Advertisement
ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ಬದುಕಿನ ಪಥದಲ್ಲಿ ಮೂಡಿದ ನೆನಪಿನ ಪ್ರಬಂಧ

ಆ ಕಾಲದ ಓದುವ ವರ್ಣನೆ ಚನ್ನಾಗಿ ಮೂಡಿಬಂದಿದೆ. ಶಾಲೆ ಕಾಲೇಜಿಗೆ ನಡೆದುಕೊಂಡು ಹೋಗುತ್ತಲೇ ಶರಾವತಿ ದಾಟುವ ಕಾಲೇಜಿನಲ್ಲಿ ವಿಜ್ಞಾನವನ್ನು ತೆಗೆದುಕೊಂಡರೂ ಸಂಗೀತವನ್ನು ಒಂದು ವಿಷಯವನ್ನಾಗಿ ತೆಗೆದುಕೊಂಡು ಕಲಿತದ್ದು ನೋಡಿದರೆ ಸಂಗೀತದ ಮೇಲೆ ಇವರಿಗಿದ್ದ ಆಸಕ್ತಿಯ ಅರಿವಾಗುತ್ತದೆ. ಕಾಲೇಜಿನ ಪ್ರಿನ್ಸಿಪಾಲರಾಗಿದ್ದವರು ಖ್ಯಾತ ಕವಿ ವೀಸಿ, ತಮ್ಮ ಶಿಕ್ಷಕರುಗಳು, ಆ ಕಾಲದ ಕಾಲೇಜಿನ ಬದುಕು ಎಲ್ಲವೂ ಒಂದು ನೆನಪಿನ ಸುರುಳಿಯಂತೆ ಪ್ರಬಂಧದೋಪಾದಿಯಲ್ಲಿ ಹರಿದು ಬಂದಿದೆ. ಅದರಲ್ಲಿಯೂ ಇವರ ಮದುವೆಯ ಸ್ವಾರಸ್ಯ ತಪ್ಪದೇ ಓದಬೇಕು.
ಜಿ. ಎಸ್. ಹೆಗಡೆ ಜೀವನಾಧಾರಿತ “ಜೀವನ ಪಥ ನೆನಪಿನ ರಥ” ಪುಸ್ತಕದ ಕುರಿತು ನಾರಾಯಣ ಯಾಜಿ, ಸಾಲೇಬೈಲು ಬರಹ

Read More

ಸಜ್ಜನ ಸವ್ಯಸಾಚಿ ಯಕ್ಷಗುರು ಕೃಷ್ಣ ಭಂಡಾರಿಯ ನೆನಪುಗಳು

ಸಂಗೀತದ ತಿಳುವಳಿಕೆ ಇರುವರೆಲ್ಲಾ ಉತ್ತಮ ಭಾಗವತರಾಗಬಹುದು, ಆದರೆ ಅವರು ರಂಗದಲ್ಲಿ ಯಶಸ್ವೀ ಭಾಗವತರಾಗುವುದಿಲ್ಲ. ಯಕ್ಷಗುರು ಕೃಷ್ಣ  ಭಂಡಾರಿಯವರಿಗೆ ಸ್ವತಃ ವೇಷದ ನಡೆಯ ಅನುಭವವಿರುವ ಕಾರಣ ಮುಮ್ಮೇಳದ ಕಲಾವಿದನಿಗೆ ಯಾವ ಯಾವ ಭಾಗದಲ್ಲಿ ಪದ್ಯದ ಮೂಲಕ ಕುಣಿಸಬೇಕೆನ್ನುವದು ಚೆನ್ನಾಗಿ ಗೊತ್ತಿತ್ತು. ಭಾಗವತಿಕೆಯಲ್ಲಿ ಯಾವ ಕಸರತ್ತುಗಳನ್ನು ಮಾಡದೇ ಕಲಾವಿದನನ್ನು ಹುರಿದುಂಬಿಸುತ್ತಿದ್ದರು.”

