Advertisement

ಕೆಂಡಸಂಪಿಗೆ

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ವೈದೇಹಿ ಬರೆಯುವ ಕಳೆದುಹೋದ ಗಿರಿಬಾಲೆಯ ಚರಿತ್ರೆ – ೨

ಅಂದು ನಾನು ಲೇಖಕಿ `ಗಿರಿಬಾಲೆ’ಯನ್ನು ಕಂಡದ್ದು ಶಾರದೆಯ ನೇರ ಬಹಿರಂಗ ಭಕ್ತೆಯಾಗಿ. ಅಸ್ಖಲಿತ ವಾಗ್ಝರಿಯ, ವಯಸ್ಸಿಗೆ ಮಣಿದು ಮಸುಕಾಗದ ಸುಸ್ಪಷ್ಟ ನೆನಪುಗಳ, ಪುಟಿಪುಟಿವ ಚೇತನವನ್ನು. ಒಂದು ಪ್ರಶ್ನೆ ಹಾಕಿದರೆ ಸಾಕು ಆ ಕಾಲಕ್ಕೆ ಓಡುತ್ತಿದ್ದರು ಅವರು. ಆ ಪ್ರಾಯದಲ್ಲಿಯೇ ನಿಲ್ಲುತ್ತಿದ್ದರು. ಎರಡು ದಶಕಗಳ ಕಾಲ ಕನ್ನಡ ಸಾಹಿತ್ಯಕ್ಕೆ ಸ್ತ್ರೀ ಧ್ವನಿ ಕೂಡಿಸಿದಾಕೆ, ಸ್ತ್ರೀಯರ ಪ್ರಗತಿಗಾಗಿಯೇ ಒಂದು ಪತ್ರಿಕೆಯನ್ನು ಹೊರಡಿಸಿದಾಕೆ, ಆಶು ರಚನಕಾರ್ತಿ, ಮಕ್ಕಳಿಗಾಗಿ ಬರೆದವರು, ಕಥೆ ಕವನ ರಚಿಸಿ (ಕನ್ನಡದಲ್ಲಿ ಮಾತ್ರವಲ್ಲ, ತುಳುವಿನಲ್ಲೂ) ಕಾಲಂ ಬರೆದು, ಹರಿಕಥೆ ಮಾಡಿ, ಹಾಡಿ, ಹಾಡಿಸಿ, ವೀಣೆ ನುಡಿಸಿ, ನಾಟಕ ರಚಿಸಿ, ಆಡಿಸಿ, ನಟಿಸಿ- ಒಟ್ಟಿನಲ್ಲಿ ಕಲೆ ಹಾಗೂ ಸಾಹಿತ್ಯಲೋಕದಲ್ಲಿ ಮಿಂಚಿದಾಕೆ – ಅಂತೆಲ್ಲ ಒಂದು ಕಾಲದ ಅವರ ಕ್ರಿಯಾಶೀಲತೆಯನ್ನು ಕೆದಕಿ ಕೇಳ ಹೊರಟರೆ `ಏನೋ. ಎಲ್ಲ ಒಂದು ಹುಚ್ಚಲ್ಲವೆ!’ ಎಂದುಬಿಡುತ್ತಿದ್ದರು. ಬುದ್ಧಿ ಇಲ್ಲದಾಗ ಮಾಡಿದ ಕೆಲಸದಂತೆ, ಅದರ ಪ್ರಸ್ತಾಪವನ್ನೇ ಎತ್ತಲು ಮನಸ್ಸಿಲ್ಲದವರಂತೆ ಮಾತು ಬದಲಾಯಿಸುತ್ತಿದ್ದರು. ಆದರೆ ಒಮ್ಮೊಮ್ಮೆ ಹಾಗೆ ಮರೆಯ ಹೋಗುತ್ತ ಹೋಗುತ್ತ...

