Advertisement

ಕಾವ್ಯಾ ಕಡಮೆ

ಕಾವ್ಯಾ ಕಡಮೆ

ಕಾವ್ಯಾ ಕಡಮೆ ಉತ್ತರ ಕನ್ನಡ ಜಿಲ್ಲೆಯ ಕಡಮೆಯವರು. ಸದ್ಯ ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸ. ಧ್ಯಾನಕೆ ತಾರೀಖಿನ ಹಂಗಿಲ್ಲ, ಜೀನ್ಸು ತೊಟ್ಟ ದೇವರು (ಕವನ ಸಂಕಲನಗಳು) ಪುನರಪಿ (ಕಾದಂಬರಿ) ಆಟದೊಳಗಾಟ ಮತ್ತು ಡೋರ್ ನಂಬರ್ ಎಂಟು (ನಾಟಕಗಳು) ದೂರ ದೇಶವೆಂಬ ಪಕ್ಕದ ಮನೆ (ಪ್ರಬಂಧಗಳು.) ಪ್ರಕಟಿತ ಕೃತಿಗಳು.

ಕಲಿಸು ಪ್ರಭು; ಕರಗುವುದನ್ನು, ಮುಳುಗದೇ ಇರುವುದನ್ನು

ಎ ಕೆ ರಾಮಾನುಜನ್ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ನಿರಂತರವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿ ಕೊಂಡವರು. ಅವರ ದಿನಚರಿಯನ್ನು ಆಧರಿಸಿದ ಪುಸ್ತಕ ‘ಜರ್ನೀಸ್, ಅ ಪೋಯಟ್ಸ್ ಡೈರಿ’ ಎರಡು ವರ್ಷಗಳ ಹಿಂದೆ ಪ್ರಕಟವಾಯಿತು. ಈ ಜೀನಿಯಸ್ ಬರಹಗಾರ
ಐದು ದಶಕಗಳ ಕಾಲ ಬರೆದ ದಿನಚರಿ ಪುಟಗಳನ್ನು ತಮ್ಮ ಓದಿನಲ್ಲಿ ಕಾಣಿಸಿದ್ದಾರೆ, ಕಾವ್ಯಾ ಕಡಮೆ ಈ ಬಾರಿಯ ಅಂಕಣದಲ್ಲಿ.

Read More

ಕಾವ್ಯಾ ಓದಿದ ಹೊತ್ತಿಗೆ: ಅದೊಂದು ಗ್ರೇಟ್ ಅಮೆರಿಕನ್ ನಾವೆಲ್!

ಒಮ್ಮೆ ನಿಕ್‌ನ ಉಪಸ್ಥಿತಿಯಲ್ಲೇ ಗ್ಯಾಟ್ಸ್‌ಬಿ ಮತ್ತು ಡೇಸಿ ಟಾಮ್‌ನೊಂದಿಗೆ ಮಾತಿನ ಚಕಮಕಿ ನಡೆಸಿ ಕಾರನ್ನು ಡ್ರೈವ್ ಮಾಡಿಕೊಂಡು ಹೊರಟುಬಿಡುತ್ತಾರೆ. ಆ ಕಾರು ರಸ್ತೆಯಲ್ಲಿ ಹೊರಟ ಹೆಂಗಸೊಬ್ಬಳಿಗೆ ಢಿಕ್ಕಿ ಹೊಡೆದು ಆಕೆ ಸ್ಥಳದಲ್ಲಿ ಮೃತಪಡುತ್ತಾಳೆ. ಎಫ್ ಸ್ಕಾಟ್ ಫಿಡ್ಜರಾಲ್ಡ್ ಇಪ್ಪತ್ತನೆಯ ಶತಮಾನದ ಕಾದಂಬರಿಕಾರರಲ್ಲಿ ಬಹುಮುಖ್ಯ ಹೆಸರು. ಅವರ ‘ದಿ ಗ್ರೇಟ್ ಗ್ಯಾಟ್ಸ್‌ಬಿ’ ಕಾದಂಬರಿ ಇಂದಿಗೂ ಗ್ರೇಟ್ ಅಮೆರಿಕನ್ ನಾವೆಲ್ . ಈ ಕಾದಂಬರಿಯ ಕುರಿತು ಈ ಬಾರಿಯ ಅಂಕಣದಲ್ಲಿ ಕಾವ್ಯಾ ಕಡಮೆ ದಾಖಲಿಸಿದ್ದಾರೆ.

Read More

ಬೆನ್ನ ಮೇಲೆ ಇಮಾರತಿನ ಭಾರ; ಒಡಲೊಳಗೊಂದು ಪುಟ್ಟ ಝರಿ

“ನಿನ್ನ ಹೆಸರೇನು?” ಎಂದು ಸಂತೆಯಲ್ಲಿ ತನ್ನ ಹೆಸರು ಕೇಳಿದ ತರುಣಿ ಬ್ಲಿಮುಂಡಾಳ ಹಿಂದೆ ಬಲ್ತಸಾರ್ ನಡೆದು ಬಂದಿದ್ದಾನೆ. ಆಕೆಯ ಮನೆಯಲ್ಲೇ ಇಬ್ಬರೂ ಒಂದಾಗಿ ಜೀವನ ನಡೆಸುತ್ತಿದ್ದಾರೆ. ಮೊದಲ ದಿನವೇ ಬ್ಲಿಮುಂಡಾಳ ವಿಚಿತ್ರ ಅಭ್ಯಾಸವನ್ನು ಬಲ್ತಸಾರ್ ಕಾಣುತ್ತಾನೆ. ರಾತ್ರಿಯೇ ಹಾಸಿಗೆಯ ಪಕ್ಕದಲ್ಲಿ ಬ್ರೆಡ್ಡಿನ ತುಂಡೊಂದನ್ನು ತೆಗೆದಿಟ್ಟುಕೊಂಡು ಮುಂಜಾನೆ ಕಣ್ತೆರೆಯುವ ಮೊದಲೇ ಬ್ಲಿಮುಂಡಾ ಆ ಬ್ರೆಡ್ಡನ್ನು ತಿಂದು ಮುಗಿಸಿಯೇ ಕಣ್ಬಿಡುತ್ತಾಳೆ.”
1998ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಪೋರ್ಚುಗೀಸ್ ಭಾಷೆಯ ಬರಹಗಾರ…

