Advertisement

ಕೇಶವ ಕುಲಕರ್ಣಿ

ಕೇಶವ ಕುಲಕರ್ಣಿ

ಹುಟ್ಟಿ ಬೆಳೆದು ಓದಿದ್ದು ಬಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ ಮತ್ತು ಮೈಸೂರು. ವೃತ್ತಿಯಿಂದ ವೈದ್ಯ - ರೇಡಿಯಾಲಾಜಿ. ಸಾಹಿತ್ಯ, ಸಂಗೀತ ಮತ್ತು ಸಿನೆಮಾಗಳಲ್ಲಿ ಆಸಕ್ತಿ. ೨೦೦೪ರಿಂದ ಇಂಗ್ಲೆಂಡ್ ನಿವಾಸಿ, ವಾಸ ಇಂಗ್ಲೆಂಡಿನ ಬರ್ಮಿಂಗ್-ಹ್ಯಾಮ್ ನಗರ. ಕೆಲವು ಕತೆಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಇಂಗ್ಲೆಂಡ್ ಕನ್ನಡಿಗರ `ಅನಿವಾಸಿ` ಎಂಬ ಜಾಲತಾಣದಲ್ಲಿ ಸಕ್ರಿಯ.

ಕನ್ನಡವ ಪೊರೆದ ಚೇತನಗಳ ನೆನಪಿನಲ್ಲಿ…

‘ಸಿರಿಸಂಪಿಗೆ’ ನಾಟಕದಲ್ಲಿ ಬಹಳ ಹಾಡುಗಳಿವೆ. ಅಲ್ಲಿಯೇ ಹಾರ್ಮೋನಿಯಂ ಹಿಡಿದುಕೊಂಡು ರಾಗ ಹಾಕುತ್ತಿದ್ದರು ಬಸವಲಿಂಗಯ್ಯನವರು. ಅವರದು ಅದ್ಭುತ ಶಾರೀರ. ನಾಟಕದಲ್ಲಿ ಎಲ್ಲ ಹಾಡುಗಳನ್ನು ರಿಹರ್ಸಲ್ ಸಮಯದಲ್ಲೇ ನಮ್ಮ ಕಣ್ಣೆದುರೇ ರಾಗ ಹಾಕಿದರು, ಹಾಡಿಸಿದರು. ನಾವೆಲ್ಲ ಎಲ್ಲ ಹಾಡುಗಳನ್ನೂ ತಾಲೀಮು ಕೂಡ ಮಾಡಿದ್ದೆವು. ಒಂದು ಸಂಜೆ ಅದೇನೆನಿಸಿತೋ, ‘ಇದು ಯಾಕೋ ಸರಿ ಇಲ್ಲ. ನಾಟಕದ ಕಡೀ ಹಾಡು, ಭೈರವಿ ರಾಗದಾಗs ಇರಬೇಕು,’ ಎಂದು ಮತ್ತೆ ಪೇಟಿ ಹಿಡಕೊಂಡು ಭೈರವಿ ರಾಗದಲ್ಲಿ ನಾಟಕದ ಕೊನೆಯ ಹಾಡಿಗೆ ಇನ್ನೊಂದು ಧಾಟಿ ಹಚ್ಚಿದರು.
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’

Read More

ಆಲೋಚನೆಗಳನ್ನು ರೂಪಿಸಿದ ಪತ್ರಿಕೆಗಳೂ, ಕಾಡುವ ಸೋಂಕುಗಳ ವಿಚಾರವೂ..

