Advertisement

ಕೆಂಡಸಂಪಿಗೆ

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ಭಾರತ ಗಣತಂತ್ರ- ಯು.ಆರ್.ಎ ಹೇಳಿದ ಒಂದು ಕಥಾ ರೂಪಕ

ಒಂದು ಕಥಾ ರೂಪಕವಾಗಿ ನಮ್ಮ ಗಣರಾಜ್ಯದ ಮಹತ್ವವನ್ನು ವಿವರಿಸಲು ಬಯಸುತ್ತೇನೆ. ಕೆಲವು ತಿಂಗಳುಗಳ ಹಿಂದೆ ಡಾ. ಹಮೀದ್ ಅನ್ಸಾರಿಯವರು ಇನ್ನೂ ಉಪರಾಷ್ಟ್ರಪತಿಯಾಗುವ ಮೊದಲು ಬೆಂಗಳೂರಿಗೆ ಬಂದು ನನ್ನನ್ನು ನೋಡಲು ಬಯಸಿದ್ದರು. ಅವರೊಂದಿಗೆ ಪ್ರಸಿದ್ದ ಪತ್ರಕರ್ತ ದಿಲೀಪ್ ಪಡ್‌ಗಾಂವ್ಕರ್ ಇದ್ದರು. ನಾವು ಉಪಾಹಾರಕ್ಕೆಂದು ಒಂದು ಕಡೆ ಸೇರಿದೆವು. ಆಗ ಪಡ್‌ಗಾಂವ್ಕರ್ ಒಂದು ಕಥೆಯನ್ನು ಹೇಳಿದರು. ಆ ಕಥೆ ಹೀಗಿದೆ. ಪಡ್‌ಗಾಂವ್ಕರ್, ಮಣಿಶಂಕರ್ ಐಯ್ಯರ್ ಮತ್ತು ನಮ್ಮ ಬಿಹಾರದ ಲಾಲೂ ಪ್ರಸಾದ್ ಯಾದವ್ ಒಮ್ಮೆ ಪಾಕಿಸ್ತಾನಕ್ಕೆ ಒಟ್ಟಿಗೆ ಹೋಗಿದ್ದರು. ಪಾಕಿಸ್ತಾನದಲ್ಲೂ ಅತ್ಯಂತ ಜನಪ್ರಿಯನಾದ ಮನುಷ್ಯನೆಂದರೆ ಲಾಲು ಪ್ರಸಾದ್ ಯಾದವ್. ಅವರು ಹೋದೆಡೆಯಲ್ಲಾ ಸಾವಿರಾರು ಜನ ಅವರ ಮಾತನ್ನು ಕೇಳಲು ಸೇರುತ್ತಿದ್ದರು. ಇದಾದ ನಂತರ ಜನರಲ್ ಮುಷರಫ್  ಚಹಾಕ್ಕೆ ಕರೆದು ತಮಾಷೆಯಾಗಿ ಲಾಲು ಪ್ರಸಾದ್‌ಗೆ ಹೇಳಿದ್ರಂತೆ. ‘ಲಾಲೂಜಿ ನೀವು ಇಲ್ಲಿ ಎಲ್ಲಿ ನಿಂತರೂ ಪಾಕಿಸ್ತಾನದಲ್ಲಿ ಎಲೆಕ್ಷನ್‌ನಲ್ಲಿ ಗೆದ್ದು ಬಿಡುತ್ತೀರಿ’. ಆಗ ಲಾಲೂ, ಅವರದೇ ಆದ ಧಾಟಿಯಲ್ಲಿ, ‘ಜನರಲ್ ಸಾಹೇಬ್ ಈ ಮಾತನ್ನು ನಾನು ನಿಮಗೆ...