Read More

ನಾರಾಯಣ ಯಾಜಿ ಈ ಭಾನುವಾರದ ಕಥೆ

ಆತ ಹಿಂದಿಯಲ್ಲಿ “ಮಾಲು ಬೇಕಾ, ಪ್ರೆಶ್ ಇದ್ದಾರೆ” ಎಂದ. ಅನಂತ ಇಲ್ಲಾ ನಾವು ಇಲ್ಲಿ ನಮ್ಮೂರಿನ ಹೋಟೇಲಿನವರನ್ನು ಭೆಟ್ಟಿಯಾಗಲಿಕ್ಕೆ ಬಂದಿದ್ದೇವೆ. ಅಂತಹುದೇನೂ ನಮಗೆ ಆಸೆಯಿಲ್ಲ ಎಂದು ಅವನನ್ನು ಸಾಗಹಾಕಲು ನೋಡಿದ. ಆತನೂ ಬಿಡಲಿಲ್ಲ. “ಸಾಬ್ ನೋಡಿ ಹೋಗಿ, ಅದಕ್ಕೆ ಹಣಕೊಡಬೇಕಾಗಿಲ್ಲ.” ಎಂದು ಒತ್ತಾಯ ಮಾಡಲು ತೊಡಗಿದ. “ನಾವು ಅಂತವರಲ್ಲ ಮರಿ…” ಎಂದು ಮೂರ್ತಿ ಹೇಳುತ್ತಿರುವಂತೆ ಆತ ಮತ್ತೆ ತನ್ನ ವರಾತ ಹಚ್ಚಿ “ನೋಡಿ ಹೋಗಿ ಅವರೆಲ್ಲಾ ತನ್ನ ಅಕ್ಕಂದಿರು” ಎಂದ.

Read More

ಕ್ರೌರ್ಯ-ಹಿಂಸೆಯ ಅನಾವರಣಕ್ಕೆ ಕಾರಣವೇ ಬೇಕಿಲ್ಲ

ಶಶಿಧರ್ ಹಾಲಾಡಿ ಅವರು ಬರೆದ ‘ಕಾಲಕೋಶ’ ಕಾದಂಬರಿಯ ಹರವು 1947 ರಿಂದ ಪ್ರಾರಂಭವಾಗಿ 1984ರ ವರೆಗೂ ಮುಂದುವರೆದಿದೆ.  2002ರ ಗುಜರಾತ್ ಹಾಗೂ ಅದಕ್ಕೂ ನಂತರ ಬರಬಹುದಾದ ಅನೇಕ ವಿಪ್ಲವಗಳ ಕುರಿತಾದ ಮುನ್ಸೂಚನೆಯೂ ಈ ಕಾದಂಬರಿಯಲ್ಲಿದೆ. ಮನುಷ್ಯ ಮೂಲತಃ ಸಂಘಜೀವಿ ಎನ್ನುವದಕ್ಕೇ ಅನುಮಾನ ಬರುವ ಅನೇಕ ಸಂಗತಿಗಳನ್ನು ಇಂದು ನಾವು ಜನಾಂಗೀಯ ಹಿಂಸೆಯಲ್ಲಿ ಕಾಣುತ್ತೇವೆ. ಕಥಾನಾಯಕನ..”

Read More

ಯಕ್ಷಾಕಾಶದ ಮಹಾಮೇಘ ಹಡಿನಬಾಳ ಶ್ರೀಪಾದ ಹೆಗಡೆ: ನಾರಾಯಣ ಯಾಜಿ ಬರೆದ ಲೇಖನ

“ಡೇರೆ ಹಾಕಿದ ಊರಿಗೆ ಕೆಲವೊಂದು ಜಾಗದಲ್ಲಿ ಪ್ರಧಾನ ನಟರು ಕೈಕೊಡುವದಿದೆ. ಅಂತಹ ಹೊತ್ತಿನಲ್ಲಿ ಪ್ರೇಕ್ಷಕರ ಗಲಾಟೆಯಾಗಿ ಟೆಂಟಿಗೆ ಬೆಂಕಿ ಹಚ್ಚುವ ಪರಿಸ್ಥಿತಿಯೂ ಎದುರಿಸಬೇಕಾಗಬಹುದು. ಅಂತಹ ಹೊತ್ತಿನಲ್ಲಿ ಮೇಳದ ಸಂಘಟಕರಿಗೆ ಆಪದ್ಭಾಂದವನಾಗಿ ಒದಗುವದು ಶ್ರೀಪಾದ ಹೆಗಡೆಯವರು. ಅದು ರಾಮ, ಕರ್ಣ, ರಾವಣ, ಕಾರ್ತವೀರ್ಯ, ಭಸ್ಮಾಸುರ, ವಿಶ್ವಾಮಿತ್ರ…”

Read More

ಜನಮತ

ಸಾಹಿತ್ಯ ಪ್ರಕಾರಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನೋವ ತೋರದ ಗಾಯಗಳು: ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ

ಕಂಟಲಗೆರೆ ಬಹುತೇಕ ಇದು ದುಡಿದು ದುಡಿದು ಬಡವಾಗಿಯೇ ಉಳಿದ ಕುಟುಂಬಗಳಿಂದ ತುಂಬಿದ ಊರಾಗಿದ್ದುದು ನನಗೆ ಗೊತ್ತು. ಇಂಥ ಒಂದು ಊರಿನ ಉರಿಯಿಂದ ಸಿಡಿದ ಬೀಜ ನೀನು. ಅಲ್ಲಿಂದ...

Read More

ಬರಹ ಭಂಡಾರ