
ಅಕ್ಷತಾ ಪಾಂಡವಪುರ
ಪ್ರಶಸ್ತಿ ವಿಜೇತ ಚಿತ್ರನಟಿ ಮತ್ತು ರಂಗಕರ್ಮಿ. ಎನ್ ಎಸ್ ಡಿ ಪದವೀದರೆ. ಊರು ಪಾಂಡವಪುರ.ಇರುವುದು ಬೆಂಗಳೂರು.
3 Posts
ಅಂಜನಾ ಗಾಂವ್ಕರ್
ಅಂಜನಾ ಗಾಂವ್ಕರ್ ಕುಮಟಾದಲ್ಲಿ ಶಿಕ್ಷಕ ತರಬೇತಿ ಮುಗಿಸಿ ಏಳು ವರ್ಷಗಳ ಕಾಲ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಹಿಂದಿ ಭಾಷೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ಈಗ ಯಲ್ಲಾಪುರದ ದಟ್ಟ ಅರಣ್ಯದ ನಡುವೆ ಪುಟ್ಟ ಮನೆ ಮಾಡಿದ ರೈತ ಮಹಿಳೆ. ಕತೆ ಬರೆಯೋದು ಇವರ ಹವ್ಯಾಸ.
1 Post
ಅನು ಪಾವಂಜೆ
ಮುಂಬಯಿಯಲ್ಲಿ ಬದುಕುತ್ತಿರುವ ಕನ್ನಡ ಕವಯಿತ್ರಿ ಮತ್ತು ಚಿತ್ರ ಕಲಾವಿದೆ. ಹುಟ್ಟೂರು ಮಂಗಳೂರು. ಸಾಂಪ್ರದಾಯಿಕ ಕಲಾ ಪ್ರಾಕಾರದಲ್ಲಿ ವಿಶೇಷ ಆಸಕ್ತಿ.
1 Post
ಅನುಷ್ ಎ ಶೆಟ್ಟಿ
ಮೈಸೂರಿನಲ್ಲಿ ಬದುಕುತ್ತಿರುವ ತರುಣ ಕಾದಂಬರಿಗಾರ ಮತ್ತು ಸಂಗೀತ ಕಲಾವಿದ. ‘ನೀನು ನನ್ನೊಳಗೆ ಖೈದಿ’ ಇವರ ಇತ್ತೀಚಿನ ಕಾದಂಬರಿ.
1 Post
ಅಬ್ದುಲ್ ರಶೀದ್
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಲಕ್ಷದ್ವೀಪ ಕವರತ್ತಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.
75 Posts
ಅರವಿಂದ
ಅರವಿಂದ ಮೂಲತಃ ಚಿಕ್ಕಬಳ್ಳಾಪುರದ ಮಾವಿನಕಾಯನಹಳ್ಳಿಯವರು.ಈಗ ಬೆಂಗಳೂರಿನ ರಾಮನ್ ರಿಸರ್ಚ್ ಇನ್ಸ್ಟಿ ಟ್ಯೂಟ್ ನಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ತಾರ್ಕಿಕವಾಗಿ ಉತ್ತರಿಸಲಾಗದ ಪ್ರಶ್ನೆಗಳು ಎದುರಾದಾಗ ಕಾವ್ಯದ ಮೊರೆ ಹೋಗುತ್ತಾರೆ
1 Post
ಆರ್. ದಿಲೀಪ್ ಕುಮಾರ್
ಆರ್ . ದಿಲೀಪ್ ಕುಮಾರ್ ಮೂಲತಃ ಚಾಮರಾಜನಗರದವರು. ಸಾಹಿತ್ಯ ವಿಮರ್ಶೆ, ಸಂಶೋಧನೆ, ಕಾವ್ಯ ರಚನೆ ಮತ್ತು ಭಾಷಾಂತರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
17 Posts
ಆರ್. ವಿಜಯರಾಘವನ್
ಕವಿ, ಕಥೆಗಾರ, ಕಾದಂಬರಿಗಾರ ಮತ್ತು ಅನುವಾದಕ. ಕವನ ಸಂಕಲನ ‘ಅನುಸಂಧಾನ’, ಕಾದಂಬರಿ ‘ಅಪರಿಮಿತದ ಕತ್ತಲೊಳಗೆ’ ” ಸಮಗ್ರ ಕವಿತೆಗಳ ಸಂಕಲನ ‘ಪ್ರೀತಿ ಬೇಡುವ ಮಾತು’ ಇವರ ಮುಖ್ಯ ಕೃತಿಗಳು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯವರು.
23 Posts
ಆಶಾ ಜಗದೀಶ್
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ "ಮೌನ ತಂಬೂರಿ."
40 Posts
ಇ. ಆರ್. ರಾಮಚಂದ್ರನ್
ಫಿಲಿಪ್ಸ್ ಕಂಪನಿಯಿಂದ ನಿವೃತ್ತರಾದ ನಂತರ ಮೈಸೂರಿನಲ್ಲಿ ನೆಲೆಸಿದ್ದಾರೆ. ಅವರು `ಶಂಕರ್ಸ್ ವೀಕ್ಲಿ'ಯಲ್ಲಿ ಹಾಸ್ಯ ಲೇಖನವನ್ನು ಬರೆಯುತ್ತಿದ್ದರು. ಈಗ ಅಪರಂಜಿ ಮಾಸಿಕ ಪತ್ರಿಕೆಗೆ ಹಾಸ್ಯ ಲೇಖನ ಬರೆಯುತ್ತಾರೆ. ಚುರುಮುರಿ, ಹಿಂದುಸ್ತಾನ್ ಟೈಮ್ಸ್, ಸಿಎನೆನ್ ಮತ್ತು ನ್ಯೂಸ್ ೧೮ ಲ್ಲಿಯೂ ಅವರ ಲೇಖನಗಳು ಪ್ರಕಟವಾಗಿವೆ.
9 Posts
ಉಮಾರಾವ್
ಖ್ಯಾತ ಕಥೆಗಾರ್ತಿ ಮತ್ತು ಅಂಕಣಗಾರ್ತಿ. ಹುಟ್ಟಿದ್ದು ಮತ್ತು ಈಗ ಇರುವುದು ಬೆಂಗಳೂರು. ‘ಅಗಸ್ತ್ಯ , ಕಡಲ ಹಾದಿ, ಸಿಲೋನ್ ಸುಶೀಲ ಕಥಾ ಸಂಕಲನಗಳು. ‘ನೂರು ಸ್ವರ’ ಕಾದಂಬರಿ. ‘ಮುಂಬೈ ಡೈರಿ’ ಅಂಕಣ ಬರಹಗಳ ಸಂಕಲನ. ‘ರಾಕೀ ಪರ್ವತಗಳ ನಡುವೆ ಕ್ಯಾಬರೆ’ ಪ್ರವಾಸ ಕಥನ. ‘ಬಿಸಿಲು ಕೋಲು', ಖ್ಯಾತ ಸಿನೆಮಾ ಛಾಯಾಗ್ರಾಹಕ ವಿ. ಕೆ ಮೂರ್ತಿಯವರ ಜೀವನ ಚರಿತ್ರೆ.
11 Posts
ಉಮೇಶ ದೇಸಾಯಿ
ಉಮೇಶ ದೇಸಾಯಿ ವೃತ್ತಿಯಿಂದ ಲೆಕ್ಕಿಗ. ಪ್ರವೃತ್ತಿಯಿಂದ ಲೇಖಕ. ಎರಡು ಕಿರುಕಾದಂಬರಿಗಳು- ‘ಭಿನ್ನ’ ಹಾಗೂ ‘ಅನಂತಯಾನ’ ಪ್ರಕಟವಾಗಿವೆ. ‘ಚೌಕಟ್ಟಿನಾಛೆ’ ಎಂಬ ಕಥಾಸಂಕಲನವೂ ಪ್ರಕಟವಾಗಿದೆ. ‘ಮೈತ್ರಿ ಪ್ರಕಾಶನ’ದ ಮೂಲಕ ಇಲ್ಲಿಯವರೆಗೆ ೧೫ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
1 Post
ಎಂ ಆರ್ ಭಗವತಿ
ಪಕ್ಷಿ ಛಾಯಾಚಿತ್ರಗ್ರಾಹಕಿ ಮತ್ತು ಕವಯಿತ್ರಿ. ವಿಜ್ಞಾನ, ಕಲೆ ವಿಷಯಗಳಲ್ಲೂ ಸಮಾನವಾದ ಆಸಕ್ತಿ. 'ಏಕಾಂತದ ಮಳೆ ಮತ್ತು 'ಚಂಚಲ ನಕ್ಷತ್ರಗಳು’ಪ್ರಕಟಿತ ಕವನ ಸಂಕಲನಗಳು. ಹುಟ್ಟೂರು ಚಿಕ್ಕಮಗಳೂರು. ವಾಸ ಬೆಂಗಳೂರು.
2 Posts
ಎ. ಎನ್. ಪ್ರಸನ್ನ
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ(ಕಥಾ ಸಂಕಲನ) ಇತ್ತೀಚಿನ ಪ್ರಕಟಣೆಗಳು.
7 Posts
ಎಂ. ವೆಂಕಟಸ್ವಾಮಿ
ಎಂ.ವೆಂಕಟಸ್ವಾಮಿ ಜಿಯಾಲಿಜಿಕಲ್ ಸರ್ವೇ ಆಫ್ ಇಂಡಿಯಾದಲ್ಲಿ ವೃತ್ತಿಯಲ್ಲಿದ್ದವರು. ಇವರ ನಾಗಾಲ್ಯಾಂಡಿನ ಪ್ರವಾಸ ಕಥನ ‘ಅಲೆಮಾರಿಯ ಹೆಜ್ಜೆಗಳು’ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಗೊಂಡಿದೆ.
2 Posts
ಎಂ.ಆರ್. ದತ್ತಾತ್ರಿ
ಎಂ.ಆರ್. ದತ್ತಾತ್ರಿ ಮೂಲತಃ ಚಿಕ್ಕಮಗಳೂರಿನವರು. ಹಲವಾರು ವರ್ಷ ಅಮೇರಿಕಾದಲ್ಲಿ ಕೆಲಸ ಮಾಡಿ ಈಗ ಬೆಂಗಳೂರಿಗೆ ವಾಪಾಸಾಗಿದ್ದಾರೆ. `ಮಸುಕು ಬೆಟ್ಟದ ದಾರಿ' ಇವರ ಇತ್ತೀಚಿನ ಕಾದಂಬರಿ.
1 Post
ಎಂ.ಎಸ್. ಪ್ರಕಾಶ್ ಬಾಬು
ಚಿತ್ರ ನಿರ್ದೇಶಕ,ಕಥಾಲೇಖಕ ಮತ್ತು ಕಲಾವಿದ. ‘ಅತ್ತಿಹಣ್ಣು ಮತ್ತು ಕಣಜ’ ಇವರ ಪ್ರಶಸ್ತಿ ವಿಜೇತ ಚಿತ್ರ. ಚಿತ್ರದುರ್ಗ ಹುಟ್ಟೂರು.ಈಗ ಇರುವುದು ಬೆಂಗಳೂರು.
1 Post
ಎಂ.ಎಸ್.ಶ್ರೀರಾಂ
ಶ್ರೀರಾಂ, ಎಂ. ಎಸ್. (೧೬ ಮೇ, ೧೯೬೨). ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟಿನ ಪ್ರಾಧ್ಯಾಪಕರಾಗಿದ್ದಾರೆ. ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್, ತಮಿಳು ಭಾಷೆಗಳನ್ನು ಬಲ್ಲವರು. ಗ್ರಾಮೀಣ ಅಭಿವೃದ್ಧಿ ಇವರ ಪರಿಣತಿಯ ವಿಷಯ. ಸಮಕಾಲೀನ ಸಾಹಿತ್ಯ, ರಂಗಭೂಮಿ, ಸಿನಿಮಾ ಇವರ ಆಸಕ್ತಿಯ ವಿಷಯಗಳು. ಮಾಯಾದರ್ಪಣ (೧೯೯೧) ಮತ್ತು ಆವರವರ ಸತ್ಯ (೧೯೯೬) ಇವರ ಪ್ರಕಟಿತ ಕಥಾ ಸಂಕಲನಗಳು. ರೂಮಿ ಟೋಪಿ ಪ್ರಕಟಗೊಳ್ಳಲಿರುವ ಇವರ ಪ್ರಬಂಧ ಸಂಕಲನ.
8 Posts
ಎಂ.ಜಿ. ಶುಭಮಂಗಳ
ಕೋಲಾರ ಜಿಲ್ಲೆಯ ಗುಡಿಬಂಡೆಯವರು. ಪತ್ರಕರ್ತೆ ಮತ್ತು ಅನುವಾದಕಿಯಾಗಿ ವಿವಿಧ ನಿಯತಕಾಲಿಕೆಗಳಲ್ಲಿ ಕೆಲಸ ಮಾಡಿದ್ದಾರೆಅನುವಾದಿತ ತೆಲುಗು ಕಥೆಗಳು, ಲೇಖನಗಳು, ಸಂದರ್ಶನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ‘ಸಾಧಕರೊಡನೆ’ ಎಂಬ ಸ್ವಂತ ಕೃತಿ ಪ್ರಕಟಗೊಂಡಿದೆ.
6 Posts
ಎಚ್ ಆರ್ ರಮೇಶ್
ಹೊಸ ತಲೆಮಾರಿನ ಪ್ರತಿಭಾವಂತ ಕವಿ. ಊರು ಚಿತ್ರದುರ್ಗದ ಬಳಿಯ ಹರಿಯಬ್ಬೆ. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ.
14 Postsಎಚ್. ಶೇಷಗಿರಿರಾವ್
ಅಪ್ಪಾಜಿ ಎಂದೇ ಪರಿಚಿತರು. ಹಂಪಿಯ ಹತ್ತಿರ ಇವರ ಊರು. ಹಸ್ತಪ್ರತಿ, ಪುರಾತತ್ವ ಪರಿಣಿತರು. ಚಾರಣ, ಓದು, ಬರಹ ನೆಚ್ಚಿನ ಹವ್ಯಾಸ. ನಿವೃತ್ತರಾಗಿ ಒಂದೂವರೆ ದಶಕ.
2 Postsಎಚ್.ಎಸ್. ರಾಘವೇಂದ್ರರಾವ್
ಕನ್ನಡದ ಮುಖ್ಯ ವಿಮರ್ಶಕರಲ್ಲಿ ಒಬ್ಬರು. 'ಹಾಡೆ ಹಾದಿಯ ತೋರಿತು' ಮತ್ತು ‘ತರುತಳೆದ ಪುಷ್ಪ' ಅವರ ಪ್ರಸಿದ್ಧ ಕೃತಿಗಳಲ್ಲಿ ಕೆಲವು.
1 Postಎಚ್.ಎಸ್. ವೆಂಕಟೇಶಮೂರ್ತಿ
ಕನ್ನಡದ ಖ್ಯಾತ ಕವಿಗಳು. ಕಥೆಗಾರರು, ಕಾದಂಬರಿಗಾರರು ಮತ್ತು ಸಾಹಿತ್ಯ ವಿಮರ್ಶಕರೂ ಕೂಡಾ.
1 Postಎಚ್.ವೈ. ರಾಜಗೋಪಾಲ್
ಅಮೇರಿಕಾದಲ್ಲಿ ನೆಲೆಸಿರುವ ಕನ್ನಡದ ಹಿರಿಯ ಲೇಖಕರು.‘ಕನ್ನಡ ಸಾಹಿತ್ಯ ರಂಗ'ದ ಸ್ಥಾಪಕ ಸದಸ್ಯರಲ್ಲೊಬ್ಬರು.
6 Postsಎನ್.ಎ.ಮಹಮದ್ ಇಸ್ಮಾಯಿಲ್
ಮೂಲತಃ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ನಲ್ಲೂರಿನವರು. ಈಗ ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಪತ್ರಕರ್ತ. ಸಾಹಿತ್ಯ, ವಿಜ್ಞಾನ, ಸಿನೆಮಾ, ಅಂತರ್ಜಾಲ, ಧರ್ಮ ಮತ್ತು ರಾಜಕೀಯದ ಕುರಿತು ಖಚಿತವಾಗಿ ಬರೆಯಬಲ್ಲವರು.
