Advertisement
ಮಾಲಾ ಮ. ಅಕ್ಕಿಶೆಟ್ಟಿ

ಮಾಲಾ ಅಕ್ಕಿಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ. ಲೇಖನ, ಕವಿತೆ, ಕಥೆ, ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ. ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ

ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

“ಮಲ್ಲಿಗೆ ಮಾಲೆಯ ಮೊಳ ಅಳೆಯುತ್ತಾ
ಆಸೆಗಣ್ಣಾದ ಹರೆಯದವಳ ಹಸಿ ಎದೆಯಲ್ಲಿ
ಬಿಸಿಗನಸು ಮೂಡಿಸಿತು-
ಮತ ಪಂಥಗಳ ಬಿಸಿಯುಸಿರಲ್ಲಿ ಬೆಂದು
ಬಿಸಿನೆತ್ತಿಯಾದವನಲ್ಲಿ ತುಸು ಚಣಗಳ
ಶಾಂತತೆ ಹುಟ್ಟುಹಾಕಿತು-
ರಾವಣನೆದೆಯಲ್ಲಿ ರಾಮನನ್ನು ಸೃಜಿಸಿತು-“- ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

Read More

ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಅಲ್ಲಿದ್ದ ಟೀಪಾಯಿಯತ್ತ ನೋಡಿದರೆ ಚಹಾದ ಲೋಟ ಇಲ್ಲ. ಹೆಂಡತಿಯಲ್ಲಿ ಕೇಳೋಣ ಎಂದುಕೊಂಡ ಅವರು ಮನೆಯೊಳಗೆ ಹೋದರೆ ಅಲ್ಲಿ ಅವರ ಹೆಂಡತಿ ಇನ್ನೂ ಕೂಡಾ ಫೋನ್‌ನಲ್ಲಿ ಮಾತನಾಡುತ್ತಿದ್ದಾಳೆ. ಡೈನಿಂಗ್ ಟೇಬಲ್ ಮೇಲೆ ಚಹಾದ ಲೋಟ ಇದೆ. ಲೋಟ ಎತ್ತಿಕೊಳ್ಳಹೋದಾಗ ಕೃಷ್ಣಾಚಾರ್ಯರ ಕೈತಗುಲಿ ಲೋಟ ಬಿದ್ದು, ಒಂದು ಲೋಟ ಚಹಾ ಎಲ್ಲ ಚೆಲ್ಲಿಹೋಯಿತು. ಅದನ್ನು ನೋಡಿದ ಅವರ ಹೆಂಡತಿ “ಸರಿ ಕಂದಾ, ನಾನೇ ಮತ್ತೆ ಕಾಲ್ ಮಾಡುತ್ತೇನೆ” ಎಂದು ಹೇಳಿ, ಕಾಲ್ ಕಟ್ ಮಾಡಿದಳು.
ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಒಂದು ಲೋಟ ಚಹಾ”

Read More

ಕಳೆದ ವರ್ಷದ ಹಲವು ಬಣ್ಣಗಳು..: ವಿಶ್ವನಾಥ ಎನ್ ನೇರಳಕಟ್ಟೆ ಬರಹ

ಐಸ್‌ಕ್ಯಾಂಡಿ ತೆಗೆದುಕೊಳ್ಳಬೇಕೆಂಬ ಯೋಚನೆ ಮೊದಲು ಬಂದದ್ದು ಅಣ್ಣನಿಗೆ. ಹೋಗಿ ನಿಂತ ನಾವು ಮೂರು ಐಸ್‌ಕ್ಯಾಂಡಿ ಕೊಡಲು ಹೇಳಿದೆವು. ನನಗೆ ಆಮೇಲೆಯೇ ಹೊಳೆದದ್ದು, ಮನೆಯಲ್ಲಿ ಅಮ್ಮ ಇದ್ದಾಳೆ. ಅಮ್ಮನಿಗೆಂದು ಇನ್ನೊಂದು ಐಸ್‌ಕ್ಯಾಂಡಿ ಕೊಡಲು ಹೇಳಿದೆ. ನಾನು ಎರಡು ಕೈಗಳಲ್ಲಿಯೂ ಐಸ್‌ಕ್ಯಾಂಡಿ ಹಿಡಿದು ಹೊರಟೆ. “ಮನೆ ಮುಟ್ಟುವಷ್ಟರಲ್ಲಿ ಅದು ಕರಗಿಹೋಗಿರುತ್ತದೆ. ಬೇಡ” ಎಂದು ಹೇಳಿದ ಅಪ್ಪನ ಮಾತು ನನ್ನ ಕಿವಿಯನ್ನೇ ಹೊಕ್ಕಿರಲಿಲ್ಲ.
೨೦೨೩ನೇ ವರ್ಷ ಬದುಕಿಗೆ ಹಚ್ಚಿದ ಹಲವು ಬಣ್ಣಗಳ ಕುರಿತು ವಿಶ್ವನಾಥ ಎನ್.‌ ನೇರಳಕಟ್ಟೆ ಬರಹ

Read More

ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

“ಸೀಳುವ ಆಯುಧಕ್ಕೂ ಮುತ್ತಿಟ್ಟು
ರಂಧ್ರ ಕೊರೆದರೂ ನೋಯದೆ
ಎಲ್ಲವನ್ನೂ ಒಪ್ಪಿಕೊಳ್ಳುವುದು;
ಅಪ್ಪಿಕೊಳ್ಳುವುದು”-ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

Read More

ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಸಹಜೀವನ”

ಮನಸ್ಸನ್ನು ಹಂಚಿಕೊಳ್ಳುವುದು, ಕನಸನ್ನು ಹಂಚಿಕೊಳ್ಳುವುದು, ಬದುಕನ್ನು ಹಂಚಿಕೊಳ್ಳುವುದು, ಬದುಕಿನ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು’- ಪ್ರಚೇತನನ ಪಾಲಿಗೆ ಅಪರಿಚಿತವಾಗಿದ್ದ ಈ ಚಿಂತನೆ ಆತನ ಚಿತ್ತಭಿತ್ತಿಯಲ್ಲಿ ಮತ್ತೆ ಮತ್ತೆ ಅನುರಣಿಸತೊಡಗಿತು. ಪ್ರಣತಿಯನ್ನು ಬಿಟ್ಟುಬರುವ ವಾರದಲ್ಲಿ ತಾನು ಅನಾರೋಗ್ಯಕ್ಕೀಡಾದಾಗ ಕಡಿದುಹೋಗುವ ಸಂಬಂಧ ತಮ್ಮದೆಂದು ಮನದಟ್ಟಾದ ಬಳಿಕವೂ ಆಕೆ ತನ್ನನ್ನು ಉಪಚರಿಸಿದ ರೀತಿ, ವಹಿಸಿದ ಅತೀವ ಕಾಳಜಿ ಪ್ರಚೇತನನಿಗೆ ಈಗ ನೆನಪಾಯಿತು.
ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಕತೆ “ಸಹಜೀವನ”

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