Advertisement
ಎಸ್. ನಾಗಶ್ರೀ ಅಜಯ್

ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ಒಂಭತ್ತು ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು ಹಾಗೂ ನಿರೂಪಣೆ ಅವರ ಆಸಕ್ತಿಯ ಕ್ಷೇತ್ರಗಳು.

ಬಲಿಪ ಗಾನಮೀಮಾಂಸೆ

ಯಕ್ಷಗಾನ ಪದಗಳ ಛಂದೋವೈವಿಧ್ಯವನ್ನು ಕಂಡಾಗ ಮತ್ತು ಅದರಂತೆ ಹಾಡಿದಾಗ ವಾದಕನಲ್ಲಿ ಪೂರಕವಾದ ಮನೋಧರ್ಮ ಬೆಳೆಯುತ್ತದೆ.  ಬಲಿಪರ ಗಾನದಲ್ಲಿ ಇದನ್ನು ಕಾಣಬಹುದು. ಹಾಡುವ ತಾಳ ಒಂದೇ ಆದರೂ ಹಾಡಿನ ಆಕಾರ ತುಂಬಾ ವಿಭಿನ್ನವಾಗಿ ಇರುತ್ತದೆ. ಹಾಡು ಕಟ್ಟಲ್ಪಟ್ಟ ಛಂದಸ್ಸು ಮತ್ತು ಸಾಹಿತ್ಯದಿಂದಾಗಿ ಈ ರೀತಿಯ ವ್ಯತ್ಯಾಸವನ್ನು ಹಾಡಿನಲ್ಲಿ ಬಲಿಪರು ಕಾಣಿಸುತ್ತಾರೆ. ಬಲಿಪರು ಬದಲಾವಣೆಯ ಪರ್ವದಲ್ಲಿ ತನ್ನತನವನ್ನ ಪರಂಪರೆಯನ್ನು ಕಾಪಿಟ್ಟುಕೊಂಡ ಧೀಮಂತ ವ್ಯಕ್ತಿಮಾತ್ರವಲ್ಲ ಸಾಂಸ್ಕೃತಿಕವಾಗಿ ಇವರ ಈ ಕೊಡುಗೆ ಬಲು ಮೌಲಿಕವಾದದ್ದು.  ‘ಬಲಿಪಮಾರ್ಗ’ ಸರಣಿಯಲ್ಲಿ ಕೃಷ್ಣ ಪ್ರಕಾಶ್‍ ಉಳಿತ್ತಾಯ ಲೇಖನ

Read More

ಬಲಿಪರ ಏರುಪದ್ಯಗಳ ಅನನ್ಯತೆ

ಯಕ್ಷಗಾನ ಕಲೆಯ ಹೊಸ ಪಲ್ಲವ ಯಕ್ಷಗಾಯನ. ಕೇವಲ ಗಾಯನಮಾತ್ರವೇ ಇರುವ ಯಕ್ಷಗಾನದ ಹೊಸ ಸಾಧ್ಯತೆ. ಇದನ್ನು ಯಕ್ಷಗಾನ ಭಾಗವತಿಕೆಯ ಅನನ್ಯತೆಯನ್ನು ತೋರಿಸಲು ಯಕ್ಷಗಾಯನವೇ ಮೊದಲಾದ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳಬಹುದು. ಇದರಿಂದ ಭಾಗವತಿಕೆಯ ಶಕ್ತಿ ಮತ್ತು ಯಕ್ಷಗಾನದ ಹಾಡುಗಾರಿಕೆಯಲ್ಲಿನ ವಿಭಿನ್ನತೆಯನ್ನು ಚೆನ್ನಾಗಿ ತೋರಿಸಬಹುದೆಂಬುದು ಎನ್ನುವ ಅಭಿಮತ ಕಿರಿಯ ಬಲಿಪರದ್ದು. ಬಲಿಪಮಾರ್ಗ ಸರಣಿಯಲ್ಲಿ ಅವರ ಗಾಯನ ಶೈಲಿಯ ವಿಶ್ಲೇಷಣೆಯನ್ನು ಮಾಡಿದ್ದಾರೆ ಕೃಷ್ಣ ಪ್ರಕಾಶ್ ಉಳಿತ್ತಾಯ

Read More

ಮಹನೀಯ ಮದ್ಲೆಗಾರರ ಪ್ರಭಾವಲಯ

ಯಕ್ಷಗಾನ ಭಾಗವತಿಕೆಯಲ್ಲಿ ಮದ್ದಳೆಯದ್ದು ಪ್ರಧಾನ ಪಾತ್ರ. ಬಲಿಪ ನಾರಾಯಣ ಭಾಗವತರಿಗೆ ಭಾಗವತಿಕೆ ಕಲಿಯುವುದಕ್ಕೆ ನೆರವಾದ ಮದ್ದಳೆಗಾರರು ಪ್ರಮುಖರೇ.  ಮದ್ದಳೆಗಾರರಾದ  ದಿವಂಗತ ಕುದುರೆಕೋಡ್ಲು ರಾಮ ಭಟ್ಟರು ಮತ್ತು ದಿವಂಗತ ಕೆಮ್ಮಣ್ಣು ನಾರ್ಣಪ್ಪಯ್ಯ ಅವರ ಪ್ರೋತ್ಸಾಹ, ತಿದ್ದುವಿಕೆಯು ಬಲಿಪರ ಭಾಗವತಿಕೆ ಶೈಲಿಯ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಪ್ರಸ್ತುತ ಸರಣಿಯಲ್ಲಿ ಆ ಬಗ್ಗೆ ಬಲಿಪರು ಹೇಳಿಕೊಂಡಿದ್ದಾರೆ. ‘ಬಲಿಪ ಮಾರ್ಗ’ದಲ್ಲಿ ಕೃಷ್ಣ ಪ್ರಕಾಶ್ ಉಳಿತ್ತಾಯ ಬರಹ  ಇಲ್ಲಿದೆ. 