‘ತರಂಗ’ವಾಗಲಿ, ‘ಸುಧಾ’ ಆಗಲಿ ಮನೆಗೆ ಬರುವುದು ಒಂದು ದಿನ ತಡವಾದರೂ ಚಡಪಡಿಕೆಯಾಗುತ್ತಿತ್ತು. ಪತ್ರಿಕೆ ಹಾಕುವ ಹುಡುಗ ಬರುವ ವೇಳೆಗೆ ಹದ್ದಿನಂತೆ ಕಾಯುತ್ತ ಕೂತಿರುತ್ತಿದ್ದೆವು. ಪತ್ರಿಕೆಯ ಹುಡುಗ ‘ಸುಧಾ’ ಅಥವಾ ‘ತರಂಗ’ವನ್ನು ಬಾಗಿಲಿನಿಂದ ಎಸೆಯುತ್ತಿದ್ದಂತೆ ಆ ಪತ್ರಿಕೆಯ ಮೇಲೆ ಮುಗಿಬೀಳುತ್ತಿದ್ದೆವು. ಎಷ್ಟೊಂದು ಸಲ ನಮ್ಮ (ನನ್ನ ಸಹೋದರರು) ನಡುವೆ ಮಿನಿಯುದ್ಧಗಳು ಮಹಾಯುದ್ಧಗಳು ಜರುಗಿವೆ. ಒಮ್ಮೆಯಂತೂ ಅದೇ ತಾನೆ ಮನೆಯ ಹೊಸ್ತಿಲ ಒಳಗೆ ಬಂದ ‘ತರಂಗ’ ಇಂಥದ್ದೇ ಯುದ್ಧದಲ್ಲಿ ಹರಿದು ಹೋದದ್ದಿದೆ!
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’

Read More

ತಮಿಳಿನ ಮೂರು ಆ್ಯಂಥಾಲಾಜಿ ಸಿನೆಮಾಗಳು

ಈ ಸಿನೆಮಾದ ಎಲ್ಲ ಕತೆಗಳೂ ನಗರದ ಕತೆಗಳು. ಇತ್ತೀಚೆಗೆ ಬರುತ್ತಿರುವ ಭಾರತದ ವಿವಿಧ ಭಾಷೆಗಳ ಹೊಸ ಅಲೆಯ ಸಿನೆಮಾಗಳು ಹಳ್ಳಿಗಳಲ್ಲಿ ನಡೆಯದೇ ನಗರಗಳಲ್ಲಿ ನಡೆಯುತ್ತಿರುವುದನ್ನು ಗಮನಿಸಿ. ಇದು ನಿರ್ದೇಶಕರು ನಗರಗಳಲ್ಲಿ ಹುಟ್ಟಿ ಬೆಳೆದುದರ ಪರಿಣಾಮವೂ ಹೌದು ಮತ್ತು ಭಾರತ ನಗರೀಕರಣವಾಗುತ್ತಿರುವ ಪರಿಣಾಮವೂ ಎಂದು ಅನಿಸುತ್ತದೆ. ಕತೆಗಳು ಮೇಲ್ಮಧ್ಯಮ ಅಥವಾ ಶ್ರೀಮಂತ ವರ್ಗಗಳ ಮನೆಗಳಲ್ಲಿ ನಡೆಯುತ್ತವೆ, ಓಟಿಟಿಯಲ್ಲಿ ನೋಡಿದ ತಮಿಳಿನ ಮೂರು ಆ್ಯಂಥಾಲಾಜಿ ಸಿನೆಮಾಗಳ ಬಗ್ಗೆ ‘ಇಂಗ್ಲೆಂಡ್‌ ಪತ್ರ’ ಬರೆದಿದ್ದಾರೆ ಕೇಶವ ಕುಲಕರ್ಣಿ

Read More

ದೇಹ ಸಂಕೀರ್ಣತೆಯ ಮುಗಿಯದ ಜಿಜ್ಞಾಸೆ

ನಮ್ಮ ದೇಹವನ್ನು ಅರ್ಥ ಮಾಡಿಕೊಳ್ಳಲು, ನಮ್ಮನ್ನು ಆರೋಗ್ಯವಂತರನ್ನಾಗಿ ಇಡಲು, ರೋಗದಿಂದ ಗುಣಮುಖವಾಗುವಂತೆ ಮಾಡಲು, ವಿಜ್ಞಾನಿಗಳು ಮತ್ತು ವೈದ್ಯರು ಸಂಶೋಧನೆಗಳನ್ನು ಮಾಡುತ್ತಲೇ ಇದ್ದಾರೆ. ಹೊಸ ತಂತ್ರಜ್ಞಾನಗಳನ್ನು, ಔಷಧಿಗಳನ್ನು, ಶಸ್ತ್ರಚಿಕಿತ್ಸೆಗಳನ್ನು ಅವಿಷ್ಕಾರ ಮಾಡುತ್ತಲೇ ಇದ್ದಾರೆ. ಇಷ್ಟೊಂದು ಸೌಲಭ್ಯಗಳು ಔಷಧಗಳು ಇದ್ದರೂ ಮನುಷ್ಯನ ದೇಹರಚನೆ, ಜೀವಕೋಶಗಳ ಕ್ರಿಯೆ, ಅಂಗಾಂಗಳ ವ್ಯವಸ್ಥೆಯ ನಡುವಿನ ಸಂಬಂಧಗಳ ವಿಪರೀತ ಸಂಕೀರ್ಣತೆಯನ್ನು….