1 Postಎನ್.ಎಸ್. ಶಂಕರ್
ಬರಹಗಾರ, ಚಿಂತಕ, ಪತ್ರಕರ್ತ, ಚಿತ್ರ ನಿರ್ದೇಶಕ.ಜನವಾಣಿ, ಪ್ರಜಾವಾಣಿ, ಲಂಕೇಶ್ ಪತ್ರಿಕೆ ಮುಂತಾಗಿ ಹಲವು ಸಂಸ್ಥೆಗಳಲ್ಲಿ ಪತ್ರಕರ್ತನಾಗಿ ದುಡಿಮೆ. ‘ಮುಂಗಾರು’ ದಿನಪತ್ರಿಕೆ ಹಾಗೂ ‘ಸುದ್ದಿ ಸಂಗಾತಿ’ ವಾರಪತ್ರಿಕೆಗಳ ಸಂಸ್ಥಾಪಕರಲ್ಲೊಬ್ಬರು.
2 Postsಎನ್.ಎಸ್. ಶ್ರೀಧರಮೂರ್ತಿ
ಪತ್ರಕರ್ತ, ಅಂಕಣಕಾರ ಹಾಗೂ ಲೇಖಕ. ಮಲ್ಲಿಗೆ ಮಾಸ ಪತ್ರಿಕೆ, ಮಂಗಳ ಹಾಗೂ ವಿಜಯವಾಣಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ಕುರಿತ ಬರವಣಿಗೆಗಳು ಇವರ ವಿಶೇಷ.
1 Postಎನ್.ಬಿ. ಚಂದ್ರಮೋಹನ್
ಎನ್ ಬಿ ಚಂದ್ರಮೋಹನ್ ಹೊಸಕೋಟೆ ತಾಲೂಕಿನ ನೆಲವಾಗಿಲು ಗ್ರಾಮದವರು. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿ, ಪದವಿ ಕಾಲೇಜು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರು. ಬೆಂಗಳೂರಲ್ಲಿ ನೆಲೆಸಿದ್ದಾರೆ.
1 Post
ಎಸ್. ನಾಗಶ್ರೀ
ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ಒಂಭತ್ತು ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.. ಕನ್ನಡ ಸಾಹಿತ್ಯದ ಓದು ಹಾಗೂ ನಿರೂಪಣೆ ಅವರ ಆಸಕ್ತಿಕ್ಷೇತ್ರಗಳು.
1 Post
ಎಸ್. ಸಿರಾಜ್ ಅಹಮದ್
ಕನ್ನಡ ವಿಮರ್ಶಕ, ಲೇಖಕ, ಅನುವಾದಕ. ಮೂಲತಃ ಚಿತ್ರದುರ್ಗದವರು. ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರು
5 Postsಎಸ್.ಎಂ. ಪೆಜತ್ತಾಯ
ತಮ್ಮ ಜೀವಿತದ ಕೊನೆಯ ಘಟ್ಟದಲ್ಲಿ ಬರೆಯಲು ತೊಡಗಿದ್ದ ವೃತ್ತಿಪರ ರೈತ. ಚಾರಣ, ಪ್ರವಾಸ, ತುಂಬಿದ ನದಿಗಳಲ್ಲಿನ ಈಜು, ಬಂದೂಕು ಗುರಿಕಾರಿಕೆ, ಛಾಯಾಗ್ರಹಣ, ಓದು ಎಲ್ಲದರಲ್ಲೂ ಮುಂದಿದ್ದ ಜೀವನೋತ್ಸಾಹಿ.ಈಗ ನಮ್ಮೊಡನಿಲ್ಲ
3 Postsಎಸ್.ದಿವಾಕರ
ಹಿರಿಯ ಕಥೆಗಾರರು, ಅನುವಾದಕರು ಮತ್ತು ಸಂಪಾದಕರು. ಮಲ್ಲಿಗೆ ಮಾಸ ಪತ್ರಿಕೆಯ ಸಂಪಾದಕರಾಗಿದ್ದವರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೋಮತ್ತನಹಳ್ಳಿ ಹುಟ್ಟಿದ ಊರು. ಈಗ ಬೆಂಗಳೂರಿನಲ್ಲಿದ್ದಾರೆ.
1 Postಎಸ್.ಮಂಜುನಾಥ್
ಅಕಾಲಿಕವಾಗಿ ಅಗಲಿದ ಕನ್ನಡದ ಬಹು ಮುಖ್ಯ ಕವಿ. ಹಕ್ಕಿ ಪಲ್ಟಿ, ಬಾಹುಬಲಿ, ಕಲ್ಲ ಪಾರಿವಾಳಗಳ ಬೇಟ ಇವರ ಮುಖ್ಯ ಸಂಕಲನಗಳು. ಸುಮ್ಮನಿರುವ ಸುಮ್ಮಾನ ಎಂಬುದು ತಾವೋ ಚಿಂತನೆಗಳ ಅನುವಾದ.
3 Posts
ಓ.ಎಲ್. ನಾಗಭೂಷಣ ಸ್ವಾಮಿ
ಹೆಸರಾಂತ ವಿಮರ್ಶಕರು, ಭಾಷಾಂತರಕಾರರು ಹಾಗೂ ಇಂಗ್ಲಿಷ್ ಪ್ರಾಧ್ಯಾಪಕರು. ಇದೀಗ ಮೈಸೂರಿನಲ್ಲಿ ನೆಲೆಸಿದ್ದಾರೆ.
33 Posts
ಕಡತೋಕಾ ಗೋಪಾಲಕೃಷ್ಣ ಭಾಗವತ
ಕಡತೋಕಾ ಗೋಪಾಲಕೃಷ್ಣ ಭಾಗವತ. ಉ.ಕ. ಜಿಲ್ಲಾ ಹಳದೀಪುರದ ವಾಸಿ. ಯಕ್ಷಮೀಸಲಾದ ಯಕ್ಷರರಂಗ ಎಂಬ ಮಾಸಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿರುವ ನ್ಯಾಯವಾದಿ ಮತ್ತು ಹವ್ಯಾಸಿ ಭಾಗವತ.
1 Postಕನಕರಾಜು ಬಿ. ಆರನಕಟ್ಟೆ
ಹೊಸ ತಲೆಮಾರಿನ ಕಥೆಗಾರ. ಸಿಲೋನ್ ಸೈಕಲ್ ಇವರ ಇತ್ತೀಚೆಗಿನ ಕಥಾ ಸಂಕಲನ. ಸೌದಿ ಅರೇಬಿಯಾದ ಕಿಂಗ್ ಸೌದ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿರುವ ಇವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಆರನಕಟ್ಟೆಯವರು.
3 Postsಕಪಿಲ ಪಿ ಹುಮನಾಬಾದೆ
ಹೆಸರು ಕಪಿಲ ಪಿ ಹುಮನಾಬಾದೆ ಮೂಲತಃ ಬೀದರ್ ನವರು. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ಅರ್ಥಶಾಸ್ತ್ರ ವಿದ್ಯಾರ್ಥಿ. ಕಾದಂಬರಿಗಳನ್ನು ಓದುವುದು ಇವರ ಮುಖ್ಯ ಆಸಕ್ತಿ. ಕವಿತೆ, ಕಥೆ ಬರೆಯುವುದು ಇವರ ಹವ್ಯಾಸ.
1 Postಕಲೀಮ್ ಉಲ್ಲಾ
ಶಿವಮೊಗ್ಗೆಯಲ್ಲಿ ಕನ್ನಡದ ಮೇಷ್ಟ್ರು. ಮೂಲತಃ ತರೀಕೆರೆಯವರು. ಉತ್ತಮ ಛಾಯಾಗ್ರಾಹಕರೂ ಕೂಡ. ‘ಕ್ಲಾಸ್ ಟೀಚರ್’ಇವರ ಖ್ಯಾತ ಕೃತಿ.
1 Post
ಕಲ್ಲೇಶ್ ಕುಂಬಾರ್
ಕಲ್ಲೇಶ್ ಕುಂಬಾರ್ ಮೂಲತಃ ಬೆಳಗಾವಿ ಜಿಲ್ಲೆಯ ಹಾರೂಗೇರಿಯವರು. ಸಧ್ಯ, ಬಾಗಲಕೋಟ ಜಿಲ್ಲೆಯ ತೇರದಾಳದ ಶಾಖಾ ಗ್ರಂಥಾಲಯದಲ್ಲಿ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 'ಉರಿಯ ನಾಲಗೆಯ ಮೇಲೆ', 'ಉಸುರಿನ ಪರಿಮಳವಿರಲು', 'ನಿಂದ ನಿಲುವಿನ ಘನ' ಇವರ ಪ್ರಕಟಿತ ಕಥಾಸಂಕಲನಗಳು. 'ಪುರುಷ ದಾರಿಯ ಮೇಲೆ' ಕವನಸಂಕಲನದ ಪ್ರಕಟಣೆ.
1 Postಕಾ.ಹು. ಚಾನ್ ಪಾಷ
ಕಾ.ಹು. ಚಾನ್ ಪಾಷ ಮೂಲತಃ ಕೋಲಾರ ಜಿಲ್ಲೆಯ ಬಂಗಾರಪೇಟೆಯವರು. ಅಲ್-ಅಮೀನ್ ಅಂಜುಮನ್ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ, ಮನದ ಮಲ್ಲಿಗೆ(ಚುಟುಕು ಸಂಕಲನ), ಜನ ಮರುಳೋ! ಜಾತ್ರೆ ಮರುಳೋ! (ಕಥಾ ಸಂಕಲನ), 3. ಭಲೇ! ಗಿಣಿರಾಮ (ಮಕ್ಕಳ ನಾಟಕ), ಮೂರು ವರಗಳು (ಮಕ್ಕಳ ನಾಟಕ) ಜೊತೆಗೆ ಕೆಲವು ಅನುವಾದಿತ ಕೃತಿಗಳೂ ಪ್ರಕಟಗೊಂಡಿವೆ.
2 Postsಕಿರಣ ಅಕ್ಕಿ
ಕಿರಣ ಅಕ್ಕಿ ಮೂಲತಃ ಉತ್ತರ ಕರ್ನಾಟಕದ ಗದಗ ಊರಿನವರು. ಎಂಟು ವರ್ಷಗಳಿಂದ ಬೆಂಗಳೂರಿನ ನಿವಾಸಿ. ಐ.ಟಿ ಕಂಪೆನಿಯ ಉದ್ಯೋಗಿ. ಚಿತ್ರಕಲೆ, ಪುಸ್ತಕಗಳು ಹಾಗೂ ಬರವಣಿಗೆ ಇವರ ಹವ್ಯಾಸಗಳು.
1 Postಕಿರಸೂರ ಗಿರಿಯಪ್ಪ
ಕಿರಸೂರ ಗಿರಿಯಪ್ಪ ಮೂಲತಃ ಬಾಗಲಕೋಟ ತಾಲೂಕಿನ ಕಿರಸೂರಿನವರು. ಸದ್ಯ ಸ.ಕಿ.ಪ್ರಾ.ಶಾಲೆ.ಗುಗಲಗಟ್ಟಿˌ ಸುರಪೂರ ತಾಲೂಕಿನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ಪತ್ರಿಕೆಗಳ ಕಾವ್ಯ ಸ್ಪರ್ಧೆಗಳಲ್ಲಿ ಹಾಗೂ ದಲಿತ ಯುವ ಕಾವ್ಯ ಪ್ರಶಸ್ತಿ ಮುಂತಾದವುಗಳಲ್ಲಿ ಬಹುಮಾನ ಲಭಿಸಿವೆ. ಇವರ ಚೊಚ್ಚಲ ಕೃತಿಗೆ ಪುಸ್ತಕ ಪ್ರಾಧಿಕಾರ ಕರ್ನಾಟಕ ಸರಕಾರ ಪ್ರೋತ್ಸಾಹ ಧನ ಲಭಿಸಿದೆ. ನಾಭಿಯ ಚಿಗುರು(ಕವನಸಂಕಲನ) ಪ್ರಕಟಗೊಂಡಿದ್ದು, 'ಅಲೆವ ನದಿ' ಗಜಲ್ ಸಂಕಲನ ಬಿಡುಗಡೆಯ ಸಿದ್ಧತೆಯಲ್ಲಿದೆ.
1 Post
ಕುಮಾರ ಬೇಂದ್ರೆ
<strong>ಕುಮಾರ ಬೇಂದ್ರೆ</strong> 'ಉದಯವಾಣಿ' 'ಸಂಯುಕ್ತ ಕರ್ನಾಟಕ' 'ಗೌರಿ ಲಂಕೇಶ್' ಪತ್ರಿಕೆಗಳಲ್ಲಿ ಹದಿನಾಲ್ಕು ರ್ಷಗಳ ಕಾಲ ಪತ್ರಕರ್ತನಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಧ್ಯ ಚಲನಚಿತ್ರ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. 'ಮಾದಪ್ಪನ ಸಾವು', 'ಅದೃಶ್ಯ ಲೋಕದ ಮಾಯೆ'. 'ನಿರ್ವಾಣ', 'ಗಾಂಧಿ ವೃತ್ತದ ದಂಗೆ' ಕಥಾ ಸಂಕಲನ, 'ಮನಸೆಂಬ ಮಾಯಾವಿ' ಆಯ್ದ ಕತೆಗಳ ಸಂಕಲನ. 'ಜೋಗವ್ವ', 'ತಲ್ಲಣ', 'ನೆಲೆ', 'ದಾಳಿ' ಕಾದಂಬರಿ ಸೇರಿದಂತೆ ಒಟ್ಟು ಹತ್ತು ಕೃತಿಗಳು ಪ್ರಕಟವಾಗಿವೆ.
1 Postಕುಸುಮಾ ಶಾನಭಾಗ
ಹಿರಿಯ ಪತ್ರಕರ್ತೆ. ಕಥೆಗಾರ್ತಿ. ‘ನೆನಪುಗಳ ಬೆನ್ನೇರಿ’ ಇವರ ಕಥಾ ಸಂಕಲನ. ‘ಕಾಯದ ಕಾರ್ಪಣ್ಯ’ ಲೈಂಗಿಕ ಕಾರ್ಯಕರ್ತೆಯರ ಕುರಿತ ಕಥನ.
5 Postsಕೃತಿ ಆರ್
ಮಾನವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀದರೆ. ಅಮೆರಿಕಾದಲ್ಲಿ ಒಳಾಂಗಣ ವಿನ್ಯಾಸದಲ್ಲಿ ವ್ಯಾಸಾಂಗ ನಡೆಸಿದ್ದಾರೆ. ಸಾಹಿತ್ಯ, ಸಮಾಜಶಾಸ್ತ್ರ, ಸಂಗೀತ, ಒಳಾಂಗಣ ವಿನ್ಯಾಸ ಹೀಗೆ ಹಲವು ಹತ್ತು ಆಸಕ್ತಿ ಹಾಗೂ ಪರಿಣತಿ ಇರುವ ಕೃತಿ.ಆರ್, ಸದ್ಯಕ್ಕೆ ಸಾಗರದಲ್ಲಿ ತೋಟ ನೋಡಿಕೊಳ್ಳುತ್ತಿದ್ದಾರೆ.
2 Postsಕೃಪಾಕರ್ ಸೇನಾನಿ
ಅಂತರಾಷ್ಟ್ರೀಯ ಖ್ಯಾತಿಯ ವನ್ಯ ಛಾಯಾಚಿತ್ರಗ್ರಾಹಕ ಜೋಡಿ.ಬಂಡೀಪುರದ ಕಾಡಿನೊಳಗೆ ಬದುಕುತ್ತ, ಬೆಳೆಯುತ್ತ ಬಂದ ಇವರಿಬ್ಬರದು ಈಗ ಅಂತಾರಾಷ್ಟ್ರೀಯ ಹೆಸರು. ಊರು ಮೈಸೂರು.
1 Post
ಕೃಷ್ಣ ದೇವಾಂಗಮಠ
ಕೃಷ್ಣ ದೇವಾಂಗಮಠ ಬೆಳಗಾವಿಯ ರಾಮದುರ್ಗದವರು. ಸಿನಿಮಾ ನಿರ್ದೇಶನ ವಿಭಾಗದಲ್ಲಿ ಕೆಲಸ. "ಭಾವಬುತ್ತಿ" ಪ್ರಕಟಿತ ಕವನ ಸಂಕಲನ.
