Advertisement

ಕೆ.ವಿ. ತಿರುಮಲೇಶ್

ಕೆ.ವಿ. ತಿರುಮಲೇಶ್

ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು.

ಘೇಂಡಾಮೃಗ: ಕೆ.ವಿ.ತಿರುಮಲೇಶ್ ಬರೆದ ಕವಿತೆ

ಬಡ ಘೇಂಡಾದ ಅಶಕ್ತ ಬಾಹುಗಳ ಒಳಕ್ಕೆ
ಸಿಗದು ಇಹದ ಯಾವುದೇ ಸಂಪತ್ತು.
ಆದರೆ ಒಂದಿಂಚೂ ಕದಲಬೇಕಾದ್ದಿಲ್ಲ ಅನುದಾನಕ್ಕೆ
ನಮ್ಮ ಜೈ ಕನ್ನಡ ಸಾಹಿತ್ಯ ಪರಿಷತ್ತು.

Read More

ಎಫ್. ಆರ್. ಲೀವಿಸ್ ಕುರಿತು ಕೆ. ವಿ. ತಿರುಮಲೇಶ್ ಐವತ್ತೈದು ವರ್ಷಗಳ ಹಿಂದೆ ಬರೆದದ್ದು

“ಲೀವಿಸ್ ಎಂದರೆ ತುಂಬ ಹಟಮಾರಿಯೂ ಹೌದು, ತನ್ನ ತಪ್ಪನ್ನು ಒಪ್ಪಿಕೊಳ್ಳುವುದೇ ಇಲ್ಲ. ಇದರಿಂದಾಗಿ ಲೀವಿಸ್‍ ನ ಬೆಂಬಲಿಗರೇ ಅವನ ಕೈಬಿಟ್ಟದ್ದುಂಟು. ತನ್ನ ‘ಮೌಲ್ಯ’ಗಳಿಗಾಗಿ ಲೀವಿಸ್ ಹೋರಾಡಿದ್ದಾನೆ. ಲೀವಿಸ್ ತಾನೊಂದು ಸರ್ವಸಾಮಾನ್ಯ ನಿಲುಮೆ ತಳೆಯಲು ನಿರಾಕರಿಸುವುದೇ ಇದಕ್ಕೆ ಕಾರಣ. ಇದು ಲೀವಿಸ್‍ ನ ಸಾಧನೆಯ ಕೇಂದ್ರ ವಿರೋಧಾಭಾಸ. ವಿಮರ್ಶೆಯ ಪರಮತತ್ವಗಳ ಕುರಿತಾಗಿ…”

Read More

ಕೆ.ವಿ. ತಿರುಮಲೇಶ್‌ ಅವರ ಹೊಸ ಕಾದಂಬರಿಯ ಆಯ್ದ ಭಾಗ

“ಕ್ಲಾಸು ಮುಗಿದು ಮೊದಲು ಸಕಲೇಶನಿರುವ ಹಾಸ್ಟೆಲ್ ಕಡೆ ಹೋಗಬೇಕೆಂದು ಚಿಂತಿಸುತ್ತ ಕುಳಿತ. ಆಮೇಲೆ ಶೀತಲ್ ಮತ್ತು ಮೃಣಾಳಿನಿಯನ್ನು ನೋಡಿಕೊಂಡು ಬರಬೇಕು. ಪಿಕ್‍ನಿಕ್‍ ನ ಘೋರವಾದ ಅನುಭವದಿಂದ ಆತ ಇನ್ನೂ ಚೇತರಿಸಿಕೊಂಡಿರಲಿಲ್ಲ. ಒಮ್ಮೆಲೆ ಎಲ್ಲ ಪೂರ್ತಿ ಬದಲಾಗಿಬಿಟ್ಟಿತ್ತು. ಈ ಕ್ಲಾಸಿಗೂ, ಈ ಅಧ್ಯಾಪಕರಿಗೂ, ಇಲ್ಲಿ ಕೂತಿರುವ ಸಹಪಾಠಿಗಳಿಗೂ ತನಗೂ ಏನೇನೂ ಸಂಬಂಧವಿಲ್ಲದ ಹಾಗೆ ಅವನಿಗನಿಸಿತು. ಅದು ಹೇಗೋ ಕ್ಲಾಸು ಮುಗಿಯುವವರೆಗೆ…”

