ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ
“ಮೊಳೆವ ಬೀಜಕ್ಕೂ ಇದೆ
ಒಂದು ಬಿಕ್ಕಳಿಕೆ
ಚಿಗುರ ತುಳಿಸಿಕೊಂಡ ಎಳೆ
ಎಸಳಿಗೂ ಇದೆ ನೋವ
ಕದಲಿಕೆ
ಹಾದಿ ಬದಿಯಲಿ ಬಿದ್ದ ಈ ಶಬ್ದಗಳು
ಎಷ್ಟೊಂದು ಅನಾಥ..”- ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
Posted by ಸದಾಶಿವ ಸೊರಟೂರು | Jul 29, 2022 | ದಿನದ ಕವಿತೆ |
“ಮೊಳೆವ ಬೀಜಕ್ಕೂ ಇದೆ
ಒಂದು ಬಿಕ್ಕಳಿಕೆ
ಚಿಗುರ ತುಳಿಸಿಕೊಂಡ ಎಳೆ
ಎಸಳಿಗೂ ಇದೆ ನೋವ
ಕದಲಿಕೆ
ಹಾದಿ ಬದಿಯಲಿ ಬಿದ್ದ ಈ ಶಬ್ದಗಳು
ಎಷ್ಟೊಂದು ಅನಾಥ..”- ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ
Posted by ಸದಾಶಿವ ಸೊರಟೂರು | Jun 21, 2022 | ಸಂಪಿಗೆ ಸ್ಪೆಷಲ್ |
ಮಳೆಯು ಮಳೆಗಾಲವನು ತೊರೆದಿದೆ. ಈಗ ಎಲ್ಲಾ ತಿಂಗಳಲ್ಲಿ ಆತ ಒಮ್ಮೆಯಾದರೂ ಇಣುಕುವ ಅತಿಥಿ. ಅಲ್ಲೆಲ್ಲೊ ಸಮುದ್ರದ ಮೇಲೆ ಆಗಾಗ್ಗೆ ನೂರೆಂಟು ಭಾರಗಳು. ಮಳೆಗೆ ಅಲ್ಲಲ್ಲಿ ಎಕ್ಸ್ಟ್ರಾ ಡ್ಯೂಟಿ. ತರಗತಿಯಲ್ಲಿ ನೋಡಿ ಮಕ್ಕಳೇ ಕಾಲಗಳು ಮೂರು, ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಅಂದೆ. ಒಬ್ಬ ಪೋರ ಕಿಕೀಕ್ ಅಂತ ನಕ್ಕು ಹೇಳಿದ “ಬಿಸಿಲು ಇದ್ದಾಗ ಬರುತ್ತೆ ಚಳಿ ಇದ್ದಾಗಲೂ ಬರುತ್ತಲ್ಲ” ಅಂತ. “ಹೌದು ಮಳೆಗೆ ಈಗ ವಿಶೇಷ ಸೀಸನ್ ಪಾಸ್ ಸಿಕ್ಕಿದೆ” ಎಂದೆ. ಹೇಳು ಮಳೆಯೆ ಮಕ್ಕಳ ಮುಂದೆ ಹೀಗೆ ನೀನು ಅವಮಾನಿಸುವುದು ಸರಿಯೇ..?
ಸದಾಶಿವ್ ಸೊರಟೂರು ಬರಹ
Posted by ಸದಾಶಿವ ಸೊರಟೂರು | Apr 15, 2022 | ದಿನದ ಕವಿತೆ |
“ಇಲ್ಲಿ ಸರ್ಕಾರಿ ಆಸ್ಪತ್ರೆಯ ದಾದಿಯ
ಮೇಲೆ ದೂರೊಂದು ದಾಖಲಾಗಿದೆ
ಕಟಕಟೆಯಲಿ ನಿಲ್ಲಬೇಕಾದವರು
ಅಲ್ಲೆಲ್ಲೊ ಮೀಸೆ ತಿರುವುತ್ತಿದ್ದಾರೆ
ತರುಣಿಯ ಹೆಸರು ಬೀದಿ ಬೀದಿ
ಅಲೆಯುತ್ತಿದೆ”- ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ
Posted by ಸದಾಶಿವ ಸೊರಟೂರು | Feb 13, 2022 | ವಾರದ ಕಥೆ, ಸಾಹಿತ್ಯ |
ಬೆಳಕಿರುವ ಜಗದಲ್ಲಿ ತನ್ನವರು ಎಲ್ಲೋ ಕಳೆದು ಹೋಗಿರುವಾಗ ಹುಡುಕಿ ಸೇರಿಕೊಳ್ಳಲು ಹಂಬಲಿಸಿ ಸೋತು ಹೋದಳು. ಸುಮ್ಮನೆ ಅಲೆಯಬೇಕು. ಒಂದೂರಲಿ ಒಂದೆರಡು ದಿನ. ಭಿಕ್ಷೆಯ ಕೂಳು ಹೊಟ್ಟೆಗಿತ್ತು. ಹರಿದ ಎರಡು ದುಪ್ಪಟಿಗಳು ರಾತ್ರಿ ಚಳಿಗಿದ್ದವು. ರಾತ್ರಿ ಮಾತ್ರ ಸ್ನಾನದ ಹಂಗಿನಲ್ಲಿ ಅವಳ ಬೆತ್ತಲೆ ದೇಹವನ್ನು ನೋಡಿತ್ತು. ಆಚೆ ನೆಲದಲ್ಲಿ ಕೂಡಿಸಿಟ್ಟ ಮೂರು ಕಲ್ಲುಗಳು ಅವಳ ಅಡುಗೆ ಮನೆ. ಇಂತಿಪ್ಪ ಆಕೆಯ ಬದುಕು ಬೆಳಕು, ಕತ್ತಲುಗಳ ಮಧ್ಯೆ ನುಗ್ಗುತ್ತಿತ್ತು.
ಸದಾಶಿವ ಸೊರಟೂರು ಬರೆದ ಕಥೆ “ಬಯಲು” ನಿಮ್ಮ ಈ ಭಾನುವಾರದ ಓದಿಗೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿನಮ್ಮ ಕನ್ನಡ ಕಥನ ಪರಂಪರೆಯಲ್ಲಿ ರಶೀದರನ್ನು ಯಾರ ಜೊತೆ ನಿಲ್ಲಿಸಬಹುದು? ಯಾರ ಜೊತೆಗೂ ಅಲ್ಲ. ಅವರನ್ನು ಓದುತ್ತಿರುವಾಗ ನನಗೆ ಕೆಲವೊಮ್ಮೆ ಮಲಯಾಳಂನ ಒ.ವಿ. ವಿಜಯನ್ ಮತ್ತು ಪಾಲ್...
Read More