Advertisement

Category: ಅಂಕಣ

ಯಾವುದು ಪ್ರೀತಿ?! ಯಾಕಾದರೂ ಈ ಪ್ರೀತಿ…: ಆಶಾ ಜಗದೀಶ್ ಅಂಕಣ

ಕಲ್ಲೆಸೆಯುವ ಕೈಗಳಿಗೆ ಆತ್ಮಸಾಕ್ಷಿ ಏಕೆ ಕಾಡುವುದಿಲ್ಲ?! ಕೊಂದು ಬದುಕುವುದು ಮನುಷ್ಯತ್ವವೇ ಅಲ್ಲ ಎಂದ ಮೇಲೆ ನೋಯಿಸಿ ನಗುವ ಮನಃಸ್ಥಿತಿ ಹುಟ್ಟಿದ್ದು ಎಲ್ಲಿಂದ… ಎಲ್ಲ ಪಾಠಗಳನ್ನೂ ನಮ್ಮ ಬದುಕಿನಿಂದಲೇ ಕಲಿಯುವ ಅಗತ್ಯವಿಲ್ಲ. ನಮ್ಮವರ ಬದುಕಿನಿಂದಲೂ ಕಲಿಯಬಹುದು…ಇಲ್ಲಿ ಮಲ್ಲಿಗೆ ಬಳ್ಳಿಯಂತೆ ತಬ್ಬಿ ಹಬ್ಬಿ ಬೆಳೆಯುವ ಹೊತ್ತಿನಲ್ಲೇ ಗುಲಾಬಿಯಂತೆ ಮುಳ್ಳುಗಳ ನಡುವೆಯೇ ಜಾಗ್ರತೆಯಾಗಿ ಅರಳುವುದನ್ನೂ ಕಲಿಯಬೇಕು.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಹೊಸ ಬರಹ

Read More

ಬಹುಸಂಸ್ಕೃತಿಗಳ ಆಸ್ಟ್ರೇಲಿಯಾದಲ್ಲಿ ನೆರೆಹೊರೆ: ವಿನತೆ ಶರ್ಮ ಅಂಕಣ

ಹಾಗೆ ನೋಡಿದರೆ ಆಸ್ಟ್ರೇಲಿಯಾದ ನಗರಗಳಲ್ಲಿ ವಾಸಿಸುವ ಸಾಮಾನ್ಯ ಜನರು ಮತ್ತು ಅವರ ನೆರೆಹೊರೆಯವರು ಎನ್ನುವ ವಿಷಯಕ್ಕೆ ಪುನರ್ಜೀವ ಬಂದಿದೆ. ಇದಕ್ಕೆ ಇಂಬು ಕೊಟ್ಟಿರುವುದು ವಲಸಿಗರ ಸಂಖ್ಯೆ, ಅವರ ಮೇಲ್ಮಟ್ಟದ ಉದ್ಯೋಗಗಳು, ಸಂಬಳ, ವಸತಿ ಕೊಳ್ಳುವ ಸಾಮರ್ಥ್ಯ ಇತ್ಯಾದಿ. ಈ ಸಾಮರ್ಥ್ಯದಿಂದ ಅವರು ಸಮಾಜದ ಮೇಲಿನ ಸ್ತರಗಳಿಗೆ ಬಂದು ಹೆಸರು, ಖ್ಯಾತಿ, ಸ್ಥಾನಮಾನಗಳನ್ನು ಗಳಿಸಿ ಮಿಂಚುತ್ತಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಬೆಚ್ಚಿ ಬೀಳಿಸಿದ ದೆವ್ವಗಳ ಕಥೆಗಳು: ಸುಧಾ ಆಡುಕಳ ಅಂಕಣ

ಸುಮಾರು ಹೊತ್ತಿನಲ್ಲಿ ಮೊದಲು ಮಾತನಾಡಿಸಿದ ಹೆಂಗಸೇ ಹೊರಬಂದು, “ಬನ್ನಿ ಒಳಗೆ. ನಿಮಗೆ ಬಿಸಿ, ಬಿಸಿ ಚಾ ಕೊಡುವೆ.” ಎಂದಳಾದರೂ ಮಾತು ಮುಗಿಸುವಾಗ ಕಣ್ಣು ಕೆಂಡದಂತೆ ಹೊಳೆಯುತ್ತಿತ್ತು. ನಡುಮನೆಯಲ್ಲಿರುವ ಎರಡು ಕತ್ತಲೆಯ ಕೋಣೆಯನ್ನು ದಾಟಿ ಅಡುಗೆಮನೆಗೆ ಕಾಲಿಟ್ಟಿದ್ದೇ ಸೋಮಣ್ಣ ಬೆಚ್ಚಿಬಿದ್ದ! ಕಟ್ಟಿಗೆಯ ಒಲೆಯಲ್ಲಿ ಸೌದೆಯ ಬದಲು ತನ್ನ ಕಾಲನ್ನೇ ಒಟ್ಟಿ ಅಲ್ಲವಳ ಸೊಸೆ ಹಾಲು ಕಾಯಿಸುತ್ತಿದ್ದಳು!
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

