ಎಂ.ಎಸ್. ಪ್ರಕಾಶ್ ಬಾಬು ಬರೆದ ಈ ದಿನದ ಕವಿತೆ
“ಎಡೆಬಿಡದ ನೂಕುನುಗ್ಗಲು
ಮುಗಿಬಿದ್ದ ಜನ
ಸಿಕ್ಕಿದ್ದನ್ನು ಬಾಚಿಕೊಳ್ಳುತ್ತಿದ್ದರು
ಕಾಲಿಗೆ ಸಿಕ್ಕ ಅನ್ನ
ಕೈಗೆ ಮೆತ್ತಿದ ದೂಳು
ಉದರಕ್ಕಿಳಿಸುವ ಆತುರ
ಗಂಟಲಲಿ ಸಿಕ್ಕ ಕಬಾಬು
ಬಿಕ್ಕಿದರೆ ನೀರೂ ದಕ್ಕಲಿಲ್ಲ.”- ಎಂ.ಎಸ್. ಪ್ರಕಾಶ್ ಬಾಬು ಬರೆದ ಈ ದಿನದ ಕವಿತೆ