Advertisement

ಕೃತಿ ಆರ್ ಪುರಪ್ಪೇಮನೆ

ಕೃತಿ ಆರ್ ಪುರಪ್ಪೇಮನೆ

ಕೃತಿ ಹೊಸನಗರ ತಾಲ್ಲೂಕಿನ ಪುರಪ್ಪೇಮನೆ ಗ್ರಾಮದವರು. ಕೃಷಿಕರು. ಬಿಡುವಿನಲ್ಲಿ ಮಹಿಳಾ ತಾಳಮದ್ದಲೆ ತಂಡ, ಭಾಗವತಿಕೆ, ಬರವಣಿಗೆ ಹಾಗೂ ಅನುವಾದದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

ನದಿಯಂತೆ ಸಾಗುವ ಕತೆಗಳಿಗೆ ಮೂಲದ ಹಂಗೇಕೆ

ಎಲ್ಲವನ್ನೂ ಒಂದು ವ್ಯಾಖ್ಯಾನಕ್ಕೆ ಬಗ್ಗಿಸುವುದು, ನಮ್ಮ ಅನುಭವಕ್ಕೆಲ್ಲ ಹೆಸರಿಡುವುದು, ಖಚಿತತೆಗೆ ತಹತಹಿಸುವುದು ಅಥವಾ ಎಲ್ಲದಕ್ಕೂ ಸ್ಥಿರವಾಗಿರುವ ಕಠಿಣವಾಗಿರುವ ಉತ್ತರವೇ ಬೇಕೆಂದು ನಮಗೆ ಅನ್ನಿಸುವುದು, ಬದಲಾಗುತ್ತಿರುವ ಸಮಾಜದ ಅತಂತ್ರತೆಯನ್ನು ನಿಭಾಯಿಸುವ ತಂತ್ರಗಾರಿಕೆ ಇರಬಹುದು. ಹಿಂದಿನದನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು ನಮ್ಮ ಅಧಿಕಾರ, ಸ್ಥಾನವನ್ನು ಉಳಿಸಿಕೊಳ್ಳುವ ಬಯಕೆಯಾಗಿಯೂ ಬಂದಿರಬಹುದು.

Read More

ಯಕ್ಷಗಾನವೂ ಜಾನಪದವೂ ಶಾಸ್ತ್ರೀಯವೂ

ಮೀಮಾಂಸೆಯ ಕ್ಷೇತ್ರ ‘ಶಾಸ್ತ್ರೀಯ’ ಕಲೆಗಳ ಸಾಮಾಜಿಕತೆಯನ್ನೂ ತೋರಿಸಿದೆ. ವೈಯಕ್ತಿಕತೆಯ ಹುಸಿಕಲ್ಪನೆಯನ್ನು ಬಲಪಡಿಸುವುದು, ರಾಷ್ಟ್ರವನ್ನು ಪ್ರತಿನಿಧಿಸುವುದು ಮತ್ತು ಇತರೆ ಕಲೆಗಳಿಂದ ಬೇರ್ಪಡಿಸಿಕೊಂಡು ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವುದು ಇವೆಲ್ಲವೂ ಅದರ ಕೆಲಸವೇ. ‘ಜಾನಪದ’ ಕಲೆಯನ್ನು ಅದರ ಸಾಮಾಜಿಕ ಉಪಯುಕ್ತತೆಗಾಗಿ ನೋಡುವುದು, ‘ಶಾಸ್ತ್ರೀಯ’ವನ್ನು ‘ಶುದ್ಧ ಸೌಂದರ್ಯದ’ ಪರಿಕಲ್ಪನೆಯಲ್ಲಿ ಮಾತ್ರ ನೋಡುವುದು ಕಲಾ ಅಧ್ಯಯನದ ಒಂದು ಮಿತಿಯೇ ಹೌದು. -ಕೃತಿ ಆರ್ ಪುರಪ್ಪೇಮನೆ ಬರಹ

Read More

ಪ್ರದರ್ಶನ ಕಲೆಗಳಲ್ಲಿ ಸ್ತ್ರೀಯರ ಸ್ಥಾನ

ಯುಗಧರ್ಮದ ಮನಸ್ಥಿತಿಯು ಆ ಸಮಾಜ ಸೃಷ್ಟಿಸಿದ ಘಟಕಗಳಲ್ಲಿ ಅಂತರ್ಗತವಾಗಿಯೆ ಇರುತ್ತದೆ. ಉದಾಹರಣೆಯಾಗಿ ಯಕ್ಷಗಾನವನ್ನೆ ತೆಗೆದುಕೊಂಡರೆ, ಅದರ ಎಲ್ಲ ಅಂಗಗಳಲ್ಲಿ, ರೂಪ-ಸ್ವರೂಪ, ಹಿಮ್ಮೇಳ-ಮುಮ್ಮೇಳ, ಮೌಲ್ಯ-ಔಚಿತ್ಯ, ರಸ-ರುಚಿ, ಪಠ್ಯ-ಸಂಕಲನ, ಅಥವಾ ತಾಳಮದ್ದಲೆಯಲ್ಲಿ ಬೆಳೆದು ಬಂದ ವಾಗ್ವಾದದ, ತರ್ಕದ ಪರಂಪರೆ ಇವೆಲ್ಲದರಲ್ಲೂ ನಾವು ಈ ಆಲೋಚನೆಯ ಒಂದು ಎಳೆಯು ನಿರಂತರವಾಗಿರುವುದನ್ನು ಕಾಣಬಹುದು.
ಯಕ್ಷಗಾನ ಕ್ಷೇತ್ರದಲ್ಲಿ ಮಹಿಳೆಯ ಸ್ಥಾನದ ಕುರಿತು ‘ಯಕ್ಷಾರ್ಥ ಚಿಂತಾಮಣಿ’ಯಲ್ಲಿ ಕೃತಿ ಪುರಪ್ಪೇಮನೆ ಲೇಖನ

Read More

ಯಾವುದೇ ರಂಗಪಠ್ಯ ಸಂಪ್ರದಾಯವಾಗುವುದು ಹೇಗೆ?

