Advertisement
ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

ಜೈಲ್‌ನಿಂದ ಹೊರಬಂದ ಇಲಿ: ಕೆ.‌ ಸತ್ಯನಾರಾಯಣ ಸರಣಿ

ದಿನ ಕಳೆದಂತೆ, ಜಯಮ್ಮನಿಗೆ ಇಲಿಯದೇ ಕಂಪನಿ, ಸಾಂಗತ್ಯ. ಒಂದೆರಡು ದಿನ ಆದಮೇಲೆ, ಅದರ ನುಣುಪಾದ ಮೈಯನ್ನು ಸವರಲು ನೋಡಿದರು. ಕೊಸರಿಕೊಂಡಿತು. ಆದರೂ ಒಳಗಡೆ ಇಷ್ಟವಾಯಿತೆಂದು ಕಾಣುತ್ತದೆ, ಮತ್ತೆ ಮತ್ತೆ ಹತ್ತಿರ ಬರುತ್ತಿತ್ತು. ಒಂದೆರಡು ಸಲ ತೊಡೆ, ಮಂಡಿಯ ಹತ್ತಿರ ಬಂತು. ಮತ್ತೆ ಸವರಿದರು.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿಯ ನಾಲ್ಕನೆಯ ಬರಹ ನಿಮ್ಮ ಓದಿಗೆ

Read More

ಒಡವೆ ಲಪಟಾಯಿಸಿದರೂ ಜೈಲ್‌ ಆಗಲೇ ಇಲ್ಲ: ಕೆ.‌ ಸತ್ಯನಾರಾಯಣ ಸರಣಿ

ಸುದ್ದಿ ತಿಳಿದ ಅವರು, ಕೆಳ ತುಟಿಯಲ್ಲೇ ನಕ್ಕರು. ಈಚೆಗೆ ಅವರ ತುಟಿಯ ಚರ್ಮ ತುಂಬಾ ಒಡೆದು ಆಗಾಗ್ಗೆ ಹೊರಬರುತ್ತಿತ್ತು. ಕಿವಿ ಕೂಡ ತುಂಬಾ ಸೋರುತ್ತಿದ್ದು ದಿನಕ್ಕೆ ಮೂರು ನಾಲ್ಕು ಸಲವಾದರೂ ನಾನಾ ರೀತಿಯ ದ್ರವಗಳನ್ನು ಕಿವಿಯ ತಮಟೆಗೆ ತಲುಪುವಂತೆ ಹಾಕಿಸಿಕೊಳ್ಳುತ್ತಿದ್ದರು.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿ

Read More

ಜೈಲಿಗೆ ಹೋಗಲು ಸಕಲ ತಯಾರಿ!: ಕೆ.‌ ಸತ್ಯನಾರಾಯಣ ಸರಣಿ

ಇಂತಹ ಕೋರಿಕೆ ಇದುವರೆಗೆ ನಮಗೆ ಬಂದಿಲ್ಲ, ಎಲ್ಲೂ ಕೇಳಿಲ್ಲ, ಕಂಡಿಲ್ಲ ಎಂದು ವಾದಿಸಿದರು. ಕೊನೆಗೆ ನನ್ನ ವಯಸ್ಸು, ಹಿರಿತನ, ಕಳಕಳಿಪೂರ್ಣ ಮನವಿಗೆ ಕ್ಷೀಣವಾಗೆಂಬಂತೆ ಸ್ಪಂದಿಸುತ್ತಾ, ಸರಿ, ಎರಡು ನಿಮಿಷ ನೋಡಲು ಬಿಡ್ತೀವಿ, ಕೇಸ್‌ ವಿಷಯ ಮಾತನಾಡಕೂಡದು, ನೀವು ಅವರನ್ನು ಭೇಟಿ ಮಾಡುವಾಗ ನಾವು ಕೂಡ ಒಬ್ಬರು ಜೊತೆಗೇ ಇರ‍್ತೀವಿ ಎಂದರು.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿಯ ಎರಡನೇ ಬರಹ ನಿಮ್ಮ ಓದಿಗೆ

