Advertisement
ಸುಮಾವೀಣಾ

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ ಪ್ರಕಟಿತ ಕೃತಿಗಳು. ‘ಲೇಖ ಮಲ್ಲಿಕಾ’,’ವಿಚಾರ ಸಿಂಧು’  ಪುಸ್ತಕಗಳು ಅಚ್ಚಿನಲ್ಲಿವೆ.

ಹ.ವೆಂ. ನಾಗರಾಜರಾವ್  ಬರೆದ ‘ಐದು ದೀಪದ ಕಂಬ’

“ಐದು ದೀಪದ ಕಂಬ
ಈ ಡಿಂಬ
ತಂದು ನಟ್ಟರು ಇಲ್ಲಿ
ಮಾರುಕಟ್ಟೆಯ ಮಹಾಚೌಕದಲ್ಲಿ
ತಂತಿ ಸಂಪರ್ಕವೀಯುತ ಹಾಯಿಸುತ ವಿದ್ಯುತ್ ಚ್ಛಕ್ತಿ
ದಿಗ್ಗನುರಿಯಿತು ಹತ್ತಿ ಇದರ ನೆತ್ತಿ.
ಐದು ದೀಪದ ಕಂಬ
ಈ ಡಿಂಬ
ತಾಯಿ ಅಂಗೈಯೊಳಗೆ ಹಚ್ಚಿ ಹಿಡಿದಿರುವಂಥ ದೀಪಾರತಿ;”

Read More

“ಜೀವ ಕೊಡಲೇ? ಚಹ ಕುಡಿಯಲೇ?” ಕಾದಂಬರಿಯ ಒಂದು ಅಧ್ಯಾಯ

ಒಂದು ನಂಬರಿನ ಸೋಮಾರಿ. ಇವಳು ಸ್ವಲ್ಪ ಕೈಕಾಲುಗಳನ್ನ ಅಲುಗಾಡಿಸಿಕೊಂಡಿರಲಿ ಎಂದು ಡ್ಯಾಡಿ ಕೆಲಸದವರನ್ನು ಇಟ್ಟುಕೊಂಡಿರಲಿಲ್ಲ. ಆದರೆ ಮಾಡಿಟ್ಟದ್ದನ್ನುಣ್ಣುವ ಇವಳ ಗೀಳು ಬಿಡದು. ಅನ್ನ ಮತ್ತು ಮೀನುಸಾರು ಹೇಗೇಗೋ ಮಾಡಿಟ್ಟಿರುತ್ತಾಳೆ. ಅಡುಗೆಮನೆಯಲ್ಲಿ ಕೆಲಸ ಮಾಡುವಾಗಲೂ ಲಕ್ಷ್ಯ ಹೊರಗಿನ ಟೀವಿಯ ಮೇಲೆಯೇ. ಅಮ್ಮನ ಅಡುಗೆಗೆ ಅಸಹ್ಯಪಟ್ಟ ಡ್ಯಾಡಿ ದಿನವೂ ಹೊರಗೇ ಊಟ ಮಾಡುತ್ತಿರಬೇಕೆನ್ನುವ ಸಂದೇಹ ನನಗೆ.
ಇತ್ತೀಚೆಗಷ್ಟೇ ಜ್ಞಾನಪೀಠ ಪ್ರಶಸ್ತಿ ಪಡೆದ ಕೊಂಕಣಿ ಸಾಹಿತಿ ದಾಮೋದರ ಮಾವಜೋ ಅವರ “ಜೀವ ಕೊಡಲೇ? ಚಹ ಕುಡಿಯಲೇ” ಕಾದಂಬರಿಯನ್ನು ಕಿಶೂ ಬಾರ್ಕೂರು ಕನ್ನಡಕ್ಕೆ ತಂದಿದ್ದು ಅದರ ಒಂದು ಭಾಗ ನಿಮ್ಮ ಓದಿಗೆ

Read More

ಆನೆಗಳಿಗೆ ತೇಜಸ್ವಿ ತೋಟಾನೇ ಯಾಕೆ ಬೇಕಾಯ್ತು? 