20 Postsಕೆ.ಎಲ್. ಪದ್ಮಿನಿ ಹೆಗಡೆ
ಲೇಖಕಿ ಮತ್ತು ತತ್ತ್ವಶಾಸ್ತ್ರ ಪ್ರಾಧ್ಯಾಪಕಿ. ಮುಖ್ಯ ಪುಸ್ತಕಗಳು: ಗ್ರೀಕ್ ತತ್ತ್ವಶಾಸ್ತ್ರ ಮತ್ತು ಆಧುನಿಕ ವಿಚಾರವಾದ, ತಪಸ್ವಿ, ದಕ್ಷಿಣೇಶ್ವರ, ಧ್ಯಾನ, ನಿವೇದಿತ ಮತ್ತು ಪ್ರಕೃತಿದೈವೈಕ್ಯವಾದ., ಚಿತ್ರದುರ್ಗ ಜಿಲ್ಲೆ ಹೊಳಲಕೆರೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು. ಈಗ ಮೈಸೂರಿನಲ್ಲಿದ್ದಾರೆ.
1 Post
ಕೆ.ವಿ. ತಿರುಮಲೇಶ್
ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು.
44 Posts
ಕೋಡಿಬೆಟ್ಟು ರಾಜಲಕ್ಷ್ಮಿ
<strong>ಮಂಗಳೂರಿನವರಾದ ಕೋಡಿಬೆಟ್ಟು ರಾಜಲಕ್ಷ್ಮಿ ಪತ್ರಕರ್ತೆಯಾಗಿ ಕೆಲಸ ಮಾಡಿದವರು. ‘ಒಂದುಮುಷ್ಟಿ ನಕ್ಷತ್ರ’ ಅವರು ಬರೆದ ಕಥಾ ಸಂಕಲನ. ‘ಅಮ್ಮನ ಜೋಳಿಗೆ’ ಪ್ರಬಂಧ ಸಂಕಲನ. </strong>
1 Postಕೌಶಿಕ್ ಕುಕ್ಕೆಮನೆ
ಕೌಶಿಕ್ ಕುಕ್ಕೆಮನೆ ಧರ್ಮಸ್ಥಳದ ಹತ್ತಿರದ ಪುಟ್ಟದೊಂದು ಹಳ್ಳಿಯವರು. ವಿಜ್ಞಾನ, ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಅವರ ಆಸಕ್ತಿಯ ಕ್ಷೇತ್ರಗಳು. ಸದ್ಯ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿದ್ದು ಜೈವಿಕ ಗಡಿಯಾರಗಳ ಬಗ್ಗೆ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
1 Postಕ್ಷಮಾ ವಿ. ಭಾನುಪ್ರಕಾಶ್
ಕ್ಷಮಾ ಸೂಕ್ಷ್ಮಾಣುಜೀವಿ ವಿಜ್ಞಾನದಲ್ಲಿ ಎಂ.ಎಸ್.ಸಿ ಪದವೀಧರೆ. ವಿಜ್ಞಾನ ಶಿಕ್ಷಕಿ. ವಿಜ್ಞಾನ ಲೇಖನಗಳ ಲೇಖಕಿ ಮತ್ತು ಅನುವಾದಕಿ. ರಿಸರ್ಚ್ ಮ್ಯಾಟರ್ಸ್ ನಲ್ಲಿ ವಿಜ್ಞಾನ ಲೇಖನಗಳ ಕನ್ನಡ ವಿಭಾಗದಲ್ಲಿ ಸಂಪಾದಕಿಯೂ ಆಗಿರುವ ಇವರು ಗಾಯಕಿಯೂ, ಕಂಠದಾನ ಕಲಾವಿದೆಯೂ ಹೌದು.
1 Postಗಜಾನನ ಈಶ್ವರ ಹೆಗಡೆ
ಗಜಾನನ ಈಶ್ವರ ಹೆಗಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಧ್ಯಾಪಕರು. ಇವರ ಪ್ರಕಟಿತ ಕೃತಿಗಳು ಶ್ರೀಕಲ್ಪ, ಕವನ ಸಂಕಲನ; ಗುರು, ನೀಳ್ಗವನ; ಸಮಾಜಮುಖಿ, ಗೀತ ನಾಟಕ; ರಸರಾಮಾಯಣ, ಕಾವ್ಯ; ಲೋಕ ಶಂಕರ, ಕಾವ್ಯ. ರಂಗದಲ್ಲಿ ಪ್ರದರ್ಶಿತವಾದ ಗೀತನಾಟಕಗಳು ಶ್ರೀರಾಮ ಚಂದನ, ಶರಣ ಸಂಕುಲ, ಶಿವರಾಗಿಣಿ, ಭವತಾರಿಣಿ. ಹೊಯ್ಸಳ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ. ಇವರ ಕವನ, ಕಥೆ, ವಿಮರ್ಶೆ, ಪ್ರಬಂಧಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಣೆಗೊಂಡಿವೆ.
1 Postಗುರುಗಣೇಶ್ ಭಟ್ ಡಬ್ಗುಳಿ
ಗುರುಗಣೇಶ್ ಉತ್ತರ ಕನ್ನಡದ ಯಲ್ಲಾಪುರದವರು. ಪತ್ರಿಕೋದ್ಯಮ, ಸಾಹಿತ್ಯ, ಪರಿಸರ ಮತ್ತು ಕೃಷಿಯ ವಿದ್ಯಾರ್ಥಿ. ಊರೂರು ಅಲೆದಾಟ ಖುಷಿಯ ಕೆಲಸ. ಓದು, ಬರಹ ಇವರ ಹವ್ಯಾಸಗಳು.
3 Postsಚನ್ನಕೇಶವ
ಕನ್ನಡ ರಂಗಭೂಮಿಯ ಪೂರ್ಣಪ್ರಮಾಣದ ಕೃಷಿಕ. ನಾಟಕ ಆಡುವುದು, ಆಡಿಸುವುದು,ಆಡುವುದನ್ನು ಕಲಿಸುವುದು, ನಾಟಕ ವಿನ್ಯಾಸ, ರಸಗ್ರಹಣ ಹೀಗೆ ತನ್ನ ಪೂರ್ಣ ಹೊತ್ತನ್ನು ರಂಗಭೂಮಿಯಲ್ಲೇ ಕಳೆಯುವವರು.
5 Postsಚೇತನಾ ತೀರ್ಥಹಳ್ಳಿ
ಕವಯತ್ರಿ, ಲೇಖಕಿ, ಪತ್ರಕರ್ತೆ ಮತ್ತು ಸಾಮಾಜಿಕ ಹೋರಾಟಗಾರ್ತಿ. ತೀರ್ಥಹಳ್ಳಿಯವರು. ಈಗ ಬೆಂಗಳೂರು. ಭಾಮಿನಿ ಷಟ್ಪದಿ ಇವರ ಹೆಸರಾಂತ ಅಂಕಣ ಕಾದಂಬರಿ.
1 Postಜಯಂತ ಕಾಯ್ಕಿಣಿ
ಕವಿ, ಕಥೆಗಾರ, ಕನ್ನಡದ ಜನಪ್ರಿಯ ಸಿನೆಮಾ ಗೀತ ರಚನೆಗಾರ. ಮೂಲತ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದವರು. ಈಗ ಇರುವುದು ಬೆಂಗಳೂರು.
3 Postsಜೆ.ವಿ.ಕಾರ್ಲೊ
ಕಥೆಗಾರ, ಅನುವಾದಕ, ಕೃಷಿಕ ಮತ್ತು ಕಟ್ಟಡ ನಿರ್ಮಾಣಗಾರ. ಕನ್ನಡ ಮತ್ತು ಕೊಂಕಣಿ ಎರಡು ಭಾಷೆಗಳಲ್ಲೂ ಬರೆಯುತ್ತಾರೆ.'ಗಾಂಧಿಚೆಂ ಪರ್ಜಳಿಕ್ ಪುಢಾರ್ಪೊಣ್' ಎಂಬ ಅನುವಾದಿತ ಕೃತಿಗೆ 2014 ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. ಹುಟ್ಟಿದ್ದು ಸಕಲೇಶಪುರದ ಬಳಿ. ಈಗ ಇರುವುದು ಹಾಸನ.
1 Postಟಿ ಕೆ ದಯಾನಂದ
ಕವಿ, ಕಥೆಗಾರ, ಪತ್ರಕರ್ತ,ಅಂಕಣಗಾರ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಅಸಮಾನತೆ ಹಾಗೂ ಅನ್ಯಾಯಗಳ ವಿರುದ್ಧದ ಸಾಮಾಜಿಕ ಕಾರ್ಯಕರ್ತ.
1 Postಟಿ.ಎಸ್. ಗೊರವರ
ಟಿ.ಎಸ್. ಗೊರವರ ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ಗ್ರಾಮದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಭ್ರಮೆ (2007) ಕಥಾ ಸಂಕಲನ, ಆಡು ಕಾಯೋ ಹುಡುಗನ ದಿನಚರಿ (2011) ಅನುಭವ ಕಥನ, ಕುದರಿ ಮಾಸ್ತರ (2012) ಕಥಾ ಸಂಕಲನ, ರೊಟ್ಟಿ ಮುಟಗಿ (2016) ಕಾದಂಬರಿ, ಮಲ್ಲಿಗೆ ಹೂವಿನ ಸಖ (2018) ಕಥಾ ಸಂಕಲನ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ದ.ರಾ.ಬೇಂದ್ರೆ ಗ್ರಂಥ ಬಹುಮಾನ, ಅರಳು ಪ್ರಶಸ್ತಿ, ಪ್ರಜಾವಾಣಿ, ಕನ್ನಡಪ್ರಭ ದೀಪಾವಳಿ ಕಥಾಸ್ಪರ್ಧೆ ಸೇರಿದಂತೆ ಹಲವು ಪುರಸ್ಕಾರಗಳು ಲಭಿಸಿವೆ. ಸದ್ಯ ‘ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆ ಸಂಪಾದಕ.
1 Post
ಟಿ.ಎಸ್. ಗೋಪಾಲ್
ತಿರು ಶ್ರೀನಿವಾಸಾಚಾರ್ಯ ಗೋಪಾಲ್ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನದ ಕುರಿತು ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ಅವರ 'ಕಾಡು ಕಲಿಸುವ ಪಾಠ' ಕೃತಿಗೆ ವಿಜ್ಞಾನ ವಿಷಯದಲ್ಲಿ ೨೦೧೩ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.
72 Postsಡಾ. ಅಶೋಕ್ ಕುಮಾರ್
ಶಸ್ತ್ರಚಿಕಿತ್ಸಾ ವೈದ್ಯರಾಗಿರುವ ಡಾ.ಅಶೋಕ್ ಕುಮಾರ್ ಅನುವಾದಸಾಹಿತ್ಯದಲ್ಲಿ ಆಸಕ್ತಿ ಉಳ್ಳವರು. ಮಲಯಾಳಂ ಮತ್ತು ತಮಿಳು ಭಾಷೆಗಳಿಂದ ಹಲವು ಅನುವಾದಗಳನ್ನು ಮಾಡಿದ್ದಾರೆ.ತಮ್ಮ ಅನುವಾದಕ್ಕಾಗಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಬೆಂಗಳೂರು ವಾಸಿ.
1 Postಡಾ. ಆನಂದ್ ಋಗ್ವೇದಿ
ಡಾ. ಆನಂದ್ ಋಗ್ವೇದಿ ಮೂಲತಃ ಕುಕ್ಕುವಾಡದವರು. ಸಧ್ಯ ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತ ಅಧಿಕಾರಿ. ಜನ್ನ ಮತ್ತು ಅನೂಹ್ಯ ಸಾಧ್ಯತೆ, ಮಗದೊಮ್ಮೆ ನಕ್ಕ ಬುದ್ಧ( ಕಥಾ ಸಂಕಲನಗಳು), ಉರ್ವಿ (ನಾಟಕ), ನಿನ್ನ ನೆನಪಿಗೊಂದು ನವಿಲುಗರಿ, ತಥಾಗತನಿಗೊಂದು ಪದ್ಮ ಪತ್ರ ( ಕವನ ಸಂಕಲನಗಳು) ತಳಮಳದ ಹಾದಿ ಪೂರ್ವೋತ್ತರ ( ವಿಮರ್ಶಾ ಸಂಕಲನಗಳು) ಕಥಾ ಸ್ವರೂಪ, ಅನುಭವದ ಅಮೃತತ್ವ ( ಸಂಶೋಧನೆ) ಪ್ರಕಟಿತ ಕೃತಿಗಳು.
1 Postಡಾ. ಆನಂದ್ ಋಗ್ವೇದಿ ಡಾ. ಆನಂದ್ ಋಗ್ವೇದಿ
ಡಾ. ಆನಂದ್ ಋಗ್ವೇದಿಯವರು ಮೂಲತಃ…. ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನ್ನ ಮತ್ತು ಅನೂಹ್ಯ ಸಾಧ್ಯತೆ, ಮಗದೊಮ್ಮೆ ನಕ್ಕ ಬುದ್ಧ ( ಕಥಾ ಸಂಕಲನಗಳು), ಉರ್ವಿ (ನಾಟಕ), ನಿನ್ನ ನೆನಪಿಗೊಂದು ನವಿಲುಗರಿ, ತಥಾಗತನಿಗೊಂದು ಪದ್ಮ ಪತ್ರ (ಕವನ ಸಂಕಲನಗಳು) ತಳಮಳದ ಹಾದಿ, ಪೂರ್ವೋತ್ತರ (ವಿಮರ್ಶಾ ಸಂಕಲನಗಳು) ಕಥಾ ಸ್ವರೂಪ, ಅನುಭವದ ಅಮೃತತ್ವ ( ಸಂಶೋಧನೆ) ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಮತ್ತು ಫೆಲೋಶಿಪ್ ಮತ್ತು ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಇವರಿಗೆ ದೊರೆತಿವೆ.
0 Postsಡಾ. ಎಚ್ ಎಸ್ ಅನುಪಮಾ
ಉತ್ತರಕನ್ನಡ ಜಿಲ್ಲೆ ಹೊನ್ನಾವರದ ಬಳಿಯ ಕವಲಕ್ಕಿಯಲ್ಲಿ ವೈದ್ಯರಾಗಿದ್ಡಾರೆ. ಕವಿತೆ. ವೈಚಾರಿಕ ಚಿಂತನೆ ಮತ್ತು ವೈದ್ಯಕೀಯ ಬರಹಗಳು ಇವರ ವಿಶೇಷ.
5 Postsಡಾ. ಗೀತಾ ವಸಂತ
ಕವಯತ್ರಿ, ಕಥೆಗಾರ್ತಿ ಮತ್ತು ವಿಮರ್ಶಕಿ. ಹುಟ್ಟಿದ್ದು ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ. ಈಗ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ. ‘ಚೌಕಟ್ಟಿನಾಚೆಯವರು’ ಇವರ ಪ್ರಮುಖ ಕಥಾ ಸಂಕಲನ. ‘ಪರಿಮಳದ ಬೀಜ’ ಕವನಸಂಕಲನ.
7 Postsಡಾ. ಜಿ. ಎಸ್. ಶಿವಪ್ರಸಾದ್
ಡಾ. ಜಿ.ಎಸ್. ಶಿವಪ್ರಸಾದ್ ವೃತ್ತಿಯಲ್ಲಿ ವೈದ್ಯರು. ಇಂಗ್ಲೆಂಡ್ ನ ಶೆಫ್ಪೀಲ್ಡ್ ನಲ್ಲಿ ನೆಲೆಸಿದ್ದಾರೆ. ಇವರ ಒಂದು ಕವನ ಸಂಕಲನ ಹಾಗೂ ಪ್ರವಾಸ ಕಥನ ಪ್ರಕಟವಾಗಿವೆ.
1 Postಡಾ. ಜ್ಯೋತಿ
ಜ್ಯೋತಿ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು, ಪ್ರಸ್ತುತ ತುಮಕೂರು ವಿಶ್ವವಿದ್ಯಾನಿಲಯದ ಆಂಗ್ಲಭಾಷಾ ವಿಭಾಗದಲ್ಲಿ ಸಹಾಯಕ ಪ್ರಾದ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಬರಹಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
1 Postಡಾ. ನಾ. ಡಿಸೋಜ
ಹಿರಿಯ ಕಥೆಗಾರ, ಕಾದಂಬರಿಕಾರ, ಮಕ್ಕಳ ಸಾಹಿತಿ. ಸಾಗರದಲ್ಲಿ ವಾಸಿಸುತ್ತಿದ್ದಾರೆ. ಇವರ ಪೂರ್ಣ ಹೆಸರು ಡಾ.ನಾರ್ಬರ್ಟ್ ಡಿಸೋಜ.