Read More

ದೀವಳಿಗೆಯ ಹಿಂದಿನ ಇರುಳು ಸಂಗಣ್ಣ ಹೋದರು

ಬೆಳಿಗ್ಗೆ ಫೋನು ಕಿಣಿಕಿಣಿ ಎಂದು ‘ನಾನು ಅಶೋಕರೀ’ ಎಂದಾಗ ಮಾಮೂಲಿನಂತೆ ‘ಹೊ. ತಂದೆ ಹೇಗಿದ್ದಾರೆ?’ ಅಂತ ಕೇಳಿದೆ. ಆತ ಎಂದಿನಂತಾದರೆ ಅವರಿಗೆ ಕೊಡುತ್ತಾನೆ, ಅವರು ‘ದೀಪಾವಳಿ, ಎಲ್ಲ ಒಳಿತಾಗಲಿ ಅವ್ವಾ’ ಅಂತ ಹರಸುತ್ತಾರೆ. ಮತ್ತೆ ನಮ್ಮ ಮಾತು ಮುಂದುವರಿಯುತ್ತದೆ. ಆದರೆ ಈಗ ಹಾಗಾಗಲಿಲ್ಲ. ಬದಲು ಸಿಕ್ಕ ಉತ್ತರ ‘ತಂದೆ ಹೋದರವ್ವಾ, ನಿನ್ನೆ ಸಂಜೆ’ ‘ಹ್ಞ! ಅಯ್ಯೊ!’ ಸಂಗಣ್ಣನವರೂ ಹೋದರೆ! ಅವರು ‘ಹೋದರು’ ಎಂಬ ಸುದ್ದಿ ಹೇಗೆ ಒಳಗಿಳಿಸಿಕೊಳ್ಳಲಿ? ವೈಯಕ್ತಿಕವಾಗಿ ನಮ್ಮ ಮನೆಮಂದಿಯಂತೂ ಅವರ ಪ್ರೀತಿವಾತ್ಸಲ್ಯದ ನಿರಂತರ ಋಣಿಗಳು. ನಮ್ಮ ಮನೆಯ ಆದರಣೀಯ ಹಿರಿಯರಲ್ಲೊಬ್ಬರು ಅವರು. ಉಡುಪಿಗೆ ಬಂದಾಗೆಲ್ಲ, ನಮ್ಮನೆಗೆ ಬಂದೇ ಬರುವ, ‘ಹೇಗಿದ್ದಿ ಅವ್ವಾ’ ಎನ್ನುತ್ತ ಒಳಬರುವ, ಸಮಯವಿದ್ದರೆ ಉಳಿದುಕೊಳ್ಳುವ, ಬೆಳಗಿನ ಜಾವ ನಾಕು ಗಂಟೆಗೇ ಎದ್ದು ತಮ್ಮಷ್ಟಕ್ಕೆ ತಾವೇ ಹೊರಹೋಗಿ ಸುತ್ತಾಡಿ ಬರುವ, ತಿಳಿಸಾರು ಮಾಡು ಸಾಕವ್ವಾ ಎನುವ, ರಾಗಿ ಮುದ್ದಿ ಮಾಡಕೆ ಬರ್‍ತದೇನವ್ವ ನಿಂಗೆ ಎಂದು ಅಕ್ಕರದಿಂದ ಅಚ್ಚರಿ ಪಡುವ ಮೂರ್ತಿಯವರಿಗೂ ನನಗೂ ತಂದೆಯ ಪ್ರೀತಿಯನ್ನೂ ಮಕ್ಕಳಿಗೆ...