Read More

ತಂದೆಯಂತೆ ಸಮಾಜಮುಖಿಯಾಗಿದ್ದ ಪುನೀತ್ ನೆನಪುಗಳು

ಪುನೀತ್ ಕನ್ನಡ ಸಿನೆಮಾಕ್ಕೆ ನಾಯಕನಾಗಿ ಬರುವಷ್ಟರಲ್ಲಿ ಶಿವರಾಜಕುಮಾರ್ ಆಗಲೇ ದೊಡ್ಡ ತಾರೆಯಾಗಿದ್ದರು ಮತ್ತು ರಾಘವೇಂದ್ರ ರಾಜಕುಮಾರ್ ಹಲವು ಸಿನೆಮಾ ಮಾಡಿ ತೆರೆಯಿಂದ ಮರೆಯಾಗಿದ್ದರು. ಬಾಲನಟನಾಗಿ ಕನ್ನಡಿಗರ ಮನೆಮಾತಾಗಿದ್ದ ಲೋಹಿತ್, ಪುನೀತ್ ಆಗಿ ತೆರೆಯ ಮೇಲೆ ಹೀರೋ ಆಗಿ ಬಂದು ಶಿವಣ್ಣನ ಹಾದಿ ಹಿಡಿಯುತ್ತಾರೋ ಇಲ್ಲವೋ ಎಂದು ಬಹಳ ಚರ್ಚೆ ನಡೆಯುತ್ತಿತ್ತು. ಪುನೀತ್ ಇಬ್ಬರ ಹಾದಿಯನ್ನೂ ತುಳಿಯದೇ ತಂದೆಯ ಹಾದಿ ಹಿಡಿದರು. ಹೀರೋ ವೈಭವೀಕರಣದ ಸಿನೆಮಾಗಳಿದ್ದರೂ ತಂದೆಯಂತೆ ಸಮಾಜ ಮುಖಿಯಾದ…

Read More

ಜನಮತ

ಕಥೆಯನ್ನು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

5 hours ago
https://t.co/BiAVa2XJhH ಗುರುದತ್ ಅಮೃತಾಪುರ ಬರೆಯುವ ‘ದೂರದ ಹಸಿರು’ ಸರಣಿಯ ಮೊದಲ ಬರಹ ನಿಮ್ಮ ಓದಿಗಾಗಿ.
5 hours ago
https://t.co/bYKoSxmmRK ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

’ಇಂಗ್ಲಿಷ್ ಸರ್ ಎಷ್ಟು ಹ್ಯಾಂಡ್‌ಸಮ್ ಆಗಿದಾರೆ ನೋಡೆ!’

ಎಸ್ತರ್ ಅನಂತಮೂರ್ತಿಯವರ ಆತ್ಮಕತೆ 'ನೆನಪು ಅನಂತ' ಕೃತಿಯಲ್ಲಿ ಎಸ್ತರ್ ಅವರು ತಮ್ಮ ಬದುಕಿನ  ಏಳುಬೀಳುಗಳನ್ನು ಬಹಳ ನಿರ್ಲಿಪ್ತವಾಗಿ ಬರೆದಿದ್ದಾರೆ. ಡಾ. ಪೃಥ್ವೀರಾಜ ಕವತ್ತಾರು ನಿರೂಪಣೆಯ ಪುಸ್ತಕದಲ್ಲಿ 'ತಾವು ಕೂಡ ...

Read More