2 Posts
ಡಾ. ಬಿ. ಜನಾರ್ದನ ಭಟ್
ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಹೀಗೆ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿರುವ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ ೬೬.
65 Postsಡಾ. ಯು. ಆರ್ ಅನಂತಮೂರ್ತಿ
ಕನ್ನಡದ ಮೇರು ಕಥೆಗಾರ, ಚಿಂತಕ. ಜ್ಞಾನಪೀಠ ಪ್ರಶಸ್ತಿ ವಿಜೇತ ಬರಹಗಾರ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಅವರು ಹುಟ್ಟಿದ್ದು (೧೯೩೨, ಡಿಸೆಂಬರ್ ೨೧) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆ ಎಂಬ ಹಳ್ಳಿಯಲ್ಲಿ.
1 Postಡಾ. ಲಕ್ಷ್ಮಣ ವಿ.ಎ
ಡಾ. ಲಕ್ಷ್ಮಣ ವಿ.ಎ ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮದವರು. ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಖಾಸಗೀ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
26 Postsಡಾ. ವಿ. ರಾಜೇಂದ್ರ
ಪ್ರಖ್ಯಾತ ಆಯುರ್ವೇದ ವೈದ್ಯರು. ಮೈಸೂರಿನ ಸರಕಾರಿ ಆಯುರ್ವೇದ ಕಾಲೇಜಿನ ಕಾಯಚಿಕಿತ್ಸಾ ವಿಭಾಗದ ಮುಖ್ಯಸ್ಥರು.
1 Post
ಡಾ. ವಿನತೆ ಶರ್ಮ
ಲೇಖಕಿ ಮತ್ತು ಬ್ಲಾಗ್ ಬರಹಗಾರ್ತಿ. ಮೂಲತಃ ಬೆಂಗಳೂರಿನವರು ಈಗ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಸಾಹಿತ್ಯ, ಹೊರಾಂಗಣ, ಶಿಕ್ಷಣ, ಮನಃಶಾಸ್ತ್ರ, ತಳಸಮುದಾಯಗಳ ಅಧ್ಯಯನ ಮತ್ತು ಊರುಸುತ್ತಾಟ ಇವರಿಗೆ ಇಷ್ಟದ ವಿಷಯಗಳು.
54 Postsಡಾ. ಸುಜಾತ ಲಕ್ಷ್ಮೀಪುರ
ಡಾ. ಸುಜಾತ ಲಕ್ಷ್ಮೀಪುರ ಪ್ರಸ್ತುತ ಬೆಂಗಳೂರಿನ ಮಲ್ಲೇಶ್ವರಂ ಬಾಲಕಿಯರ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹಲವಾರು ಕವಿತೆ, ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
1 Postಡಾ.ಗುರುಪ್ರಸಾದ್ ಕಾಗಿನೆಲೆ
ಹುಟ್ಟಿದ್ದು ಶಿವಮೊಗ್ಗ. ಸದ್ಯಕ್ಕೆ ಅಮೇರಿಕಾದ ರಾಚೆಸ್ಟರ್ನಲ್ಲಿ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ವೈದ್ಯನಾಗಿ ಕೆಲಸ. ನಿರ್ಗುಣ, ಶಕುಂತಳಾ (ಕಥಾ ಸಂಗ್ರಹಗಳು), ಆಚೀಚೆಯ ಕಥೆಗಳು (ಸಂಪಾದಿತ ಕಥಾ ಸಂಕಲನ), ವೈದ್ಯ ಮತ್ತೊಬ್ಬ (ಲೇಖನ ಸಂಗ್ರಹ) ಅವರ ಹೊಸ ಕೃತಿ "ಬಿಳಿಯ ಚಾದರ".
3 Postsಡಾ.ಪ್ರೇಮಲತ
ಲೇಖಕಿ ಮತ್ತು ದಂತವೈದ್ಯೆ. ಮೂಲತಃ ತುಮಕೂರಿನವರು. ಕಳೆದ ಹದಿನೈದು ವರ್ಷಗಳಿಂದ ಇಂಗ್ಲೆಂಡ್ ನಿವಾಸಿ. ಬಾಲಕಿಯಾಗಿರುವಾಗಲೇ ಬರೆಯಲು ತೊಡಗಿದ್ದವರು ಈಗ ಇಂಗ್ಲೆಂಡಿನ ಕನ್ನಡಕೂಟಗಳ ಒಡನಾಟದಲ್ಲಿ ಮತ್ತೆ ಬರವಣಿಗೆ ಮುಂದುವರೆಸಿದ್ದಾರೆ.
27 Postsಡಾ.ರಾಜೇಂದ್ರ ಚೆನ್ನಿ
ಕನ್ನಡದ ಪ್ರಮುಖ ವಿಮರ್ಶಕರು ಮತ್ತು ಕಥೆಗಾರರು. ‘ನಡುಹಗಲಿನಲ್ಲಿ ಕಂದೀಲುಗಳು’ ಇವರ ವಿಮರ್ಶೆಗಳ ಸಂಕಲನ. ‘ಮಡ್ ಟೌನ್’ ಇಂಗ್ಲಿಷ್ ಕಾದಂಬರಿ. ಧಾರವಾಡ ಹುಟ್ಟೂರು. ಇರುವುದು ಶಿವಮೊಗ್ಗ. ನಿವೃತ್ತ ಇಂಗ್ಲಿಷ್ ಪ್ರಾದ್ಯಾಪಕರು.
5 Postsಡಿ.ಎಮ್. ನದಾಫ್
ಡಿ.ಎಮ್ ನದಾಫ್, ಕಲಬುರಗಿ ಜಿಲ್ಲೆಯ ಅಫಜಲಪುರದ ಮಾತೋಳಿ ಗ್ರಾಮದವರು. ಪ್ರೌಢಶಾಲಾ ಅಧ್ಯಾಪಕರಾಗಿದ್ದು, ಎರಡು ಕವನ ಸಂಕಲನ ಮತ್ತು ಅಫಜಲಪುರ ದರ್ಶನ (ಸ್ಥಳಪರಿಚಯ) ಪುಸ್ತಕ ಪ್ರಕಟಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಇವರ ಕತೆಗಳು ಪ್ರಕಟವಾಗಿವೆ.
1 Postದರ್ಶನ್ ಜೆ
ಮೂಲತಃ ಹೊಸದುರ್ಗದ ಹುಟ್ಟೂರಿನವರು. ಬೆಂಗಳೂರಿನ ( ಸೌದಿ ಅರೇಬಿಯಾ ಮೂಲದ) ಪೆಟ್ರೋಕೆಮಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. "ಪದ್ಯ ಸಿಕ್ಕಿತು" ಇವರ ಚೊಚ್ಚಲ ಕವನ ಸಂಕಲನ.
2 Postsದೀಪಾ ಫಡ್ಕೆ
ದೀಪಾ ಫಡ್ಕೆ ಬೆಂಗಳೂರು ನಿವಾಸಿ. ಹರಿದಾಸ ಸಾಹಿತ್ಯದಲ್ಲಿ ಅಧ್ಯಯನ ನಡೆಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ದೀಪಾ ಚಂದನ ಮತ್ತು ಉದಯ ಟಿವಿಯಲ್ಲಿ ಹಲವು ವರ್ಷಗಳ ಕಾಲ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದರು.
1 Postದೀಪ್ತಿ ಶ್ರೀಹರ್ಷ
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು.ಈಗ ಭದ್ರಾವತಿಯಲ್ಲಿದ್ದಾರೆ. "ಅಹಲ್ಯೆಯ ಸ್ವಗತ" ಇವರ ಹೆಸರಾಂತ ಕವನ ಸಂಕಲನ.
1 Postಧನಪಾಲ ನಾಗರಾಜಪ್ಪ
ಧನಪಾಲ ನಾಗರಾಜಪ್ಪ ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯವರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ನೆಲವಾಗಿಲು ಗ್ರಾಮದ ನಿವಾಸಿಯಾಗಿರುವ ಇವರು ಭಾರತೀಯ ವಾಯು ಸೇನೆಗೆ ಸೇರ್ಪಡೆಯಾಗಿ, ವೈದ್ಯಕೀಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾರೆ. ನಿವೇದನೆ (ಕವನ ಸಂಕಲನ), ಮಿತ್ರವಾಣಿ (ಪ್ರಧಾನ ಸಂಪಾದಕತ್ವದ ಕವನ ಸಂಕಲನ) ಕಾಡುವ ಕಥೆಗಳು (ಸಲೀಂ ಅವರ ತೆಲುಗು ಕಥೆಗಳ ಅನುವಾದ) ತಣ್ಣೀರ ಬಟ್ಟೆಯ ಬಿಸಿ (ಆಯ್ದ ತೆಲುಗು ಕಥೆಗಳ ಅನುವಾದ), ಜೀವನ್ಮೃತರು (ಅನುವಾದಿತ ಕಾದಂಬರಿ ), ಮೇಧ-017 (ಅನುವಾದಿತ ಕಾದಂಬರಿ), ಅಪರಾಜಿತ (ಅನುವಾದಿತ ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು
1 Postನಂದಿನಿ ಹೆದ್ದುರ್ಗ
ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿ ಬೆಳೆಗಾರ್ತಿ ಮತ್ತು ಕೃಷಿ ಮಹಿಳೆ. ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು.
1 Postನದೀಮ್ ಸನದಿ
ನದೀಮ್ ಸನದಿ ಬೆಳಗಾವಿಯ ಶಿಂದೊಳ್ಳಿಯವರು. ವೃತ್ತಿಯಿಂದ ಅಭಿಯಂತರರಾಗಿದ್ದು ಸಧ್ಯಕ್ಕೆ ಬೆಳಗಾವಿಯ ಜೈನ್ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದ ಓದು-ಬರಹದಲ್ಲಿ ವಿಶೇಷ ಆಸಕ್ತಿ.. ಚೊಚ್ಚಲ ಕವನ ಸಂಕಲನ "ಹುಲಿಯ ನೆತ್ತಿಗೆ ನೆರಳು" ಪುಸ್ತಕ ಪ್ರಾಧಿಕಾರದಿಂದ ಪ್ರಕಟಗೊಳ್ಳುತ್ತಿದೆ..
1 Postನಂದೀಶ್ ಬಂಕೇನಹಳ್ಳಿ
ಹವ್ಯಾಸಿ ಫೋಟೋಗ್ರಾಫರ್. ಕೊಟ್ಟಿಗೆ ಹಾರದಲ್ಲಿ ಪುಟ್ಟ ಅಂಗಡಿ ಇಟ್ಟುಕೊಂಡಿದ್ದಾರೆ. ‘ಮುಖವಾಡ’ ಇವರ ಕವನ ಸಂಕಲನ.
3 Postsನರಸಿಂಹಮೂರ್ತಿ ಹಳೇಹಟ್ಟಿ
ನರಸಿಂಹಮೂರ್ತಿ ಹಳೇಹಟ್ಟಿ ಅವರು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಹಳೇಹಟ್ಟಿ ಗ್ರಾಮದವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 'ಸಮಕಾಲೀನ ಕನ್ನಡ ಕಾವ್ಯ: ಸ್ವರೂಪ ಮತ್ತು ಧೋರಣೆಗಳು'(2000-2010) ಎಂಬ ವಿಷಯ ಕುರಿತು ಸಂಶೋಧನೆ ಮಾಡಿದ್ದಾರೆ. ಕಾವ್ಯ, ವಿಮರ್ಶೆ, ಭಾಷಾಂತರ ಅಧ್ಯಯನ ಹಾಗೂ ಸಂಶೋಧನೆ ಇವರ ಆಸಕ್ತಿಯ ಕ್ಷೇತ್ರಗಳು. ಇವರ ಕೆಲವು ಲೇಖನಗಳು ವಿವಿಧ ಸಾಹಿತ್ಯ ಪತ್ರಿಕೆಗಳಲ್ಲಿ ಹಾಗೂ ಬ್ಲಾಗ್ ಗಳಲ್ಲಿ ಪ್ರಕಟಗೊಂಡಿವೆ.
1 Postನವೀನ್ ಮಧುಗಿರಿ
ರಘುನಂದನ್ ವಿ. ಆರ್ ‘ನವೀನ್ ಮಧುಗಿರಿ ಎಂಬ ಕಾವ್ಯನಾಮದಿಂದ ಬರೆಯುತ್ತಾರೆ. ವೃತ್ತಿಯಲ್ಲಿ ಕೃಷಿಕರಾಗಿರುವ ನವೀನ್ ಅವರಿಗೆ ಕಥೆ, ಕವಿತೆ, ಹಾಯ್ಕು ಮತ್ತು ಶಿಶುಗವಿತೆಗಳನ್ನು ಬರೆಯುವುದರಲ್ಲಿ ಆಸಕ್ತಿ. ‘ರುಚಿಗೆ ತಕ್ಕಷ್ಟು ಪ್ರೀತಿ’ (ಕವಿತೆಗಳ ಸಂಕಲನ) ‘ಚಿಟ್ಟೆ ರೆಕ್ಕೆ’ (ಕಿರುಗವಿತೆಗಳ ಸಂಕಲನಗಳು) ಮತ್ತೆರಡು ಇವರ ಪ್ರಕಟಿತ ಕೃತಿಗಳು.
1 Postನಾ ದಿವಾಕರ್
ನಾ ದಿವಾಕರ, ಮೂಲತಃ ಕೋಲಾರ ಜಿಲ್ಲೆಯ ಬಂಗಾರಪೇಟೆಯವರು. ಕೆನರಾ ಬ್ಯಾಂಕಿನಲ್ಲಿ 35 ವರ್ಷದ ಸೇವೆಯ ಬಳಿಕ 2019ರ ಜನವರಿಯಲ್ಲಿ ಸ್ವಯಂ ನಿವೃತ್ತಿ. ಲೇಖನ ಬರಹ, ಅನುವಾದ ಮತ್ತು ಕವಿತೆ ರಚನೆ ಹವ್ಯಾಸ. ಇವರು ಬರೆದ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿದ್ದು, ಪ್ರಥಮ ಕವನ ಸಂಕಲನ ಅಚ್ಚಿನಲ್ಲಿದೆ.
2 Postsನಾಗರಾಜ ವಸ್ತಾರೆ
ಕವಿ, ಆರ್ಕಿಟೆಕ್ಟ್ ಮತ್ತು ಕಥೆಗಾರ. ೨೦೦೨ರಲ್ಲಿ ದೇಶದ ಹತ್ತು ಪ್ರತಿಭಾನ್ವಿತ ಯುವ ವಿನ್ಯಾಸಕಾರರಾಗಿ ಆಯ್ಕೆಗೊಂಡವರಲ್ಲಿ ಇವರೂ ಒಬ್ಬರು.
26 Posts
ನಾಗರೇಖಾ ಗಾಂವಕರ
ನಾಗರೇಖಾ ಗಾಂವಕರ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ. ‘ಏಣಿ’, ‘ಪದಗಳೊಂದಿಗೆ ನಾನು (ಕವನ ಸಂಕಲನಗಳು), ಪಾಶ್ಚಿಮಾತ್ಯ ಸಾಹಿತ್ಯ ಲೋಕ- (ಪರಿಚಯಾತ್ಮಕ ಲೇಖನಗಳ ಅಂಕಣ ಬರಹ)
5 Posts
ನಾಗಶ್ರೀ ಶ್ರೀರಕ್ಷ
ತನ್ನ ಮೂವತ್ತಮೂರನೆಯ ಎಳವೆಯಲ್ಲೇ ಗತಿಸಿದ ಕನ್ನಡದ ಅನನ್ಯ ಕವಯಿತ್ರಿ. ಮೂಲತಃ ಉಡುಪಿಯವರು. ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಸಹಾಯಕ ಸಂಪಾದಕಿಯಾಗಿದ್ದವರು. ‘ನಕ್ಷತ್ರ ಕವಿತೆಗಳು’ ಇವರ ಏಕೈಕ ಕವಿತಾ ಸಂಕಲನ.
13 Posts
ನಾರಾಯಣ ಯಾಜಿ
ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ.
