Advertisement

ಕಮಲಾಕರ ಕಡವೆ

ಕಮಲಾಕರ ಕಡವೆ

ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆಯುವ ಕಮಲಾಕರ ಕಡವೆ ಅನುವಾದಕರೂ ಹೌದು. ಚೂರುಪಾರು ರೇಶಿಮೆ (ಅಭಿನವ, 2006, ಪುತಿನ ಪ್ರಶಸ್ತಿ), ಮುಗಿಯದ ಮಧ್ಯಾಹ್ನ (ಅಕ್ಷರ, 2010). ಮತ್ತು, “ಜಗದ ಜತೆ ಮಾತುಕತೆ” (ಅಕ್ಷರ, 2017) ಇವರ ಪ್ರಕಟಿತ ಕವನ ಸಂಕಲನಗಳು. ಮರಾಠಿ ದಲಿತ ಕಾವ್ಯದ ರೂವಾರಿ ಮತ್ತು ದಲಿತ ಪ್ಯಾಂಥರ್ಸ್ ಜನಕ ನಾಮದೇವ್ ಧಸಾಲ್ ಅವರ ಕವನಗಳನ್ನು ಅನುವಾದಿಸಿ “ನಾಮದೇವ್ ಧಸಾಲ್ ವಾಚಿಕೆ” ಪ್ರಕಟಿಸಿದ್ದಾರೆ

ನೀರಲ್ಲಿ ಬರೆದ ಅಜರಾಮರ ಹೆಸರು – ಜಾನ್ ಕೀಟ್ಸ್

“ಅವನ ಕಾವ್ಯ ಸಮಕಾಲೀನ ವಿಮರ್ಶಕರನ್ನು ಮತ್ತು ಓದುಗರನ್ನು ಅಷ್ಟಾಗಿ ಪ್ರಭಾವಿಸದಿದ್ದರೂ, ಆನಂತರದ ಕಾಲದಲ್ಲಿ ಕೀಟ್ಸನ ಪ್ರಸಿದ್ಧಿ ಸದಾ ಹೆಚ್ಚುತ್ತಲೇ ಹೋಯಿತು. ಬದಲಾದ ಕಾವ್ಯಾಸಕ್ತಿ, ರುಚಿ, ಸಂದರ್ಭಗಳ ಹೊರತಾಗಿಯೂ ಕೀಟ್ಸನ ಪ್ರಮುಖ ರಚನೆಗಳು ಇಂದಿಗೂ ಅಸಂಖ್ಯ ಓದುಗರ ನೆಚ್ಚಿನ ಕವನಗಳಾಗಿವೆ. ಕಾವ್ಯದ ವ್ಯಾಖ್ಯೆ ಈ ಮಧ್ಯೆ ಹಲವು ಸಲ…”

Read More

“ಟ್ರಿಸ್ಟ್ರಮ್ ಶ್ಯಾಂಡಿ”: ತೀರಾ ಹಳೆಯ ಹೊಚ್ಚ ಹೊಸ ಕೃತಿ

“ಹಠ ಹಿಡಿದು ನಾವೀನ್ಯತೆಯನ್ನು ತನ್ನ ಕೃತಿಯಲ್ಲಿ ತರಲು ಪ್ರಯತ್ನಿಸಿದ್ದ ಸ್ಟರ್ನ್ ಕುರಿತು ಇಂಗ್ಲೀಷ್ ವಿಮರ್ಶಕ ಸ್ಯಾಮ್ಯುಯೆಲ್ ಜಾನ್ಸನ್ ಸದಭಿಪ್ರಾಯ ಹೊಂದಿರಲಿಲ್ಲ, “ವಿಚಿತ್ರವಾದವುಗಳು ಹೆಚ್ಚು ದಿನ ಇರಲಾರವು” ಎಂದು ಈ ಕೃತಿಯನ್ನು ತಳ್ಳಿ ಹಾಕಿದ್ದ ಅವನು. ಆದರೆ, ಕಾಲಾಂತರದಲ್ಲಿ ಈ ಕೃತಿಯ ಪ್ರಸಿದ್ಧಿ ಬೆಳೆಯುತ್ತಲೇ ಸಾಗಿತು. ತನ್ನ ಯೌವನದಲ್ಲಿ ಕಾರ್ಲ್ ಮಾರ್ಕ್ಸ್ ಕೂಡ ಲಾರೆನ್ಸ್….”

Read More

“ಇನ್ ಆನ್ ಆಂಟೀಕ್ ಲ್ಯಾಂಡ್”: ಪುರಾತನ ಪ್ರಯಾಣಗಳ ಅನನ್ಯ ಅನ್ವೇಷಣೆ

“ಈ ಕೃತಿಯ ಇತಿಹಾಸಕ್ಕೆ ಸಂಬಂಧಿಸಿದ ವಸ್ತುವಾದರೆ, ಘೋಷ್ ಕ್ಷೇತ್ರಕಾರ್ಯಕ್ಕಾಗಿ ಇಜಿಪ್ಟಿನಲ್ಲಿ ಬಾಳ್ವೆ ನಡೆಸಿದ ದಿನಗಳ ಅನುಭವಗಳ ಕತೆ ಪ್ರವಾಸಕಥನಕ್ಕೆ ಸಂಬಂಧಿಸಿದ ವಸ್ತು. ಯಹೂದಿ-ಅರೇಬಿಕ್ ಭಾಷೆ ಕಲಿಯುವ ಸಲುವಾಗಿ ಘೋಷ್ ಲತಾಯಿಫಾ ಮತ್ತು ನಶಾವೀ ಎಂಬ ಹಳ್ಳಿಗಳಲ್ಲಿ ವಾಸ ಮಾಡುತ್ತಾರೆ. ಅದು ಯಾಕೆ ಈ ಹಳ್ಳಿಗಳಲ್ಲಿ ವಾಸ ಮಾಡಬೇಕಾಗಿ ಬರುತ್ತದೆ ಎನ್ನುವುದೂ ಕೂಡ ಮುಖ್ಯವೇ. ಕೈರೋದ ಜೆನಿಜಾದಲ್ಲಿ ಸಂಶೋಧಕರಿಗೆ ಬೆನ್..”

