ಜು ಮಹಾರಾಜ್ ಕುರಿತು ಕೆರೆಮನೆ ಶಿವಾನಂದ ಹೆಗಡೆ ಬರೆದ ಬರಹ ಇಲ್ಲಿದೆ.

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬೆಳದಿಂಗಳಂತೆ ತಾಗುವ ಕಥೆಗಳು

ಇಲ್ಲಿ, ಮಧ್ಯಮ ವರ್ಗದ ಕುಟುಂಬಗಳಲ್ಲಿನ ಹೆಣ್ಣು ಮಕ್ಕಳನ್ನು ಪ್ರತಿನಿಧಿಸುವ ಮತ್ತು ಬದುಕಿನ ಬಗ್ಗೆ ಭವ್ಯ ಕನಸುಗಳನ್ನು ಕಟ್ಟಿಕೊಂಡಿರುವ ‘ಪೂರ್ವಿ’ ಎಂಬ ಮಗುವಿನ ತಾಯಿಯಾದ ನಳಿನಿಯು, ತನ್ನ ಗಂಡ...

Read More