Read More

ಲೋಕದೃಷ್ಟಿಯೂ ಲೋಕಾ ರೂಢಿಗಳು: ಲಿಂಗರಾಜ ಸೊಟ್ಟಪ್ಪನವರ್‌ ಅಂಕಣ

ಸಿಕ್ಕೊಂಡು ಸೀರಿ ಉಟ್ಕಂಡಿಯವೂ ಹುಷಾರು..: ಮನೆಯ ಹಿರಿಯ ಹೆಂಗಸರು ಹಿರಿಯರಿಗೆ ಹೇಳಿ ಕಳಿಸುವ ಅತಿ ಎಚ್ಚರಿಕೆಯ ಮಾತು ಇದು. ಹಲವು ನೆರಿಗೆಗಳನ್ನು ಸೀರೆಗೆ ಆಧ್ಯಾರೋಪಿಸಿದಂತಹ ಕಟು ಎಚ್ಚರ ಇಲ್ಲಿ ಸಂಕೇತದಂತೆ ಇದೆ. ಎಡವದಿರುವ ಜಾರದಿರುವ ಎಚ್ಚರ ಹೆಜ್ಜೆ ಹೆಜ್ಜೆಗೂ ಗಂಟೆ ಹೊಡೆಯುತ್ತಿರುತ್ತದೆ. ಜನಪದ ಧಾರೆಯಲ್ಲಿ ಇಂಥದೊಂದು ಸ್ತ್ರೀ ಕೇಂದ್ರಿತ ಎಚ್ಚರದ ಮಾತುಗಳು ಉದ್ದಕ್ಕೂ ಸಿಗುತ್ತವೆ.
ಲಿಂಗರಾಜ ಸೊಟ್ಟಪ್ಪನವರ್‌ ಬರೆಯುವ “ಉತ್ತರದ ಕತೆಗಳು” ಅಂಕಣದ ಎರಡನೆಯ ಬರಹ

Read More

ಕಡಲಿನಗಲದ ಕಣ್ಣುಗಳೊಳಗಿನ ಸುನಾಮಿ…: ಆಶಾ ಜಗದೀಶ್ ಅಂಕಣ

ನಾವು ಅದೆಷ್ಟು ತೀವ್ರವಾಗಿ ಅತ್ತಿದ್ದೇವೆ, ಒಬ್ಬರನ್ನೊಬ್ಬರು ಹಂಬಲಿಸಿದ್ದೇವೆ, ಬಿಟ್ಟು ಬದುಕಲು ಸಾಧ್ಯವೇ ಇಲ್ಲ ಎನಿಸುವಷ್ಟು ಹಚ್ಚಿಕೊಂಡಿದ್ದೇವೆ. ಜೊತೆಯಲ್ಲಿರುವಂತೆ ಭ್ರಮಿಸಿದ್ದೇವೆ. ಭ್ರಮೆಯಿಂದ ತಿಳಿದೆದ್ದು ವಿಹ್ವಲಗೊಂಡಿದ್ದೇವೆ. ಅದೊಂದು ದಿನ ನಡುರಾತ್ರಿ, ಒಂದು ಕನಸು ಅರಳತೊಡಗಿತ್ತು; ನೈಜವೆನಿಸುವಷ್ಟೇ ಸಹಜವಾಗಿ. ನಾವಿಬ್ಬರೂ ಎರೆಡು ಪುಟ್ಟ ಗಿಳಿಗಳಂತೆ ಒಟ್ಟೊಟ್ಟಾಗಿ ಒತ್ತಿಕೊಂಡು ಕೂತು, ನಿಂತು, ಮಲಗಿ ಆಟವಾಡುತ್ತಿದ್ದೆವು. ಮುದ ಮತ್ತು ಮುಗ್ಧ… ಯಾರ ಸಂಚೋ ತಿಳಿಯದು. ಕನಸು ಒಡೆಯಿತು. ಕಣ್ಣು ತೆರೆದಾಗ ನೀನಿಲ್ಲ.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಹೊಸ ಬರಹ

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮಹಿಳಾ ಸಬಲೀಕರಣ ಪ್ರತಿಬಿಂಬಿಸುವ ಕೃತಿ: ಸುನಂದಾ ಕಡಮೆ ಬರಹ

ಇಲ್ಲಿಯ ವಿಷಯಗಳು ಸರ್ವಕಾಲಿಕವಾದದ್ದು. ಇಂದಿನ ಸಾಮಾಜಿಕ ಜಾಗೃತಿಯ ಪರಿಣಾಮವಾಗಿ ಸ್ತ್ರೀವಾದೀ ಚಳುವಳಿಗಳು ಹುಟ್ಟಿಕೊಂಡು, ಅದರಿಂದ ಪ್ರೇರೇಪಿತಗೊಂಡ ಸರಕಾರಗಳೂ ಮಹಿಳಾ ಶಿಕ್ಷಣ ಹಾಗೂ ಸುರಕ್ಷತೆಗೆ ಗಮನ ಕೇಂದ್ರೀಕರಿಸುತ್ತ ಬಂತು,…

Read More

ಬರಹ ಭಂಡಾರ