Advertisement

Category: ದಿನದ ಪುಸ್ತಕ

ನಕ್ಷತ್ರಗಳ ಸುಟ್ಟ ನಾಡಿನಿಂದ ಒಂದು ಅಧ್ಯಾಯ

“ಹೀಗೆ ಬರಿಗೈ ಆದವನನ್ನು, ಅವನು ಕಾಪಾಡಿದ ಜ್ಯೂಗಳು 1974ರಲ್ಲಿ ಅವನು ಕಾಲವಾಗುವವರೆಗೂ ಪೊರೆಯುತ್ತಾರೆ! ಹೀಗೆ ಶಿಂಡ್ಲರ್ ಎನ್ನುವವನನ್ನು ಎಂದೂ ದೈವತ್ವಕ್ಕೇರಿಸದೇ, ಎಲ್ಲ ಕುಂದುಕೊರತೆಗಳು, ದೌರ್ಬಲ್ಯಗಳು, ಕಾರುಣ್ಯ, ಒಳ್ಳೆಯತನ, ಭೋಳೆತನ ಎಲ್ಲವನ್ನೂ ಹೊಂದಿದ ಅಪ್ಪಟ ಮನುಷ್ಯನಾಗಿದ್ದ ಎನ್ನುವ ಕಾರಣಕ್ಕೇ ಜ್ಯೂಗಳು ಅವನನ್ನು ತಮ್ಮವನಾಗಿಸಿಕೊಳ್ಳುತ್ತಾರೆ. ಅವನು ಸತ್ತ ನಂತರ ಇಸ್ರೇಲ್‌ ನ ಜೆರುಸಲೆಂನಲ್ಲಿ ಅವನು ಸಮಾಧಿಯಾಗುತ್ತಾನೆ.”

Read More

ಶರಣಬಸವ ಕೆ. ಗುಡದಿನ್ನಿ ಹೊಸ ಕಥಾ ಸಂಕಲನದಿಂದ ಒಂದು ಕಥೆ

“ಅವನಿಗೇನು ಗೊತ್ತು ಅವ್ರವ್ವನ ತ್ರಾಸು. ತವರುಮನ್ಯಾಗ ಒಂದು ಕಾಲು ಹೊರಗಾಕಲಾರದ್ಹಂಗ ಕಮ್ಮಗ ಕುಂತಗಂಡು ಬೆಳ್ದಾಕಿ ಇವರಪ್ಪನ ಕಟಿಗೆಂಡು ಏಟು ತ್ರಾಸು ಪಟ್ಟಿನಂತ. ನಮ್ಮ ಅತ್ತಿ ಬೇಗಂ ಏನ್ ಸಣ್ಣಾಗಿ ತ್ರಾಸು ಕೊಟ್ಲಾ ಕುಂತ್ರ ನಿರಮ್ಮಳಿಲ್ಲ ನಿಂತ್ರ ನಿರಮ್ಳಿಲ್ಲ ರಾತ್ರೀ ಮಕ್ಕಾಂಡಾಗೂ ವಟವಟ ಕೇಳಿ ಕೇಳಿ ಮನಿ ಯಾವಾಗ ಬಿಟ್ಟೀನಪೋ ದೇವ್ರೇ ಅನುಸೋದು. ಮನ್ಯಾಗ ನೋಡಿದ್ರ ಸರೀಗಿ ತಿಂಬಾಕ ಕೂಳಿಲ್ಲ ಅಂದ್ರೂ ನನಗಂಡುಂದು ಅತ್ತೀದು ಟಬರು ಬಾಳ.”

Read More

ಮೌಲ್ಯ ಸ್ವಾಮಿ ಪುಸ್ತಕದ ಕುರಿತು ಆರ್. ವಿಜಯರಾಘವನ್ ಬರಹ

“ಸುಮ್ಮನೆ ಬಿದ್ದಿರುವ ಬಿಕ್ಕುಗಳು ಎಂಬ ಪುಸ್ತಕದ ಶೀರ್ಷಿಕೆಯೇ ಬೆರಳು ತೋರುತ್ತಿದೆ: ಅಲ್ಲಿ ಬಿಕ್ಕುಗಳೆಲ್ಲ ಸದ್ದಡಗಿ ಬಿದ್ದಿವೆ. ಇಲ್ಲಿ ಕವಿತೆಗಳಿಲ್ಲ. ಆದರೆ ನಮ್ಮೊಳಗಿನ ಮಾತಾಗದ ಬಿಕ್ಕುಗಳ ರಾಶಿಯಿದೆ. ಇದು ರಾಮರಾಜ್ಯದಲ್ಲಿ ಸೀತೆ ಬೆಂದದ್ದಕ್ಕೂ ಮೊದಲಿಂದಲೇ ಬಿದ್ದು ಸಂಚಯಿಸಿಕೊಳ್ಳುತ್ತಿರುವ ಬಿಕ್ಕುಗಳು. ಇವು ಹಳತಾಗಿಲ್ಲ, ಕೊಳೆತಿಲ್ಲ, ಕೊಚ್ಚಿ ಹೋಗಿಲ್ಲ, ಹಾಗೇ ಇವೆ. ನಿರಂತರವಾಗಿ ಬೆಳೆದುಕೊಂಡು. ಇದಕ್ಕೆ ಕಾರಣವೂ ಇಲ್ಲದಿಲ್ಲ. ‘ಕಾಣದ ಹಾಗೆ ಹರಿಯುವ ನಯವಂಚಕತೆಯನ್ನು’ ಹೊಂದಿಲ್ಲದ ಬದುಕುಗಳ ಹರಿವು ಮರೆಯಲ್ಲಿರುವುದಿಲ್ಲ.”

