Advertisement
ಗುರುಪ್ರಸಾದ್‌ ಕುರ್ತಕೋಟಿ

ಗುರುಪ್ರಸಾದ್‌ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. "ಬೆಳೆಸಿರಿ" ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.  "ಕೇಶಕ್ಷಾಮ" (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.

ಸಿಸಿಲಿಯ ಬೀಳ್ಕೊಡುಗೆ ಸಿಕ್ಕ ಅನಿರೀಕ್ಷಿತ ಉಡುಗೊರೆ!

ಇತಿಹಾಸದ ಅನರ್ಘ್ಯ ರತ್ನಗಳ ಸುತ್ತ ಅಲೆದಾಟ. ಆರ್ಕಿಮಿಡಿಸ್ ತವರೂರಿನಿಂದ ಹಿಡಿದು ದೇವಾಲಯಗಳ ಕಣಿವೆಯವರೆಗೆ ಇತಿಹಾಸದ ರಸದೌತಣ ಬೇಕೆಂದರೆ ಸಿಸಿಲಿಗೆ ಬರಬೇಕು. ಇತಿಹಾಸದ ಕಥೆಗಳಲ್ಲಿ ಕಳೆದುಹೋಗುವ ಹವ್ಯಾಸವಿರುವವರಿಗೆ ಸಿಸಿಲಿ ಲೆಕ್ಕವಿಲ್ಲದಷ್ಟು ಅವಕಾಶಗಳನ್ನು ತೆರೆದಿಡುತ್ತದೆ. ಕ್ರಿ.ಪೂ. ಆರನೇ ಶತಮಾನದ ದೇವಾಲಯಗಳ ಭೇಟಿ, ನನ್ನ ಈವರೆಗಿನ ಯೂರೋಪಿನ ಪ್ರವಾಸಗಳಲ್ಲೇ ಅನನ್ಯ! ಪ್ರಪಂಚದಾದ್ಯಂತ ಇರುವ ಗ್ರೀಕ್ ದೇವಾಲಯಗಳಲ್ಲಿ ಅತ್ಯಂತ ಸುಸ್ಥಿತಿಯಲ್ಲಿರುವ “Temple of Concordia”ದ ಆಕಾರ, ರಚನೆ – ನೋಡಿ ನಿಬ್ಬೆರಗಾಗಿಬಿಟ್ಟೆ.
“ದೂರದ ಹಸಿರು” ಸರಣಿಯಲ್ಲಿ ಗುರುದತ್ ಅಮೃತಾಪುರ ಬರಹ

Read More

ದೇವಾಲಯಗಳ ಕಣಿವೆಯಲ್ಲಿ ಈಗ ಹಸಿರು ಚಿತ್ರಗಳು

ನಾನು ನೆಲೆಸಿರುವ ಜರ್ಮನಿ ಹಾಗೂ ಸುತ್ತಲಿನ ದೇಶಗಳ ಇತಿಹಾಸ ಬಹಳ ಸಪ್ಪೆ ಎನ್ನಿಸುತ್ತದೆ. ಇವರು ಅರಮನೆ ಎಂದು ಕರೆಯುವ ಕಟ್ಟಡಗಳನ್ನು ಮೀರಿಸುವ ಮನೆಗಳನ್ನು ನಮ್ಮ ದೇಶದಲ್ಲಿ ಈಗಿನ ರಾಜಕಾರಣಿಗಳು, ಉದ್ಯಮಿಗಳು ಹೊಂದಿದ್ದಾರೆ. ಇಷ್ಟು ವರ್ಷಗಳ ಪ್ರವಾಸದಲ್ಲಿ ನಮ್ಮ ಮೈಸೂರಿನ ಭವ್ಯ ಅರಮನೆಯಂತಹ ಮತ್ತೊಂದನ್ನು ಇಲ್ಲಿ ನೋಡಲಿಲ್ಲ. ಸಾವಿರಾರು ವರ್ಷಗಳ ಹಿಂದಿನ, ಗತ-ವೈಭವಗಳಿಂದ ಕೂಡಿದ ಇತಿಹಾಸ ಅತಿ ವಿರಳ. ಆದರೆ ಯೂರೋಪಿನ ದಕ್ಷಿಣಕ್ಕೆ ಚಲಿಸಿದಂತೆ ಗ್ರೀಕ್, ರೋಮನ್ ಸಾಮ್ರಾಜ್ಯಗಳ ಕುರುಹುಗಳು ಕಾಣುತ್ತಿದ್ದಂತೆ ಕಣ್ಣು, ಕಿವಿ ಅರಳಿಬಿಡುತ್ತದೆ. ಗುರುದತ್ ಅಮೃತಾಪುರ ಬರಹ