Read More

ವೈದೇಹಿ ಬರೆದ ಕಳೆದುಹೋದ ಗಿರಿಬಾಲೆಯ ಚರಿತ್ರೆ

ಕನ್ನಡದ ಈ ಗಿರಿಬಾಲೆಯ ಹೆಸರು ಶ್ರೀಮತಿ ಸರಸ್ವತೀಬಾಯಿ ರಾಜವಾಡೆ. ಸ್ರೀವಾದ, ಮಹಿಳಾ ಸಬಲೀಕರಣ ಇತ್ಯಾದಿ ಪದಗಳು ಕನ್ನಡದಲ್ಲಿ ಇನ್ನೂ ಕಣ್ತೆರೆಯದಿದ್ದ ಕಾಲದಲ್ಲಿಯೇ ತನ್ನ ಬರಹಗಳಲ್ಲಿ ಈ ಪದಗಳಿಗೆ ಜೀವಕೊಟ್ಟವರು ಈ ಗಿರಿಬಾಲೆ. ಅಪ್ರತಿಮ ಸುಂದರಿಯಾಗಿದ್ದ ಗಿರಿಬಾಲೆ ತನ್ನ ಕೊನೆಯ ದಿನಗಳನ್ನು ವಿರಾಗಿಣಿಯಂತೆ ಕಳೆದವರು. ಕನ್ನಡದ ಮಹತ್ವದ ಲೇಖಕಿ ವೈದೇಹಿ ಗಿರಿಬಾಲೆ ಅರ್ಥಾತ್ ಶ್ರೀಮತಿ ಸರಸ್ವತೀಬಾಯಿ ರಾಜವಾಡೆಯವರ ಕುರಿತ ಪುಸ್ತಕವೊಂದನ್ನು ಸಂಪಾದಿಸಿದ್ದಾರೆ. ಸಾಗರದ ಅಕ್ಷರ ಪ್ರಕಾಶ ಈ ಪುಸ್ತಕದ ಪ್ರಕಾಶಕರು. ಗಿರಿಬಾಲೆಯವರನ್ನು ಕಂಡು ಮಾತನಾಡಿಸಿ ಬರೆದ ವೈದೇಹಿಯವರ ಲೇಖನ ಇಲ್ಲಿದೆ. ಅದು ೧೯೮೭ರ ದೀಪಾವಳಿಯ ಸಮಯ. ರಾಜವಾಡೆಯವರು ಕಟ್ಟಿಸಿ ನಿರ್ವಹಿಸುತ್ತಿದ್ದ ಉಡುಪಿಯ ಚಿಟ್ಪಾಡಿಯಲ್ಲಿರುವ ಶ್ರೀ ಶಾರದಾಂಬಾ ದೇವಸ್ಥಾನಕ್ಕೆ ಹೋದಾಗ ಸಂಜೆ ಗಂಟೆ ಏಳು ಏಳೂವರೆ. ಕರೆಂಟು ಹೋದ ಕತ್ತಲಿಗೆ ಎಣ್ಣೆದೀಪ ಹಚ್ಚಿಟ್ಟುಕೊಂಡು ಪೌಳಿಯ ಕಂಬಕ್ಕೊರಗಿ ಅವರು ಯಾರೊಡನೆಯೋ ಮಾತಾಡುತ್ತಾ ಬತ್ತಿ ಹೊಸೆಯುತ್ತಾ ಕುಳಿತಿದ್ದರು. ಆ ಮಿಣಿ ಮಿಣಿ ಬೆಳಕಲ್ಲಿ ಕುತೂಹಲದ ಕಣ್ಣನ್ನು ಅಗಲ ಕಿರಿದುಗೊಳಿಸಿ ಒಮ್ಮೆ ಮುಖವೆತ್ತಿ ನನ್ನನ್ನು ನೋಡಿದರು. ಇವರೇ...

