ಮೋಹನ್‌ ಮಂಜಪ್ಪ ಬರೆದ ಈ ಭಾನುವಾರದ ಕಥೆ

ದೂರದ ಕಲ್ಲುಬೆಂಚಿನ ಮೇಲೆ ಕೂತಿದ್ದ ಅಪ್ಪನ ದೃಷ್ಠಿ ಶೂನ್ಯದಿಂದ ಮರಳಿರಲಿಲ್ಲ. ಮನಸ್ಸು ಗತಕಾಲದ ಕಡೆಗೆ ಹೊರಳಿತು. ಇವಳನ್ನು ತುಂಬಾ ಇಷ್ಟಪಟ್ಟು ಕಟ್ಟಿಕೊಂಡಿದ್ದೆ. ಹೊಸದರಲ್ಲೆಲ್ಲಾ ಚೆನ್ನಾಗಿಯೇ ಇತ್ತು, ಅಥವಾ ಬಿಸಿಯಲ್ಲಿ ಗೊತ್ತಾಗಲಿಲ್ಲವೆನೋ!? ಮದುವೆ ಆದ ಆರು ತಿಂಗಳಿಗೆ, ಮಲ್ಲಿಗೆ ಹೂವು ತರಲು ಮರೆತೆನೆಂದು ಮಾಡಿದ ಹಗರಣ ಮನಸ್ಸನ್ನು ತುಂಬಾ ಕದಡಿಬಿಟ್ಟಿತು. ಅಂದಿನಿಂದ ಅವಳೇ ಬೇಡ ಸಾಕು ಎನ್ನುವ ವರೆಗೆ ಫ್ರಿಡ್ಜ್‌ನಲ್ಲಿ ತರಕಾರಿ ಇಲ್ಲದಿದ್ದರೂ, ಮಲ್ಲಿಗೆ ಹೂವು ಮಿಸ್‌ ಆಗದಂತೆ ನೋಡಿಕೊಂಡಿದ್ದು ನನಗಿನ್ನೂ ನೆನಪಿದೆ.
ಮೋಹನ್‌ ಮಂಜಪ್ಪ ಬರೆದ ಕಥೆ “ಹಣೆಬರಹ”

Read More