Advertisement
ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.

ಗಂಟಿನೊಳಗಿದ್ದ ಹೆಬ್ಬಾವು ಮಾಯವಾಗಿದೆಯೆಂದರೆ..

ಮರವನ್ನು ಸುತ್ತಿದ್ದ ಹೆಬ್ಬಾವು ಪೊಟರೆಯೊಳಕ್ಕೆ ಬಾಯಿಡಲು ಹವಣಿಸುತ್ತಿದೆ. ಒಂದೆಡೆ ಅಳಿವಿನಂಚಿನ ಜೀವಿಯ ಭವಿಷ್ಯದ ಆಶಾಕಿರಣವಾದ ಮೂರು ಮರಿಹಕ್ಕಿಗಳು. ಮತ್ತೊಂದೆಡೆ ಪ್ರಕೃತಿ ಸಹಜವಾಗಿ ಹಸಿದ ಹಾವು. ಏನೂ ಮಾಡದೇ ಹಾವು ಆ ಹಕ್ಕಿ ಮರಿಗಳನ್ನು ನುಂಗಲು ಬಿಡಲೇ ಅಥವಾ ಮಧ್ಯ ಪ್ರವೇಶಿಸಿ ಅದರ ಊಟವನ್ನು ಕಸಿದುಕೊಳ್ಳಲೇ? ವಿಚಿತ್ರ ಸಂದಿಗ್ಧ ಪರಿಸ್ಥಿತಿ. ಅದು ಅಳಿವಿನಂಚಿನ ಹಕ್ಕಿಯೆಂದು ಹೆಬ್ಬಾವಿಗೇನು ಗೊತ್ತು ಪಾಪ.
ಹಕ್ಕಿ ಮತ್ತು ಹಾವುಗಳ ಒಡನಾಟದಲ್ಲಿ ಪುಟಿದ ಜಿಜ್ಞಾಸೆಗಳಿಗೆ ಅಕ್ಷರ ರೂಪ ನೀಡಿದ್ದಾರೆ ಪ್ರಸನ್ನ ಆಡುವಳ್ಳಿ.

Read More

ಛತ್ರಪತಿ ಶಿವಾಜಿ ಮಹಾರಾಜನ ಮಗನು ಆಡುವಳ್ಳಿಗೆ ಓಡಿಬಂದ ಕತೆ!

‘ಆಡುವಳ್ಳಿಯ ಇತಿಹಾಸದ ಬಗ್ಗೆ ನನಗೆ ಕುತೂಹಲಕಾರಿಯಾದ ಸುಳಿವು ಆಕಸ್ಮಿಕವಾಗಿ ಸಿಕ್ಕಿದ್ದು ಮರಾಠರ ಇತಿಹಾಸ ಓದುವಾಗ! ಐವತ್ತು ವರ್ಷ ಹಿಂದಿನ ಇಂಗ್ಲಿಷ್ ಲೇಖನವೊಂದರಲ್ಲಿ ಶಿವಾಜಿಯ ಮಗ ರಾಜಾರಾಮನು ಮೊಘಲರಿಂದ ತಪ್ಪಿಸಿಕೊಂಡು, ಆಡುವಳ್ಳಿ ಮಾರ್ಗವಾಗಿ ಹೋಗಿದ್ದನಂತೆ ಎಂಬ ಒಂದು ಸಾಲಿನ ಮಾಹಿತಿ ಸಿಕ್ಕಿತು. ಅರೆ! ಛತ್ರಪತಿಗೂ ಆಡುವಳ್ಳಿಗೂ ಎತ್ತಣಿಂದೆತ್ತ ಸಂಬಂಧ? ಅದರ ಬೆನ್ನತ್ತಿ ಹೋದಾಗ ಸಿಕ್ಕ ಕನ್ನಡ ಕಾವ್ಯದ ಕುರಿತು ಹೇಳುವ ಮುನ್ನ ಇನ್ನೂ ಕೆಲವು ವಿಷಯಗಳನ್ನು ಹಂಚಿಕೊಳ್ಳಬೇಕು’ ಎನ್ನುತ್ತಾರೆ ಪ್ರಸನ್ನ ಆಡುವಳ್ಳಿ. ತನ್ನೂರಿನ ಇತಿಹಾಸ ಕೆದಕುತ್ತ ಸಾಗಿದ ಅವರ ಅನುಭವ ಲೇಖನ ಇಲ್ಲಿದೆ.

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ

ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು…

Read More

ಬರಹ ಭಂಡಾರ