Advertisement

ರಂಜಾನ್ ದರ್ಗಾ

ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ‘ಕಾವ್ಯ ಬಂತು ಬೀದಿಗೆ’ ಅಪಾರ ಖ್ಯಾತಿ ತಂದುಕೊಟ್ಟಿದ್ದ ಇವರ ಕವಿತಾ ಸಂಕಲನ. ಬಸವಣ್ಣನವರ ದೇವರು, ಬಸವ ಧರ್ಮದ ವಿಶ್ವ ಸಂದೇಶ, ನಡೆ ನುಡಿ ಸಿದ್ದಾಂತ, ವಚನ ವಿವೇಕ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿವೆ.

ಅಮ್ಮನ ನಂಬಿಕೆ, ಔಷಧಿಗಳ ಮಹಿಮೆಯಲ್ಲಿ ಕಳೆದ ಬಾಲ್ಯ

ಬಡ ಗಿರಾಕಿಗಳಿಂದ ಹಿಡಿದು ಶ್ರೀಮಂತ ಗಿರಾಕಿಗಳವರೆಗೆ ಅವರ ಶಕ್ತ್ಯನುಸಾರ ಹಣ್ಣುಗಳನ್ನು ಕೊಳ್ಳುತ್ತಿದ್ದರು. ಹಣ್ಣುಗಳನ್ನು ಕೊಳ್ಳುವಾಗ ರೇಟಿಗೆ ಸಂಬಂಧಿಸಿದ ಕೊಸರಾಟ ಮಜಾ ಅನಿಸುತ್ತಿತ್ತು. ಗಿರಾಕಿಗಳು ತಮ್ಮ ಎಲ್ಲ ತರ್ಕ ಉಪಯೋಗಿಸಿ ಕಡಿಮೆ ಬೆಲೆಗೆ ಕೇಳುತ್ತಿದ್ದರು. ಆ ಹಣ್ಣುಗಳನ್ನು ತರುವ ಕಷ್ಟ, ಅದಕ್ಕಾಗಿ ಮಾಡಿದ ಖರ್ಚು, ಗಿರಾಕಿಗಳು ಕೇಳುವ ಬೆಲೆಗಿಂತ ಹೆಚ್ಚಾಗಿದೆ ಎಂಬುದನ್ನು ಅಜ್ಜಿ ವಿವರಿಸುತ್ತಿದ್ದಳು. ಇಷ್ಟಕ್ಕಾದರೆ ಕೊಡು ಎಂದು ಹೇಳುತ್ತ ಗಿರಾಕಿಗಳು ಮುಂದೆ ಹೋದಂತೆ ಮಾಡುತ್ತಿದ್ದರು. ಅಜ್ಜಿ ಕರೆಯದೆ ಇದ್ದಾಗ ಮತ್ತೆ ವಾಪಸ್ ಬರುತ್ತಿದ್ದರು.

Read More

ಪ್ರಾಣಿಲೋಕದ ಪ್ರೀತಿಸುಧೆಯ ನೆನಪುಗಳು

ನನ್ನ ತಂದೆ ಹಾವು ಹೊಡೆಯುವುದನ್ನು ಕೂಡ ಸಹಿಸಿಕೊಳ್ಳುತ್ತಿರಲಿಲ್ಲ. ಆದರೆ ಕಂದೂರಿ ಒಂದು ಶ್ರದ್ಧೆಯಾಗಿದ್ದರಿಂದ ಮನೆತನದಲ್ಲಿ ತಲೆತಲಾಂತರದಿಂದ ಬಂದ, ಅವರದೇ ನಂಬಿಕೆಯಿಂದ ಕೂಡಿದ ಧಾರ್ಮಿಕ ಕರ್ತವ್ಯ ನಿರ್ವಹಣೆಯನ್ನು ನಿಷ್ಠೆಯಿಂದ ಮಾಡುತ್ತಿದ್ದರು. ನನ್ನ ದಲಿತ ಮಿತ್ರ ತುಕಾರಾಮ ನನಗಿಂತ ಆರುವರ್ಷ ದೊಡ್ಡವರಿದ್ದರು. ನಾನು ನಾಲ್ಕನೆಯ ಇಯತ್ತೆ ಓದುವಾಗ ಅವರು ಮ್ಯಾಟ್ರಿಕ್ ಇದ್ದರು. ನಮ್ಮ ಮನೆಯ ಹತ್ತಿರದ ಹರಿಜನ ಬೋರ್ಡಿಂಗ್‌ನಲ್ಲಿ ಇದ್ದು ಓದುತ್ತಿದ್ದರು.