ಕಾಫಿ ಬೆಳೆಗಾರರು ತೋಟಗಳನ್ನು ವಿಸ್ತರಿಸುವುದಲ್ಲದೆ ಹೊರರಾಜ್ಯಗಳಿಂದ ಉದ್ಯೋಗಗಳನ್ನರಸಿ ಬರುವವರು- ಇದ್ದಿಲು ಸುಡಲು, ನಾಟ ಕೊಯ್ಯಲು, ಬಿದಿರು ಕಡಿದು ಲೋಡು ಮಾಡಲು ಬಂದವರೆಲ್ಲಾ ಕಾಡೊಳಗೆ ಹೂಡಿದ ತಮ್ಮ ತಾತ್ಕಾಲಿಕ, ಬಿಡಾರಗಳನ್ನೇ ಶಾಶ್ವತ ಮಾಡಿಕೊಂಡು ರಾಜಕೀಯ ಪಕ್ಷಗಳ ಆಶ್ರಯದಲ್ಲಿ ಓಟಿನ ಬಲದಿಂದ ಕುಳಿತು ಬಿಡುತ್ತಾರೆ. ಓಟಿನ ಬಲವಿಲ್ಲದ ಮರಗಳು ಕೇವಲ ನಾಟಾಗಳಾಗಿ ನೆಲಕ್ಕುರುಳುತ್ತವೆ. ಕಾಡಿನ ಪ್ರಾಣಿ ಸಮುದಾಯಗಳಿಗಂತೂ ಬದುಕುವುದೇ ಸವಾಲಾಗಿದೆ. ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ ರಾಜೇಶ್ವರಿ ತೇಜಸ್ವಿ ಬರಹ 

Read More

ಮೂಡಿಗೆರೆಯ ಕಾರ್ಗಾಲದ ಮೋಡಿ

ಈ ಗಾಳಿ ಮಳೆ ಕಾಟ ಒಂದೆರಡಲ್ಲ. ಕಳ್ಳರೂ ಬೀಳುವುದುಂಟು. ಗಾಳಿ ಮಳೆ ಕತ್ತಲೆ ಒಳ್ಳೆಯ ಕಾಲ ಅವರಿಗೆ. ಇಂತದೇ ಮತ್ತೊಂದು ಕಗ್ಗತ್ತಲು ರಾತ್ರೆ. ಇನ್ನೂ ನಿದ್ದೆ ಬಂದಿಲ್ಲ. ಕಿಟಕಿಗೆ ಯಾರೋ ಟಾರ್ಚು ಬಿಡುತ್ತಿದ್ದಾರೆ. ಹೆದರಿ ನೀರಾದೆ. ಆ ಬೆಳಕು ಪಕ್ಕದ ಕಿಟಕಿಗೂ ಹೋಯ್ತು. ಇನ್ನೂ ಹೆದರಿಕೆ ಹೆಚ್ಚಾಯ್ತು. ಎದೆ ಡವಡವ ಗುಟ್ಟಿತು. ಎಲ್ಲಾ ಎದುರಿಸಬೇಕಲ್ಲಾ. ಗಟ್ಟಿ ಮನಸ್ಸು ಮಾಡಿ ಎದ್ದು ಕೂತೆ. ಟಾರ್ಚು ಬೆಳಕು ದೂರ ಸರಿಯಿತು. ಮೆಲ್ಲಕೆ ಎದ್ದು ನಿಂತೆ. ಇನ್ನೂ ದೂರ ದೂರ ಹೋಯಿತು ಬೆಳಕು. ಸುಸ್ತು ನಾನು. ಅಷ್ಟರಲ್ಲಿ ಜಗ್ ಜಗ್ ಬೆಳಕು ಹತ್ತಾರು ಆಯಿತು. ಏನದು ಬೆಳುಕು ಎಂಬ ಕುತೂಹಲದ ಬಗ್ಗೆ ರಾಜೇಶ್ವರಿ ತೇಜಸ್ವಿ ಅವರು ಬರೆದ ಬರಹ ಇಂದಿನ ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ  

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ…

Read More

ಬರಹ ಭಂಡಾರ