Read More

ಕಾವ್ಯಾ ಓದಿದ ಹೊತ್ತಿಗೆ: ಹೆಮಿಂಗ್ವೆ ಮತ್ತವರ ಪ್ಯಾರಿಸ್

“ಹೆಮಿಂಗ್ವೆ ತಮ್ಮ ಪ್ಯಾರಿಸ್ ದಿನಗಳ ಕುರಿತು ಬರೆದ ‘ಅ ಮೂವೆಬಲ್ ಫೀಸ್ಟ್’ ಪ್ರಕಟವಾಗಿದ್ದು ಅವರು ತೀರಿಕೊಂಡ ಬಳಿಕ, 1964ರಲ್ಲಿ. ಆದರೆ ಈ ಪುಸ್ತಕಕ್ಕೆ ಬೇಕಾದ ಸಾಮಗ್ರಿಯನ್ನು ಡೈರಿ ರೂಪದಲ್ಲಿ ಅವರು ಬರೆದಿದ್ದು 1920ರ ಆಸುಪಾಸಿನಲ್ಲಿ. ಅಂದರೆ ತಮ್ಮ ಪ್ರಥಮ ಕಾದಂಬರಿ ‘ದಿ ಸನ್ ಆಲ್ಸೋ ರೈಸಸ್’ಗಿಂಥ ಮೊದಲು. ಅವರು ಸಾವಿಗೆ ಶರಣಾಗಬೇಕೆಂದು ನಿರ್ಧರಿಸಿದ ಸಮಯದಲ್ಲಿ ಈ ಪುಸ್ತಕವನ್ನು ಇನ್ನೊಮ್ಮೆ ತಿದ್ದುತ್ತಿದ್ದರು ಎಂಬುದು…”

Read More

‘ಕಾವ್ಯಾ ಓದಿದ ಹೊತ್ತಿಗೆʼ: ಟಾಲ್ಸ್‌ಟಾಯ್ ಸೃಷ್ಟಿಸುವ ಹೆಣ್ಣು…

“ಇಂಥ ಪ್ರಶ್ನೆ ಬಂದಾಗಲೆಲ್ಲ ಆ ಕಾಲದಲ್ಲಿ ಹೆಂಗಸರು ಹಾಗೆಯೇ ಯೋಚಿಸುತ್ತಿದ್ದರು ಎಂಬ ವಾದ ಹೂಡಿ ಪ್ರಶ್ನಿಸಿದವರ ಬಾಯಿ ಮುಚ್ಚಿಸುವುದು ಸುಲಭ. ಆದರೆ ಎಲ್ಲ ಕಾಲದಲ್ಲೂ ಎಲ್ಲ ಬಗೆಯ ಹೆಣ್ಣುಗಳೂ, ಗಂಡುಗಳೂ ಇರುವುದು ಸೃಷ್ಟಿ ನಿಯಮ. ಲೇಖಕರಾಗಿ ಯಾರ ಕಥೆಯನ್ನು ನಾವು ಹೇಳಲು ಆಯ್ದುಕೊಳ್ಳುತ್ತೇವೆ ಮತ್ತದನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದು..”

Read More
  • 1
  • 2

ಜನಮತ

ಕನ್ನಡ ಸಾಹಿತ್ಯ ವಲಯದಲ್ಲಿ ಈಗ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

20 hours ago
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಬಸವಣ್ಣೆಪ್ಪಾ ಪ. ಕಂಬಾರ ಬರೆದ ಕತೆ

https://t.co/0q5FwHLLoV
20 hours ago
ಡರ್ಬನ್ ಇದಿನಬ್ಬ: ಗುಲಾಮಗಿರಿಯ ಗಾಡಿ ಏರಿ..

https://t.co/gLXkEHMKbL
2 days ago
ರಾಮು ಕವಿತೆಗಳು : ರಘುನಂದನ

https://t.co/XMeMPgpQLT

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

“ಬಾರೆ ರಾಜ ಕುಮಾರಿ ಹೋಗೋಣ ಜಂಬೂ ಸವಾರಿ……”

ನಾನು ಬೈಕಿನ ಕೊಂಡಿಗೆ ನನ್ನ ಕೈಯಲ್ಲಿದ್ದ ಚೀಲಗಳನ್ನೆಲ್ಲಾ ಸಿಕ್ಕಿಸಿ, ರಾಯರ ಭುಜದ ಮೇಲೆ ಕೈಯಿಟ್ಟು ಇನ್ನೇನು ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ಗಾಡಿ ಮುಂದೆ ಹೋಗಿಯೇ ಬಿಟ್ಟಿತು. ನಾನು ನಿಂತಲ್ಲೇ...

Read More