Read More

‘ಭಕ್ತರಿಗೆ ಭಾಗ್ಯ ಕೊಡು. ಮಕ್ಕಳಿಗೆ ಬಡತನ ಕೊಡು’

ಒಬ್ಬ ವ್ಯಕ್ತಿ ಹೀಗೆ ದೇವನಾಗಲು ಹೇಗೆ ಸಾಧ್ಯ ಎಂದು ವಿಚಾರವಾದಿಗಳಿಗೆ ಅನಿಸದೆ ಇರದು. ಜನಸಮುದಾಯಗಳ ಬಗ್ಗೆ ಅತೀವ ಕಾಳಜಿಯುಳ್ಳ ಸಾಮಾಜಿಕ ಮನುಷ್ಯ ಜನಪದರ ಕಣ್ಣಲ್ಲಿ ದೇವರಾಗಿ ಕಾಣುತ್ತಾನೆ. ತಮ್ಮ ಮೇಲೆ ನಿಷ್ಕಾಮ ಪ್ರೀತಿಯ ಮಳೆಗೆರೆಯುವವನನ್ನು ಜನಸಾಮಾನ್ಯರು ಹೀಗೆ ದೇವರಾಗಿಸುತ್ತಾರೆ. ಅಮೋಘಸಿದ್ಧನಂಥ ಅಖಂಡ ಪ್ರೀತಿಯೇ ದೈವೀ ಗುಣ. ಅಂಥ ಗುಣವುಳ್ಳವರೇ ದೇವರು. ಅದ್ದರಿಂದ ಇಂಥ ಸಿದ್ಧರ ಕುರಿತ ಡೊಳ್ಳಿನ ಪದಗಳೆಲ್ಲ “ನಮ್ಮಯ ದೇವರು ಬಂದಾರ ಬನ್ನಿರೇ” ಎಂದೇ ಪ್ರಾರಂಭವಾಗುತ್ತವೆ.
ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿ

Read More

ಅಪ್ಪನ ಕೌಟುಂಬಿಕ ಅರ್ಥಶಾಸ್ತ್ರ

ನಮಗೆ ಒಂದು ಗೇಣು ಭೂಮಿಯೂ ಇರಲಿಲ್ಲ. ಆದರೆ ತಂದೆಗೆ ಕೃಷಿಕನಾಗುವ ಹುಚ್ಚು ಬಹಳವಿತ್ತು. ಬೆಳದಿಂಗಳ ರಾತ್ರಿಯಲ್ಲಿ ಕೂಡ ಅವರು ಆ ಭೂಮಿಯಲ್ಲಿ ದುಡಿಯುತ್ತಿದ್ದರು. ಅವರಿಗೆ ದುಡಿತದ ಆನಂದವೇ ಆನಂದ. ದುಡಿದು ದುಡಿದು ಕಲ್ಲುಗಳಿಂದ ತುಂಬಿದ ಆ ಹಾಳು ಭೂಮಿಯನ್ನು ಸಮೃದ್ಧಗೊಳಿಸಿದರು. ಬಾಳೆಯ ಸಸಿ ನೆಟ್ಟರು. ಹಳೆಯ ಡೀಸಲ್ ಎಂಜಿನ್ ಕೊಂಡು ನೀರು ಉಣಿಸುತ್ತ ಚಿಕ್ಕ ಬಾಳೆಯ ಬನವನ್ನೇ ಸೃಷ್ಟಿಸಿದರು.
ರಂಜಾನ್ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ ಹದಿನೈದನೇ ಕಂತು ಇಲ್ಲಿದೆ.