Read More

ವಾಗ್ಮತೀ ತೀರದ ಸೂತಕ ಕಥೆಗಳು:ವೈದೇಹಿ ಬರಹ

ಕಾಶಿಯಲ್ಲಿ ಗಂಗೆಯಂತೆ ನೇಪಾಲದಲ್ಲಿ ವಾಗ್ಮತೀ ನದಿ. ನದಿಯ ಅಲ್ಲೇ ಆಚೆ ಸ್ಮಶಾನ. ಶಿವನೆಂಬವ ಸ್ಮಶಾನವಾಸಿಯಲ್ಲವೇ? ಅಲ್ಲಿ ಹೊಗೆ ಎದ್ದಾಗೆಲ್ಲ ಶಿವ ಸಂತುಷ್ಟನಾಗುತ್ತಾನೆ ಅಂತ ನಂಬಿಕೆ. ಕಾಶಿಯಷ್ಟು ಇಲ್ಲದಿದ್ದರೂ ದಿನಾ ಕನಿಷ್ಠ ಎರಡೋ ಮೂರೋ ಶವದಹನ ಆಗುತ್ತಲೇ ಇರುತ್ತದೆ ಅಲ್ಲಿ. ಅರ್ಚಕರು ಅದೇ ದಾರಿಯಾಗಿ ಹೋಗುತ್ತ ಬರುತ್ತ ಇರುತ್ತಾರೆ. ಭಾರತದಲ್ಲಾದರೆ ಸ್ಮಶಾನಕ್ಕೆ ಹೋಗಿಬಂದರೆ ಸ್ನಾನ ಮಾಡಬೇಕು, ಹೊಸ ಜನಿವಾರ ತೊಡಬೇಕು. ಅಲ್ಲಿ ಹಾಗಿಲ್ಲ. ಸ್ಮಶಾನದಲ್ಲೇ ವಾಗ್ಮತೀ ದಡದಲ್ಲಿ ಭಸ್ಮೇಶ್ವರ ಘಾಟ್ ಅಂತ, ಅಲ್ಲಿ ಈಶ್ವರ ದೇವಸ್ಥಾನ. ಭಸ್ಮೇಶ್ವರ ಘಾಟಿನಲ್ಲಿ ‘ಶ್ರೀ ಪಾಂಚ್’ರನ್ನು (ರಾಜರನ್ನು) ಸುಡಲಿಕ್ಕೆಂದು ಪ್ರತ್ಯೇಕ ಚಿತೆ ಇದೆ. ರಾಜ ವಂಶದವರು ಶ್ರೀಮಂತ ವರ್ಗದವರು ದುಡ್ಡುಕೊಟ್ಟು ದಹನಕ್ಕಾಗಿ ಮುಡಿಪಾಗಿಟ್ಟುಕೊಂಡ ಸ್ಥಳಗಳಿವೆ. ಪಶುಪತಿ ದೇವಸ್ಥಾನವಿರುವುದು ಭಸ್ಮೇಶ್ವರ ಘಾಟ್ ನಿಂದ ಸುಮಾರು ಇನ್ನೂರು ಮೀಟರ್ ದೂರದಲ್ಲಿ. ಅರ್ಚಕರು ದೇವರ ಪೂಜೆಗೆ ನೀರನ್ನು ಈ ವಾಗ್ಮತೀ ನದಿಯಿಂದಲೇ ಬೆಳ್ಳಿ ಕೊಡಪಾನದಲ್ಲಿ ತುಂಬಿಸಿ ತರಬೇಕು. ಅರ್ಚಕರು ಪಶುಪತಿಯ ಪೂಜೆ ಮಾಡುತ್ತಿರುವಾಗ ಎಷ್ಟೋ ಸಲ ಹೆಣ ಸುಟ್ಟ ವಾಸನೆ...