Read More

‘ನಾನು ಮೆಚ್ಚಿದ ನನ್ನ ಕಥೆʼ ಕಥಾ ಸಂಪುಟಗಳ ಸಂಪಾದಕರ ಮಾತು

“ನಮ್ಮ ಗ್ರಾಮೀಣ ಕತೆಗಾರರಿಗೆ ದೇವರು ಒಂದು ಮುಖ್ಯ ಸೌಕರ್ಯವಾಗಿ ಕಂಡಿದ್ದರೆ, ನಗರ ಕತೆಗಾರರಿಗೆ ಶಾಸ್ತ್ರೀಯ ಪರಿಜ್ಞಾನ ಸೌಕರ್ಯವಾಗಿ ಕಂಡಿದೆ. ಈ ಎರಡೂ ಸಂಪರ್ಕ ಅನುಕೂಲತೆಯಿಂದ ಅತ್ತಿಂದಲಿತ್ತ ಇತ್ತಿಂದಲತ್ತ ಪ್ರವಹಿಸಿರುವುದುಂಟು. ಇಂತಹ ಕಥೆಗಳಲ್ಲಿ ಅಸ್ತಿತ್ವದ ಪ್ರಶ್ನೆಗಳು, ಉತ್ತರಗಳು ಇವೆ. ಕಥನ ಶಿಲ್ಪದಲ್ಲಿ ಇವನ್ನು ಕಾಣಬಹುದು. ಗ್ರಾಮೀಣ ದೇವರುಗಳು ಆಚರಣೆಗಳು ನಂಬಿಕೆಯ ಮೂಲಕ ನಿಲ್ಲುತ್ತವೆ.”
ಇತ್ತೀಚೆಗೆ ಬಿಡುಗಡೆಯಾದ ʼನಾನು ಮೆಚ್ಚಿದ ನನ್ನ ಕಥೆʼ, ನಾಲ್ಕು ಸಂಪುಟಗಳ..”

Read More

ಎಸ್. ದಿವಾಕರ್ ಅವರ ಹೊಸ ಪುಸ್ತಕದಿಂದ ಒಂದು ಪ್ರಬಂಧ

“ಘನಗಂಭೀರ ವಿಮರ್ಶೆಯಂತೆ ಭಾಸವಾಗುವ ಈ ಒಂದು ವಾಕ್ಯವನ್ನು ನೋಡಿ: “ಶ್ರೀಯುತರು ವಿಚಾರ ಸಾಹಿತ್ಯ ರಚನೆಯಲ್ಲಿ ಸಿದ್ಧಹಸ್ತರಾಗಿದ್ದರೂ ಕೂಡ, ಪರಿಕಲ್ಪನೆಗಳನ್ನು ವಿವರಿಸುವಾಗ ಅವರು ಭಾಷೆಯನ್ನು ಉದ್ದೇಶಕ್ಕೆ ತಕ್ಕಂತೆ ದುಡಿಸಿಕೊಂಡರೂ ಕೂಡ, ಅವರ ಕೃತಿಗಳು ಕೆಲವು ಕಡೆ ನಿಜಕ್ಕೂ ಕಬ್ಬಿಣದ ಕಡಲೆ ಎನ್ನಬೇಕು.” ಇಲ್ಲಿನ ‘ಸಿದ್ಧಹಸ್ತ’, ‘ದುಡಿಸಿಕೊಂಡು’, ‘ಕಬ್ಬಿಣದ ಕಡಲೆ’ ಮುಂತಾದವನ್ನು ಎಷ್ಟು ಬಾರಿ ಓದಿಕೊಂಡರೂ ಯಾವುದೇ ರಸ ಹುಟ್ಟಲಾರದು.”

Read More

ಜನಮತ

ಕೆಂಡಸಂಪಿಗೆ ಬರಹಗಳು

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

4 months ago
ಕರೋನ ಕಥೆ, ವ್ಯಥೆ: ಡಾ. ಜಿ. ಎಸ್. ಶಿವಪ್ರಸಾದ್ ಬರೆದ ಲೇಖನ

https://t.co/YU4VmxkCya

#kendasampigeemag
4 months ago
“ಸವಿ ನೆನಪುಗಳು ಬೇಕು ಸವಿಯಲೀ ಬದುಕು”: ಶೇಷಾದ್ರಿ ಗಂಜೂರು ಅಂಕಣ

https://t.co/umkVcF1lRf
4 months ago
ಸಿಂದಘಟ್ಟದ ಲಕ್ಷ್ಮೀನಾರಾಯಣ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

https://t.co/UceOpuNksS

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪ್ರಜ್ಞಾ ಮತ್ತಿಹಳ್ಳಿ ಪುಸ್ತಕಕ್ಕೆ ನರಹಳ್ಳಿ ಬಾಲಸುಬ್ರಹ್ಮಣ್ಯ ಬರೆದ ಮುನ್ನುಡಿ

"ಪ್ರಜ್ಞಾ ಅವರ ಸ್ತ್ರೀ ಪಾತ್ರಗಳ ಜೀವನದಿಗೆ ಗಂಡನೊಬ್ಬನೇ ಜಗತ್ತಲ್ಲ; ಅಥವಾ ಸಂಸಾರವೇ ಸರ್ವಸ್ವವಾಗಿ ತನ್ನ ಸೃಜನಶೀಲತೆಯನ್ನು ಅದರ ತೊಡಕುಗಳ ಬಂಧನದಲ್ಲಿ ಕಳೆದುಕೊಳ್ಳುವ ಬಗೆಯೂ ಇಲ್ಲಿಲ್ಲ. ‘ತುದಿಬೆಟ್ಟದ ನೀರ...

Read More