Read More

ವೈದೇಹಿ ಕಾಲಂ – ಮೀನಾಕ್ಷಮ್ಮನ ಸಿನೆಮಾ ಕಥೆ

ಮೀನಾಕ್ಷಮ್ಮನಿಗೆ ಕತೆ ಕಾದಂಬರಿ ಮಾತ್ರವಲ್ಲ, ಸಿನೆಮಾವೆಂದರೂ ಪಂಚಪ್ರಾಣವಿತ್ತು. ಹೊಸ ಸಿನೆಮಾ ಬಂತೆಂದರೆ ಹೇಗಾದರೂ ಬಿಡುವು ಮಾಡಿಕೊಂಡು ಸೆಕೆಂಡ್ ಶೋಗೆ ಎದ್ದೇ ಬಿಡುವರು ಅವರು. ನೋಡುವುದೆಂದರೆ ಬರಿದೆ ನೋಡುವುದೆ? ಮರುದಿನ ಹೊಲಿಗೆ ಚಾವಡಿಯಲ್ಲಿ ಅದರ ಕತೆ, ವಿಮರ್ಶೆ ಎಲ್ಲ ಬಂದವರ ಜೊತೆ ಆಗಬೇಕು. ಅದು ಖಂಡಿತವಾಗಿಯೂ ನಡೆದದ್ದೇ ಅಂತ ನಾವು ಮಕ್ಕಳು ಅಂದುಕೊಳ್ಳಬೇಕು, ಹಾಗೆ. ಕುಂದಾಪುರ ಆಗ ಮದರಾಸು ಪ್ರಾಂತ್ಯಕ್ಕೆ ಸೇರಿತ್ತಾಗಿ ಟಾಕೀಸಿನಲ್ಲಿ ಬರೀ ತಮಿಳು ಸಿನೆಮಾ ಬರುತಿದ್ದೇ ಹೆಚ್ಚು. ಹಾಗೆ ಬಂದ ತಮಿಳು ಸಿನೆಮಾಗಳಲ್ಲೊಂದು ಮಿಸ್ಸಮ್ಮ (ಮಿಸ್ ಮೇರಿ). ಆರ್ ಗಣೇಶನ್ ಮತ್ತು ಸಾವಿತ್ರಿ ತಾರಾಗಣ. ಅದರ ತಮಿಳು ಮಾತ್ರವಲ್ಲ ತೆಲುಗು ಅವತರಣಿಕೆಯನ್ನೂ ಅವರು ಮಾತ್ರವಲ್ಲ ನಾವೆಲ್ಲರೂ ಹುಚ್ಚುಕಟ್ಟಿ ನೋಡಿ ಬಂದಿದ್ದೆವು. ಸುಮಾರು ದಿನ ಆ ಹೊಲಿಗೆಯ ಚಾವಡಿಯಲ್ಲಿ ಮಿಸ್ಸಮ್ಮನದೇ ಕತೆ. ಆರ್ ಗಣೇಶನ್ ಕಡೆಗೆ ಹಾಗೆ ಹೇಳಿದ, ಸಾವಿತ್ರಿ ಹೀಗೆ ಹೇಳಿದಳು ಅಂತ ಅವರೆಲ್ಲ ಮನೆ ಮಂದಿಯ ಹಾಗೆ. ಅವರ ಪಾತ್ರಗಳ ಹೆಸರಿನ ಹಂಗೇ ಇಲ್ಲದೆ. ‘ರಾವೋಯಿ ಚಂದಮಾಮಾ,...