Read More

ಬಾಲ್ಯದ ಆಟ..ಆ ಹುಡುಗಾಟ ಇನ್ನೂ ಮರೆತಿಲ್ಲಾ..

“ಆಮೇಲೆ ನಾನು ಆ ಕೋಣೆಯ ಕಿಟಕಿಯ ಮುಂದೆ ಕುಳಿತು ಪಾಠ ಕೇಳುತ್ತಿದ್ದೆ. ಒಂದು ಸಲ ಕಪ್ಪು ಹಲಗೆಯ ಮೇಲೆ ಗಣಿತ ಸಮಸ್ಯೆಯೊಂದನ್ನು ಬರೆದು ಉತ್ತರ ಬರೆಯಲು ತಿಳಿಸಿದರು. ನಾನು ಮನದಲ್ಲೇ ಕೂಡಿಸಿ ಕಳೆದು ಭಾಗಿಸಿ ಥಟ್ಟನೆ ಉತ್ತರ ಹೇಳಿದೆ. ಹೀಗೆ ಹೇಳಲು ಕಾರಣವೂ ಇತ್ತು. ನನ್ನ ಬಳಿ ಕಚ್ಚಾ ನೋಟಬುಕ್ ಕೂಡ ಇರಲಿಲ್ಲ. ಹೀಗಾಗಿ ಮನದಲ್ಲೇ ಲೆಕ್ಕಾಚಾರ ಮಾಡುವುದು ಅನಿವಾರ್ಯವಾಗಿತ್ತು. ನನ್ನ ಉತ್ತರದಿಂದ ಮಾಸ್ತರರಿಗೆ ಖುಷಿಯಾಯಿತು. ನನಗೆ ಒಳಗೆ ಕರೆದರು.”
ರಂಜಾನ್ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ ಹದಿನಾಲ್ಕನೇ ಕಂತು ಇಲ್ಲಿದೆ.

Read More

ಜನಮತ

ಕನ್ನಡ ಸಾಹಿತ್ಯ ಪರಿಷತ್ತು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

43 minutes ago
ಸುಧಾ ಆಡುಕಳ ಅನುವಾದಿಸಿದ ಟ್ಯಾಗೋರರ ಭಾಷಣ

https://t.co/YbWms6GB0W
22 hours ago
ಅಮ್ಮನ ನಂಬಿಕೆ, ಔಷಧಿಗಳ ಮಹಿಮೆಯಲ್ಲಿ ಕಳೆದ ಬಾಲ್ಯ

https://t.co/SAcdvJn21A
1 day ago
ಆಕ್ಸಿಡೆಂಟಿನ ಆಲದಮರ ಮತ್ತು ತೇಜಸ್ವಿಯ ‘ಮಾಯಾಮೃಗ’

https://t.co/jRwQXDNkvJ

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಆರ್.ದಿಲೀಪ್ ಕುಮಾರ್ ಹೊಸ ಪುಸ್ತಕದ ಕುರಿತು ರವೀಂದ್ರನಾಯಕ್‌ ಬರಹ

ಹಳೆಗನ್ನಡದ ಪಠ್ಯಗಳನ್ನು ಓದಬೇಕು ಎಂಬ ಆಸೆಗೆ ಪೂರಕವಾಗಿ ದೊರೆತುದು ಎಚ್.ಎಸ್. ವೆಂಕಟೇಶ ಮೂರ್ತಿಯವರ 'ಕುಮಾರವ್ಯಾಸ ಕಥಾಂತರ'. ಇದು ಕುಮಾರವ್ಯಾಸನ ಕಾವ್ಯಕ್ಕೆ ಹೊಸಬರಿಗೆ ಪ್ರವೇಶ ಮಾಡಲಿಕ್ಕೊಂದು ಸುಲಭದ ದಾರಿ ಅಂತ...

Read More