11 Postsನೀರ್ಕಜೆ ಮಹಾಬಲೇಶ್ವರ ಭಟ್
ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದ ಇವರು ’ದೈತ್ಯ ದರ್ಶನ’ ಎಂಬ ಚೀನಾ ಪ್ರವಾಸ ಕಥನ, ’ಬೈರವ ನಡಿಗೆ’ ಎಂಬ ಅಮೆರಿಕಾ ಪ್ರವಾಸ ಕಥನ, `ಹಿಮಾಲಯ ಪರ್ವತ ಪರ್ಯಟನ' ಹಾಗೂ `ವಿಜ್ಞಾನ ಬೈರವ' ಎಂಬ ತಂತ್ರಶಾಸ್ತ್ರ ಕುರಿತ ಪುಸ್ತಕಗಳನ್ನು ಪ್ರಕಟಿಸಿದ್ದರು. ‘ಅವತಾರ’ ಇವರ ಆತ್ಮ ಕಥೆ. ಕೊಡಗಿನ ಮಡಿಕೇರಿಯ ಬಳಿಯ ಬಿಳಿಗೇರಿಯವರು.
1 Postಪರಿಮಳ ಜಿ. ಕಮತರ್
ಕವಯಿತ್ರಿ, ಕಥೆಗಾರ್ತಿ ಮತ್ತು ಅನುವಾದಕಿ. ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾನಿಲಯದ ಆಂಗ್ಲ ಭಾಷಾ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ‘ ಈ ಹೂವ ಹೆಸರು ನಿಮ್ಮಿಚ್ಚೆಯಂತೆ’ ಇವರ ಕವಿತಾ ಸಂಕಲನದ ಹೆಸರು.
1 Postಪಿ.ಎಚ್. ವಿಶ್ವನಾಥ್
ಪಂಚಮವೇದ,’ ‘ಅತಿಮಧುರ ಅನುರಾಗ, ಶ್ರೀಗಂಧ, ಮುಂಜಾನೆಯ ಮಂಜು, ಮುಸುಕು, ಅರಗಿಣಿ , ಅಂಡಮಾನ್, ಅರುಣೋದಯ’ ಅಲ್ಲದೆ ತಮಿಳಿನಲ್ಲಿ ‘ನದಿಯೋರ ಗೀತಂಗಳ್’ ಮುಂತಾದ ಚಿತ್ರಗಳು ಅವರ ನಿರ್ದೇಶನದಲ್ಲಿ ಬಂದವು. ಹಲವಾರು ರಾಜ್ಯ ಪ್ರಶಸ್ತಿಗಳನ್ನೂ ಗೆದ್ದುವು. ಈಗ ಬಿಡುಗಡೆಗೆ ಸಿದ್ಧವಾಗಿರುವುದು ಮಕ್ಕಳ ಚಿತ್ರ ‘ಕಿನ್ನರಬಾಲೆ’.
0 Postsಪ್ಯಾಪಿಲಾನ್
`ಪ್ಯಾಪಿಲಾನ್' ಎನ್ನುವುದು ಆಫ್ರಿಕಾ ಖಂಡದ ಆಗ್ನೇಯ ಕರಾವಳಿ ಮಡಗಾಸ್ಕರ್ ನಲ್ಲಿ ರುವ ತರುಣ ಕನ್ನಡಿಗರೊಬ್ಬರ ಕಾವ್ಯನಾಮ
4 Posts
ಪ್ರಜ್ಞಾ ಮತ್ತಿಹಳ್ಳಿ
ಪ್ರಜ್ಞಾ ಮತ್ತಿಹಳ್ಳಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಧಾರವಾಡದಲ್ಲಿ ವಾಣಿಜ್ಯಶಾಸ್ತ್ರ ವಿಷಯದಲ್ಲಿ ಸಹ ಪ್ರಾಧ್ಯಾಪಕರು. ಸಾಹಿತ್ಯ ರಂಗಭೂಮಿ ಮತ್ತು ಯಕ್ಷಗಾನಗಳು ಇವರ ಆಸಕ್ತಿಯ ಕ್ಷೇತ್ರಗಳು. ಕವಿತೆ, ಕತೆ, ಪ್ರಬಂಧ. ನಾಟಕ, ಪ್ರವಾಸ ಕಥನ ಈ ಎಲ್ಲ ಪ್ರಕಾರಗಳೂ ಸೇರಿದಂತೆ ಎಂಟು ಪುಸ್ತಕಗಳು ಪ್ರಕಟಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಒಳಗೊಂಡಂತೆ ಅನೇಕ ಕಡೆ ಇವರ ಬರಹಗಳು ಗುರುತಿಸಿಕೊಂಡಿವೆ.
4 Postsಪ್ರತೀಕ್ ಮುಕುಂದ
ಹೊಸ ತಲೆಮಾರಿನ ಕಥೆಗಾರ ಮತ್ತು ಛಾಯಾಚಿತ್ರಗ್ರಾಹಕ. ಆಸ್ಟ್ರೇಲಿಯಾದಲ್ಲಿರುವ ಸಾಫ್ಟ್‌ವೇರ್ ಉದ್ಯೋಗಿ.
1 Postಪ್ರದೀಪ್ ಕುಮಾರ್ ಶೆಟ್ಟಿ ಕೆಂಚನೂರು
ಸಿನಿಮಾ, ಚರಿತ್ರೆ, ರಾಜಕೀಯ ತತ್ವಶಾಸ್ತ್ರ,ಚಿತ್ರಕತೆ ರಚನೆ ಮತ್ತು ಕಲೆ ಇವರ ಆಸಕ್ತಿಯ ಕ್ಷೇತ್ರಗಳು. ಸಿನಿಮಾ ರಸಗ್ರಹಣ ಕುರಿತು ಪುಣೆಯ ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮೂಲಕ ಶಿಕ್ಷಣವನ್ನು ಪಡೆದಿರುತ್ತಾರೆ.ಪ್ರಸ್ತುತ ಸರಕಾರಿ ಪದವಿ ಪೂರ್ವ ಕಾಲೇಜು ಬೈಂದೂರು ಇಲ್ಲಿ ಚರಿತ್ರೆ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತಿದ್ದಾರೆ.
6 Postsಪ್ರಶಾಂತ ಆಡೂರ
ಹುಟ್ಟಿದ್ದು ಶಿವಮೊಗ್ಗದೊಳಗ. ಮುಂದೆ ಕಲತಿದ್ದು ಬೆಳದಿದ್ದು ಬಲತಿದ್ದು ಎಲ್ಲಾ ಹುಬ್ಬಳ್ಳಿ ಒಳಗ. ಒಂದ ಆರ ವರ್ಷದಿಂದ ತಿಳದಾಗೊಮ್ಮೆ, ಟೈಮ ಸಿಕ್ಕಾಗೊಮ್ಮೆ ಕನ್ನಡ ಹಾಸ್ಯ ಲೇಖನಗಳನ್ನ ಬರಿಲಿಕತ್ತೇನಿ. ಉತ್ತರ ಕರ್ನಾಟಕದ ಆಡು ಭಾಷೆಯೊಳಗ ಬರೇಯೊದು ನನ್ನ ಲೇಖನಗಳ ವಿಶೇಷತೆ.
48 Posts
ಪ್ರಸಾದ್ ಶೆಣೈ
ಪ್ರಸಾದ್ ಶೆಣೈ ಹೊಸ ತಲೆಮಾರಿನ ಪ್ರತಿಭಾವಂತ ಕಥೆಗಾರ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಸಾದ್ ಅವರಿಗೆ ಫೋಟೋಗ್ರಫಿಯಲ್ಲೂ ಆಸಕ್ತಿ.. ಇವರ ಕಥೆಗಳಿಗೆ 2019 ರ ಕನ್ನಡ ಕ್ರೀಯಾಶೀಲ ಬರವಣಿಗೆಯಲ್ಲಿ ಟೋಟೋ ಫಂಡ್ಸ್ ಆಫ್ ಆರ್ಟ್ ನ ಟೋಟೋ ಪುರಸ್ಕಾರ ಲಭಿಸಿದೆ. “ಲೂಲು ಟ್ರಾವೆಲ್ಸ್” ಇವರ ಪ್ರಕಟಿತ ಕಥಾ ಸಂಕಲನ.
21 Postsಫಕೀರ್ ಮುಹಮ್ಮದ್ ಕಟ್ಪಾಡಿ
ಖ್ಯಾತ ಕತೆಗಾರರು,ಸೂಫಿ ಚಿಂತಕರು. ಮೂಲತಃ ಉಡುಪಿಯ ಕಟ್ಪಾಡಿಯರು. ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
7 Postsಫಾತಿಮಾ ರಲಿಯಾ
ಇನ್ನೂ ಅರ್ಥವಾಗದ ಬದುಕಿನ ಬಗ್ಗೆ ತೀರದ ಬೆರಗನ್ನಿಟ್ಟುಕೊಂಡೇ ಕರಾವಳಿಯ ಪುಟ್ಟ ಹಳ್ಳಿಯಲ್ಲಿ ಬೆಳೆಯುತ್ತಿರುವವಳು ನಾನು, ಬದುಕು ಕಲಿಸುವ ಪಾಠಗಳನ್ನು ಶ್ರದ್ಧೆಯಿಂದ ಕಲಿಯುವಷ್ಟು ವಿಧೇಯ ವಿದ್ಯಾರ್ಥಿನಿ. ಪುಸ್ತಕಗಳೆಂದರೆ ಪುಷ್ಕಳ ಪ್ರೀತಿ. ಓದು ಬದುಕು, ಬರಹ ಗೀಳು ಅನ್ನುತ್ತಾರೆ ಫಾತಿಮಾ.
11 Postsಬದರಿ ರೂಪನಗುಡಿ
ಅನುವಾದಕರು. ತೆಲುಗಿನಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ತೆಲುಗಿಗೆ ಸಮರ್ಥವಾಗಿ ಅನುವಾದಿಸಬಲ್ಲವರು.ಇತ್ತೀಚೆಗಷ್ಟೆ ಅಭಿಯಂತರರಾಗಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
1 Postಬಿ.ಆರ್.ಜೋಯಪ್ಪ
ಕನ್ನಡ ಮತ್ತು ಅರೆಭಾಷೆ ಎರಡರಲ್ಲೂ ಬರೆಯಬಲ್ಲ ಲೇಖಕರು. 'ಯಾರ ಬೇಟೆ ಮತ್ತು ಇತರ ಪ್ರಸಂಗಗಳು' ಎಂಬುದು ಬೇಟೆಯ ಕುರಿತಾದ ಇವರ ಪುಸ್ತಕ. ಕೊಡಗಿನ ಮದೆನಾಡಿನ ವಾಸಿ.
1 Postಬಿ.ಕೆ. ಸುಮತಿ
ಬಿ.ಕೆ. ಸುಮತಿ ಆಕಾಶವಾಣಿಯಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿರೂಪಣೆ, ಭಾಷೆ, ಸಾಹಿತ್ಯ ಕುರಿತ ಹಲವು ಲೇಖನಗಳನ್ನು ಬರೆದಿದ್ದಾರೆ.. ‘ನಿರೂಪಣೆ, ಮಾತಲ್ಲ ಗೀತೆ’ ಇವರ ಪ್ರಕಟಿತ ಪುಸ್ತಕ.
1 Post
ಬೇಲೂರು ರಘುನಂದನ್
ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವಿ, ಎಂ.ಫಿಲ್ ಪದವಿಯನ್ನುಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದು ಪ್ರಸ್ತುತ ಅದೇ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ 8 ನಾಟಕ ಪುಸ್ತಕಗಳು ಪ್ರಕಟಗೊಂಡಿವೆ. 2017 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಗೆ ಸದಸ್ಯರಾಗಿ ಆಯ್ಕೆಗೊಂಡ ಬೇಲೂರು ಅವರಿಗೆ ಕುವೆಂಪು ಯುವಕವಿ ಪುರಸ್ಕಾರ, ಬೇಂದ್ರೆಗ್ರಂಥ ಬಹುಮಾನ, ಸಾಲು ಮರದತಿಮ್ಮಕ್ಕ ಹಸುರು ಪ್ರಶಸ್ತಿ, ಎಚ್.ಎಸ್.ವಿ. ಪುಟಾಣಿ ಸಾಹಿತ್ಯ ಪುರಸ್ಕಾರ, ತೇಜಸ್ವಿ ಕಟ್ಟೀಮನಿ ಯುವ ಪುರಸ್ಕಾರ, ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರೆತಿವೆ.
2 Postsಭಾಗ್ಯಶ್ರೀ ಎಂ.ಎಸ್
ಭಾಗ್ಯಶ್ರೀ ಮೂಲತಃ ಮೈಸೂರಿನವರು. ಪ್ರಸ್ತುತ ಆಂಗ್ಲಭಾಷಾ ಸಹಾಯಕ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಇದ್ದು, ಓದು-ಬರಹ ಮತ್ತು ಫೋಟೋಗ್ರಫಿ ಇವರ ನೆಚ್ಚಿನ ಹವ್ಯಾಸಗಳು. ಹಳೆಗನ್ನಡ ಹಾಗೂ ಜನಪದ ಸಾಹಿತ್ಯ ಕೃತಿಗಳ ಮೇಲೆ ಅಧ್ಯಯನ ನಡೆಸುತ್ತಿದ್ದಾರೆ.
1 Postಭಾರತಿ ಬಿ.ವಿ.
ಹುಟ್ಟಿದ್ದು ಕೊಳ್ಳೇಗಾಲದಲ್ಲಿ. ಬೆಂಗಳೂರಿನಲ್ಲಿ ವಾಸ. ಕವನ, ಪ್ರಬಂಧ, ಪ್ರವಾಸ ಕಥನ, ನಾಟಕ ಇವುಗಳನ್ನು ಬರೆಯಲು ಆಸಕ್ತಿ. ಕವನಗಳ ಅನುವಾದ ಇತ್ತೀಚೆಗೆ ಹಿಡಿದಿರುವ ಹುಚ್ಚು. ನಾಟಕ ನೋಡುವುದು ಊರೂರು ಸುತ್ತುವುದು ಅತ್ಯಂತ ಪ್ರೀತಿಯ ಹವ್ಯಾಸಗಳು.`ಜಸ್ಟ್ ಮಾತ್ ಮಾತಲ್ಲಿ' ಮತ್ತು 'ಕಿಚನ್ ಕವಿತೆಗಳು' ಇವರ ಇತ್ತೀಚೆಗಿನ ಪುಸ್ತಕಗಳು
11 Postsಭಾರತಿ ಹೆಗಡೆ
ಪತ್ರಕರ್ತೆ, ಕವಯತ್ರಿ, ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. ಈಗ ಬೆಂಗಳೂರಿನಲ್ಲಿ ವಾಸ. ಪ್ರಸ್ತುತ ಸೆಲ್ಕೋ ಫೌಂಡೇಶನ್ ನಲ್ಲಿ ಪ್ರೊಗ್ರಾಮ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಣೆ. ಇವರ ಸಿನಿಮಾದಲ್ಲಿ ಮಹಿಳೆಯರ ಕುರಿತಾದ ಬರಹಗಳ ಸಂಗ್ರಹ ಮೊದಲ ಪತ್ನಿಯ ದುಗುಡ ಪುಸ್ತಕ ಪ್ರಕಟವಾಗಿದೆ.
23 Postsಮ ಶ್ರೀ ಮುರಳಿ ಕೃಷ್ಣ
ಮ ಶ್ರೀ ಮುರಳಿ ಕೃಷ್ಣ ಬರಹಗಾರ ಹಾಗೂ ಸಾಮಾಜಿಕ ಕಾರ್ಯಕರ್ತ. ಸಿನಿಮಾದಲ್ಲಿ ಆಸಕ್ತಿ ಹಾಗೂ ಸಿನಿಮಾ ಕುರಿತ ಲೇಖನ ಬರವಣಿಗೆ ಹವ್ಯಾಸ.
1 Postಮಚ್ಚೇಂದ್ರ ಪಿ ಅಣಕಲ್
ಮಚ್ಚೇಂದ್ರ ಪಿ ಅಣಕಲ್ ಮೂಲತಃ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದವರು. ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕಥೆಗಳಿಗೆ ಹಲವು ಪ್ರಶಸ್ತಿಗಳು ದೊರಕಿವೆ. ಬದುಕುತ್ತೇನೆ ಕತ್ತಲೆ ಮೊಟ್ಟೆಯೊಡೆದು (ಕವನಸಂಕಲನ), ಜ್ಞಾನ ಸೂರ್ಯ (ಸಂಪಾದಿತ ಕಾವ್ಯ), ಜನಪದ ವೈದ್ಯರ ಕೈಪಿಡಿ (ಸಂಪಾದನೆ), ಲಾಟರಿ (ಕಥಾಸಂಕಲನ), ಮೊದಲ ಗಿರಾಕಿ (ಕಥಾಸಂಕಲನ), ಹಗಲುಗಳ್ಳರು (ಕಥಾಸಂಕಲನ) ಇವರ ಪ್ರಕಟಿತ ಕೃತಿಗಳು.