Read More

ತಿಂಡಿ ಪೋತರ ಸ್ವರ್ಗದಲ್ಲಿ ವೆಜ್ ವೈವಿಧ್ಯ

ರೈಲು ಅಥವಾ ಬಸ್ಸು ಹತ್ತಿ ದಿನದ ಪ್ರಯಾಣ ಪ್ರಾರಂಭಿಸಿ ನಗರ ಪ್ರದೇಶವನ್ನು ದಾಟಿದರೆ ಕಣ್ಣು ಹಾಯಿಸುವಷ್ಟು ದೂರಕ್ಕೂ ಕಿತ್ತಳೆ ಅಥವಾ ನಿಂಬೆಯ ತೋಟಗಳು! ಕಾಪುವಿನ ಲೈಟ್ ಹೌಸ್ ಹತ್ತಿ ಸಮುದ್ರದ ವಿರುದ್ಧದ ದಿಕ್ಕಿಗೆ ನೋಡಿದರೆ ತೆಂಗಿನ ತೋಟ ಹೇಗೆ ಕಾಣುತ್ತದೆಯೋ ಹಾಗೆ! ಇದು ಹೊಸದಾಗಿ ಕಂಡಿದ್ದರಿಂದ ನಮಗೆ ಆಶ್ಚರ್ಯ. ಇವರು ಇಷ್ಟು ನಿಂಬೆ ಬೆಳೆದು ಏನು ಮಾಡುತ್ತಾರೆ? ಕಿತ್ತಳೆಯನ್ನು ಲೋಡುಗಟ್ಟಲೆ ಗೂಡ್ಸ್ ರೈಲಿನಲ್ಲಿ ತುಂಬಿ ಕಳಿಸಿದರೂ ಉಳಿಯುವಷ್ಟು ಪ್ರಮಾಣದಲ್ಲಿ ಬೆಳೆಯುತ್ತಾರೆ.
‘ದೂರದ ಹಸಿರು’ ಅಂಕಣದಲ್ಲಿ ಸಿಸಿಲಿಯನ್‌ ಓಡಾಟದಲ್ಲಿ ಸವಿದ ಹಲವು ಖಾದ್ಯಗಳ ಜೊತೆಗೆ ಅಲ್ಲಿನ ವಿಶೇಷ ಹಣ್ಣುಗಳ ಕುರಿತು ಬರೆದಿದ್ದಾರೆ ಗುರುದತ್ ಅಮೃತಾಪುರ