Read More

ಜನಮತ

ಕೆಂಡಸಂಪಿಗೆ ಬರಹಗಳು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

kendasampige

ಜಗತ್ತಿನೆಲ್ಲೆಡೆ ಹಬ್ಬಿರುವ ಕನ್ನಡದ ಈ ಬೆಡಗು ಪ್ರತಿ ದಿನವೂ ಅರಳುತ್ತಾ, ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ, ಸಾಹಿತ್ಯ, ಸಿನೆಮಾ, ಜಾನಪದ, ರಾಜಕೀಯ - ಹೀಗೆ ಕನ್ನಡ ನಾಡಿನ ಇತಿಹಾಸವನ್ನೂ ಹಾಗೂ ದಿನ ನಿತ್ಯದ ಉಸಿರನ್ನೂ ನಿಮ್ಮ ಮುಂದೆ ಸೂಸುತ್ತಿದೆ. ಭಾಷೆ, ಸಂಸ್ಕೃತಿ ಇತ್ಯಾದಿಗಳ ಹೆಸರಿನಲ್ಲಿ ಭಾಷಾಂಧರೂ, ಧರ್ಮಾಂಧರೂ ಆಗಿಬಿಡುವ ಈ ಅಪಾಯದ ಹೊತ್ತಲ್ಲಿ ಕನ್ನಡ ನಾಡಿನ ನಿಜದ ಗುಣವನ್ನು, ಅದರ ಭಾಷಾ ವೈವಿಧ್ಯಗಳನ್ನು, ಪ್ರೀತಿ ಸಹನೆಗಳನ್ನು, ಜನ ಜೀವನದ ವೈವಿಧ್ಯಗಳನ್ನು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಜಗತ್ತಿನೆಲ್ಲೆಡೆಯ ಮಾನವ ಜೀವಿತದ ಅಪಾರ ಸಾಧ್ಯತೆಗಳನ್ನು ಕೆಂಡಸಂಪಿಗೆ ಪ್ರತಿದಿನವೂ ತನ್ನ ಬರಹಗಳ ಮೂಲಕ ಕನ್ನಡ ಓದುಗ ಲೋಕಕ್ಕೆ ಅರುಹುತ್ತಿದೆ. ಅಂತರ್ಜಾಲವೆಂಬ ಅರಿವಿನ ಸ್ಫೋಟದ ಆಕಾಶದಲ್ಲಿ ಲೇಖಕರು, ಓದುಗರು, ಸಂಪಾದಕರು, ವರದಿಗಾರರು ಎಂಬ ಅಂತರಗಳೇನೂ ಇಲ್ಲ. ಬರೆಯುವ ಒಂದು ಕ್ರಿಯೆಯಷ್ಟೇ ದೊಡ್ಡದು ಓದುವುದು. ಅದರಷ್ಟೇ ದೊಡ್ಡದು ಚಿತ್ರಗಳು.ಇವೆಲ್ಲಕ್ಕಿಂತ ದೊಡ್ಡದು ಇವೆಲ್ಲದರ ನಡುವೆ ನಡೆಯುವ ಪ್ರತಿಕ್ರಿಯೆಗಳು ಹಾಗೂ ಸಂವಾದ. ಕೆಂಡಸಂಪಿಗೆಯ ಬೆಳವಣಿಗೆಗೆ ಬರವಣಿಗೆಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಓದುಗರ ಪ್ರತಿಕ್ರಿಯೆಗಳು ಎಂಬುದು ಕೆಂಡಸಂಪಿಗೆಯ ನಂಬಿಕೆ. ಓದುಗರ ನಿಮ್ಮ ಇಷ್ಟಗಳನ್ನು ಮರೆತು ಕೆಂಡಸಂಪಿಗೆ ಮುಂದೆ ಹೋಗುವುದಿಲ್ಲ. ಆದರೆ ಹಾಗೆ ಹೋಗುವಾಗ ಅದರ ದಾರಿಯನ್ನೂ ಮರೆಯುವುದಿಲ್ಲ. ಓದುಗರ ಇಷ್ಟಗಳನ್ನು ಗೌರವಿಸುವ ಜೊತೆ ಜೊತೆಯಲ್ಲೇ ನಮ್ಮ ಉದ್ದೇಶಗಳನ್ನೂ ಮರೆಯದ ಹಾಗೆ ಮುಂದೆ ಹೋಗುತ್ತೇವೆ. ಕೆಂಡಸಂಪಿಗೆಯ ಉದ್ದೇಶ ಕನ್ನಡದ ಜೀವಂತ ಸಂಸ್ಕೃತಿಯನ್ನು ಅದರ ಎಲ್ಲ ಪರಿಮಳಗಳ ಜೊತೆಗೆ ಓದುಗರ ಮುಂದೆ ತೆರೆದಿಡುವುದು.
kendasampige
kendasampige18 hours ago
ದಾರಿ ತಪ್ಪಿದ ಕನಸು: ಎಂ.ಜಿ. ಶುಭಮಂಗಳ ಅನುವಾದಿಸಿದ ವೇಂಪಲ್ಲಿ ಷರೀಫ್ ಬರೆದ ತೆಲುಗು ಕತೆ