Read More

ಅಗರಿ ಶೈಲಿ, ಬಲಿಪ ಶೈಲಿಗಳ ಕುರಿತು..

ಅಗರಿ ಮತ್ತು ಬಲಿಪ ಶೈಲಿಗಳು ಯಕ್ಷಗಾನದ ಅತ್ಯಂತ ಪ್ರಮುಖ ಹಾಡಿಕೆಯ ಘರಾನಾ ಎಂದು ಹೇಳಬಹುದು. ಈಗಲೂ ಇದು ಪ್ರಸ್ತುತದಲ್ಲಿದ್ದು ಯಕ್ಷಗಾನದ ಸಾಂಪ್ರದಾಯಿಕ ಹಾಡಿಕೆಗೆ ಕಲಾವಿದರು ಕೊಡುತ್ತಿರುವ ಗೌರವದ ಪ್ರತೀಕ ಎಂದೇ ಹೇಳಬಹುದು. ಈ ಎರಡು ಶೈಲಿಯ ಹಾಡಿಕೆಯಲ್ಲಿ ಹೊರನೋಟಕ್ಕೆ ಭೇದ ಇದ್ದರೂ ಅದರ ಅಂತರ್ಯದಲ್ಲಿ ಮೂಲಭೂತ ಅಂಶಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ.
ಕೃಷ್ಣ ಪ್ರಕಾಶ್ ಉಳಿತ್ತಾಯ ಬರೆಯುವ ಬಲಿಪ ಮಾರ್ಗ ಸರಣಿಯಲ್ಲಿ ಹೊಸ ಬರಹ

Read More

ಹಲವು ಮೇಳಗಳಲ್ಲಿ ಭಾಗವತರಾಗಿ ಬಲಿಪರು

ಕಲ್ಲಾಡಿ ಕೊರಗ ಶೆಟ್ಟರ ಯಜಮಾನಿಕೆಯ ಕುಂಡಾವು ಮೇಳದಲ್ಲಿ ಬಲಿಪ ನಾರಾಯಣ ಭಾಗವತರು ನಾಲ್ಕು ವರುಷಗಳ ತಿರುಗಾಟವನ್ನು ಮಾಡಿದರು. ಮುಂದೆ ತಮ್ಮ ಮೇಳ ತಿರುಗಾಟದ ಕೊನೆಯವರೆಗೂ ಶ್ರೀ ಕಟೀಲು ಮೇಳದಲ್ಲೇ ಇದ್ದರು.  ಹಣಕಾಸಿನ ಮುಗ್ಗಟ್ಟು, ಮೇಳ ನಡೆಸಲು ಎದುರಾದ ಕಷ್ಟಗಳನ್ನು ದಾಟುತ್ತ ಬದುಕು ಸಾಗಿದರೂ, ಭಾಗವತಿಕೆಯೆಂಬ ಪ್ರೀತಿ ಅವರಿಂದ ದೂರಾಗಲಿಲ್ಲ. ಕೃಷ್ಣ ಪ್ರಕಾಶ ಉಳಿತ್ತಾಯ ಬರೆಯುವ ‘ಬಲಿಪ ಮಾರ್ಗ’ ಸರಣಿಯಲ್ಲಿ ಹೊಸ ಬರಹ. 

Read More

ಜನಮತ

ಅಗಲಿದ ಕೆ.ವಿ. ತಿರುಮಲೇಶರು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ಎಸ್. ನಾಗಶ್ರೀ ಅಜಯ್‌ ಬರೆಯುವ “ಲೋಕ ಏಕಾಂತ” ಅಂಕಣ

https://t.co/rpDaPzac8B
ಮಾಲತಿ ಶಶಿಧರ್ ಬರೆದ ಯುಗಾದಿ ಕವಿತೆ

https://t.co/n4GaK3gF0Q
ಪ್ರಕೃತಿ ಜೊತೆಗೆ ನಂಟಿರುವ ಯುಗಾದಿ ಹಬ್ಬ ಇಂದಿನ ದಿನಗಳಲ್ಲಿ ಹೇಗೆ ಆಚರಿಸಲ್ಪಡುತ್ತಿದೆ ಎನ್ನುವುದರ ಕುರಿತು ಬರೆದಿದ್ದಾರೆ ನಾಗರೇಖಾ ಗಾಂವಕರ

https://t.co/909ZgYhUEC

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಸಿಕಾಡ- ಕೀಟಲೋಕದ ಸಂಗೀತಸಾಮ್ರಾಟ

ಸಾಮಾನ್ಯವಾಗಿ ಹಾಡುವುದು ಗಂಡು ಸಿಕಾಡಗಳೇ; ಇವು ಹಲವಾರು ಹೆಣ್ಣು ಸಿಕಾಡಗಳ ಮಧ್ಯೆ ಒಂದು ಹೆಣ್ಣು ಸಿಕಾಡವನ್ನು ಆರಿಸಿ, ಅದಕ್ಕೆ ಸಂಗಾತಿಯಾಗೆಂದು ಆಹ್ವಾನವೀಯುವಾಗ ಹಾಡುವ ಹಾಡೇ ಬೇರೆ; ಆ...

Read More

ಬರಹ ಭಂಡಾರ