Advertisement
ದಯಾನಂದ ಸಾಲ್ಯಾನ್

ಮುಂಬೈ ನಿವಾಸಿಯಾಗಿರುವ ದಯಾನಂದ ಸಾಲ್ಯಾನ್ ಅವರು ಕವಿಯಾಗಿ, ನಾಟಕಕಾರರಾಗಿ ಗುರುತಿಸಿಕೊಂಡಿದ್ದಾರೆ. 'ಜಾತ್ರೆಯ ಮರುದಿನ' ಕವನ ಸಂಕಲನ, ಪೊಸ ಬೊಲ್ಪು ತುಳು ಕವಿತೆಗಳು, ' ಒಸರ್' ತುಳು ನಾಟಕ, ಪಾಟಕ್ ಮತ್ತು ಇತರ ಕತೆಗಳು, ಇವರ ಪ್ರಕಟಿತ ಕೃತಿಗಳು. 'ಸುರಭಿ' ಸುರೇಶ್ ಭಂಡಾರಿಯವರ ಅಭಿನಂದನ ಗ್ರಂಥ ಸಂಪಾದನೆ ಮಾಡಿದ್ದು ಇವರ ಕವಿತೆಗಳಿಗೆ ಸಂಕ್ರಮಣ ಬಹುಮಾನ ಪಡೆದಿದ್ದಾರೆ.

ಉಳಿದದ್ದೀಗ ನೆನಪುಗಳಷ್ಟೇ….

ಅಡಿಗರ ರಾಮನವಮಿಯ ದಿವಸ ಪದ್ಯದ ಬಗ್ಗೆ ಅವರೊಡನೆ ಚರ್ಚಿಸುತ್ತಿದ್ದ ದಿನಗಳು ನನ್ನ ಬದುಕಿನ ಸುವರ್ಣ ಯುಗ. ಅವ್ರಿಗೆ ತಂತ್ರದ ಬಗ್ಗೆ ವಿಶೇಷ ಆಸಕ್ತಿ ಎಂದಾಗ ಒಪ್ಪಿಕೊಂಡಿದ್ದರು. ಅಡಿಗರ ಕುರಿತ ದೂರುಗಳನ್ನೂ, ಮೆಚ್ಚುಗೆಯನ್ನೂ ಮುಕ್ತವಾಗಿ ಹೇಳುತ್ತಿದ್ದರು. ನೀವೇಕೆ ನಿಮ್ಮ ಬರೆಯುವ ರೀತಿಯನ್ನು ಪದೇ ಪದೇ ಬದಲಾಯಿಸಿದಿರಿ.
ತಮ್ಮ ಗ್ರಹಿಕೆಗೆ ಸಿಕ್ಕ ಕೆ.ವಿ. ತಿರುಮಲೇಶರ ಕುರಿತು ಬರೆದಿದ್ದಾರೆ ಮಾಲಿನಿ ಗುರುಪ್ರಸನ್ನ

Read More

ಸಂಕಟ, ಸಂಘರ್ಷದ ಕಥೆ ಹೆಣೆಯುವ ಗೈರಸಮಜೂತಿ

 ಒಂದು ಕಾಲದ ನಮ್ಮ ಹಿಂದಿ ಕವಿಗಳಾದ ಬಚ್ಚನ್, ನಿರಾಲಾ, ಸುಮಿತ್ರಾನಂದನ್ ಪಂತರಂತಹ ಲೇಖಕರು ರೂಪಿಸಿಕೊಂಡಿದ್ದ ಆಜ್ಞೆಯತಾವಾದದ ಇನ್ನೊಂದು ಉದಾರೀಕೃತ ತಾತ್ವಿಕ ಸುಕುಮಾರ ರೂಪವೇ ಈ ಕಾದಂಬರಿಯ ಅಡಿಪಾಯದಲ್ಲೂ ಇದೆ ಎನ್ನಿಸುತ್ತದೆ. ಹಾಗೆಂದ ಮಾತ್ರಕ್ಕೆ ಈ ಬಗೆಯಲ್ಲಿ ರಸರಮ್ಯಲೋಕವೊಂದನ್ನು ಕಟ್ಟಿಕೊಡುವ ಕಥನಗಳು ಇಲ್ಲಿವೆ.  ರಾಘವೇಂದ್ರ ಪಾಟೀಲರ “ಗೈರ ಸಮಜೂತಿ” ಕಾದಂಬರಿಯ ಕುರಿತು ಮಾಲಿನಿ ಗುರುಪ್ರಸನ್ನ ಬರಹ