ಈತನೇ ಹೀಗಿದ್ದರೆ ಇನ್ನು ಈತನ ಮಗ ಸುಭಾನ್ ಹೇಗೆ ಇರುತ್ತಾನೋ ಊಹಿಸಬಹುದು. ಅವನಿಗೆ ಕೊಟ್ಟು ಮಾಡಿದರೆ ಆತ ತನ್ನನ್ನು ಗೋಷಾ ಇಡುತ್ತಾನೆಂಬ ನಂಬಿಕೆಯಿಲ್ಲ ಚಾಂದಿನಿಗೆ. ಇನ್ನು ತಾನು ಜೀವನಪರ್ಯಂತ ಕ್ರಿಸ್ತ ಶಿಲುಬೆ ಹೊತ್ತಂತೆ ನೀರು ಹೊರುತ್ತಿರಬೇಕು. ಅದಕ್ಕೆ ಚಾಂದಿನಿ ಬೆದರಿಹೋದಳು. ಅವಕಾಶ ಸಿಕ್ಕಾಗಲೆಲ್ಲ ತಾಯಿಗೆ ಮತ್ತೆ ಮತ್ತೆ ‘ಗೋಷಾ’ ಮಾತು ನೆನಪಿಗೆ ಮಾಡಲಾರಂಭಿಸಿದಳು. ತಾನು ಮಾತ್ರ ಗೋಷಾ ವಿಷಯದಲ್ಲಿ ರಾಜಿಯಾಗುವುದಿಲ್ಲ ಎಂದು ಎಚ್ಚರಿಸಿದಳು. ತಾಯಿಯಾಗಿ ತನಗೆ ನೀಡಿದ ಮಾತು ತಪ್ಪಬಾರದೆಂದು ಅಂಗಲಾಚಿದಳು. ಆದರೂ ಮಾಬುನ್ನಿ ಅವನ್ನೆಲ್ಲ ಚಿಕ್ಕಹುಡುಗಿಯ ಚೇಷ್ಟೆಗಳೆಂದುಕೊಂಡಳು. ಹೆಚ್ಚಾಗಿ ತಲೆಕೆಡಿಸಿಕೊಳ್ಳಲಿಲ್ಲ.
ಎಂ.ಜಿ. ಶುಭಮಂಗಳ ಅನುವಾದಿಸಿದ ವೇಂಪಲ್ಲಿ ಷರೀಫ್ ಬರೆದ ತೆಲುಗು ಕತೆ

https://bit.ly/2UT6kKQ
kendasampige
kendasampige2 days ago
ಎಂದು ಸರಿಯಾಗುವುದೋ ನಾಲ್ಕನೇ ಆಯಾಮದ ಡೊಂಕಿನ ಕಾಲು: ವೈಶಾಲಿ ಅಂಕಣ
ಮಾಧ್ಯಮದ ತಪ್ಪಿನಿಂದಾಗಿ ಅಲ್ಲೋಲಕಲ್ಲೋಲವಾಗಿಬಿಡುವ ಜಗತ್ತಿನ ಜವಾಬ್ದಾರಿಯ ಅರಿವು ನಮ್ಮ ಮಾಧ್ಯಮಗಳಿಗೆ ಇದ್ದಿದ್ದು ಕಮ್ಮಿಯೇ. ಸಣ್ಣ ಅಡುಗೆಯ ಸುಳ್ಳನ್ನೇ ಜಾಗತಿಕವಾಗಿ ಪಸರಿಸಿಬಿಡುವ ನಾವು ಇಂದು ಈ ಸೋಷಿಯಲ್ ಮೀಡೀಯಾ ಜಗತ್ತಲ್ಲಿ ಬೆರಳಂಚಲ್ಲಿ ಮಾಹಿತಿ ಸಿಗುವಾಗ ಬಿಡುವೆವೆ? ಏನೆಲ್ಲಾ ಸುಳ್ಳು ಸುದ್ದಿ ನಿತ್ಯ ವಾಟ್ಸಾಪಿನಲ್ಲಿ ಬರುತ್ತದೆ. ಇಂಥವನ್ನು ಫಾರ್ವರ್ಡ್ ಕೂಡ ಮಾಡುತ್ತಾರಲ್ಲ ಜನ ಎಂದು ಒಮ್ಮೊಮ್ಮೆ ಕಿರಿಕಿರಿಯಾಗುತ್ತದೆ. ಅದರಲ್ಲೂ ವಾಟ್ಸಾಪಿನಲ್ಲಿ ಆರೋಗ್ಯ, ವೈದ್ಯಕೀಯ, ಆಹಾರದ ಬಗ್ಗೆ ಬರುವಷ್ಟು ಸುಳ್ಳು ಮಾಹಿತಿ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲವೇನೋ. ಯಾರಿಗೆ ಇದರಿಂದ ಏನು ಲಾಭವೋ?!
ವೈಶಾಲಿ ಹೆಗಡೆ ಬರೆಯುವ ಪಾಕ್ಷಿಕ ಅಂಕಣ.
Vaishali Hegde