ಇತರ ಹಲವು ಪ್ರದರ್ಶನ ಕಲೆಗಳಂತೆ, ನಡೆ ಅಂದರೆ ನಿರ್ದಿಷ್ಟ ದಿನದ ‘ರಂಗಪಠ್ಯ’ ಸೃಷ್ಟಿಯಾಗುವುದು ಅದನ್ನು ಅಭ್ಯಸಿಸುವವರಿಂದ, ಅದರಲ್ಲಿ ತೊಡಗಿಸಿಕೊಂಡವರಿಂದ ಮತ್ತು ಅದರ ನಿರಂತರ ಅನುಕರಣೆಯಿಂದ ಸಂಪ್ರದಾಯವಾಗುತ್ತದೆ ಎಂದು ಇದು ಸೂಚಿಸುತ್ತದೆ. ತೊಡಗಿಕೊಂಡವರಲ್ಲಿ ಪ್ರೇಕ್ಷಕರೂ ಮುಖ್ಯವಾಗಿ ಸೇರುತ್ತಾರೆ. ಒಂದು ಕ್ರಿಯೆ ಕಲೆಯಾಗುವುದಕ್ಕೆ…”

Read More

ಕೃತಿ ಆರ್ ಪುರಪ್ಪೇಮನೆ ಅಂಕಣ “ಯಕ್ಷಾರ್ಥ ಚಿಂತಾಮಣಿ” ಇಂದಿನಿಂದ…

‘ಮಧ್ಯಮವರ್ಗದ ವಿದ್ಯಾವಂತ ಮತ್ತು ನಗರಕ್ಕೆ ಮುಖ ಮಾಡಿ ನಿಂತ ಸಮುದಾಯ ಯಕ್ಷಗಾನಕ್ಕೆ ತೊಡಗಿಸಿಕೊಂಡಂತೆಲ್ಲಾ ಯಕ್ಷಗಾನದ ರಂಜನೆಯ ಸ್ವರೂಪ ಬೇರೆಯಾಗುತ್ತಾ ಬಂದಿದೆ. ಆಟವು ಕಲೆಯಾಗಿದ್ದು ಹೀಗೆಯೇ. ಅತಿಯಾದ ಹಾಸ್ಯವನ್ನು ಇಷ್ಟಪಡದ, ಪುರಾಣಕತೆಯಿಂದ ಒಂದೂ ಚೂರೂ ಆಚೆ ಈಚೆ ಹೋಗದಂತೆ ‘ಹಿತಮಿತ’ವಾದ ಮಾತು, ಪಾತ್ರದ ‘ಔಚಿತ್ಯ ಮೀರದ’ ಕುಣಿತ.’ ಮತ್ತು ಪಾತ್ರಗಳ ‘ಸರಿಯಾದ ಭಾವ’ವನ್ನು ಹೊರತರುವಂತಹ ಭಾಗವತಿಕೆ..

Read More

ಜನಮತ

ಸಿನಿಮಾ ಕವಿ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

9 hours ago
ಬೋರ್ಡಿಂಗ್ ನಲ್ಲಿ ಸರ್ವಧರ್ಮದ ಸೌಹಾರ್ದ ಗೀತ
ರಂಜಾನ್ ದರ್ಗಾ ಬರೆಯುವ 'ನೆನಪಾದಾಗಲೆಲ್ಲ' ಸರಣಿ
https://t.co/TAH02obMRH
9 hours ago
ಸುನೀಲ್‌ ಕುಮಾರ್‌ ಎಂ. ತೆಗೆದ ಈ ದಿನದ ಫೋಟೋ
https://t.co/DbQCcMAZpO
12 hours ago
ಸೂರ್ಯನ ಕೃಪೆ ಧರಿಸುವ ಕ್ಲಾರಾ

https://t.co/2MfY2kuwHR

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

‘ದೇವ್ರು’ ಪದ್ಮನಾಭ ಭಟ್‌ ಹೊಸ ಕಾದಂಬರಿಯ ಕೆಲವು ಪುಟಗಳು

ಸುಬ್ಬಿ ಈಗ ಇದ್ದಿದ್ದರೆ ಏನು ಹೇಳುತ್ತಿದ್ದಳು? ಈ ಪುಟ್ಟ ಲಲಿತೆಯನ್ನು ಆ ದೇವ್ರುವಿನ ಎದುರಿಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದರೆ ಏನನ್ನಬಹುದು? ಹುಟ್ಟಾ ನೋಡೇ ಇರದ ಮನುಷ್ಯನನ್ನು ಅಣ್ಣ...

Read More