1 Postಮಂಜುನಾಥ್ ಲತಾ
ಹುಟ್ಟಿದ್ದು, ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ. ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಹಿರಿಯ ಉಪ ಸಂಪಾದಕನಾಗಿ ಕೆಲಸ ನಿರ್ವಹಣೆ. ಸದ್ಯಕ್ಕೆ ಹವ್ಯಾಸಿ ಪತ್ರಕರ್ತ, ಕಲಾವಿದರಾಗಿ ಸ್ವಯಂ ಉದ್ಯೋಗ. ‘ತೆಂಕಲಕೇರಿ’ (2003), ‘ಸನ್ ಆಫ್ ಸಿದ್ದಪ್ಪಾಜಿ’(2008), ಕತೆ ಎಂಬ ಇರಿವ ಈ ಅಲಗು (2011) ಕಥಾ ಸಂಕಲನಗಳು. ‘ಪರದೇಸಿ ಮಗನ ಪದವು’ (2006), 'ಆಹಾ ಅನಿಮಿಷ ಕಾಲ' ‘ಸೋಜಿಗದ ಸೂಜಿ ಮಲ್ಲಿಗೆ’ (2008) ಕವನ ಸಂಕಲನಗಳು. ‘ಪಲ್ಲಂಗ’ ಕಾದಂಬರಿ(2008), ‘ಜನಪದ ಕಲಾರೂಪ ಡಾ.ರಾಜ್ಕುಮಾರ್’ (ಜೀವನ ಚಿತ್ರಣ) ಇದುವರೆಗಿನ ಪ್ರಕಟಿತ ಕೃತಿಗಳು. ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕುಂ.ವೀರಭದ್ರಪ್ಪ ಕಥಾ ಪ್ರಶಸ್ತಿ, ಸೇರಿದಂತೆ ಹಲವು ಪುರಸ್ಕಾರಗಳು ದೊರೆತಿವೆ
1 Postಮಂಜುನಾಯಕ ಚಳ್ಳೂರು
ಮಂಜುನಾಯಕ ಮೂಲತಃ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಳ್ಳೂರಿನವರು. ಸದ್ಯ ಬೆಂಗಳೂರಿನ ನಿವಾಸಿ. ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಮಂಜುನಾಯಕ ಪ್ರಸ್ತುತ ಕಲರ್ಸ್ ಸೂಪರ್ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಕತೆಗಳಿಗೆ 2017ರ ಸಾಲಿನ ಟೋಟೋ ಪುರಸ್ಕಾರ ಲಭಿಸಿದೆ.
3 Postsಮಧುಸೂದನ್ ವೈ ಎನ್
ಮಧುಸೂಧನ್ ವೈ ಎನ್ ಮೂಲತಃ ತುಮಕೂರು ಜಿಲ್ಲೆ ಸಿರಾ ತಾಲೂಕಿನ ಯರಗುಂಟೆ ಗ್ರಾಮದವರು. ವೃತ್ತಿ ಸಾಫ್ಟವೇರ್ ಎಂಜಿನಿಯರ್. ಬೆಂಗಳೂರಿನಲ್ಲಿ ವಾಸ. ಸಾಹಿತ್ಯದ ಓದು, ವಿಶ್ವ ಸಿನಿಮಾಗಳ ವೀಕ್ಷಣೆ ಹವ್ಯಾಸವಿರುವ ಇವರಿಗೆ ತತ್ವಶಾಸ್ತ್ರದಲ್ಲಿಯೂ ಆಸಕ್ತಿ. ಇವರ “ಕಾರೇಹಣ್ಣು” ಕಥಾ ಸಂಕಲನಕ್ಕೆ ಈ ಹೊತ್ತಿಗೆಯ ಪ್ರಶಸ್ತಿ ಲಭಿಸಿದೆ.
14 Postsಮಹಾಂತೇಶ ಹೊದ್ಲೂರ
ಮಹಾಂತೇಶ ಹೊದ್ಲೂರ ಬಾಗಲಕೋಟೆಯವರು. ಪ್ರಸ್ತುತ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ. ಎ. ದ್ವೀತಿಯ ವರ್ಷದ ವಿದ್ಯಾರ್ಥಿ. 'ಏನೆಂದು ಹೇಳಲಿ' (ಹನಿಗವನ ಸಂಕಲನ) ಹಾಗೂ 'ಮುಸ್ಸಂಜೆ ಪಯಣ' ಎನ್ನುವ (ಕವನ ಸಂಕಲನ) ಪ್ರಕಟಿತ ಕೃತಿಗಳು.
1 Postಮಹೇಶ್ ಹೆಗಡೆ ಕಲ್ಲರೆ
ಮಹೇಶ್ ಹೆಗಡೆ ಕಲ್ಲರೆ ಮೂಲತಃ ಉತ್ತರ ಕನ್ನಡದ ಹೊನ್ನಾವರದವರು. ಸದ್ಯ ಬೆಂಗಳೂರಿನಲ್ಲಿ ವಾಸ. ಎಂಬಿಎ ಪದವೀಧರರಾದ ಅವರು ಮಾರ್ಕೆಟಿಂಗ್ ಮತ್ತು ಕಾರ್ಪೋರೇಟ್ ಮಾಧ್ಯಮ ಕ್ಷೇತ್ರದಲ್ಲಿ ಉದ್ಯೋಗದಲ್ಲಿದ್ದಾರೆ.
0 Postsಮಾಲಿನಿ ಗುರುಪ್ರಸನ್ನ
ಬೆಂಗಳೂರು ವಾಸಿಯಾದ ಮಾಲಿನಿ ಗುರುಪ್ರಸನ್ನ ಗೃಹಿಣಿ ಮತ್ತು ಲೇಖಕಿ. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ.
1 Postಮಿತ್ರಾ ವೆಂಕಟ್ರಾಜ
ಹೆಸರಾಂತ ಕಥೆಗಾರ್ತಿ. ಮೂಲತಃ ಕುಂದಾಪುರದವರು. ಈಗ ಮುಂಬೈ ವಾಸಿ. “ಮಾಯಕದ ಸತ್ಯ”, “ರುಕುಮಾಯಿ” ಮತ್ತು “ಹಕ್ಕಿ ಮತ್ತು ಅವಳು” ಇವರ ಕಥಾಸಂಕಲನಗಳು. “ಪಾಚಿಕಟ್ಟಿದ ಪಾಗಾರ” ಕಾದಂಬರಿ.
2 Postsಮೀರಾ ರಾಜಗೋಪಾಲ್
ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆ. ಊರು ಮೈಸೂರು. ಈಗ ಇರುವುದು ಅಮೇರಿಕಾದ ನ್ಯೂಜರ್ಸಿಯಲ್ಲಿ. ‘ನಿಶುಮನೆ’ ಇವರ ಬ್ಲಾಗ್. ‘ದೂರ ಸಾಗರ’ ಇವರು ಕೆಂಡಸಂಪಿಗೆಗೆ ಬರೆಯುತ್ತಿದ್ದ ಅಂಕಣಗಳ ಮಾಲಿಕೆ.
5 Postsಮೀರಾ ಸಂಪಿಗೆ, ಬೆಳ್ಳೂರ್
ಮೀರಾ ಸಂಪಿಗೆ ಮೈಸೂರಿನವರು. ಹದಿನೇಳು ವರ್ಷ ಅಮೇರಿಕಾದಲ್ಲಿದ್ದವರು ಮತ್ತೀಗ ವಾಪಸ್ಸು ತಮ್ಮೂರಿಗೆ ಮರಳಿದ್ದಾರೆ. ಪ್ರಪಂಚ ಸುತ್ತುವುದು ತೀವ್ರ ಖುಷಿಯ ವಿಷಯ ಮತ್ತು ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.
1 Post
ಮುನವ್ವರ್, ಜೋಗಿಬೆಟ್ಟು
ಊರು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಜೋಗಿಬೆಟ್ಟು. . “ಮೊಗ್ಗು” ಇವರ ಪ್ರಕಟಿತ ಕವನ ಸಂಕಲನ. ಪರಿಸರ, ವಿಜ್ಞಾನ, ಪ್ರಾಣಿ ಪ್ರಪಂಚದ ಬಗ್ಗೆ ಕಾಳಜಿ ಮತ್ತು ಆಸಕ್ತಿ. ಬೆಂಗಳೂರಲ್ಲಿ ಉದ್ಯೋಗ. ಇತ್ತೀಚೆಗಷ್ಟೇ “ಇಶ್ಕಿನ ಒರತೆಗಳು” ಎಂಬ ಎರಡನೇ ಕವನಸಂಕಲನ ಲೋಕಾರ್ಪಣೆಗೊಂಡಿದೆ..
29 Postsಮುರ್ತುಜಾಬೇಗಂ ಕೊಡಗಲಿ
ಮುರ್ತುಜಾಬೇಗಂ ಕೊಡಗಲಿ ಇಳಕಲ್ಲಿನವರು. ಪ್ರೌಢಶಾಲೆಯ ಆಂಗ್ಲಭಾಷಾ ಶಿಕ್ಷಕಿಯಾಗಿ 17ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ‘ಮೊನ್ನೆ ಬಂದ ಮಳೆಗೆ’ ಮತ್ತು ‘ಭಾವ ಬದುಕು’ ಇವರ ಪ್ರಕಟಿತ ಕೃತಿಗಳು. ದ. ರಾ ಬೇಂದ್ರೆ ಗ್ರಂಥ ಬಹುಮಾನ, ಪಿ ಲಂಕೇಶ ಪ್ರಶಸ್ತಿ, ಸಂಚಯ ಕಾವ್ಯ ಪ್ರಶಸ್ತಿ, ಪಿ.ಸುಶೀಲಾ ಸ್ಮಾರಕ ಕಾವ್ಯ ಪ್ರಶಸ್ತಿ ಇವರಿಗೆ ಲಭಿಸಿವೆ.
2 Postsಮೆಹಬೂಬ ಮುಲ್ತಾನಿ
ಮೆಹಬೂಬ ಮುಲ್ತಾನಿ ಬೆಳಗಾವಿಯವರು. ಚಿಕ್ಕದಿನಕೊಪ್ಪದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲಭಾಷಾ ಶಿಕ್ಷಕರು. ಕತೆ, ಕವಿತೆ ಬರೆಯುವುದು ಮತ್ತು ಅನುವಾದ ಇವರ ಆಸಕ್ತಿಗಳು.
1 Postಮೇಘಾ ಯಲಿಗಾರ್
ಮೇಘಾ ಯಲಿಗಾರ್ ಮೂಲತಃ ಗದಗ ಜಿಲ್ಲೆಯ ಮುಂಡರಗಿಯವರು. ಎಂಎಸ್ಸಿ ಮಾಸ್ ಕಮ್ಯೂನಿಕೇಶನ್ ಪದವೀಧರೆ. ಸಧ್ಯಕ್ಕೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕಂಪನಿಯೊಂದರ ಉದ್ಯೋಗಿ. ಸಿನಿಮಾ ಮತ್ತು ಸಾಹಿತ್ಯದಲ್ಲಿ ಆಸಕ್ತಿ.
1 Postಮೊಗಳ್ಳಿ ಗಣೇಶ್
ಕಥೆಗಾರ, ಕವಿ ಮತ್ತು ಕಾದಂಬರಿಕಾರ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
2 Posts
ಯೋಗೀಂದ್ರ ಮರವಂತೆ
ಇಂಗ್ಲೆಂಡ್ ನ ಬ್ರಿಸ್ಟಲ್ ನಗರದ "ಏರ್ ಬಸ್" ವಿಮಾನ ಕಂಪನಿಯಲ್ಲಿ ವಿಮಾನ ಶಾಸ್ತ್ರ ತಂತ್ರಜ್ಞ. ಬರವಣಿಗೆ, ಯಕ್ಷಗಾನ ಆಸಕ್ತಿಯ ವಿಷಯಗಳು. ಮೂಲತಃ ಕನ್ನಡ ಕರಾವಳಿಯ ಮರವಂತೆಯವರು. “ಲಂಡನ್ ಡೈರಿ-ಅನಿವಾಸಿಯ ಪುಟಗಳು” ಇವರ ಪ್ರಕಟಿತ ಬಿಡಿಬರಹಗಳ ಗುಚ್ಛ.
47 Postsರಜನಿ ಗರುಡ
ಮೂಲತಃ ಶಿರಸಿಯವರು. ಈಗ ಧಾರವಾಡದಲ್ಲಿ ನೆಲಸಿದ್ದಾರೆ. ನೀನಾಸಂ ರಂಗಶಿಕ್ಷಣ ಪಡೆದು ರಂಗಭೂಮಿಯ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. ಗೊಂಬೆಮನೆ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಸಂಗೀತ, ನೃತ್ಯ, ನಟನೆ, ನಿರ್ದೇಶನ, ರಂಗತರಬೇತಿ ಶಿಬಿರಗಳು, ಗೊಂಬೆ ತಯಾರಿಕೆ ಮತ್ತು ಪ್ರದರ್ಶನ ಹೀಗೆ ಹಲವು ಆಸಕ್ತಿಯ ಕ್ಷೇತ್ರಗಳು. ಹವ್ಯಾಸಿ ಬರಹಗಾರರು.
5 Postsರಮೇಶ್ ನಾಯಕ್
ಕೆಂಡಸಂಪಿಗೆಗಾಗಿಯೇ ಲಂಬಾಣಿ ಜೀವನದ ವಿವರಗಳನ್ನು ಕನ್ನಡದಲ್ಲಿ ಬರೆಯಲು ತೊಡಗಿದವರು. ಈಗ ಮೈಸೂರಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಹಿಂದಿ ಉಪನ್ಯಾಸಕರಾಗಿದ್ದಾರೆ.ಮೂಲತ: ವಿಜಯಪುರದ ರಾಮತೀರ್ಥ ಲಂಬಾಣಿ ತಾಂಡದವರು.
2 Postsರಹಮತ್ ತರೀಕೆರೆ
ಹೊಸ ತಲೆಮಾರಿನ ತೀಕ್ಷ್ಣ ಒಳನೋಟಗಳ ಲೇಖಕರು. ಸಂಸ್ಕೃತಿ ವಿಮರ್ಶೆ ಮತ್ತು ತಿರುಗಾಟ ಇವರ ಪ್ರೀತಿಯ ವಿಷಯಗಳು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ.
53 Postsರಾಜೀವ ನಾರಾಯಣ ನಾಯಕ
ಉತ್ತರ ಕನ್ನಡದ ಅಂಕೋಲಾ ತಾಲ್ಲೂಕಿನ ವಾಸರೆ ಗ್ರಾಮದವರು. ಸದ್ಯ ಮುಂಬೈನಲ್ಲಿ ಸರ್ಕಾರಿ ಉದ್ಯೋಗದಲ್ಲಿದ್ದಾರೆ.
3 Postsರಾಜೇಶ್ವರಿ ತೇಜಸ್ವಿ
ಲೇಖಕರಾಗಿ ಅಪರಿಚಿತರಾಗಿದ್ದ ಶ್ರೀಮತಿ ರಾಜೇಶ್ವರಿಯವರು ಪೂರ್ಣಚಂದ್ರ ತೇಜಸ್ವಿಯವರ ಪತ್ನಿ. ಕೆಂಡಸಂಪಿಗೆಯ ಮೂಲಕ ತಮ್ಮ ಊರಿನ ಬದುಕಿನ ಚಿತ್ರ ಕಟ್ಟಿಕೊಡುತ್ತಿದ್ದಾರೆ.