https://bit.ly/2JILyNc
kendasampige
kendasampige2 days ago
“ವಾಸ್ತುಪುರುಷ್” ಮರಾಠಿ ಚಿತ್ರ ಪರಂಪರೆಯಲ್ಲಿ ಹೊಸಯುಗದ ಚಿತ್ರ

ವಾಸ್ತುಪುರುಷ್, ಸೌಂದರ್ಯಾತ್ಮಕ ಪ್ರಜ್ಞೆಯನ್ನು ರೂಢಿಸಿಕೊಳ್ಳುತ್ತಾ ತಾತ್ವಿಕ ಕಾಳಜಿಯನ್ನು ಹೊಂದಿದೆ. ಈ ಸಿನೆಮಾವು ವ್ಯಕ್ತಿಗಳು, ಸಮುದಾಯಗಳ, ಆಧುನಿಕ ಭಾರತದ ಶೋಧನೆಗಳ, ಆಕಾಂಕ್ಷೆಗಳ, ನಿರಾಸೆಗಳ ಮತ್ತು ಆತ್ಮಾವಲೋಕನದ ಪಯಾಣಗಳ ಕುರಿತಾದ ಮಹೋನ್ನತ ಚಿಂತನೆ ಮತ್ತು ಯಾತ್ರೆ. ಸುಮಿತ್ರಾ ಮತ್ತು ಸುನಿಲ್ ನಿರ್ಮಿತ ಸಿನಿಮಾಗಳಲ್ಲೇ ಇದು ಬಹುಪದರಗಳ ಅರ್ಥ, ಅನುಭವ ಮತ್ತು ಶೋಧಗಳನ್ನು, ಕಾಳಜಿಗಳನ್ನು ಒಳಗೊಂಡಿರುವ ಸಿನಿಮಾ.
ಪ್ರದೀಪ್ ಕುಮಾರ್ ಶೆಟ್ಟಿ ಕೆಂಚನೂರು ಬರೆದ ಶುಕ್ರವಾರದ ಸಿನೆಮಾ ಪುಟ.
Pradeep Kumar Shetty Kenchanuru

https://bit.ly/2HNBm32

ನಮ್ಮ ಟ್ವಿಟ್ಟರ್

18 hours ago
ದಾರಿ ತಪ್ಪಿದ ಕನಸು: ಎಂ.ಜಿ. ಶುಭಮಂಗಳ ಅನುವಾದಿಸಿದ ವೇಂಪಲ್ಲಿ ಷರೀಫ್ ಬರೆದ ತೆಲುಗು ಕತೆ