Read More

ಜ್ವಾಲಾಮುಖಿಯ ತಪ್ಪಲು ಜೀವನ್ಮುಖಿ

ಕಾರಿನ ಪಯಣದಲ್ಲಿ ನೋಡಿದ್ದು ಎಟ್ನಾ ಪರ್ವತದ ಐದು ಸೂಕ್ಷ್ಮ ವಲಯಗಳನ್ನು. ಜ್ವಾಲಾಮುಖಿಯ ತಪ್ಪಲಿನ ಜಾಗ ವ್ಯರ್ಥ ಭೂಮಿಯೆಂದು ಭಾವಿಸಿದ್ದ ನನಗೆ ಇದೊಂದು ಆಶ್ಚರ್ಯಕರ ಸಂಗತಿಯಾಗಿತ್ತು. ಈ ಪರ್ವತದ ಮಣ್ಣಿನ ಫಲವತ್ತತೆ ಹೆಚ್ಚಿರುವುದರಿಂದ ಇಲ್ಲಿನ ಕೃಷಿ ಉತ್ಪನ್ನಗಳಿಗೆ ಪ್ರಪಚದಾದ್ಯಂತ ಒಂದು ಗರಿಮೆಯಿದೆ. ನನ್ನ ಕಲ್ಪನೆಗೆ ಇದು ತದ್ವಿರುದ್ಧವಾಗಿತ್ತು. ಪರ್ವತದ ತಪ್ಪಲಿನ ಕೆಳ ಹಂತದಲ್ಲಿ ಕಿತ್ತಳೆ, ಗಜ ನಿಂಬೆ ಬೆಳೆಯುತ್ತಾರೆ.
ಸಿಸಿಲಿಯನ್‌ ಓಡಾಟದ ಮತ್ತಷ್ಟು ಅನುಭವಗಳನ್ನು ಗುರುದತ್ ಅಮೃತಾಪುರ ಅವರು ತಮ್ಮ ‘ದೂರದ ಹಸಿರು’ ಅಂಕಣದಲ್ಲಿ ಹಂಚಿಕೊಂಡಿದ್ದಾರೆ.

Read More

ಸಿಸಿಲಿಯ ಹಾಳು ಹಂಪೆ ಈ ಸಿರಕುಸಾ

ಇಲ್ಲೊಂದು ಕ್ಯಾಥೆಡ್ರೆಲ್ ಇದೆ. ಇದರ ಮೂಲ ಗ್ರೀಕ್ ದೇವಾಲಯ. ಕ್ರಿ.ಪೂ. ಐದನೇ ಶತಮಾದಲ್ಲಿ ಕಟ್ಟಿದ ಈ ದೇವಾಲಯದ ಕಂಬಗಳು ಈಗಲೂ ಹಾಗೆಯೇ ಇವೆ. ರೋಮನ್ ಆಳ್ವಿಕೆಯಲ್ಲಿ ರೋಮನ್ ದೇವಾಲಯವಾಗಿತ್ತು. ನಂತರ ಕ್ರೈಸ್ತ ಧರ್ಮ ಬಂದ ನಂತರ ಇದನ್ನು ಚರ್ಚ್ ಆಗಿ ಮಾರ್ಪಾಡು ಮಾಡಲಾಯಿತು. ಆಮೇಲೆ ಅರಬ್ಬರ ಆಳ್ವಿಕೆಯಲ್ಲಿ ಮಸೀದಿ ಮಾಡಲಾಯಿತು. ನಂತರ ಮತ್ತೆ ಇಟಾಲಿಯನ್ ಆಳ್ವಿಕೆ ಬಂದ ನಂತರ ಇದನ್ನು ಪುನಃ ಚರ್ಚ್ ಮಾಡಲಾಯಿತು. ನನಗೆ ತಿಳಿದ ಮಟ್ಟಿಗೆ ಗ್ರೀಕ್ ದೇವಾಲಯದಿಂದ ಹಿಡಿದು ರೋಮನ್ ದೇವಾಲಯವಾಗಿ, ನಂತರ ಚರ್ಚ್ ಆಗಿ, ತದನಂತರ ಮಸೀದಿಯಾಗಿ ಮತ್ತೆ ಚರ್ಚ್ ಆದ ಇತಿಹಾಸವಿರುವ ಸ್ಥಳ ಇದೊಂದೇ! ದೂರದ ಹಸಿರು ಸರಣಿಯಲ್ಲಿ ಗುರುದತ್ ಅಮೃತಾಪುರ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