Advertisement

ಸುಕನ್ಯಾ ವಿಶಾಲ ಕನಾರಳ್ಳಿ

ಸುಕನ್ಯಾ ವಿಶಾಲ ಕನಾರಳ್ಳಿ

ಲೇಖಕಿ, ಅನುವಾದಕಿ ಮತ್ತು ಇಂಗ್ಲೀಷ್ ಪ್ರಾಧ್ಯಾಪಕಿ. ‘ಹೇಳುತೇನೆ ಕೇಳು: ಹೆಣ್ಣಿನ ಆತ್ಮಕಥನಗಳು’ ಇವರ ಮುಖ್ಯ ಕೃತಿ. ‘An Afternoon with Shakuntala’ ವೈದೇಹಿ ಅವರ ಕಥೆಗಳ ಇಂಗ್ಲೀಷ್ ಅನುವಾದ. ಕೊಡಗು ಜಿಲ್ಲೆಯ ಕನಾರಳ್ಳಿಯವರು. ನ್ಯೂಜಿಲ್ಯಾಂಡಿನಲ್ಲಿ ವಾಸವಾಗಿದ್ದಾರೆ.

ಬಿಯರಿಗೆ ಗೊಜ್ಜವಲಕ್ಕಿ ಜೊತೆಯಾದ ಕತೆ

ನಾನು ಬಿಯರನ್ನು ಕುಡಿಯಲು ಆರಂಭಿಸಿದ್ದು ಹೈದರಾಬಾದಿನ ಬಿಸಿಲಿನಲ್ಲಿ ಬಸವಳಿಯುತ್ತಿದ್ದಾಗ. ಮೊದಲ ವರ್ಷ ಆಂಧ್ರದಲ್ಲಿ ಮದ್ಯ ನಿಷೇಧವಿದ್ದರಿಂದ ಅದೊಂದು ಅಭ್ಯಾಸವಾಗಿರಲಿಲ್ಲ. ಆ ನಿಷೇಧ ತೆರವಾದ ದಿನವೇ ನನ್ನ ಸಹಪಾಠಿ ಅನ್ಸಾರಿ ಹೋಗಿ ಬಿಯರಿನ ದೊಡ್ಡದೊಂದು  ಕಾರ್ಟನ್ ಹೊತ್ತುಕೊಂಡು ವಿಮೆನ್ಸ್ ಹಾಸ್ಟೆಲ್ಲಿಗೆ ಬಂದಾಗ, ನಾವು ಸ್ನೇಹಿತೆಯರೆಲ್ಲರೂ ಒಟ್ಟಾಗಿ ಹೋ ಎಂದು ಗುಲ್ಲೆಬ್ಬಿಸಿದ್ದು ಸೀಫೆಲ್ ವಿಶ್ವವಿದ್ಯಾಲಯದ ಇತಿಹಾಸದ ಭಾಗವಾಗಿ ಹೋಗಿದೆ.
‘ಕನಾರಳ್ಳಿ ಕಾರ್ನರ್’ ನಲ್ಲಿ ಸುಕನ್ಯಾ ವಿಶಾಲ ಕನಾರಳ್ಳಿ ಮಂಡಿಸಿರುವ ಆಹಾರೋಪಾಖ್ಯಾನ ನಿಮಗಾಗಿ.

Read More

ಹಳೆಯದೆಲ್ಲಾ , ಹೊಳೆದದ್ದೆಲ್ಲಾ ಚಿನ್ನವೆ?

ಎಂದೋ ಬಹಳ ಆಪ್ತವಾದ ಸ್ನೇಹಿತರಾಗಿದ್ದವರು ಅನಿವಾರ್ಯ ಕಾರಣಗಳಿಗಾಗಿ ಅಗಲೇಬೇಕು. ಮತ್ತೆ ಎಷ್ಟೋ ವರ್ಷಗಳ ನಂತರ ಭೇಟಿಯಾದಾಗ, ಸೃಷ್ಟಿಯಾಗುವ ಅಂತರದಲ್ಲಿ ಎಷ್ಟೊಂದು ಹೊಸನೀರು ಹರಿದು ಹೋಗಿರುತ್ತದೆ! ಅಂತಹ ಬದಲಾವಣೆಗಳನ್ನು ಒಪ್ಪಿಕೊಳ್ಳದೇ ಹಳೆಯ ನಿರೀಕ್ಷೆಗಳಲ್ಲಿಯೇ ಹಳೆಯ ಸ್ನೇಹವನ್ನು ನೋಡುವುದು ಸರಿಯಲ್ಲ ಎಂದು ಅನೇಕ ಬಾರಿ ಅನಿಸಿದ್ದಿದೆ. ಸ್ನೇಹ-ಭೇಟಿಯ ಅನುಭವಗಳ ಕುರಿತು ತಮ್ಮ ಕನಾರಳ್ಳಿ ಕಾರ್ನರ್ ನಲ್ಲಿ ಸುಕನ್ಯಾ ವಿಶಾಲ ಕನಾರಳ್ಳಿ ಬರಹ ಇಲ್ಲಿದೆ. 