ಈತನೇ ಹೀಗಿದ್ದರೆ ಇನ್ನು ಈತನ ಮಗ ಸುಭಾನ್ ಹೇಗೆ ಇರುತ್ತಾನೋ ಊಹಿಸಬಹುದು. ಅವನಿಗೆ ಕೊಟ್ಟು ಮಾಡಿದರೆ ಆತ ತನ್ನನ್ನು ಗೋಷಾ ಇಡುತ್ತಾನೆಂಬ ನಂಬಿಕೆಯಿಲ್ಲ ಚಾಂದಿನಿಗೆ. ಇನ್ನು ತಾನು ಜೀವನಪರ್ಯಂತ ಕ್ರಿಸ್ತ ಶಿಲುಬೆ... https://t.co/cPJYGQhJSm
2 days ago
ಎಂದು ಸರಿಯಾಗುವುದೋ ನಾಲ್ಕನೇ ಆಯಾಮದ ಡೊಂಕಿನ ಕಾಲು: ವೈಶಾಲಿ ಅಂಕಣ
ಮಾಧ್ಯಮದ ತಪ್ಪಿನಿಂದಾಗಿ ಅಲ್ಲೋಲಕಲ್ಲೋಲವಾಗಿಬಿಡುವ ಜಗತ್ತಿನ ಜವಾಬ್ದಾರಿಯ ಅರಿವು ನಮ್ಮ ಮಾಧ್ಯಮಗಳಿಗೆ ಇದ್ದಿದ್ದು ಕಮ್ಮಿಯೇ. ಸಣ್ಣ ಅಡುಗೆಯ ಸುಳ್ಳನ್ನೇ ಜಾಗತಿಕವಾಗಿ ಪಸರಿಸಿಬಿಡುವ ನಾವು ಇಂದು ಈ ಸೋಷಿಯಲ್ ಮೀಡೀಯಾ ಜಗತ್ತಲ್ಲಿ ಬೆರಳಂಚಲ್ಲಿ... https://t.co/C15CrgOiXB
2 days ago
“ವಾಸ್ತುಪುರುಷ್” ಮರಾಠಿ ಚಿತ್ರ ಪರಂಪರೆಯಲ್ಲಿ ಹೊಸಯುಗದ ಚಿತ್ರ

ವಾಸ್ತುಪುರುಷ್, ಸೌಂದರ್ಯಾತ್ಮಕ ಪ್ರಜ್ಞೆಯನ್ನು ರೂಢಿಸಿಕೊಳ್ಳುತ್ತಾ ತಾತ್ವಿಕ ಕಾಳಜಿಯನ್ನು ಹೊಂದಿದೆ. ಈ ಸಿನೆಮಾವು ವ್ಯಕ್ತಿಗಳು, ಸಮುದಾಯಗಳ, ಆಧುನಿಕ ಭಾರತದ ಶೋಧನೆಗಳ, ಆಕಾಂಕ್ಷೆಗಳ, ನಿರಾಸೆಗಳ ಮತ್ತು ಆತ್ಮಾವಲೋಕನದ ಪಯಾಣಗಳ ಕುರಿತಾದ... https://t.co/c5tGBASDbT

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ವಿದ್ಯಾಭೂಷಣರ “ನೆನಪೇ ಸಂಗೀತ”ದ ಕುರಿತು ಡಾ.ಜನಾರ್ದನ ಭಟ್ ಬರಹ

"ವಿದ್ಯಾಭೂಷಣರ ಆತ್ಮಕಥೆಯಲ್ಲಿ ಎದ್ದು ಕಾಣುವ ಒಂದಂಶವೆಂದರೆ ಅವರ ಪ್ರಾಮಾಣಿಕತೆ. ಸಂನ್ಯಾಸ ಒಲ್ಲದ ತಮ್ಮನ್ನು ಒತ್ತಾಯದಿಂದ ಪೀಠದಲ್ಲಿ ಕುಳ್ಳಿರಿಸಿದ ಕಾರಣ, ತಮ್ಮ ಮನಸ್ಸು ಸದಾ ಪೀಠತ್ಯಾಗವೆಂಬ ಪ್ರತಿಭಟನೆಗೆ ತುಡಿಯುತ್ತಿದ್ದುದನ್ನು...

Read More

ವಾರ್ತಾಪತ್ರಕ್ಕಾಗಿ