2 Postsರೂಪ ಹಾಸನ
ಕಾವ್ಯ ಮತ್ತು ರೇಖಾಚಿತ್ರ ಪ್ರಮುಖ ಅಭಿವ್ಯಕ್ತಿ ಮಾಧ್ಯಮ. ಒಂದು ಕಿರುಪದ್ಯಗಳ ಸಂಕಲನವೂ ಸೇರಿ ಐದು ಕವನ ಸಂಕಲನಗಳು ಪ್ರಕಟವಾಗಿವೆ. ಹಲವು ಭಾಷೆಗಳಿಗೆ ಕವಿತೆಗಳು ಭಾಷಾಂತರಗೊಂಡಿವೆ. ಮಹಿಳೆ ಮಕ್ಕಳು ಶಿಕ್ಷಣ ಪರಿಸರ ಸಂಬಂಧಿತ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಮೂಲತಃ ಮೈಸೂರಿನವರು, ಸದ್ಯದ ನೆಲೆ ಹಾಸನ.
3 Posts
ರೂಪಶ್ರೀ ಕಲ್ಲಿಗನೂರ್
ಚಿತ್ರ ಕಲಾವಿದೆ, ಕವಯತ್ರಿ ಹಾಗೂ ಪತ್ರಕರ್ತೆ. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 'ಕಾಡೊಳಗ ಕಳದಾವು ಮಕ್ಕಾಳು' ಮಕ್ಕಳ ನಾಟಕ . 'ಚಿತ್ತ ಭಿತ್ತಿ' ವಿಭಾ ಸಾಹಿತ್ಯ ಪ್ರಶಸ್ತಿ ಪಡೆದ ಕವನ ಸಂಕಲನ. ಹುಟ್ಟಿದ್ದು ಸವಣೂರಿನಲ್ಲಿ. ಈಗ ಬೆಂಗಳೂರು. ‘ಕೆಂಡಸಂಪಿಗೆ’ ಯಲ್ಲಿ ಸಹಾಯಕ ಸಂಪಾದಕಿ.
23 Postsಲಕ್ಷ್ಮೀಶ ತೋಳ್ಪಾಡಿ
ವೇದ,ಉಪನಿಷತ್,ಮಹಾಕಾವ್ಯ,ಪರಿಸರ,ಸೌಂದರ್ಯ ಹಾಗೂ ಮಾನವ ಜೀವನದ ಕುರಿತು ಆಳವಾಗಿ, ಸ್ಪಷ್ಟವಾಗಿ ಮಾತನಾಡಬಲ್ಲ, ಬರೆಯಬಲ್ಲ ಲಕ್ಷ್ಮೀಶ ತೋಳ್ಪಾಡಿ ಕನ್ನಡದ ಈ ತಲೆಮಾರಿನ ಬಹಳ ಒಳ್ಳೆಯ ವಿದ್ವಾಂಸರಲ್ಲಿ ಒಬ್ಬರು.
3 Postsವಾಸುದೇವ ಕೃಷ್ಣಮೂರ್ತಿ
ವಾಸುದೇವ ಕೃಷ್ಣಮೂರ್ತಿ ಬೆಂಗಳೂರು ನಿವಾಸಿ. ಎಲೆಕ್ಟ್ರಾನಿಕ್ ಎಂಜಿನಿಯರ್ ಆಗಿರುವ ಇವರು ಖಾಸಗಿ ಕಂಪೆನಿಯ ಐಟಿ ಉದ್ಯೋಗಿ. ಸಾಹಿತ್ಯದಲ್ಲಿ ಆಸಕ್ತಿ. ಓದುವುದು, ಬರೆಯುವುದು, ಚಿತ್ರಕಲೆ, ಸ೦ಗೀತ, ಪ್ರವಾಸ ಮತ್ತು ಛಾಯಗ್ರಹಣ ಇವರ ಹವ್ಯಾಸಗಳು.
1 Postವಾಸುದೇವ ನಾಡಿಗ್
ವಾಸುದೇವ ನಾಡಿಗ್ ಮೂಲತಃ ಶಿವಮೊಗ್ಗದ ಭದ್ರಾವತಿಯವರು. ಕುವೆಂಪು ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯ ದಲಿ ಬಿ. ಎಡ್. ಪದವಿ ಪಡೆದಿದ್ದಾರೆ. ೨೦ ವರ್ಷಗಳಿಂದ ಜವಾಹರ ನವೋದಯ ವಿದ್ಯಾಲಯದಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ನಿನ್ನ ಧ್ಯಾನದ ಹಣತೆ, ವಿರಕ್ತರ ಬಟ್ಟೆಗಳು, ಅಲೆ ತಾಕಿದರೆ ದಡ, ಅವನ ಕರವಸ್ತ್ರ ಅನುಕ್ತ ( ಈವರೆಗಿನ ಕವಿತೆಗಳು) ಇವರ ಪ್ರಕಟಿತ ಕವನ ಸಂಕಲನಗಳು. ಬೇಂದ್ರೆ ಅಡಿಗ, ಕಡೆಂಗೋಡ್ಲು ಶಂಕರಭಟ್ಟ, ಮುದ್ದಣ, ಜಿ ಎಸ್ ಎಸ್ ಕಾವ್ಯ ಪ್ರಶಸ್ತಿ ಇವರಿಗೆ ದೊರೆತಿವೆ.
5 Postsವಿಕ್ರಂ ಹತ್ವಾರ್
ಕವಿ, ಕಥೆಗಾರ. ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಊರು ಕುಂದಾಪುರ. ಇರುವುದು ಬೆಂಗಳೂರು. `ಜೀರೋ ಮತ್ತು ಒಂದು' ಇವರಿಗೆ ಹೆಸರು ತಂದುಕೊಟ್ಟ ಕಥಾಸಂಕಲನ.
1 Postವೀಣಾ ಶಾಂತೇಶ್ವರ
ಕನ್ನಡದ ಪ್ರಮುಖ ಲೇಖಕಿ. ‘ಗಂಡಸರು’ ಮತ್ತು ‘ಶೋಷಣೆ, ಬಂಡಾಯ ಇತ್ಯಾದಿ’ ಎಂಬ ಎರಡು ಕಾದಂಬರಿಗಳ ಮೂಲಕ ಕನ್ನಡ ಬರಹ ಲೋಕದಲ್ಲಿ ಹೊಸ ಅಲೆಗಳನ್ನ ಎಬ್ಬಿಸಿದವರು.ಹುಟ್ಟೂರು ಮತ್ತು ಈಗ ಇರುವುದು ಧಾರವಾಡ.
2 Postsವೆಂಕಟರಂಗ ಮೈಸೂರು
ಮೈಸೂರಿನವರು. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.ಸಾಹಿತ್ಯ,ಕ್ರಿಕೆಟ್ ಮತ್ತು ಪ್ರವಾಸ ಇವರ ಆಸಕ್ತಿಯ ವಿಷಯಗಳು.
2 Postsವೈ.ಎಸ್. ಹರಗಿ
ವೈ.ಎಸ್. ಹರಗಿ ಮೂಲತಃ ರೋಣ ತಾಲ್ಲೂಕಿನ ಹುಲ್ಲೂರಿನವರು. ೧೯೯೯ನೇ ಸಾಲಿನಲ್ಲಿ ಕೆ. ಪಿ. ಎಸ್. ಸಿ. ಮುಖಾಂತರ ನೇರ ನೇಮಕಾತಿ ಹೊಂದಿ ನಂಜನಗೂಡು ಮೈಸೂರು ಜಿಲ್ಲೆಯಲ್ಲಿ ಅಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ “ಉರಿವ ಜಲ” ಕಾದಂಬರಿಗೆ ೨೦೧೪ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(ಚದುರಂಗ ದತ್ತಿ ನಿಧಿ)ಯ ಜೊತೆ ಹಲವು ಪ್ರಶಸ್ತಿಗಳು ದೊರೆತಿವೆ. ಕವಡೆಪುರದ ಕೌರವರು (ಕಾದಂಬರಿ), ಕವಡೆಪುರದ ಕೌರವರು(ಕಾದಂಬರಿ), ಮೂಕ ಹಕ್ಕಿ ನಕ್ಕಾಗ (ಕಥಾ ಸಂಕಲನ), ಬಾರಪ್ಪಾ ಬಾರೋ ಮಳೆರಾಯ (ಕಥಾಸಂಕಲನ) ದೇವ್ರು ಬರ್ತಾನೆ ದಾರಿಬಿಡಿ (ಕಥಾ ಸಂಕಲನ), ಸ್ವಪ್ನಗೆಜ್ಜೆ (ಕಾದಂಬರಿ), ಕವಡೆಪುರದ ಕೌರವರು (ಕಾದಂಬರಿ), ಮ್ಯಾಕ್ಸ್ ಮುಲ್ಲರ್ (ಜೀವನ ಚರಿತ್ರೆ) ಕಲ್ಲರಳಿ ಹೂವಾಗಿ ಇವರ ಪ್ರಕಟಿತ ಕೃತಿಗಳು.
1 Postವೈಶಾಲಿ ಹೆಗಡೆ
ಊರು, ಪಿಯುಸಿವರೆಗಿನ ಓದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ. ಈಗ ಅಮೇರಿಕಾದ ಪ್ರತಿಷ್ಠಿತ ಟೆಲಿಕಾಂ ಕಂಪನಿಯೊಂದರಲ್ಲಿ ಕೆಲಸ. ಇರುವುದು ಬಾಸ್ಟನ್ ನ ಉತ್ತರದ ಊರೊಂದರಲ್ಲಿ. 'ಒದ್ದೆ ಹಿಮ.. ಉಪ್ಪುಗಾಳಿ' ಇವರ ಪ್ರಬಂಧ ಸಂಕಲನ.
14 Postsಶರಣಬಸವ ಕೆ ಗುಡದಿನ್ನಿ
ಶರಣಬಸವ ಕೆ ಗುಡದಿನ್ನಿ ರಾಯಚೂರು ಜಿಲ್ಲೆಯ ವೃತ್ತಿಯಲ್ಲಿ ಪ್ರಾಥಮಿಕ ಶಿಕ್ಷಕ. ಕತೆ ಇವರ ಆಸಕ್ತಿಯ ಕ್ಷೇತ್ರ. ಸತತ ಎರಡು ವರ್ಷ ವಿಜಯ ಕರ್ನಾಟಕ ಯುಗಾದಿ ಕಥಾ ಸ್ಪರ್ದೆಯ ಟಾಪ್-25 ಕತೆಗಳಲ್ಲಿ ಇವರ ಕಥೆಗಳು ಆಯ್ಕೆಯಾಗಿವೆ.
1 Postಶಾಂತಿ ಕೆ. ಅಪ್ಪಣ್ಣ
ಕನ್ನಡದ ಹೊಸ ತಲೆಮಾರಿನ ಕಥೆಗಾರ್ತಿ. ಇವರ ‘ಮನಸು ಅಭಿಸಾರಿಕೆ’ ಸಣ್ಣ ಕತೆಗಳ ಚೊಚ್ಚಲ ಸಂಕಲನ ಹಲವು ಪ್ರಶಸ್ತಿಗಳಿಗೆ ಬಾಜನವಾಗಿದೆ. ಮೂಲತಃ ಕೊಡಗಿನವರು. ಈಗ ಕೆಲಸದ ನಿಮಿತ್ತ ಚೆನ್ನೈನಲ್ಲಿ ವಾಸವಾಗಿದ್ದಾರೆ.
1 Postಶುಭಾ ಎ.ಆರ್.
ಶುಭಾ ಎ. ಆರ್. ಮೂಲತಃ ಬೆಂಗಳೂರಿನವರು. ಇವರ ಕತೆ, ಕವನ, ಪ್ರಬಂಧಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ವಿಜ್ಞಾನ ಶಿಕ್ಷಕಿಯಾಗಿರುವ ಇವರು ವಿಜ್ಞಾನ ಪಠ್ಯಪುಸ್ತಕವೂ ಸೇರಿದಂತೆ ಶಿಕ್ಷಣ ಇಲಾಖೆಯಲ್ಲಿ ಹಲವಾರು ಪುಸ್ತಕಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ರಾಜಾಜಿನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ವಿಜ್ಞಾನ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಕ್ಕಳಿಗಾಗಿ "ಧರೆಯನುಳಿಸುವ ಬನ್ನಿರಿ" ಎಂಬ ವೈಜ್ಞಾನಿಕ ನಾಟಕಗಳ ಪುಸ್ತಕ ಪ್ರಕಟಿಸಿದ್ದು, ‘ತುಂಡು ಭೂಮಿ- ತುಣುಕು ಆಕಾಶ’,(ಕಥಾ ಸಂಕಲನ), ‘ತುಟಿ ಬೇಲಿ ದಾಟಿದ ನಗು’ (ಕವನ ಸಂಕಲನ) ಸದ್ಯದಲ್ಲೇ ಬಿಡುಗಡೆಯಾಗಲಿವೆ.
1 Post
ಶೇಷಾದ್ರಿ ಗಂಜೂರು
ಶೇಷಾದ್ರಿ ಗಂಜೂರು ಕೆಲ ವರ್ಷಗಳ ಕಾಲ ಬಿಹಾರದ ಕಲ್ಲಿದ್ದಲು ಗಣಿಗಳಲ್ಲಿ ಕೆಲಸಮಾಡಿ, ನಂತರ ದಶಕಗಳ ಕಾಲ ಅಮೆರಿಕದಲ್ಲಿ ನೆಲೆಸಿ, ಈಗ ಸದ್ಯಕ್ಕೆ ಕೆನಡಾದಲ್ಲಿ ಕಾಗ್ನಿಟಿವ್ ಕಾಂಪ್ಯೂಟಿಂಗ್ ವಿಷಯದಲ್ಲಿ ಸಂಶೋಧನೆಯಲ್ಲಿ ತೊಡಗಿರುವ ನ್ಯೂರೋಸೈನ್ಸಿನಲ್ಲಿ ಆಸಕ್ತಿಯುಳ್ಳ ವಿಜ್ಞಾನಿ.
22 Postsಶ್ಯಾಮಲಾ ಮಾಧವ
ಕಥೆಗಾರ್ತಿ ಮತ್ತು ಅನುವಾದಕಿ. ಹುಟ್ಟಿದ್ದು ಮಂಗಳೂರು. ಈಗ ಮುಂಬೈ ವಾಸಿ. ರಫಿಯಾ ಮಂಜೂರುಲ್ ಅಮೀನ್ ಬರೆದ ಉರ್ದು ಕಾದಂಬರಿ , ’ ಆಲಂಪನಾ ’ದ ಕನ್ನಡ ಅನುವಾದ ಇವರ ಮಹತ್ವದ ಕೃತಿ.
1 Postಶ್ರೀ ತಲಗೇರಿ
ಶ್ರೀ ತಲಗೇರಿ ಉತ್ತರ ಕನ್ನಡ ಜಿಲ್ಲೆಯ ತಲಗೇರಿ ಎನ್ನುವ ಪುಟ್ಟ ಹಳ್ಳಿಯವರು. ಸದ್ಯಕ್ಕೆ ಬೆಂಗಳೂರಿನ ನಿವಾಸಿ. ಸಾಫ್ಟ್‌ವೇರ್ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
1 Postಶ್ರೀಕಾಂತ್ ಪ್ರಭು
ಲೇಖಕ ಮತ್ತು ಕಿರುಚಿತ್ರ, ಸಾಕ್ಷ್ಯಚಿತ್ರಗಳ ನಿರ್ಮಾಪಕ. ಚಿತ್ರ ಸಮಾಜ ಚಳುವಳಿಯೊಂದಿಗೆ ಬೆಳೆದವರು.
2 Posts
ಶ್ರೀದೇವಿ ಕೆರೆಮನೆ
ಕವಯತ್ರಿ ಶ್ರೀದೇವಿ ಕೆರೆಮನೆ ಕಾರವಾರದ ಚಿತ್ತಾಕುಲ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಒಟ್ಟೂ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ.
17 Posts
ಶ್ರೀಹರ್ಷ ಸಾಲಿಮಠ
ಶ್ರೀಹರ್ಷ ಎಂ ಟೆಕ್ ಪದವೀಧರ. ವೃತ್ತಿಯಿಂದ ಸಾಫ್ಟ್ ವೇರ್ ಇಂಜಿನಿಯರ್. ಬಾಲ್ಯ ಮತ್ತು ಇಂಜಿನಿಯರಿಂಗ್ ಪದವಿಯವರೆಗೆ ಓದಿದ್ದು ದಾವಣಗೆರೆಯಲ್ಲಿ. ಸಧ್ಯಕ್ಕೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವೃತ್ತಿ ಮತ್ತು ವಾಸ. ಹವ್ಯಾಸಗಳು, ಓದು, ಸುತ್ತಾಟ, ಸಂಗೀತ.