Read More

ಚಳಿ ಇರಲಿ, ಮಳೆ ಬರಲಿ, ಖುಷಿಯ ಚಿಲುಮೆಯಿರಲಿ

ಅವನಿಗೆ ಹೋಲಿಸಿದರೆ ನಾನೊಂಥರಾ ಸುಖಿ. ವಯಸ್ಸಿನ ಪ್ರಭಾವವಿರಬಹುದೋ ಏನೋ. ಅವನು ನನಗಿಂತ ಚಿಕ್ಕವನೇ. ಹಲವಾರು ವರ್ಷಗಳು ಎಲ್ಲಿಯೂ ಸಲ್ಲದೇ ಒದ್ದಾಡಿದ ಮೇಲೆ ಈಗ ಶೆಟ್ಟಿ ಬೀಡು ಬಿಟ್ಟ ಕಡೆಯೇ ಪಟ್ಟಣ ಅಂತ ಆರಾಮವಾಗಿದ್ದೇನೆ. ಬೆಳೆಯುತ್ತಿರುವ ತರಕಾರಿಗಳನ್ನು ನೋಡುತ್ತಾ, ಸೂರ್ಯನಿದ್ದಾಗ ಅರಳಿ ಚೆಲ್ಲುನಗೆ ಬೀರುತ್ತಾ ನಿಲ್ಲುವ ನಮ್ಮ ಮನೆಯ ಪುಟಾಣಿ ಸೂರ್ಯಕಾಂತಿಗಳು ಸಂಜೆ ಜೋಲುಮುಖವಾದಾಗ ವಿಸ್ಮಯ ಪಡುತ್ತಾ‌ ಹೇಗೆ ಬದುಕಬಹುದು ಎಂದು ಬರೆದಿದ್ದಾರೆ ಸುಕನ್ಯಾ ವಿಶಾಲ ಕನಾರಳ್ಳಿ

Read More

ಆಯ್ಕೆಯ ಸ್ವಾತಂತ್ರ್ಯದಲ್ಲಿ ನಂಬಿಕೆಗಳು

ಆಯ್ಕೆಯ ಸ್ವಾತಂತ್ರ್ಯ ಇಲ್ಲದಾಗ ತಮ್ಮ ಸ್ಥಿತಿಯನ್ನು ಸಮರ್ಥಿಸಿಕೊಳ್ಳಲು ನೂರಾರು ನೆಪಗಳು ಹುಟ್ಟಿಕೊಳ್ಳುತ್ತವೆ. ಇಷ್ಟಕ್ಕೂ ಹೆಚ್ಚಿನಂಶ ಮಂದಿಗೆ ಆಯ್ಕೆಯ ಸ್ವಾತಂತ್ರ್ಯವೂ ಭಯ ಹುಟ್ಟಿಸಬಲ್ಲದು. ಸ್ಟಾಫ್ ರೂಮಿನಲ್ಲಿ ಯಾವುದೋ ವಿದ್ಯಾರ್ಥಿನಿ ಕನ್ನಡ ಮೇಡಮ್ಮನ್ನ ಉಬ್ಬಿಸಲೊ ಏನೋ, ‘ನಾನು ನಮ್ಮಪ್ಪ ಒಪ್ಪಿದವನ್ನೇ ಮದುವೆ ಆಗೋದಪ್ಪಾ!’ ಎಂದು ಹೇಳುತ್ತಿದ್ದಾಗ ಸುಮ್ಮನಿರಲಾರದೆ, ‘ಯಾಕೆ? ಮದುವೆ ದಬ್ಹಾಕಿಕೊಂಡರೆ ಅಪ್ಪನ್ನ ದೂರಬಹುದು ಅಂತಲಾ?’ ಅಂತ ಕೇಳಿ ಆ ಹುಡುಗಿ ಪೆಚ್ಚಾದಾಗ ಪಾಪ ಅಂತ ಅನ್ನಿಸಿತ್ತು.
ಸುಕನ್ಯಾ ವಿಶಾಲ ಕನಾರಳ್ಳಿ ಬರೆಯುವ ‘ಕನಾರಳ್ಳಿ ಕಾರ್ನರ್’

