ಇಸ್ಮಾಯಿಲ್ ಬರೆಯುವ ತಳಕಲ್ ಡೈರಿಯ ಮೊದಲ ಪುಟ

ಮಂಗಳೇಶಪ್ಪನವರ ಶ್ರೀಮತಿಯವರಾಗಿದ್ದ ದೇವಮ್ಮ ನಿಜಕ್ಕೂ ದೇವತೆಯಂತವರು. ತಮಗಿದ್ದ ನಾಲ್ಕು ಜನ ಮಕ್ಕಳ ಹಾಗೆ ನಾವು ನಾಲ್ಕು ಜನರನ್ನೂ ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಂತೆಯೇ ಎರಡು ವರ್ಷ ಜತನ ಮಾಡಿದವರು. ಅವರ ತಾಯಿಗರಳು ನಮ್ಮೆಡೆಗೆ ಸದಾ ಮಿಡಿಯುತ್ತಿತ್ತು. ಡಿ.ಇಡಿ ಓದಿದ ಆ ಎರಡೂ ವರ್ಷ ನಮ್ಮ ಊರು, ನಮ್ಮ ತಂದೆ ತಾಯಿ ಯಾರೂ ಅಂದರೆ ಯಾರೂ ನೆನಪಾಗದಂತೆ ನಮ್ಮ ಮೇಲೆ ಪ್ರೀತಿ ತೋರಿಸಿದ್ದೇಕೆಂದು ಈವರೆಗೂ ತಿಳಿದಿಲ್ಲ. ಯಾಕೆಂದರೆ ಆ ಊರಿನಲ್ಲಿ ಇವರ ಕುಟುಂಬವೆಂದರೆ ಒಂದು ಘನತೆ ಮತ್ತು ಗಾಂಭಿರ್ಯವಿತ್ತು. ನಮಗೆ ತಮ್ಮ ಎದೆಯಲ್ಲಿ ವಿಶೇಷ ಜಾಗ ಕೊಟ್ಟಿದ್ದು ನಮ್ಮ ಅದೃಷ್ಟವೆಂದೆ ಹೇಳಬೇಕು. ಮನುಷ್ಯ ಪ್ರೀತಿಯ ಸುಂದರ ಕ್ಷಣಗಳನ್ನು ಸೆರೆಹಿಡಿದು ಬರೆಯುವ ಇಸ್ಮಾಯಿಲ್‌ ತಳಕಲ್‌ ಅವರ ಹೊಸ ಅಂಕಣ ತಳಕಲ್ ಡೈರಿ

Read More