Advertisement
ಗುರುಪ್ರಸಾದ್‌ ಕುರ್ತಕೋಟಿ

ಗುರುಪ್ರಸಾದ್‌ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. "ಬೆಳೆಸಿರಿ" ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.  "ಕೇಶಕ್ಷಾಮ" (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.

ಕಾವ್ಯಮಾಲೆಯ ಕುಸುಮ: ಮಾಯಿಯ ಮೂರು ಮುಖಗಳು

“ಮಾತುಮಾತಿಗೂ ಈರ್ಷೆ, ಆಶೆ, ಕೆಚ್ಚು
ಕೊಟ್ಟ ಸಾಲಕು ಕೇಳ್ವ ಬಡ್ಡಿಯೋ ಹೆಚ್ಚು.
ಕುಳಿತವನ ಕಿವಿ ಹಿಂಡಿ ಮೇಲಕೆಚ್ಚರಿಸಿ
ಲೆಕ್ಕ ಕೇಳುವೆ ಪೈಗೆ ಪೈಯ ಸವಕರಿಸಿ.
‘ನುಗ್ಗಿ ನಡೆ’ ಯೆಂಬ ನಿನ್ನೀ ಪಾಂಚಜನ್ಯ
ಕೇಳಿ ನಡೆಯಲು ತ್ರಾಣ ಉಳಿದವನೆ ಧನ್ಯ !”- ಕನ್ನಡ ಕಾವ್ಯಮಾಲೆಯ ಕುಸುಮಗಳು ಸರಣಿಯಲ್ಲಿ ಶಂಕರ ಮೊಕಾಶಿ ಪುಣೆಕರ ಅವರ “ಮಾಯಿಯ ಮೂರು ಮುಖಗಳು” ಕವಿತೆ ನಿಮ್ಮ ಓದಿಗೆ

Read More

ಚಲಂ ಆತ್ಮಕತೆಯ ಒಂದಿಷ್ಟು ಪುಟಗಳು

ಬಂದಾಗಿನಿಂದ ಸತ್ಯವತಿ, ರತ್ನಮ್ಮ ನನ್ನನ್ನು ಹಿಡಿದುಕೊಂಡು ನೇತಾಡುತ್ತಿದ್ದಾರೆ. ಮದ್ರಾಸ್‍ನಲ್ಲಿರುವ ವೊಯ್ಯಿಯನ್ನು ನೆನಪಿಸಿಕೊಂಡ ಮಾತ್ರಕ್ಕೆ ನನ್ನ ಮನಸು ಪರವಶ ವಾಗುತ್ತಿತ್ತು. ನಾನು ದೈವವನ್ನು ಕಾಂಕ್ಷೆ ಮಾಡಿದಷ್ಟೂ ಕಾಲ, ಎಲ್ಲದಕ್ಕಿಂತ ಆತನೇ ವಾಂಚನಿಯ ನನಗೆ ಆತನೇ ಶರಣ್ಯ. ಆ ಈಶ್ವರನ ಕುರಿತು ಯಾವಾಗ ಅನುಮಾನಗಳು ಮೂಡಿದವೊ, ಅಂದಿನಿಂದ ಸ್ತ್ರೀಯೇ ನನ್ನ ದೈವವಾಯಿತು. ಆಕೆಯಲ್ಲಿಯೆ ನನ್ನ ಜೀವನಕ್ಕೆ ಸಾಫಲ್ಯ. ಅದಕ್ಕಿಂತ ಈ ಲೋಕದಲ್ಲಿ ಬಯಸುವಂತಹದು ಏನೂ ಇಲ್ಲ. ಇದಕ್ಕಿಂತ ಯಾವುದೂ ತೃಪ್ತಿ ಕೊಡುವುದಿಲ್ಲ.
ತೆಲುಗು ಬರಹಗಾರ “ಚಲಂ” ಅವರ ಆತ್ಮಕತೆಯನ್ನು ಕನ್ನಡದ ಕವಿ ಲಕ್ಕೂರು ಆನಂದ್‌ ಕನ್ನಡಕ್ಕೆ ತಂದಿದ್ದು ಅದರ ಕೆಲವು ಪುಟಗಳು ನಿಮ್ಮ ಓದಿಗೆ ಇಲ್ಲಿವೆ. 

Read More

ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

“ಹೆಕ್ಕಿ ಉಸಿರ ಕಡು ಕೋಟೆಯಾದರೊ
ದಾಟಲಿಲ್ಲವೇನೊ ಈ ತಾಳೆಗರಿಯನ್ನಾದರೊ

ಗಾಯಗೊಂಡಿಹನು ಚಂದಿರನೇನೊ
ಹರಿದೆಸೆದು ಕಡು ಬೆಳಕ ಈ ಕಿಟಕಿಯನ್ನಾದರೊ”- ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