Read More

ಮಳೆಯ ನೆನಪಿನೊಡನೆ ಹುಟ್ಟು-ಹೆಸರಿನ ಪುಟ್ಟ ಜಿಜ್ಞಾಸೆ

ವೃತ್ತಿಪರರ ನಡುವಿನ ಸ್ಪರ್ಧೆ! ಯಾಕೆ ಅಂತ ಗೊತ್ತಾಗುತ್ತಿರಲಿಲ್ಲ. ಮಾಡಿಸಿದ ಹೆರಿಗೆಗಳ ಲೆಕ್ಕ ಕೊಡಬೇಕಿತ್ತೊ ಏನೋ. ಅಮ್ಮ ಮಾತ್ರ ಕೆಲವೊಮ್ಮೆ ಬೈಯುವಾಗ ‘ಹುಟ್ಟಿದ ತಕ್ಷಣ ಆ ಕಿರಿಸ್ತಾನಿ ಬಜಾರಿ ನಿನ್ನ ಬಾಯೊಳಗೆ ಬೆರಳು ಹಾಕಿದಳೋ ಏನೋ, ಅದಕ್ಕೇ ಅವಳ ತರವೇ ಆಡ್ತೀಯಾ!’ ಅಂತ ಗೊಣಗುತ್ತಿದ್ದರು. ನನಗೆ ಯಾರನ್ನು ಆರಿಸಿಕೊಳ್ಳುವುದು ಅಂತ ಕಷ್ಟವಾಗುತ್ತಿತ್ತು. ಶಾಂತ ಕಣ್ಣುಗಳ ರಾಜಮ್ಮ ನರ್ಸು , ನಮ್ಮ ಸ್ಕೂಲು ಹೆಡ್ ಮಾಸ್ತರರ ಹೆಂಡತಿ. ನನ್ನ ಸ್ಕೂಲುಪ್ರೇಮದ ದೆಸೆಯಿಂದ ರಾಜಮ್ಮ ನರ್ಸನ್ನು ಆರಿಸಿಕೊಳ್ಳುತ್ತಿದ್ದೆ.
‘ಕನಾರಳ್ಳಿ ಕಾರ್ನರ್‌’ ನಲ್ಲಿ ಸುಕನ್ಯಾ ವಿಶಾಲ ಕನಾರಳ್ಳಿ ಬರಹ

Read More

ಜನಮತ

ಕನ್ನಡದಲ್ಲಿ ಈಗ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

10 hours ago
ಅಮ್ಮನ ನಂಬಿಕೆ, ಔಷಧಿಗಳ ಮಹಿಮೆಯಲ್ಲಿ ಕಳೆದ ಬಾಲ್ಯ

https://t.co/SAcdvJn21A
14 hours ago
ಆಕ್ಸಿಡೆಂಟಿನ ಆಲದಮರ ಮತ್ತು ತೇಜಸ್ವಿಯ ‘ಮಾಯಾಮೃಗ’

https://t.co/jRwQXDNkvJ
19 hours ago
ಸಮಾಜ ವಿಮರ್ಶಕ ಕವಿ ಅ.ಗೌ.ಕಿನ್ನಿಗೋಳಿ

https://t.co/yYzr8u7eTg

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಆರ್.ದಿಲೀಪ್ ಕುಮಾರ್ ಹೊಸ ಪುಸ್ತಕದ ಕುರಿತು ರವೀಂದ್ರನಾಯಕ್‌ ಬರಹ

ಹಳೆಗನ್ನಡದ ಪಠ್ಯಗಳನ್ನು ಓದಬೇಕು ಎಂಬ ಆಸೆಗೆ ಪೂರಕವಾಗಿ ದೊರೆತುದು ಎಚ್.ಎಸ್. ವೆಂಕಟೇಶ ಮೂರ್ತಿಯವರ 'ಕುಮಾರವ್ಯಾಸ ಕಥಾಂತರ'. ಇದು ಕುಮಾರವ್ಯಾಸನ ಕಾವ್ಯಕ್ಕೆ ಹೊಸಬರಿಗೆ ಪ್ರವೇಶ ಮಾಡಲಿಕ್ಕೊಂದು ಸುಲಭದ ದಾರಿ ಅಂತ...

Read More