Read More

ಕೆ.ವಿ. ತಿರುಮಲೇಶ್‌ ಬರೆದ ಹೊಸ ಕವಿತೆ

“ಇನ್ನು ಪದಮೋಹ ಹೇಳುವುದೆ ಬೇಡ ನಿಜಕ್ಕೂ
ಅದು ಪದಮೋಹವಲ್ಲ, ‘ನೆಗೆಟಿವ್ ಕೇಪೆಬಿಲಿಟಿ’
ಹಾಗೆಂದರೇನೆಂದು ಆಗ ನಮಗೆ ನಿಖರವಾಗಿ
ಗೊತ್ತಾಗದೆ ಇದ್ದರೂ-ಈಗ ಗೊತ್ತಾಗಿದೆಯೆಂದಲ್ಲ
ಆದರೆ ಯಾವ ರೀತಿಯಲ್ಲೋ ಇದೆ—
ಅನಿಸುತ್ತದೆ ಹಾಗೆಂದರೆ ಜೀವನವ್ಯಾಮೋಹ
ಪರಕಾಯ ಪ್ರವೇಶ”- ಕೆ.ವಿ. ತಿರುಮಲೇಶ್‌ ಬರೆದ ಹೊಸ ಕವಿತೆ

Read More

ಸಾಯುವ ಕಾಲಕ್ಕೆ ದೇವರ ಸಮಾನ ಆಗುವ ಮನುಷ್ಯ

“ಮನುಷ್ಯನ ಸಹಜವಾದ ಮಾನಸಿಕ ವ್ಯಾಪಾರದಲ್ಲಿ ಸ್ಮೃತಿ ವಿಸ್ಮೃತಿಗಳು, ಭೂತ ವರ್ತಮಾನ ಭವಿಷ್ಯಗಳು ಒಂದಾಗುತ್ತವೆ. ರಿಯಾಲಿಟಿ ಮತ್ತು ಕನಸುಗಳು ಮಿಶ್ರಗೊಳ್ಳುತ್ತವೆ. ಕಾಲಕ್ರಮವನ್ನು ಧಿಕ್ಕರಿಸಿ ನೆನಪುಗಳು ಧಾವಿಸಿ ಬರುತ್ತವೆ. ಯಾವ ನೆನಪೂ ಸ್ಪಷ್ಟವಾಗಿರುವುದಿಲ್ಲ. ಪಶ್ಚಾತ್ತಾಪ, ಪಾಪಪ್ರಜ್ಞೆ, ಎಲ್ಲವನ್ನೂ ತಿದ್ದಿ ಬರೆಯುವ, ಇನ್ನೊಮ್ಮೆ ಇದಕ್ಕಿಂತ ಉತ್ತಮವಾಗಿ ಬದುಕುವ ಅವಕಾಶ ಸಿಕ್ಕಿದ್ದರೆ ಎನ್ನುವ ಹಂಬಲ. ನನಗೋ ಕೆಲವೊಂದು ದುಸ್ವಪ್ನಗಳು ಮರುಕಳಿಸುತ್ತ ಇರುತ್ತವೆ. ಎಲ್ಲಿಗೋ ಹೊರಟಿದ್ದೇನೆ…”

Read More

ಜನಮತ

ನಾನು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

12 hours ago
ಕೃಷ್ಣಪ್ರಕಾಶ್ ಉಳಿತ್ತಾಯ ಬರೆಯುವ ಬಲಿಪ ಮಾರ್ಗ ಅಂಕಣ ಇಂದಿನಿಂದ

https://t.co/vO2WCj0WKI
15 hours ago
ನಾಟಕದ ಹೊಟ್ಟೆ ನೋವೂ ಮತ್ತು ತಪ್ಪಿದ ಹಾಜರಾತಿ

https://t.co/x9juM16BVr
15 hours ago
ರೂಪಕವೆಂಬ ಭಾಷಾ ಶರೀರದ ಹಂಗಿಲ್ಲದ ಅಭಿವ್ಯಕ್ತಿ

https://t.co/A0PgD5slya

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ರೂಪಕವೆಂಬ ಭಾಷಾ ಶರೀರದ ಹಂಗಿಲ್ಲದ ಅಭಿವ್ಯಕ್ತಿ

ಶೋಭಾ ನಾಯಕ ಮೊದಲ ಬಾರಿಗೆ ಅದು ಗಂಡಿನದು ಹೇಗೋ ಹಾಗೆಯೇ ಹೆಣ್ಣಿನದೂ ಹೌದು ಎಂಬುದನ್ನು ಸ್ಥಾಪಿಸಿದ್ದಾರೆ. ಇನ್ನೂ ಒಳಗೆ ಹೋಗಿ ಮಾತನಾಡುವುದಾದರೆ ಅಲ್ಲಿನ ಶಯನದ ಒಡೆತನ ಕೇವಲ...

Read More