Advertisement
ಲಿಂಗರಾಜ ಸೊಟ್ಟಪ್ಪನವರ್‌

ಲಿಂಗರಾಜ ಸೊಟ್ಟಪ್ಪನವರ ಹಾವೇರಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ವಿಜ್ಞಾನ ಶಿಕ್ಷಕರು. ಇವರ ಅನೇಕ ಕಥೆಗಳು ವಿವಿಧ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿವೆ. ಇವರ ಹಲವು ಕಥೆಗಳಿಗೆ ಪ್ರಶಸ್ತಿಗಳು ದೊರಕಿವೆ. ಮಾರ್ಗಿ – ಇವರ ಪ್ರಕಟಿತ ಕಥಾ ಸಂಕಲನ. ಮನ್ಸೂರ್ ಸಾಹೇಬನ ಕೇಗೆಲ್ ಎಕ್ಷಪರೀಮೆಂಟು (ಕಥಾ ಸಂಕಲನ) ಹಾಗೂ ಹರಿವ ನದಿಯೂ ಹಂಬಲದ ತಟವೂ- ಕವನ ಸಂಕಲನಗಳು ಪ್ರಕಟಣೆ ಹಂತದಲ್ಲಿವೆ.

ಕಥಾಲೋಕದ ಆಯಾಮಗಳನ್ನು ಬದಲಿಸಿದ ತಿರುಮಲೇಶರು

ನವ್ಯ ಮತ್ತು ಈ ಪೀಳಿಗೆಯ ತರುಣ ಕತೆಗಾರರನ್ನು ಆಳವಾಗಿ ಪ್ರಭಾವಿಸಿದ ಕೆ. ವಿ. ತಿರುಮಲೇಶರು ಅನೇಕ ದೃಷ್ಟಿಯಿಂದ ಕನ್ನಡದ ಸಣ್ಣಕತೆಯ ಕಲಾತ್ಮಕ- ವೈಚಾರಿಕ ಆಯಾಮಗಳನ್ನು ಬದಲಿಸಿದರು. ಸಿದ್ಧ ಮಾನದಂಡಗಳಿಲ್ಲದೆ ನೇರವಾಗಿ ಆರಂಭಗೊಳ್ಳುವ ಇವರ ಕತೆಗಳು ಆಪ್ತವೆನಿಸುವ ನಿರೂಪಣ ವಿಧಾನವನ್ನು ಹೊಂದಿವೆ. ನಿರೂಪಣೆಗೆ ಸೂಕ್ತವಾದ ವಿಕಸನಶೀಲ ಭಾಷೆಯಿದೆ. ಸವಕಲು ಹಾದಿಯಿಂದ ಹೊಸ ಹಾದಿಯೊಳಗೆ ತವಕದಿಂದ ಮುನ್ನುಗ್ಗುವ ವೇಗವಿದೆ. ಹಲವಾರು ವರ್ಷಗಳಿಂದ ಬರೆಯುತ್ತಲೇ ಇರುವ ತಿರುಮಲೇಶರು ಸದಾ ಹೊಸತನ್ನೇ ಕಾಣಿಕೆಯಾಗಿ ನೀಡುತ್ತಿದ್ದಾರೆ. ಇಂದು ಕೆ.ವಿ. ತಿರುಮಲೇಶ್‌ ಅವರ ಹುಟ್ಟುಹಬ್ಬ. ಅವರು ಬರೆದ 
ʻಕೆಲವು ಕಥಾನಕಗಳುʼ  ಕಥಾಸಂಕಲನದ ಕುರಿತು ಡಾ. ಸುಭಾಷ್ ಪಟ್ಟಾಜೆ ಬರಹ ಈ ಸಂದರ್ಭದ ಓದಿಗಾಗಿ

Read More

ದೇವರ ಅಸ್ತಿತ್ವವನ್ನು ಹುಡುಕಾಡುವ ಕಥನ

ಯುವ ತಲೆಮಾರು ವಿದೇಶಗಳಲ್ಲಿ ನೆಲೆಗೊಳ್ಳುವಾಗ ಮನೆದೇವರ ಗೊಡವೆಯು ಯಾರಿಗೂ ಬೇಡವಾಗಿದೆ. ಆಧುನಿಕ ಯುಗವು ಬದಲಾವಣೆಯನ್ನು ಹೊಂದುತ್ತಿರುವ ಸಂದರ್ಭದಲ್ಲಿ ದೇವರು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಾನೆಯೇ ಎಂಬ ಪ್ರಶ್ನೆಯನ್ನು ಎತ್ತಿಕೊಂಡು ಈ ಕಾದಂಬರಿಯನ್ನು ರಚಿಸಲಾಗಿದೆ.  ಲಿಂಗ ಮತ್ತು ಜಾತಿಯ ಆಧಾರದಲ್ಲಿ ಗಂಡಸರನ್ನು ಶೋಷಕರನ್ನಾಗಿಯೂ ಹೆಂಗಸರನ್ನು ಶೋಷಿತರನ್ನಾಗಿಯೂ, ಕಲ್ಪಿಸಿ ಅಭ್ಯಾಸವಾಗಿರುವ ಹೊತ್ತಿನಲ್ಲಿ ಲೇಖಕರು ವಸ್ತುಸ್ಥಿತಿಯ ಎರಡೂ ಮಗ್ಗುಲಿಗೆ ಕಣ್ಣುಹಾಯಿಸಿದಂತೆ ಗೋಚರಿಸುತ್ತದೆ.  ಡಾ. ನಾ. ಮೊಗಸಾಲೆಯವರ ‘ಇದ್ದೂ ಇಲ್ಲದ್ದುʼ ಕಾದಂಬರಿಯ ಕುರಿತು ಡಾ. ಸುಭಾಷ್ ಪಟ್ಟಾಜೆ ಬರೆದ ಬರಹ ಇಲ್ಲಿದೆ.

Read More

ಜನಮತ

ಗೌರಿ ಗಣೇಶ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

https://t.co/rjbxCryaLe
ಚಂದ್ರಕಾಂತ ಪೋಕಳೆ ಅನುವಾದಿಸಿದ ಸೇತು‌ ಕಾದಂಬರಿಯ‌ ಕೆಲವು ಪುಟಗಳು ನಿಮ್ಮ ಓದಿಗೆ
https://t.co/EA4Su5ipFj
ಗುರುದತ್ ಅಮೃತಾಪುರ ಪ್ರವಾಸ ಬರಹ

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನಾನಿನ್ನು ಹೋಗಿಬರಲೇ.. ‌

ಸುಚಿತಾ ದಿಙ್ಮೂಢಳಾದಳು. ತನಗೆ ಹೀಗೆ ವರ್ತಿಸುವುದು ಸಾಧ್ಯವಿತ್ತೇ? ತನ್ನೊಳಗೆ ಹೊತ್ತಿ ಉರಿದ ವಿಷಯವನ್ನು ತನ್ನ ಮಗಳು ನಿರಾಕರಿಸುತ್ತಿರುವುದು ತಮಗೆ ಸಹಿಸುವುದು ಸಾಧ್ಯವಿತ್ತೇ? ಅದರ ಬಗೆಗೆ ಇಷ್ಟೊಂದು ನಿರ್ವಿಕಾರವಾಗಿರುವದು...

Read More

ಬರಹ ಭಂಡಾರ