ಜಾತಿಯೆಂಬ ತಡೆರೇಖೆಗಳನ್ನು ದಾಟಿಕೊಂಡು..
ಬಾಬು ಮಾಮಾನ ಗೆಳೆಯನೊಬ್ಬ ನನ್ನನ್ನು ಪ್ರೀತಿಯಿಂದ ಕಾಣುತ್ತಿದ್ದ. ಎತ್ತಿ ಆಡಿಸುತ್ತಿದ್ದ. ಆತನೊಮ್ಮೆ ಬಾವಿಯಿಂದ ನೀರು ತುಂಬಿಕೊಂಡು ಹೋಗುತ್ತಿದ್ದುದು ಕಾಣಿಸಿತು. ಅವನನ್ನು ಕಂಡೊಡನೆ ಖುಷಿಯಿಂದ ಅವನ ಹಿಂದೆ ಓಡಿದೆ. ಅವನ ಹಳದಿ ರುಮಾಲಿನ ಚುಂಗವನ್ನು ಹಿಡಿದು ‘ಮಾಮಾ’ ಎಂದು ಕೂಗಿದೆ. ಆತನಿಗೆ ಬಹಳ ಸಿಟ್ಟು ಬಂದಿತು. ನನ್ನ ಕಪಾಳಿಗೆ ಹೊಡೆದು ರಸ್ತೆ ಮೇಲೆ ನೀರು ಚೆಲ್ಲಿ ಮತ್ತೆ ಕೊಡ ತುಂಬಲು ಬಾವಿಯ ಮೆಟ್ಟಿಲುಗಳನ್ನು ಇಳಿಯ ತೊಡಗಿದ.”
Read More