Read More

ಕಳೆದುಹೋದ ಗಿರಿಬಾಲೆಯ ಚರಿತ್ರೆ-೪

ಹ್ಞಾ, ರಾಜವಾಡೆ ಹೇಳುತ್ತಿದ್ದ ರಂತಿದೇವನ ಕತೆ – (ಅವರ ಅತ್ಯಂತ ಪ್ರೀತಿಯ ಕಥೆಯಿದು). ‘ನಿಮಗೆ ಹೇಳಿದ್ದೆನಾ ಮುಂಚೆ?’ ಕೇಳುವರು. ನಾನು ಇಲ್ಲವೆನ್ನುವೆ. ಇಲ್ಲವೆನ್ನುವುದು ಪೂರ್ಣಗೊಳ್ಳುವುದರೊಳಗೆ ಅವರ ಕಥೆ ಆರಂಭವಾಗುವುದು. ರಂತಿದೇವನೆಂಬ ರಾಜನಿದ್ದ. ಮಹಾದಾನಿ, ಅಂತಃಕರಣಿ. ಲೋಕೋಪಕಾರಿ. ಭೂಲೋಕದಲ್ಲಿ ನಾನಾ ತರಹದ ಜನೋಪಯೋಗಿ ಕೆಲಸಗಳನ್ನು ಮಾಡಿ ಒಂದು ದಿನ ಮರಣ ಹೊಂದಿದ. ಮರಣ ಹೊಂದಿ ಸ್ವರ್ಗ ಸೇರಿದ. ಸ್ವರ್ಗದಲ್ಲಿ ಬಹುಕಾಲ ಕಳೆಯುತ್ತಲೂ ಅಲ್ಲಿಗೆ ಯಮದೂತರು ಬಂದರು. ‘ನಿನ್ನ ಇಲ್ಲಿನ ವಾಸದ ಅವಧಿ ಮುಗಿಯಿತು. ಇನ್ನು ನರಕದ ಅವಧಿ. ನಾವು ನಿನ್ನನ್ನು ಕರೆದೊಯ್ಯಲು ಬಂದಿದ್ದೇವೆ. ಬಾ’ ಎಂದರು. ಎನ್ನುತ್ತಲೂ ರಂತಿದೇವ ‘ಅದು ಹೇಗಾಗುತ್ತದೆ? ಎಲ್ಲಿಯವರೆಗೆ ಭೂಲೋಕದಲ್ಲಿ ಹೆಸರು ಇರುತ್ತದೋ ಅಲ್ಲಿಯವರೆಗೆ ಸ್ವರ್ಗವನ್ನು ಅನುಭವಿಸುವ ಹಕ್ಕೂ ಇರುತ್ತದೆ. ನನ್ನ ಹೆಸರಿನ್ನೂ ಭೂಲೋಕದಲ್ಲಿ ಜೀವಂತವಿದೆ. ಹಾಗಿರುವಾಗ ನಾನು ನರಕಕ್ಕೆ ಬರಲೊಲ್ಲೆ’ ಎಂದ. ‘ಹ್ಹೊ! ಹಾಗೆ ಹೇಳುತ್ತೀಯಾ? ಹಾಗೆ ಹೇಗೆ ಹೇಳುತ್ತೀಯಾ?’ ಎಂದರು ಯಮದೂತರು. ಭೂಲೋಕಕ್ಕೆ ಹೋಗಿ ನೀವೇ ಪರೀಕ್ಷಿಸಿ ಬನ್ನಿ ಎಂದ ರಂತಿದೇವ. (ಮಾದರಿ ೨:...

Read More

ವೈದೇಹಿ ಬರೆಯುವ ಕಳೆದುಹೋದ ಗಿರಿಬಾಲೆಯ ಚರಿತ್ರೆ – ೩

ರಾಜವಾಡೆಯವರ ಬೆಳಗು ಆರಂಭವಾಗುವುದೇ ದೇವಸ್ಥಾನಕ್ಕೆ ಬಂದು ಸ್ವಂತ ರಚನೆಯ ಶಾರದಾ ಸುಪ್ರಭಾತ ಹೇಳುವ ಮೂಲಕ. `ಗಿರಿಬಾಲೆ’ ಅಂಕಿತದಲ್ಲಿ ಅವರು ಬರೆದ ಅಸಂಖ್ಯ ಕೀರ್ತನೆಗಳು ಸದಾ ಅವರ ನಾಲಗೆಯ ಮೇಲೆಯೇ ಇದ್ದುವು. ಮಾತಾಡುತ್ತಿದ್ದ ಹಾಗೆ ಇದ್ದಕ್ಕಿದ್ದಂತೆ ಅವರು ನಮ್ಮ ನಡುವೆ ದೇವಿಯೂ/ದೇವರೂ ಖಂಡಿತವಾಗಿಯೂ ಕುಳಿತಿರುವಳೋ/ನೋ ಎಂಬಂಥ ಹರ್ಷದಲ್ಲಿ ತಟಕ್ಕನೇ ತನ್ನ ಕೀರ್ತನೆಗೆ ಹಾರಿ, ತಾಳ ಹಾಕುತ್ತ ರಾಗವತ್ತಾಗಿ ಹಾಡಿ ಬಿಡುತ್ತಿದ್ದರು. ಹಾಡುತ್ತ ನಡುವೆ ನಿಲ್ಲಿಸುವರು `ಇದು ನನ್ನ ಕಂಠವೆ? ಛೆ. ಎಷ್ಟು ಚೆನ್ನಾಗಿತ್ತು, ಹೇಗಾಗಿ ಬಿಟ್ಟಿದೆ’ ಉದ್ಗರಿಸುವರು. (ತನ್ನ ಈಚಿನ ಫೋಟೋ ಕಂಡು ಝುಮ್ಮ ಮೈ ನಡುಗಿ, `ಹೊಹೊ, ಇದು ಯಾರು, ನಾನೆ? ಹೇಗಿದ್ದೆ, ಹೇಗಾದೆ’ ಎಂದು ನಕ್ಕಿದ್ದರು ರಾಜವಾಡೆ. ಫೋಟೋ ಮೇಲಿನ ದೃಷ್ಟಿ ಕೀಳದೆ `ಇಹ ಎನ್ನುವುದರ ಮೂಲವೇ ದೇಹ. ಅದರ ಮೇಲಿನ ಮಮತೆ ಯಾವಾಗ ಹೋಯಿತೋ ಆಗಲೇ ಇಹದ, ಸೌಂದರ್ಯದ ಭ್ರಮೆಯೂ ಮಾಯವಾಗುತ್ತದೆ’ ಎಂದಿದ್ದರು.) ಬೆಂಗಳೂರಿನಲ್ಲಿದ್ದ ಕಾಲದಲ್ಲಿ ಸಂಗೀತ ಕಲಿತು ರೂಢಿಸಿಕೊಂಡಿದ್ದ ಕವಿ ಆಕೆ, ಸಂಜೆ ದೇವಸ್ಥಾನಕ್ಕೆ ಬಂದ...