Read More

ಕೆ. ಸತ್ಯನಾರಾಯಣ ಬರೆಯುವ ಹೊಸ ಸರಣಿ “ಜೈಲು ಕತೆಗಳು” ಇಂದಿನಿಂದ

ನನಗೆ ಖೈದಿಗಳ ಬಗ್ಗೆ ತಿರಸ್ಕಾರವಾಗಲೀ, ಅವಮಾನವಾಗಲೀ, ಪೋಲೀಸರ ಬಗ್ಗೆ ಅನಗತ್ಯ ಭಯ-ಗೌರವಗಳಾಗಲೀ ಬೆಳೆಯಲಿಲ್ಲ. ಇವರೆಲ್ಲ ನಮ್ಮ ಕುಟುಂಬಗಳಿಂದ ಭಿನ್ನರಾದವರು ಎಂದೂ ಅನಿಸಲಿಲ್ಲ. ಆದರೆ ಕ್ರೀಡಾಪಟುಗಳು, ವಿಜ್ಞಾನಿಗಳು, ನಟರು, ಸಂಗೀತಗಾರರನ್ನು ಈ ಸಮಾಜ ರೂಪಿಸಿದೆ ಎಂಬುದು ಎಷ್ಟು ನಿಜವೋ, ಖೈದಿಗಳು, ಖೈದಿಗಳಾಗಬೇಕಾಗಿ ಬಂದವರು, ಅವರನ್ನು ಕೂಡ ಈ ಸಮಾಜವೇ ರೂಪಿಸಿದೆ ಎಂಬುದನ್ನೂ ಒಪ್ಪಬೇಕು.
ಖ್ಯಾತ ಕತೆಗಾರ ಕೆ. ಸತ್ಯನಾರಾಯಣ ಬರೆಯುವ ಸರಣಿ “ಜೈಲು ಕತೆಗಳು”

Read More

ಪ್ರಬಂಧಕಾರನಿಗೆ ಉಪದೇಶಾಮೃತ

ಪ್ರಾಮಾಣಿಕವಾದದ್ದಾಗಲೀ, ಯಥೋಚಿತವಾದದ್ದಾಗಲೀ, ದುರುದ್ದೇಶಪೂರ್ವಕವಾದದ್ದಾಗಲೀ ಉಪದೇಶವೆಂಬುದು ಉಪದೇಶವೇ! ಈ ಜಗತ್ತಿನಲ್ಲಿ ಉಪದೇಶಗಳಿಂದ ಆಗಿರುವಷ್ಟು ಹಾವಳಿ ಇನ್ನು ಯಾವುದರಿಂದಲೂ ಆಗಿಲ್ಲ. ಎಲ್ಲ ಬಣ್ಣದ, ಎಲ್ಲ ನೆರಳಿನ, ಎಲ್ಲ ಧರ್ಮದ, ಎಲ್ಲ ವಿತಂಡವಾದದ ಸಕಲ ರೀತಿಯ ಆಧ್ಯಾತ್ಮಿಕ, ಸಾಂಸ್ಕೃತಿಕ ಉಪದೇಶಗಳಿಂದ ಈ ಜಗತ್ತು ನಲುಗಿ ನಲುಗಿ ಬಸವಳಿದುಹೋಗಿದೆ. ಈಗಾಗಲೇ ಸತ್ಯವನ್ನು ಕಂಡಾಗಿದೆ, ಹೇಳಿಯೂ ಆಗಿದೆ ಎಂಬ ಬಾಲಿಶ ಧೋರಣೆಯಿಂದ ಕೊನೆಗೂ ನಾನು ಒಂದು ಮಾತು ಹೇಳುತ್ತೇನೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಕೊನೆಯ ಪ್ರಬಂಧ ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