Read More

‘ಶಿಲಾಲತೆ’ಯಲ್ಲಿ ಪದುಮಳ ಬಳೆಗಳ ದನಿಯಿಲ್ಲವಲ್ಲ

ಕೆ.ಎಸ್. ನರಸಿಂಹ ಸ್ವಾಮಿ ಅವರು ಪ್ರೇಮಕವಿಯಾಗಿ ಸುಪ್ರಸಿದ್ಧರಾದರೂ ಅವರು ಬದುಕಿನ ಜಿಜ್ಞಾಸೆಗಳ ಬಗ್ಗೆ, ಅಧ್ಯಾತ್ಮದ ಕುರಿತು, ಇತರ ಸಂದಿಗ್ಧಗಳ ಕುರಿತು ಎಷ್ಟೊಂದು ಕವಿತೆಗಳನ್ನು ಬರೆದಿದ್ದಾರೆ. ಅವರ ಕಾವ್ಯ ಸರಳವಾಗಿತ್ತು, ರಮ್ಯವಾಗಿತ್ತು, ಕನಸುವಂತಿತ್ತು… ಎಲ್ಲಿಯವರೆಗೆ? ಶಿಲಾಲತೆಯವರೆಗೆ. ಅಲ್ಲಿಂದ ನರಸಿಂಹಸ್ವಾಮಿ ಕಠಿಣರಾಗುತ್ತಾ ಹೋದರು, ಪ್ರತಿಮೆಗಳಲ್ಲಿ ಮಾತನಾಡಲಾರಂಭಿಸಿದರು. ಅವರ ಜನ್ಮದಿನವಾದ ಇಂದು, ಅವರ ಬಹು ಪ್ರಸ್ತಾಪಿತ ಕವನಗಳನ್ನು ಬಿಟ್ಟು ‘ಶಿಲಾಲತೆ’ಯ ನಲವತ್ತರ ಚೆಲುವೆಯ ಬಗ್ಗೆ ವಿಶ್ಲೇಷಣಾ ಬರಹ ಬರೆದಿದ್ದಾರೆ ಲೇಖಕಿ ಮಾಲಿನಿ ಗುರುಪ್ರಸನ್ನ.

Read More

‘ಕಾವ್ಯದ ಕನ್ನಡಿಯಲ್ಲಿ ಕಂಡ ಜೀವನಪಥ’

ಅನುಭವಕ್ಕೆ ಸ್ವತಃ ಯಾವುದೇ ರೀತಿಯ ಆಕೃತಿ ಇಲ್ಲ. ಆದರೆ ನಾವು ಮಾತ್ರ ಇದು ಸುಖದ ಅನುಭವ, ಇದು ದುಃಖದ ಅನುಭವ, ಇದು ವಿಹ್ವಲತೆ, ತಲ್ಲಣ, ಇದು ವಿಷಾದದ ಅನುಭವ ಎಂದೆಲ್ಲ ಹೆಸರಿಡುತ್ತೇವೆ ಎಂದು  ಹೇಳುವ ಆನಂದ ಝುಂಜರವಾಡ ಮೂಲತಃ ಕಾವ್ಯಶಕ್ತಿಯನ್ನು ಒಲಿಸಿಕೊಂಡ ಕವಿ. ಇತ್ತೀಚೆಗೆ ಅವರ ಹೊಸ ಕವನ ಸಂಕಲನ ಶಬ್ದ ಸುಪಾರಿ ಬಿಡುಗಡೆಯಾಯಿತು.

Read More

ಲೌಕಿಕದ ಅನಿವಾರ್ಯತೆಯನ್ನು ಒಪ್ಪಿಕೊಳ್ಳುವ ಕಾವ್ಯಪ್ರೀತಿ

ಅದಮ್ಯವಾದ ಕಾಮ, ಅನಿವಾರ್ಯವಾದ ಸಾವು ಮತ್ತು ಬಾಳಿನ ನಿರರ್ಥಕತೆ ಇವು ನನ್ನ ಕಾವ್ಯಕ್ಕೆ ಪ್ರೇರಕ ಶಕ್ತಿಗಳು ಎಂದು ಹೇಳುವ ಬಿ.ಆರ್. ಲಕ್ಷ್ಮಣರಾಯರ ಕವನಗಳಲ್ಲಿ ಗೇಯಗುಣವು ಸಹಜವಾಗಿ ಒಲಿದು ಬಂದಿದೆ. ಅವರ ಸಾಲುಗಳಲ್ಲಿ ವೈನೋದಿಕ ಶಕ್ತಿಯೂ ಸೇರಿಕೊಂಡಿದೆ.  ಅವರು ಆ ಕಾಲಕ್ಕೆ ಅತ್ಯಂತ ಆಧುನಿಕ ವಿಷಯಗಳನ್ನೇ ಬರೆದರೂ…”

Read More
  • 1
  • 2

ಜನಮತ

ಅಗಲಿದ ಕೆ.ವಿ. ತಿರುಮಲೇಶರು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ಡಾ. ಕೆ. ರಘುನಾಥ್‌ ಬರೆದ ‘ಮುಂಬಯಿ ಕನ್ನಡ ಲೋಕʼ ಕೃತಿಯ ಕುರಿತು ದಯಾನಂದ ಸಾಲ್ಯಾನ್‌ ಬರಹ

https://t.co/2qpXucV1n7
ರಶ್ಮಿ ಹೆಗಡೆ ಬರೆದ ಎರಡು ಕವಿತೆಗಳು

https://t.co/T7gzkwobTW
ಆಶಾ ರಘು ಹೊಸ ಕಾದಂಬರಿ “ಚಿತ್ತರಂಗ”ದ ಕೆಲವು ಪುಟಗಳು ನಿಮ್ಮ ಓದಿಗೆ

https://t.co/dhnzowspLv

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ತೆರೆಮರೆಯ ಅಂತರಂಗದ ಕಥೆ…

ಅಪ್ಪ ಮೌನವಾಗಿ ಒಂದು ಓರೆಗೆ ಕೂತಿದ್ದರು. ಅರವಿಂದ ಅದೆಲ್ಲಿ ಅಲೆಯೋಕ್ಕೆ ಹೋಗಿದ್ದನೋ ಏನೋ... ಅವನೊಬ್ಬ ಶುದ್ಧ ಪೋಕರಿ ತಮ್ಮ. ಏನಾಯಿತೆಂದು ವಿಚಾರಿಸಿದರೆ, ಅಮ್ಮ, ‘ಚಿಕ್ಕಮ್ಮನಿಗೆ ಸ್ವಲ್ಪ ಹೊಟ್ಟೆನೋವು...

Read More

ಬರಹ ಭಂಡಾರ