ಯುದ್ಧವು ರಸ್ತೆಬದಿಯಲ್ಲಿ ಮಲಗಿದೆ

ಲ್ಯಾಟ್ವಿಯಾ ದೇಶದ ಕವಿ ಅಮಾಂಡ ಐಜಪ್ಯುರಿಯೆತ್ರ, ಪತ್ರಿಕೆಗಳ ಸಾಹಿತ್ಯ ವಿಭಾಗದ ಸಂಪಾದಕರಾಗಿದ್ದರು. ಬಹಿಷ್ಕೃತರೆಂದು ಪರಿಗಣಿಸಲ್ಪಟ್ಟ ಅನೇಕ ಕವಿಗಳ ಕವನಗಳನ್ನು ಪ್ರಕಟಿಸಿದರು. ಅನಾಗರಿಕ ಜಗತ್ತಿನಲ್ಲಿ ಆವಾಗಾವಾಗ ಕಾಣುವ ಅಲ್ಪ ಸೌಂದರ್ಯವನ್ನು ಗುರುತಿಸಿ ತಾವೂ ಕವನಗಳನ್ನು ಬರೆದಿದ್ದಾರೆ. ಅವರ ಕವನಗಳಲ್ಲಿ ಕಾವ್ಯವಿಷಯದ ವಿಸ್ತಾರವಿದೆ. ಕಾವ್ಯಸೃಷ್ಟಿ, ಸ್ವ-ಮನನ, ಯುದ್ದದ ಭೀತಿ, ದಬ್ಬಾಳಿಕೆಯ ಆಡಳಿತದಡಿಯಲ್ಲಿನ ಬದುಕಿನ ಕುರಿತ ಪ್ರತಿಬಿಂಬಗಳಿವೆ. ಅವರ ಕವಿತೆಗಳು ಇಂ‍ಗ್ಲಿಷ್ ಗೆ ಅನುವಾದಗೊಂಡಿದ್ದು,  ಇಂಗ್ಲಿಷ್‍ ಮೂಲದಿಂದ ಎಸ್‍. ಜಯಶ್ರೀನಿವಾಸ ರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.  

Read More