Read More

ತಂತ್ರಜ್ಞಾನದ ವ್ಯಾಖ್ಯೆಗಳು: ಕಮಲಾಕರ ಕಡವೆ ಬರೆಯುವ ಬೆರಗು ಮತ್ತು ಭೀತಿ ಅಂಕಣ- 4:

“ನಮ್ಮಲ್ಲಿ ಸಾಮಾನ್ಯಜ್ಞಾನವಾಗಿಹೋಗಿರುವ ಒಂದು ಭಾವವೆಂದರೆ ತಂತ್ರಜ್ಞಾನವೆನ್ನುವುದು ಆಧುನಿಕ ಬೆಳವಣಿಗೆಯೆಂದು. ಆದರೆ, ಸ್ವಲ್ಪವೇ ಕೆದಕಹೋದವರೂ ಕೂಡ ಬಲುಬೇಗ ಈ ಸಾಮಾನ್ಯಜ್ಞಾನದ ನೇಪಥ್ಯ ತಲುಪಿದಂತೆ, ಭ್ರಮೆಯ ಪರದೆ ಸರಿದು, ತಂತ್ರಜ್ಞಾನದ ಪುರಾತತ್ವ ಗಮನಕ್ಕೆ ಬರುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ತಂತ್ರಜ್ಞಾನದ ಕುರಿತು ನಿರ್ದಿಷ್ಟವಾದ ತತ್ವಶಾಸ್ತ್ರೀಯ ಬರಹಗಳು ಬಂದದ್ದು ಹತ್ತೊಂಬತ್ತನೇ ಶತಮಾನದಲ್ಲಿ.”

Read More

ತಂತ್ರಜ್ಞಾನ ಅಂದರೆ ಏನು?: ಕಮಲಾಕರ ಕಡವೆ ಬರೆಯುವ ʼಬೆರಗು ಮತ್ತು ಭೀತಿʼ ಅಂಕಣ-3

“ಹಾಗೆ ನೋಡಿದರೆ, ನಾವಿರುವ ನಿಸರ್ಗವನ್ನು ನಮ್ಮ ಇರವಿಗೆ, ನಮ್ಮ ಬಾಳ್ವೆಗಾಗಿ ಬಳಸಿ, ನಾವೂ ಸಹ ಅಂತಹುದೇ ಸಂಪನ್ಮೂಲವಾಗುತ್ತ ಜೀವಿಸುವುದೇ ನಿಸರ್ಗ ನಿಯಮ ಎಂದೂ ನಾವು ಅನ್ನಬಹುದು. ಯಾವುದೇ ಸಂಸ್ಕೃತಿ ಸಂಪನ್ಮೂಲವಿಲ್ಲದೇ ಇರಲು ಸಾಧ್ಯವಿಲ್ಲ. ಆದರೆ, ಇದನ್ನೇ ಸರ್ವಸ್ವ ಎಂದು ನಂಬಿದರೆ – ಮನುಷ್ಯರನ್ನೂ ಸಹ ನಾವು ಇದೇ ಬಗೆಯ ಬಳಕೆಯ ವಸ್ತುವಾಗಿಸುವ ಅಪಾಯ ಉದ್ಭವಿಸುತ್ತದೆ..”

Read More
  • 1
  • 2

ಜನಮತ

ಕೆಂಡಸಂಪಿಗೆ ಬರಹಗಳು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

4 months ago
ಕರೋನ ಕಥೆ, ವ್ಯಥೆ: ಡಾ. ಜಿ. ಎಸ್. ಶಿವಪ್ರಸಾದ್ ಬರೆದ ಲೇಖನ

https://t.co/YU4VmxkCya

#kendasampigeemag
4 months ago
“ಸವಿ ನೆನಪುಗಳು ಬೇಕು ಸವಿಯಲೀ ಬದುಕು”: ಶೇಷಾದ್ರಿ ಗಂಜೂರು ಅಂಕಣ

https://t.co/umkVcF1lRf
4 months ago
ಸಿಂದಘಟ್ಟದ ಲಕ್ಷ್ಮೀನಾರಾಯಣ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

https://t.co/UceOpuNksS

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪ್ರಜ್ಞಾ ಮತ್ತಿಹಳ್ಳಿ ಪುಸ್ತಕಕ್ಕೆ ನರಹಳ್ಳಿ ಬಾಲಸುಬ್ರಹ್ಮಣ್ಯ ಬರೆದ ಮುನ್ನುಡಿ

"ಪ್ರಜ್ಞಾ ಅವರ ಸ್ತ್ರೀ ಪಾತ್ರಗಳ ಜೀವನದಿಗೆ ಗಂಡನೊಬ್ಬನೇ ಜಗತ್ತಲ್ಲ; ಅಥವಾ ಸಂಸಾರವೇ ಸರ್ವಸ್ವವಾಗಿ ತನ್ನ ಸೃಜನಶೀಲತೆಯನ್ನು ಅದರ ತೊಡಕುಗಳ ಬಂಧನದಲ್ಲಿ ಕಳೆದುಕೊಳ್ಳುವ ಬಗೆಯೂ ಇಲ್ಲಿಲ್ಲ. ‘ತುದಿಬೆಟ್ಟದ ನೀರ...

Read More