ಹೊಂಗಿರಣದ ಕವಿಯ ಒಡನಾಟದ ನೆನಪುಗಳು

ನವ್ಯ ಮತ್ತು ನವೋದಯವನ್ನು ಹದವಾಗಿ ಬೆರೆಸಿದ ಪಾಕದಂತಹ ಸಾಹಿತ್ಯ ಸೃಷ್ಟಿಸಿದ ಚೆನ್ನವೀರ ಕಣವಿಯವರದು ಕರುಳಿನ ಪ್ರೀತಿಗೆ ಓಗೊಡುವ ಸ್ವಭಾವ. ಮೃದುಮನಸ್ಸಿನವರು ಎಂದು ಹೇಳಿದರೂ, ಅಗತ್ಯವೆನಿಸಿದಾಗ ಹೋರಾಟದ ಹಾದಿಯನ್ನು ಹಿಡಿದವರು. ಸಂಪ್ರದಾಯವನ್ನು ಮುರಿದವರು. ಆರೋಗ್ಯಪೂರ್ಣ ಸಂಘಟನೆಗೆ ಒತ್ತಾಸೆಯಾಗಿ ನಿಂತವರು. ಸಂಬಂಧಗಳನ್ನು ಪೋಷಿಸುತ್ತ, ಮಾನವಪ್ರೀತಿಗೆ ಮಾನ್ಯತೆ ನೀಡಿ ಜೀವನ ನಡೆಸಿದವರು. ಕಾವ್ಯವು ಅವರಿಗೆ ಒಲಿದು ಬಂದ ಪ್ರಕಾರ.ಇತರ ಪ್ರಕಾರಗಳಲ್ಲಿ ಅವರು ಬರೆದರೂ, ಕಾವ್ಯವೇ ಅವರ ಸಾಹಿತ್ಯದ ಸ್ಥಾಯೀ ಭಾವ..

Read More