Read More

ಜನಮತ

ಕೆಂಡಸಂಪಿಗೆ ಬರಹಗಳು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

2 years ago
ಶ್ರೀದೇವಿ ಕೆರೆಮನೆ ಬರೆದ ಹೊಸ ಗಝಲ್
Shreedevi Keremane

https://t.co/TIjKjRPVMe https://t.co/TIjKjRPVMe
2 years ago
ಗಗನ್ ಬೂಸ್ನೂರ್ ತೆಗೆದ ಈ ದಿನದ ಚಿತ್ರ

https://t.co/hCZte2m4nR https://t.co/hCZte2m4nR
2 years ago
ನಂಟಿನ ನಡುವೆ ನೆಲಕುಸಿಯಿತು: ಸುನೀತಾ ರೈನಾ ಪಂಡಿತ್‌ ಕಾವ್ಯದ ಕುರಿತು ವಿಜಯರಾಘವನ್ ಬರಹ

ಕವಿಗೆ ನೋವೂ ಆನಂದದ ವಿಚಾರವೇ. ಅದರ ಅಭಿವ್ಯಕ್ತಿಯಲ್ಲಿ ಕವಿಗೆ ಶಾಂತಿಯನ್ನು, ವ್ಯಕ್ತಿತ್ವವನ್ನು ಕೊಡುತ್ತದೆ. ಸಂಕಟವಿಲ್ಲದ ಮನುಷ್ಯ ಬದುಕು ಬದುಕಲ್ಲ. ಸಮುದಾಯಗಳು ಹಿಂದಿನ ಮಾತನಾಡುವಾಗ ತೊದಲಿದರೇ? ತೊದಲಿದ್ದರ ಫಲಿತವೇ... https://t.co/2iuDsYI8yt

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುರುಷೋತ್ತಮ ಬಿಳಿಮಲೆಯವರ ಆತ್ಮಕಥನದ ಕುರಿತು ನಾ ದಿವಾಕರ್‌ ಬರೆದ ಲೇಖನ

"ಆರಂಭದಿಂದ ತಮ್ಮ ಬದುಕಿನ ಚಿತ್ರಣಗಳನ್ನು ಭಾವಚಿತ್ರಗಳ ಮೂಲಕ ಕಣ್ತುಂಬಿಕೊಳ್ಳುವಂತೆ ಮಾಡುವ ಬಿಳಿಮಲೆಯವರು ನಂತರದ ಕೆಲವು ಪುಟಗಳಲ್ಲಿ ಮೌಢ್ಯ ಮತ್ತು ಅಜ್ಞಾನದ ವಿರುದ್ಧ ತಮ್ಮ ಪ್ರತಿರೋಧದ ದನಿಯ.."

Read More

ವಾರ್ತಾಪತ್ರಕ್ಕಾಗಿ