ಹುಣ್ಣಮೀಗೊಂಥರಾ ಹೋಳಗಿ, ಅಮ್ವಾಸಿಗೊಂಥರಾ ಹೋಳಗಿ…
“ಸಣ್ಣಸಣ್ಣ ಸಂಭ್ರಮಕ್ಕೂ, ಹಬ್ಬಕ್ಕೂ ಹುಣ್ಣಮೀಗೂ ಕಡ್ಲಿಬ್ಯಾಳೀ ಹೋಳಿಗಿ, ತೊಗರಿ ಬ್ಯಾಳಿ ಹೋಳಿ, ಆ ಕಡಬು ಈ ಕಡುಬು, ಮತ್ ಆ ಥರದ್ ಹುಗ್ಗಿ, ಇಂಥಾ ಹುಗ್ಗಿ ಅಂತೆಲ್ಲ ಮಾಡೂದ ಮಾಡೂದು. ಸೀ ಇಷ್ಟಾ ಅಂತ ಒಬ್ಬಾಕೇ ಮಾಡಿ ಕುತ್ಕೊಂಡ್ ತಿನ್ನೂವಂಥ ಹೆಣಮಗಳು ಅಲ್ಲ ಬಿಡ್ರಿ. ತಾ ಜಗ್ಗ ಕೆಲಸಾ ಮಾಡಿ ಮಂದೀಗೆ ತಿನ್ನಸೂದಂದ್ರ ಸಂಭ್ರಮ ಅಕೀಗೆ. ಹಂಗಂತನ, ನಮ್ ಹಳೇಮನ್ಯಾಗಿದ್ದ ನನ್ ಕ್ಲಾಸ್ ಮೇಟು ಡುಮ್ಮನ ದಿನೇಶಾ, “ಏ, ನಿಮ್ ಮಮ್ಮೀನ ನಮ್ ಮಮ್ಮೀನ ಎಕ್ಸ್ಚೇಂಜ್ ಮಾಡ್ಕೊಳ್ಳೂಣಣ… ಪ್ಲೀಸ್..”
Read More