14 Postsಸಚಿನ್ ಅಂಕೋಲಾ
ಸಚಿನ್ ಅಂಕೋಲಾ, ಮೂಲತಃು ಅಂಕೋಲಾದವರು. ವಾಸ ಉಡುಪಿ. ಸಿವಿಲ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ನಾನೂ ಹೆಣ್ಣಾಗಬೇಕಿತ್ತು” ಇವರ ಪ್ರಕಟಿತ ಕವನ ಸಂಕಲನ
0 Postsಸಚೇತನ ಭಟ್
ಸಚೇತನ ಭಟ್ ಮೂಲತಃ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಚಿಕ್ಕ ಹಳ್ಳಿ ಶೇಲೂರಿನವರು. ಓದಿದ್ದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ. ಬೆಂಗಳೂರ ವಾಸಿ. ಸಾಫ್ಟ್ವ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಸಚೇತನ ಅವರಿಗೆ ಓದುವುದರಲ್ಲಿ ಅಪಾರ ಆಸಕ್ತಿ.
2 Postsಸಂಧ್ಯಾದೇವಿ
ಕನ್ನಡದ ಕವಯಿತ್ರಿ. `ಮಾತು ಚಿಟ್ಟೆ ಬೆಂಕಿ ಬೆರಳು ಮುರಿದ ಮುಳ್ಳಿನಂತೆ ಜ್ಞಾನ' ಇವರ ಕವಿತಾ ಸಂಕಲನ. ಊರು ಪುತ್ತೂರು
1 Postಸಂಧ್ಯಾರಾಣಿ
ಲೇಖಕಿ, ಅನುವಾದಕಿ, ಪತ್ರಕರ್ತೆ ಮತ್ತು ಚಿತ್ರ ಸಾಹಿತಿ . ‘ಯಾಕೆ ಕಾಡುತಿದೆ ಸುಮ್ಮನೆ’ ( ಅಂಕಣ ಬರಹ) ‘ತುಂಬೆ ಹೂ’ ( ಜೀವನ ಚರಿತ್ರೆ) ‘ಪೂರ್ವಿ ಕಲ್ಯಾಣಿ’ ಮತ್ತು ‘ನನ್ನೊಳಗಿನ ಹಾಡು ಕ್ಯೂಬಾ’ (ನಾಟಕ) ಇವರ ಕೃತಿಗಳು. ಊರು ಬಂಗಾರಪೇಟೆ, ಇರುವುದು ಬೆಂಗಳೂರು.
15 Postsಸರಿತಾ ನವಲಿ
ಸರಿತಾ ನವಲಿ ಮೂಲತಃ ಉತ್ತರ ಕರ್ನಾಟಕದವರು. ಕಾಲೇಜು ಮತ್ತು ಸ್ನಾತಕೋತ್ತರ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದು, ಸದ್ಯ ನ್ಯೂ ಜೆರ್ಸಿಯಲ್ಲಿ ನೆಲೆಸಿದ್ದಾರೆ. ಇವರ ಬರಹಗಳು ಕನ್ನಡದ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ’ಆವನಾವನು ಕಾಯ್ವ’ ಇವರ ಮೊದಲ ಕಥಾಸಂಕಲನ.
2 Posts
ಸರೋಜಿನಿ ಪಡಸಲಗಿ
ಸರೋಜಿನಿ ಪಡಸಲಗಿ ಬೆಂಗಳೂರು ವಾಸಿ. ಕವಿತೆ, ಕತೆ ಪ್ರಬಂಧಗಳನ್ನು ಬರೆಯುವುದು ಜೊತೆಗೆ ಕವನಗಳಿಗೆ ರಾಗ ಸಂಯೋಜನೆ ಮಾಡಿ ಹಾಡುವುದೂ ಇವರ ಹವ್ಯಾಸ.
1 Postಸಿಂಧು
ಹುಟ್ಟಿದ್ದು ಶಿವಮೊಗ್ಗದ ಸಾಗರದಲ್ಲಿ. ವೆಬ್ ಡಿಸೈನಿಂಗ್ ಡಿಪ್ಲೊಮಾ ಮತ್ತು ಇಂಗ್ಲಿಷ್ ಎಂ.ಎ ಮಾಡಿ, ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರ, ತರಬೇತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ
8 Postsಸೀಮಾ ಎಸ್ ಹೆಗಡೆ
ಹುಟ್ಟಿದ್ದು ಬೆಳೆದದ್ದು ಮಲೆನಾಡಿನ ಹಳ್ಳಿಯ ರೈತ ಕುಟುಂಬವೊಂದರಲ್ಲಿ. ಓದಿದ್ದು ಅರ್ಥಶಾಸ್ತ್ರ. ಈಗ ಇರುವುದು ನೆದರ್ಲ್ಯಾಂಡ್ಸ್ ನ ಆಮ್ಸ್ಟೆರ್ಡಾಮ್ ನಲ್ಲಿ.
11 Postsಸುಕನ್ಯಾ ಕನಾರಳ್ಳಿ
ಲೇಖಕಿ, ಅನುವಾದಕಿ ಮತ್ತು ಇಂಗ್ಲೀಷ್ ಪ್ರಾಧ್ಯಾಪಕಿ. ‘ಹೇಳುತೇನೆ ಕೇಳು: ಹೆಣ್ಣಿನ ಆತ್ಮಕಥನಗಳು’ ಇವರ ಮುಖ್ಯ ಕೃತಿ. ‘An Afternoon with Shakuntala’ ವೈದೇಹಿ ಅವರ ಕಥೆಗಳ ಇಂಗ್ಲೀಷ್ ಅನುವಾದ. ಕೊಡಗು ಜಿಲ್ಲೆಯ ಕನಾರಳ್ಳಿಯವರು. ನ್ಯೂಜಿಲ್ಯಾಂಡಿನಲ್ಲಿ ವಾಸವಾಗಿದ್ದಾರೆ.
4 Postsಸುಜಾತಾ ಎಚ್.ಆರ್
ಲೇಖಕಿ ಮತ್ತು ಅಂಕಣಗಾರ್ತಿ. ಇವರ ಇತ್ತೀಚೆಗಿನ 'ನೀಲಿ ಮೂಗಿನ ನತ್ತು’ ಕೃತಿ ಅಮ್ಮ ಪ್ರಶಸ್ತಿ ಪಡೆದಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಪಠ್ಯಪುಸ್ತಕದಲ್ಲೂ ಸೇರಿದೆ. ಮಕ್ಕಳ ರಂಗಭೂಮಿ ಮತ್ತು ಪತ್ರಿಕೋದ್ಯಮದ ಅನುಭವವೂ ಇದೆ.
35 Postsಸುದರ್ಶನ್
ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.
78 Postsಸುಧಾ ಆಡುಕಳ.
ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ರಾಧಾ, ನೃತ್ಯಗಾಥಾ, ಮಕ್ಕಳ ರವೀಂದ್ರ, ನಾರಸಿಂಹ, ಮಕ್ಕಳ ರಾಮಾಯಣ, ಕನಕ-ಕೃಷ್ಣ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ರವೀಂದ್ರರ ಚಿತ್ರಾ, ಕೆಂಪುಕಣಗಿಲೆ, ಅವಳ ಕಾಗದ ಮೊದಲಾದ ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ‘ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
2 Postsಸುಧಾ ಚಿದಾನಂದಗೌಡ
ಕಥೆಗಾರ್ತಿ, ಕವಯಿತ್ರಿ. ‘ಬಯಲ ಧ್ಯಾನ’ ಇವರ ಕವಿತಾ ಸಂಕಲನ. ಬಳ್ಳಾರಿ ಜಿಲ್ಲೆ ಹರಪನಹಳ್ಳಿಯವರು. ಆಂಗ್ಲ ಭಾಷಾ ಉಪನ್ಯಾಸಕಿಯಾಗಿದ್ದಾರೆ.
1 Postಸುನಂದಾ ಪ್ರಕಾಶ ಕಡಮೆ
ಕಥೆಗಾರ್ತಿ, ಕವಯಿತ್ರಿ, ಕಾದಂಬರಿಗಾರ್ತಿ. ಊರು ಉತ್ತರ ಕನ್ನಡ ಜಿಲ್ಲೆಯ ಅಲಗೇರಿ. ಇರುವುದು ಹುಬ್ಬಳ್ಳಿ.
2 Posts
ಸುನೈಫ್ ವಿಟ್ಲ
ಊರು ದಕ್ಷಿಣ ಕನ್ನಡದ ವಿಟ್ಲ. ಹೊಟ್ಟೆಪಾಡು ಕೇರಳದ ಕಲ್ಲಿಕೋಟೆಗೆ ಕಟ್ಟಿ ಹಾಕಿದೆ. ಖಾಸಗಿ ಕಂಪೆನಿಯೊಂದರಲ್ಲಿ ಅಸಿಸ್ಟಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹವ್ಯಾಸಿ ಬರಹಗಾರ
4 Postsಸುಮಂಗಲಾ
ಕತೆಗಾರ್ತಿ ಮತ್ತು ಅನುವಾದಕಿ. "ಚರ್ನೋಬಿಲ್ ಪ್ರಾರ್ಥನೆ" ಇವರ ಇತ್ತೀಚಿನ ಅನುವಾದ ಕೃತಿ. “ಹನ್ನೊಂದನೇ ಅಡ್ಡರಸ್ತೆ” ಇವರಿಗೆ ಹೆಸರು ತಂದುಕೊಟ್ಟ ಕಥಾ ಸಂಕಲನ. ಶಿವಮೊಗ್ಗ ಜಿಲ್ಲೆ ಸಾಗರದವರು. ಈಗ ಬೆಂಗಳೂರು ವಾಸಿ.
2 Postsಸೃಜನ್
ಕಲಾವಿದ ಮತ್ತು ಅನುವಾದಕ. ಓದಿದ್ದು ಸಂಡೂರು ಹಾಗು ಬಳ್ಳಾರಿ . ವೃತ್ತಿಯಿಂದ ಸಿವಿಲ್ ಇಂಜಿನೀಯರ್ . ರಾಮ್ ಗೋಪಾಲ್ ವರ್ಮ ' ನನ್ನಿಷ್ಟ' ಮೊದಲ ಅನುವಾದ. 'ಪಚ್ಚೆ ರಂಗೋಲಿ' ಮೊದಲ ಅನುವಾದ ಕಥೆ. ಸದ್ಯ ಅನುವಾದ ಮತ್ತು ಪೈಂಟಿಂಗ್ಸ್ ಗಳಲ್ಲಿ ಬ್ಯುಸಿ .
3 Postsಹಟ್ಟಿ ಸಾವಿತ್ರಿ ಪ್ರಭಾಕರ ಗೌಡ
ಗದಗಿನ ಲಕ್ಕುಂಡಿ ಮೂಲದ ಸಾವಿತ್ರಿ, ತುಮಕೂರು ಜಿಲ್ಲೆಯ ನಾಗಸಂದ್ರ ಗ್ರಾಮದಲ್ಲಿ ಶಿಕ್ಷಕಿ. ಏಳೂವರೆ ವರ್ಷ ಅನುವಾದಕಿಯಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುವುದು ಇವರ ಕನಸು. ಓದು, ಪ್ರಯಾಣ, ಸಣ್ಣ ಕಥೆ ಮತ್ತು ಪ್ರಬಂಧ ಬರವಣಿಗೆ ಇವರ ಹವ್ಯಾಸ.
1 Postಹೃಷಿಕೇಶ್ ಬಹದ್ದೂರ್ ದೇಸಾಯಿ
ಮೂಲ ಊರು ಅಗಡಿ.ಹುಟ್ಟಿದ್ದು ಹುಬ್ಬಳ್ಳಿಯಲ್ಲಿ. ಅಗಡಿ, ಹಾನಗಲ್ಲು, ಪಣಜಿ, ಹುಬ್ಬಳ್ಳಿ ಹಾಗೂ ಬೆಂಗಳೂರು ಗಳಲ್ಲಿ ಓದು. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೀದರ್ ನ ನಂತರ ಈಗ ಕೆಲಸ ಮಾಡುತ್ತಿರುವುದು ಬೆಳಗಾವಿಯಲ್ಲಿ. ಓದಿದ್ದು ಆಂಗ್ಲ ಸಾಹಿತ್ಯ. ಜಾಹಿರಾತು ಕಂಪನಿಗಳಲ್ಲಿ ಕಾಪಿ ರೈಟಿಂಗ್ ಮಾಡಬೇಕೆಂದು ಹೊರಟವನು ಪತ್ರಕರ್ತ ನಾಗಿದ್ದು ಅಚಾನಕ್.
3 Posts
ಹೇಮಾ .ಎಸ್
ಕನ್ನಡ ಉಪನ್ಯಾಸಕಿ.ಇಂಗ್ಲೀಷ್ ಹಾಗೂ ಹಿಂದಿಯಿಂದ ಲೇಖನ, ಕತೆ ಹಾಗೂ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಅನುವಾದಗಳು ಹಲವು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಇರಾನಿನ ಚಲನಚಿತ್ರ ನಿರ್ದೇಶಕ ಅಬ್ಬಾಸ್ ಕಿರಸ್ತೋಮಿಯ ಕಿರುಪದ್ಯಗಳ ಅನುವಾದ 'ಹೆಸರಿಲ್ಲದ ಹೂ' ಪ್ರಕಟಿತ ಸಂಕಲನ..
35 Postsಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಓದುಗರ ಮೆಚ್ಚು
ನಮ್ಮ ಫೇಸ್ ಬುಕ್
ನಮ್ಮ ಟ್ವಿಟ್ಟರ್
ಕರೋನ ಕಥೆ, ವ್ಯಥೆ: ಡಾ. ಜಿ. ಎಸ್. ಶಿವಪ್ರಸಾದ್ ಬರೆದ ಲೇಖನ
https://t.co/YU4VmxkCya
#kendasampigeemag
ನಮ್ಮ ಬರಹಗಾರರು
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಪುಸ್ತಕ ಸಂಪಿಗೆ
ಬಿ.ಆರ್.ಎಲ್. ಪುಸ್ತಕದ ಕುರಿತು ನಾಗರೇಖಾ ಗಾಂವಕರ ಬರಹ
"ಬದುಕಿನ ಹಲವು ಹಂತಗಳ ನಿಭಾಯಿಸಿಯೂ, ಮನುಷ್ಯನಾಗಿ ಬದುಕುವ ಆ ನೆಲೆಯಲ್ಲಿ ಕಾಲವಲ್ಲದ ಕಾಲದ ಬಯಕೆ ಎಂದು ಜಗತ್ತು ಜರೆಯುವ ಸಮಯದಲ್ಲೂ ತುಡಿಯುವ ಭಾವಗಳ ಕುರಿತು ಮೂಗುಮುರಿಯದೇ ಅಸಂಗತವೆಂದು...
Read Moreಬರಹ ಭಂಡಾರ
- January 2021
- December 2020
- November 2020
- October 2020
- September 2020
- August 2020
- July 2020
- June 2020
- May 2020
- April 2020
- March 2020
- February 2020
- January 2020
- December 2019
- November 2019
- October 2019
- September 2019
- August 2019
- July 2019
- June 2019
- May 2019
- April 2019
- March 2019
- February 2019
- January 2019
- December 2018
- November 2018
- October 2018
- September 2018
- August 2018
- July 2018
- June 2018
- May 2018
- April 2018
- March 2018
- February 2018
- January 2018
- December 2017
- November 2017
- October 2017
- September 2016
- August 2016
- July 2016
- June 2016
- May 2016
- April 2016
- March 2016
- February 2016
- January 2010
- June 2008
ಹಳೆಯವನ್ನು ಹುಡುಕಿ
ಇತ್ತೀಚಿನ ಬರಹಗಳು
-
-
ಹೊಸಪೇಟೆಯ ಅನಂತಶಯನಗುಡಿ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿJan 26, 2021 | ಪ್ರವಾಸ
-
-
ಮಂಜುಳಾ ದೇಸಾಯಿ ತೆಗೆದ ಈ ದಿನದ ಚಿತ್ರJan 25, 2021 | ದಿನದ ಫೋಟೋ
-
ಬಿ.ಆರ್.ಎಲ್. ಪುಸ್ತಕದ ಕುರಿತು ನಾಗರೇಖಾ ಗಾಂವಕರ ಬರಹJan 25, 2021 | ದಿನದ ಪುಸ್ತಕ